ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Prashanth Gowda: ಎಂಗೇಜ್‌ ಆದ್ರು ಗಿಚ್ಚಿ-ಗಿಲಿಗಿಲಿ ನಟ ಪ್ರಶಾಂತ್ ಗೌಡ; ಹುಡುಗಿ ಇವರೇ ನೋಡಿ

gicchi gili gili: ಪ್ರಶಾಂತ್ ಗೌಡ ಅವರು ‘ಗಿಚ್ಚಿ ಗಿಲಿ ಗಿಲಿ’ ಸೀಸನ್ 1ರಿಂದ ಸೀಸನ್ 3ರವರೆಗೆ ಇದ್ದರು. ‘ಕ್ವಾಟ್ಲೆ ಕಿಚನ್’ ಶೋ ಅಲ್ಲಿ ‘ಕ್ವಾಟ್ಲೆ ಆಫ್ ದಿ ಸೀಸನ್’ ಅವಾರ್ಡ್ ಪಡೆದರು. ‘ಬಾಯ್ಸ್ vs ಗರ್ಲ್ಸ್’ ಶೋನಲ್ಲೂ ಪ್ರಶಾಂತ್ ಮಿಂಚಿದ್ದರು. ಇನ್ನು ನಟ ಪ್ರಶಾಂತ್ ಗೌಡ ಅವರ ನಿಶ್ಚಿತಾರ್ಥಕ್ಕೆ ಚಿತ್ರರಂಗದ ಅನೇಕ ಗಣ್ಯರು ಆಗಮಿಸಿದ್ದಾರೆ. ಕಿರುತೆರೆ ಮತ್ತು ಬೆಳ್ಳಿಪರದೆಯ ಹಲವು ಗಣ್ಯರು ಈ ಕಾರ್ಯಕ್ರಮಕ್ಕೆ ಬಂದು ನವಜೋಡಿಗೆ ಶುಭ ಹಾರೈಸಿದ್ದಾರೆ.

ಎಂಗೇಜ್‌ ಆದ್ರು ಗಿಚ್ಚಿ-ಗಿಲಿಗಿಲಿ ನಟ ಪ್ರಶಾಂತ್ ಗೌಡ; ಹುಡುಗಿ ಇವರೇ ನೋಡಿ

ಪ್ರಶಾಂತ್ ಗೌಡ -

Yashaswi Devadiga
Yashaswi Devadiga Apr 21, 2026 8:13 AM

ʻಗಿಚ್ಚಿ ಗಿಲಿ ಗಿಲಿʼ, ‘ಕ್ವಾಟ್ಲೆ ಕಿಚನ್ʼ ಶೋಗಳ ಮೂಲಕ ಗಮನ ಸೆಳೆದ ಪ್ರಶಾಂತ್ ಗೌಡ ( Prashanth Gowda ) ಇದೀಗ ಎಂಗೇಜ್‌ ಆಗಿದ್ದಾರೆ. ಪ್ರಶಾಂತ್ ಗೌಡ ಅವರು ‘ಗಿಚ್ಚಿ ಗಿಲಿ ಗಿಲಿ’ ಸೀಸನ್ 1ರಿಂದ (gicchi gili gili) ಸೀಸನ್ 3ರವರೆಗೆ ಇದ್ದರು. ಅವರು ವಿವಿಧ ರೀತಿಯ ರೀಲ್ಸ್ ಮಾಡಿಕೊಂಡು ಗಮನ ಸೆಳೆದಿದ್ದಾರೆ. ಕಳೆದ ಕೆಲ ದಿನಗಳಿಂದ ಹೆಣ್ಣು ನೋಡವ ಶಾಸ್ತ್ರದ ವಿಡಿಯೋಗಳನ್ನು ಹಂಚಿಕೊಂಡಿದ್ದರು. ಹುಡುಗಿ ಯಾರು?

ಮದುವೆ ಆಗುತ್ತಿರುವ ಹುಡುಗಿ ಯಾರು?

ಪ್ರಶಾಂತ್ ಗೌಡ ಅವರು ‘ಗಿಚ್ಚಿ ಗಿಲಿ ಗಿಲಿ’ ಸೀಸನ್ 1ರಿಂದ ಸೀಸನ್ 3ರವರೆಗೆ ಇದ್ದರು. ‘ಕ್ವಾಟ್ಲೆ ಕಿಚನ್’ ಶೋ ಅಲ್ಲಿ ‘ಕ್ವಾಟ್ಲೆ ಆಫ್ ದಿ ಸೀಸನ್’ ಅವಾರ್ಡ್ ಪಡೆದರು. ‘ಬಾಯ್ಸ್ vs ಗರ್ಲ್ಸ್’ ಶೋನಲ್ಲೂ ಪ್ರಶಾಂತ್ ಮಿಂಚಿದ್ದರು. ಪ್ರಶಾಂತ್ ಮದುವೆ ಆಗುತ್ತಿರುವ ಹುಡುಗಿಯ ಹೆಸರು ಕೃತಿ ಗೌಡ. ಅವರು ಕೂಡ ಕಲಾವಿದೆ.

ಇದನ್ನೂ ಓದಿ: Riteish Deshmukh: ರಾಜಾ ಶಿವಾಜಿ ಟ್ರೇಲರ್ ಬಿಡುಗಡೆ ; ರಿತೇಶ್ ದೇಶಮುಖ್ ಭಾವುಕ

ಈ ಮೊದಲು ‘ಬ್ರೇಕ್ ಫೆಲ್ಯೂವರ್’ ಹೆಸರಿನ ಸಿನಿಮಾ ಮಾಡಿದ್ದರು. ಪ್ರಶಾಂತ್ ಅವರು ಸೋಶಿಯಲ್ ಮೀಡಿಯಾದಲ್ಲಿ ತಮ್ಮನ್ನು ‘ಟ್ಯಾಲೆಂಟೆಂಡ್ ಕಲಾವಿದ’ ಎಂದು ಕರೆದುಕೊಂಡಿದ್ದಾರೆ. ಅವರು ಇತ್ತೀಚೆಗೆ ಟಾಟಾ ಕರ್ವ್ ಕಾರನ್ನು ಖರೀದಿ ಮಾಡಿದ್ದರು.

ನಿಶ್ಚಿತಾರ್ಥ ಇತ್ತೀಚೆಗೆ ನೆರವೇರಿದೆ. ಅದರ ಸುಂದರ ಫೋಟೋಗಳು ವೈರಲ್ ಆಗಿವೆ. ಅವರಿಗೆ ಎಲ್ಲರೂ ಅಭಿನಂದನೆ ತಿಳಿಸಿದ್ದಾರೆ.

ಇನ್ನು ನಟ ಪ್ರಶಾಂತ್ ಗೌಡ ಅವರ ನಿಶ್ಚಿತಾರ್ಥಕ್ಕೆ ಚಿತ್ರರಂಗದ ಅನೇಕ ಗಣ್ಯರು ಆಗಮಿಸಿದ್ದಾರೆ. ಕಿರುತೆರೆ ಮತ್ತು ಬೆಳ್ಳಿಪರದೆಯ ಹಲವು ಗಣ್ಯರು ಈ ಕಾರ್ಯಕ್ರಮಕ್ಕೆ ಬಂದು ನವಜೋಡಿಗೆ ಶುಭ ಹಾರೈಸಿದ್ದಾರೆ. ನಟ ಸೃಜನ್ ಲೋಕೇಶ್, ನಟಿ ಶ್ರುತಿ, ನಿವೇದಿತಾ ಗೌಡ, ತುಕಾಲಿ ಸಂತು, ಅನುಪಮಾ ಗೌಡ ಭವ್ಯಾ ಗೌಡ ಕೂಡ ಈ ಕಾರ್ಯಕ್ರಮಕ್ಕೆ ಬಂದಿದ್ದಾರೆ.

ಇದನ್ನೂ ಓದಿ: Thalapathy Vijay: ನಟ ವಿಜಯ್‌-ಸಂಗೀತಾ ಡಿವೋರ್ಸ್‌ ಪ್ರಕರಣ; ವಿಚಾರಣೆ ಮುಂದೂಡಿದ ಕೋರ್ಟ್‌

ಇನ್ನು ನಟ ಪ್ರಶಾಂತ್ ಅವರು ಕೇವಲ ನಟ ಮಾತ್ರವಲ್ಲ, ಒಳ್ಳೆಯ ಡ್ಯಾನ್ಸರ್ ಕೂಡ ಹೌದು. ಆಗಾಗ ತಮ್ಮ ಇನ್‌ಸ್ಟಾಗ್ರಾಮ್ ಪೇಜ್‌ನಲ್ಲಿ ಹೊಸ ಹೊಸ ಡ್ಯಾನ್ಸ್ ವಿಡಿಯೋವನ್ನು ಶೇರ್ ಮಾಡ್ತಾರೆ.