ಜೀ ಕನ್ನಡ ವಾಹಿನಿಯಲ್ಲಿ (Zee Kannada) ಪ್ರಸಾರ ಕಾಣುತ್ತಿರುವ ಅಮೃತಧಾರೆಯಲ್ಲಿ (amruthadhaare serial) ಜೈದೇವ್ (Jaidev) ಅವನತಿ ಹತ್ತಿರವಾದಂತಿದೆ. ಆದರೆ ಗೌತಮ್ ಬದುಕಿನಲ್ಲಿ ಸಂತೋಷ ಉಕ್ಕಿ ಹರಿಯುತ್ತಿದೆ. ಗೌತಮ್ ಹಾಗೂ ಭೂಮಿಕಾ (Gowtham Bhoomika) ವನವಾಸ ಮುಗಿದಂತಿದೆ. ಗೌತಮ್ ಮತ್ತೆ ಬ್ಯುಸಿನೆಸ್ ಶುರು ಮಾಡಿ ಟ್ರ್ಯಾಕ್‌ಗೆ ಬಂದಿದ್ದಾನೆ. ಆದರೆ ಶಕುಂತಲಾ ಕಥೆ ಅಯೋಮಯವಾಗಿದೆ. ಹಣಕ್ಕಾಗಿ ಮಗನ ಬಳಿ ಅಂಗಲಾಚಿ ಬೇಡುವಂತಹ ಸ್ಥಿತಿ ನಿರ್ಮಾಣವಾಗಿದೆ.
ಗೌತಮ್ - ಭೂಮಿಕಾ ಪ್ರೀತಿ ಸವಾರಿ!
ಭೂಮಿಕಾ ಈಗ ಗೌತಮ್ ಸಾಥ್ ಕೊಟ್ಟು ಸ್ಕೂಲ್ ಜವಬ್ಧಾರಿ ವಹಿಸಿದ್ದಾನೆ. ಅದಕ್ಕೂ ಮುಂಚೆ ಭೂಮಿಕಾ ಜೊತೆ ಒಳ್ಳೆಯ ಸಮಯ ಕಳೆದಿದ್ದಾನೆ. ಅತ್ಯಂತ ಪ್ರೀತಿಯಿಂದ ಜೋಡಿ ಬೈಕ್ ರೈಡ್ ಮಾಡಿದೆ. ಗೌತಮ್ - ಭೂಮಿಕಾ ಪ್ರೀತಿ ಸವಾರಿ ಕಂಡು ಪ್ರೇಕ್ಷಕರು ಖುಷ್ ಆಗಿದ್ದಾರೆ. ಮಕ್ಕಳ ಬಳಿ ಪರ್ಮಿಷನ್ ಪಡೆದುಕೊಂಡು. ಬೈಕ್‌ನಲ್ಲಿ ಭೂಮಿಕಾರನ್ನ ಕರೆದುಕೊಂಡು ಹೋಗಿದ್ದಾನೆ ಗೌತಮ್. ಅಷ್ಟೇ ಅಲ್ಲ ಮಡದಿಗೆ ಬರೋಬ್ಬರಿ 5 ಸೀರೆಗಳನ್ನು ತಂದುಕೊಟ್ಟಿದ್ದಾನೆ.
ಇದನ್ನೂ ಓದಿ: Kapil Sharma show: ಕಪಿಲ್ ಶರ್ಮಾ ಶೋ ಬಗ್ಗೆ ನಟ ಪರೇಶ್ ರಾವಲ್ ಹೇಳಿದ್ದೇನು?
ಹಣಕ್ಕಾಗಿ ಮಗನ ಬಳಿ ಅಂಗಲಾಚುತ್ತಿರುವ ಶಕುಂತಲಾ
ಶಕುಂತಲಾ ಆಟಕ್ಕೆ ಬಂದಾಗ, 3 ಕೋಟಿ ಹಣ ಪೆಡಿಂಗ್ ಇರುತ್ತೆ. ಅದನ್ನ ಪೇ ಮಾಡಲು ಶಕುಂತಲಾ ಬಳಿ ಹಣ ಇರುವುದಿಲ್ಲ. ಆಗ ಅವಳ ಸುತ್ತ ಇದ್ದ ಗೆಳತಿಯರು ಈ ಬಗ್ಗೆ ಕೊಂಕು ಮಾತನಾಡಿದ್ದಾರೆ. ಶಕುಂತಲಾ ಗೆಳತಿ, ತಾನೇ ಹಣವನ್ನು ಪೇ ಮಾಡುವುದಾಗಿ ಹೇಳುತ್ತಾಳೆ. ಶಕುಂತಲಾಗೆ ಆ ಸಮಯದಲ್ಲಿ ಅತ್ಯಂತ ಮುಜಗರವೂ ಆಗುತ್ತೆ. ಜೈದೇವ್ ಬಳಿ ಹಣ ಪಡೆದು ವಾಪಸ್ ಕೊಡುವುದಾಗಿ ಹೇಳುತ್ತಾಳೆ. ಆದರೆ ಅದೇ ಹೊತ್ತಿಗೆ ಜೈದೇವ್ ಪತ್ನಿಯೂ ಈ ಬಗ್ಗೆ ಪ್ರಶ್ನೆ ಮಾಡುತ್ತಾಳೆ.
ಜೈದೇವ್ ಪತ್ನಿಯ ಕಪಾಳಕ್ಕೆ ಬಾರಿಸುತ್ತಾಳೆ ಶಕುಂತಲಾ. ನಿನ್ನ ಸೊಸೆ ಅಂತ ನಾನು ಯಾವತ್ತೂ ಒಪ್ಪಿಕೊಂಡಿಲ್ಲ ಎಂದು ಹೇಳಿದ್ದಾಳೆ.
ಇಷ್ಟೆಲ್ಲ ಆದ ಬಳಿಕ ಶಕುಂತಲಾ ಜೈದೇವ್ ಬಳಿ ಬಂದು ಚೆಕ್‌ಗೆ ಸಹಿ ಹಾಕಲು ಹೇಳಿದ್ದಾಳೆ. ಹಣವನ್ನು ಕಳೆದುಕೊಂಡೆ. ಮೂರು ಕೋಟಿ ಬೇಕು ಅಂತ ಹೇಳಿದ್ದಾಳೆ. ಅದಕ್ಕೆ ಜೈದೇವ್ ಶಾಕ್ ಆಗಿದ್ದಾನೆ. ಮೂರು ಕೋಟಿಯನ್ನ ಮೂರು ಸಾವಿರ ತರ ಕೇಳುತ್ತೀಯಲ್ಲ ಅಂತ ಹೇಳಿದ್ದಾನೆ. ಇದರಿಂದ ಕೋಪಗೊಂಡ ಶಕುಂತಲಾ, ಗೌತಮ್‌ಗೂ ನಿನಗೂ ಎಷ್ಟು ವ್ಯತ್ಯಾಸ ಇದೆ ನೋಡೋ ಅಂತ ಹೇಳಿದ್ದಾಳೆ.
ಇದು ಜೈದೇವ್‌ಗೆ ಕೋಪ ಬರುವಂತೆ ಆಗಿದೆ. ಶಕುಂತಲಾಳಿಗೆ ಏಕವಚನ ಬಳಸಿ, ಗಟ್ಟಿಯಾಗಿ ಹೆಡೆಮುರಿ ಕೊಟ್ಟಿ, ನನ್ನ ಮುಂದೆಯೇ ನನ್ನ ಶತ್ರು ಹೋಗಳುತ್ತೀಯಾ ಅಂತ, ಹೆತ್ತ ತಾಯಿಯನ್ನೇ ಮನೆಯಿಂದ ಆಚೆ ಹಾಕಿದ್ದಾನೆ ಜೈದೇವ್. ಕೇಡಿ ಜೇಡಿಯ ಅಟ್ಟಹಾಸಕ್ಕೆ ನಲುಗಿ ಕಣ್ಣೀರಿಟ್ಟಿದ್ದಾಳೆ ಶಕುಂತಲಾ.
ಈ ಎಪಿಸೋಡ್ ಮುಂದಿನ ಸಂಚಿಕೆಯಲ್ಲಿ ಪ್ರಸಾರ ಕಾಣಲಿದೆ. ಒಟ್ಟಾರೆಯಾಗಿ ಶಕುಂತಲಾ ಹಾಗೂ ಜೈದೇವ್ ಅವನತಿ ಬಂದಂತಿದೆ. ಗೌತಮ್ ಮತ್ತೆ ಶಕುಂತಲಾ ಜವಬ್ಧಾರಿ ವಹಿಸುತ್ತಾನಾ? ಜೈದೇವ್ ಸೋಲು ಒಪ್ಪಿಕೊಳ್ತಾನಾ? ಭೂಮಿಕಾ ಕುಟುಂಬಕ್ಕೆ ಮತ್ತೆ ಇವರುಗಳೇ ಕಂಟಕ ಆಗ್ತಾರಾ? ಅನ್ನೋದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.
ಇದನ್ನೂ ಓದಿ: Prashanth Gowda: ಎಂಗೇಜ್ ಆದ್ರು ಗಿಚ್ಚಿ-ಗಿಲಿಗಿಲಿ ನಟ ಪ್ರಶಾಂತ್ ಗೌಡ; ಹುಡುಗಿ ಇವರೇ ನೋಡಿ
ಅಮೃತಧಾರೆ’ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿದೆ. ಛಾಯಾ ಸಿಂಗ್ ಭೂಮಿಕಾ ಎನ್ನುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರ ಸಂಜೆ 7 ಗಂಟೆಗೆ ಪ್ರಸಾರ ಕಾಣುತ್ತಿದೆ.