Amruthadhaare Serial: ಅಮೃತಧಾರೆ ಅಭಿಮಾನಿಗಳಿಗೊಂದು ಸಪ್ರೈಸ್! ಕ್ಲೈಮ್ಯಾಕ್ಸಾ ?
Kannada Serial: ಜೀ ಕನ್ನಡ ವಾಹಿನಿಯ ಬಹುತೇಕ ಎಲ್ಲ ಸೀರಿಯಲ್‌ಗಳನ್ನು ವೀಕ್ಷಕರು ಮೆಚ್ಚಿಕೊಂಡಿದ್ದಾರೆ. TRP ವಿಚಾರಕ್ಕೆ ಬರೋದಾದರೆ, ಬಹುತೇಕ ಎಲ್ಲ ಸೀರಿಯಲ್‌ಗಳು ಜೀ ಕನ್ನಡದ್ದೇ ಆಗಿದೆ. ಅದರಲ್ಲಿ ಅಮೃತಧಾರೆ ಕೂಡ ಒಂದು. ಅಮೃತಧಾರೆ ಧಾರಾವಾಹಿ ಕುತೂಹಲ ಘಟ್ಟ ತಲುಪಿದೆ. ಸ್ಟೋರಿ ಕೂಡ ಸರಾಗವಾಗಿ ಹೋಗುತ್ತಿದೆ. ದೇಶ ಬಿಟ್ಟೇ ಹೋಗಬೇಕು ಅಂತಿದ್ದ ಭೂಮಿಕಾ, ಮಲ್ಲಿ ಬಳಿ ಕಳೆದು ಹೋದ ನನ್ನ ಮಗಳನ್ನು ಹುಡುಕುವವರೆಗೆ ನನಗೆ ನೆಮ್ಮದಿ ಇಲ್ಲ ಎಂದು ಮತ್ತೆ ಗೌತಮ್ ಜೊತೆ ಬಾಳಲು ನಿರ್ಧಾರ ಮಾಡಿದ್ದಾಳೆ. ಆದರೀಗ ಜೀ ಕನ್ನಡದ ಒಂದು ಪೋಸ್ಟ್ ವೀಕ್ಷಕರಿಗೆ ಶಾಕ್ ಕೊಟ್ಟಿದೆ.
ಅಮೃತಧಾರೆ ಧಾರಾವಾಹಿ -
ಜೀ ಕನ್ನಡ ವಾಹಿನಿಯ ಬಹುತೇಕ ಎಲ್ಲ ಸೀರಿಯಲ್‌ಗಳನ್ನು (Kannada Serial) ವೀಕ್ಷಕರು ಮೆಚ್ಚಿಕೊಂಡಿದ್ದಾರೆ. TRP ವಿಚಾರಕ್ಕೆ ಬರೋದಾದರೆ, ಬಹುತೇಕ ಎಲ್ಲ ಸೀರಿಯಲ್‌ಗಳು ಜೀ ಕನ್ನಡದ್ದೇ ಆಗಿದೆ. ಅದರಲ್ಲಿ ಅಮೃತಧಾರೆ ಕೂಡ ಒಂದು. ಅಮೃತಧಾರೆ ಧಾರಾವಾಹಿ (amruthadhaare Kannada Serial) ಕುತೂಹಲ ಘಟ್ಟ ತಲುಪಿದೆ. ಸ್ಟೋರಿ ಕೂಡ ಸರಾಗವಾಗಿ ಹೋಗುತ್ತಿದೆ. ದೇಶ ಬಿಟ್ಟೇ ಹೋಗಬೇಕು ಅಂತಿದ್ದ ಭೂಮಿಕಾ, ಮಲ್ಲಿ ಬಳಿ ಕಳೆದು ಹೋದ ನನ್ನ ಮಗಳನ್ನು ಹುಡುಕುವವರೆಗೆ ನನಗೆ ನೆಮ್ಮದಿ ಇಲ್ಲ ಎಂದು ಮತ್ತೆ ಗೌತಮ್ (Gowtham) ಜೊತೆ ಬಾಳಲು ನಿರ್ಧಾರ ಮಾಡಿದ್ದಾಳೆ. ಆದರೀಗ ಜೀ ಕನ್ನಡದ ಒಂದು ಪೋಸ್ಟ್ ವೀಕ್ಷಕರಿಗೆ ಶಾಕ್ ಕೊಟ್ಟಿದೆ. ಸದ್ಯ ವಾಹಿನಿಯ ಈ ಪೋಸ್ಟ್ (Post) ಕುತೂಹಲವನ್ನು ಕೆರಳಿಸಿದ್ದು, ಆ ಸರ್ಪ್ರೈಸ್ ಏನಿರಬಹುದು ಎನ್ನುವ ಪ್ರಶ್ನೆ ಹಲವರನ್ನು ಕಾಡುತ್ತಿದೆ.
ಭೂಮಿಕಾ ಮಗಳ ಹುಡುಕಾಟ
ಸೀರಿಯಲ್ ವಿಚಾರಕ್ಕೆ ಬರೋದಾದರೆ, ಭಾಗ್ಯಮ್ಮಳಿಗೆ ಮಾತು ಬರ್ತಾ ಇದೆ ಅನ್ನೋದು ಶಕುಂತಲಾಳಿಗೆ ಗೊತ್ತಾಗಿದೆ. ಅಷ್ಟೆ ಅಲ್ಲ ಶಕುಂತಲಾ ಅವನತಿ ಸದ್ಯದಲ್ಲೇ ಇದೆ ಅಂತ ಭಾಗ್ಯಮ್ಮ ಸವಾಲ್ ಹಾಕಿದ್ದಾಳೆ. ಜೈದೇವ್ ಆಸ್ತಿ ಪೂರ್ತಿ ಜೈಸೇರಿದೆ. ಆದರೆ ಮಲ್ಲಿಗೆ ಡಿವೋರ್ಸ್ ಕೊಡದೇ ಸತಾಯಿಸುತ್ತಿದ್ದಾನೆ. ಮಾತ್ರವಲ್ಲ ಮಲ್ಲಿಯನ್ನ ಲವ್ ಮಾಡಬೇಕು ಅಂತ ಹುಡುಗನೊಬ್ಬನ್ನು ಛೂ ಬಿಟ್ಟಿದ್ದಾನೆ.
ಇದನ್ನೂ ಓದಿ: Bigg Boss Kannada 12: ಮೊದಲ ಫಿನಾಲೆ ಟಿಕೆಟ್ ಪಡೆಯಲು ಸೋತು ಹೋದ್ರಾ ಗಿಲ್ಲಿ? `ಮಾತಿನ ಮಲ್ಲ'ನಿಗೆ ಧ್ರುವಂತ್ ಚಾಲೆಂಜ್!
ಮತ್ತೊಂದು ಕಡೆ ಭೂಮಿಕಾ ಮಗಳ ಹುಡುಕಾಟದಲ್ಲಿ ಬ್ಯುಸಿ ಆಗಿದ್ದಾಳೆ. ಗೌತಮ್ ಬಗ್ಗೆಗಿನ ಎಲ್ಲ ಸತ್ಯಗಳು ರಿವೀಲ್ ಆಗಿದೆ. ಭೂಮಿಕಾ ಕಳೆದು ಹೋದ ನನ್ನ ಮಗಳನ್ನು ಹುಡುಕುವವರೆಗೆ ನನಗೆ ನೆಮ್ಮದಿ ಇಲ್ಲ ಎಂದು ಹೇಳುತ್ತಾಳೆ. ಮಲ್ಲಿ ಕೂಡ ಭೂಮಿಕಾ ಮಾತು ಕೇಳಿ ಖುಷಿಯಾಗಿದ್ದು ನನ್ನ ಸಹಾಯ ಏನಾದರೂ ಬೇಕಾ ಎಂದು ಕೇಳುತ್ತಾಳೆ. ಇದಕ್ಕೆ ಭೂಮಿಕಾ ಸದ್ಯ ಬೇಡ ಮುಂದೆ ಬೇಕಿದ್ರೆ ಕೇಳ್ತೀನಿ ಎಂದು ಹೇಳಿದ್ದು ಭೂಮಿಕಾ ಹುಷಾರಾಗಿರುವಂತೆ ಹೇಳಿದ್ದಾಳೆ. ಇನ್ನು ಈ ಮಾತುಕತೆ ಆಕಾಶ್ ಕೇಳಿಸಿಕೊಳ್ಳುತ್ತಾನೆ.
ಅಭಿಮಾನಿಗಳಿಗೆ ಸರ್ ಪ್ರೈಸ್
ಇನ್ನು ಜೀ ಕನ್ನಡ ಪೋಸ್ಟ್‌ವೊಂದನ್ನ ಮಾಡಿದ್ದಾರೆ. ಜೀ ಕನ್ನಡ ಹೊಸದೊಂದು ಪೋಸ್ಟ್ ಹಂಚಿಕೊಂಡಿದ್ದು ಅಮೃತಧಾರೆ ಅಭಿಮಾನಿಗಳಿಗೆ ಸರ್ ಪ್ರೈಸ್ ಇದೆ ಎಂದು ಹೇಳಿದೆ. ಈ ಪೋಸ್ಟ್ ಸದ್ಯ ಕುತೂಹಲಕ್ಕೆ ಕಾರಣವಾಗಿದೆ. ''ಜೀ ಕನ್ನಡ''ದ ಈ ಪೋಸ್ಟ್‌ಗೆ ಹಲವರು ತಮ್ಮ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಒಬ್ಬರು ಧಾರಾವಾಹಿ ಮುಗಿಯಬಹುದೇನೋ ಎಂದು ಹೇಳಿದರೆ ಮತ್ತೊಬ್ಬರು ಯಾವುದಾದರು ಪಾತ್ರವನ್ನು ಸಾಯಿಸಬಹುದು ಎಂದಿದ್ದಾರೆ.
ಇದನ್ನೂ ಓದಿ: Bigg Boss Kannada 12: ಗಿಲ್ಲಿಯನ್ನು ಕೊಚ್ಚೆ ಎಂದು ಕರೆದ ಅಶ್ವಿನಿ! ತಾರಕಕ್ಕೇರಿದ ಕಿತ್ತಾಟ
ಅಮೃತಧಾರೆ’ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿದೆ. ಛಾಯಾ ಸಿಂಗ್ ಭೂಮಿಕಾ ಎನ್ನುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರ ಸಂಜೆ 7 ಗಂಟೆಗೆ ಪ್ರಸಾರ ಕಾಣುತ್ತಿದೆ