ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Amruthadhaare Serial: ಗೌತಮ್‌ ದಿವಾನ್‌- ಸುನಿ ಮುಖಾಮುಖಿ; ಸಖತ್‌ ಗಾಬರಿ ಆದ ಜೇಡಿಯ ಪೈಲ್ವಾನ್!

Amruthadhaare Kannada Serial: ಅಮೃತಧಾರೆಯಲ್ಲಿ ಗೌತಮ್‌ ಹಾಗೂ ಭೂಮಿಕಾ ಒಂದಾಗಿದ್ದು, ಮಲ್ಲಿ ಮದುವೆ ವಿಚಾರಕ್ಕೆ ತಲೆಕೆಡಿಸಿಕೊಂಡಿದ್ದಾರೆ. ಮಲ್ಲಿಗೆ ಸುನಿ ಎಂಬ ಹುಡುಗ ಪ್ರಪೋಸ್‌ ಮಾಡಿರೋದು ಭೂಮಿ ಹಾಗೂ ಗೌತಮ್‌ ಮುಂದೆ ರಿವೀಲ್‌ ಆಗಿದೆ. ಹೀಗಾಗಿ ಒಮ್ಮೆ ಸುನಿಯನ್ನು ಭೇಟಿ ಆಗಬೇಕು ಅಂತ ಭೂಮಿ ಹೇಳಿದ್ದು, ಈಗಾಗಲೇ ಸುನಿ ಭೇಟಿ ಆಗಿದ್ದಾನೆ. ಆದರೆ ಭೂಮಿಕಾಗೆ ಸುನಿ ಬಗ್ಗೆ ಅಷ್ಟೇನೂ ಒಳ್ಳೆಯ ಅಭಿಪ್ರಾಯ ಬಂದಿರಲಿಲ್ಲ. ಈಗ ಗೌತಮ್‌ ಸರದಿ. ಸುನಿಗೆ ಗೌತಮ್‌ ದಿವಾನ್‌ ನೋಡಿದೊಡನೇ ಒಂದು ಕ್ಷಣ ಶಾಕ್‌ ಆಗಿದ್ದಾನೆ.

ಗೌತಮ್‌ ದಿವಾನ್‌- ಸುನಿ ಮುಖಾಮುಖಿ; ಗಾಬರಿ ಆದ ಜೇಡಿಯ ಪೈಲ್ವಾನ್!

ಅಮೃತಧಾರೆ ಧಾರಾವಾಹಿ -

Yashaswi Devadiga
Yashaswi Devadiga Feb 20, 2026 9:34 AM

ಜೀ ಕನ್ನಡ ವಾಹಿನಿಯಲ್ಲಿ (Zee Kannada) ಪ್ರಸಾರ ಕಾಣುತ್ತಿರುವ ಅಮೃತಧಾರೆಯಲ್ಲಿ (amruthadhaare serial) ಗೌತಮ್‌ ಹಾಗೂ ಭೂಮಿಕಾ ಒಂದಾಗಿದ್ದು, ಮಲ್ಲಿ ಮದುವೆ ವಿಚಾರಕ್ಕೆ ತಲೆಕೆಡಿಸಿಕೊಂಡಿದ್ದಾರೆ. ಮಲ್ಲಿಗೆ ಸುನಿ (Suni) ಎಂಬ ಹುಡುಗ ಪ್ರಪೋಸ್‌ ಮಾಡಿರೋದು ಭೂಮಿ ಹಾಗೂ ಗೌತಮ್‌ ಮುಂದೆ ರಿವೀಲ್‌ ಆಗಿದೆ. ಹೀಗಾಗಿ ಒಮ್ಮೆ ಸುನಿಯನ್ನು ಭೇಟಿ ಆಗಬೇಕು ಅಂತ ಭೂಮಿ ಹೇಳಿದ್ದು, ಈಗಾಗಲೇ ಸುನಿ ಭೇಟಿ ಆಗಿದ್ದಾನೆ. ಆದರೆ ಭೂಮಿಕಾಗೆ (Bhoomika) ಸುನಿ ಬಗ್ಗೆ ಅಷ್ಟೇನೂ ಒಳ್ಳೆಯ ಅಭಿಪ್ರಾಯ ಬಂದಿರಲಿಲ್ಲ. ಈಗ ಗೌತಮ್‌ ಸರದಿ. ಸುನಿಗೆ ಗೌತಮ್‌ ದಿವಾನ್‌ ನೋಡಿದೊಡನೇ ಒಂದು ಕ್ಷಣ ಶಾಕ್‌ ಆಗಿದ್ದಾನೆ.

ಭೂಮಿಕಾಗೆ ಇರುಸು ಮುರುಸು

ಮಲ್ಲಿ ಮೊದಲಿಗೆ ಸುನಿಯನ್ನ ಮನೆಗೆ ಕರೆಸಿ ಭೂಮಿಗೆ ಭೇಟಿ ಮಾಡಿಸುತ್ತಾಳೆ. ಸುನಿ ವಯಸ್ಸು ಕಂಡು ಭೂಮಿಗೂ ಶಾಕ್‌ ಆಗುತ್ತೆ. ಭೇಟಿ ಬಳಿಕ ಈ ಬಗ್ಗೆ ಗೌತಮ್‌ ಪ್ರಶ್ನೆ ಇಟ್ಟಾಗ, ಒಂದೇ ಭೇಟಿಯಲ್ಲಿ ಯಾರನ್ನೂ ಅಳೆಯಲು ಆಗಲ್ಲ. ಅದೂ ಅಲ್ಲದೇ ಆತನದ್ದು ಸಣ್ಣ ವಯಸ್ಸು. ಜವಬ್ದಾರಿ ತೆಗೆದುಕೊಳ್ಳುವಂತಹ ವಯಸ್ಸಲ್ಲ ಅಂತ ಹೇಳಿದ್ದಾಳೆ.

ಇದನ್ನೂ ಓದಿ: Suhana Syed: ʻಸವದತ್ತಿ ಯಲ್ಲಮ್ಮʼ ಅಂತ ಹೆಸರು ಬದಲಿಸಿಕೊಳ್ಳಿ ಅಂದವರಿಗೆ ಸುಹಾನಾ ಗರಂ ರಿಯಾಕ್ಷನ್‌

ಇನ್ನೊಂದು ಕಡೆ ಗೌತಮ್‌, ಸ್ನೇಹಿತ ಆನಂದ್‌ಗೆ ಮಲ್ಲಿಗೆ ಹುಡುಗನ ಹುಡುಕುವ ವಿಚಾರವಾಗಿ ಹೇಳಿರ್ತಾನೆ. ಆನಂದ್‌ ಕೂಡ ಅದೆಲ್ಲವನ್ನು ತನಿಖೆ ಮಾಡಿ,ಹುಡುಗ ನಮ್ಮದೇ ಆಫೀಸ್‌ ಫಂಡ್‌ ಹಣದಲ್ಲಿ ಓದಿದ್ದು. ಒಳ್ಳೆಯ ಹುಡುಗ ಎಂದಿದ್ದಾನೆ. ಅದು ಸುನಿನೇ ಆಗಿರ್ತಾನೆ. ಸುನಿ ಬಂದ ಕೂಡಲೇ ಗೌತಮ್‌ ದಿವಾನ್‌ ನಾನು ನಿಮ್ಮ ಫ್ಯಾನ್‌ ಅಂತ ಕಾಲಿಗೆ ಬಿದ್ದಿದ್ದಾನೆ. ಸುನಿಗೆ ಮಲ್ಲಿ ಗೌತಮ್‌ ಮನೆಯಲ್ಲಿರೋ ವಿಚಾರ ಗೊತ್ತೇ ಇರಲ್ಲ. ಆದರೀಗ ಮಲ್ಲಿ ಮನೆಗೆ ಬಂದಾಗ ಭೂಮಿ ಗೌತಮ್‌ ಅವರನ್ನು ಭೇಟಿ ಮಾಡಿಸಿದಾಗ ಸುನಿಗೆ ಗಾಬರಿ ಆಗಿದೆ.



ಗೌತಮ್‌ಗೆ ಮೊದಲೇ ಗೊತ್ತಾ?

ಭೂಮಿಕಾ ಸುನಿ ಬರೋಕು ಮುಂಚೆ ಗೌತಮ್ಗೆ ಹುಡುಗನ ಬಗ್ಗೆ ವಿಚಾರಿಸಿದ್ರಾ ಎಂದು ಕೇಳಿದ್ದಾಳೆ. ಆಗ ಗೌತಮ್‌ ಮಾತನಾಡಿ, ನಮ್ಮ ಕಂಪನಿಯ ಫಂಡ್‌ ಅಲ್ಲೇ ಆತ ಓದಿದ್ದು. ನೀವು ಹೇಳಿದಾಗ ಎಳೆ ಹುಡುಗ. ಆದರೆ ಬದುಕೋಕೆ ಬೇಕಾಗಿರೋದು ಮನಸ್ಸು. ವಯಸ್ಸಲ್ಲ. ಹುಡುಗಿ ವಯಸ್ಸಾದ್ರೂ ಹುಡುಗ ಕಡಿಮೆ ಇರಬಾದರು ಅಂತೇನಿಲ್ಲ. ಮತ್ತೆ ಅವನನ್ನು ಕರೆಸೋಣ ಎಂದು ಸುನಿಯನ್ನ ಕರೆಸಿದ್ದಾನೆ.

ಸುನಿ, ಭೂಮಿಕಾ ಮನೆಗೆ ಬಂದಾಗ, ಗೌತಮ್‌ ನೋಡಿ ಶಾಕ್‌ ಆಗಿದ್ದಾನೆ. ಮಲ್ಲಿ ಭಾವ ಗೌತಮ್‌ ಇವರೇನಾ? ಅವರಿಗೆ ಮೋಸ ಮಾಡೋಕೆ ಹೋರಟ್ಟಿದ್ದೀನಾ? ಅಂತ ಸಖತ್‌ ಗಾಬರಿ ಆಗಿದ್ದಾನೆ.

ಜೈದೇವ್‌ ಮುಂದೆ ಸುನಿ ಅಳಲು

ಭೂಮಿ ಭೇಟಿ ಆದ ಬಳಿಕ ಜೈದೇವ್‌ ಮುಂದೆ ಸುನಿ ಹೋಗುವ ದಾರಿ ಸರಿ ಇಲ್ಲ ಎಂದು ಗಾಬರಿ ಆಗಿ ಹೇಳಿಕೊಂಡಿದ್ದಾನೆ. ಅದಕ್ಕೆ ಜೈದೇವ್‌, ಪ್ರೀತಿಸಿದ್ದು , ಪ್ರಪೋಸ್‌ ಮಾಡುವಾಗ ಇದೆಲ್ಲ ಸರಿ ಇತ್ತಾ? ಈಗ ಭಯ ಏಕೆ ಅಂತ ಇನ್ನಷ್ಟು ಸುನಿ ಮೈಂಡ್‌ ವಾಶ್‌ ಮಾಡಿದ್ದಾನೆ.

ಒಟ್ಟಾರೆಯಾಗಿ ಜೈದೇವ್‌ ಕುತಂತ್ರ ಗೌತಮ್‌ ಹಾಗೂ ಭೂಮಿಕಾಗೆ ಗೊತ್ತಾಗದೇ ಇರತ್ತಾ? ಅಥವಾ ಸುನಿನೇ ಈ ಎಲ್ಲ ಸತ್ಯಗಳ ಬಗ್ಗೆ ಬಾಯಿ ಬಿಡ್ತಾನಾ? ಗೌತಮ್‌ ಮುಂದಿನ ಪ್ಲ್ಯಾನ್‌ ಏನು ಎನ್ನೋದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.

ಇದನ್ನೂ ಓದಿ: Amruthadhaare serial: ಗೌತಮ್‌ ಮುಂದೆ ಸುನಿ ಡ್ರಾಮ ಬಲು ಜೋರು! ಜೈದೇವ್‌ ಪ್ಲ್ಯಾನ್‌ ಸಕ್ಸೆಸ್‌?

ʻಅಮೃತಧಾರೆ’ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿದೆ. ಛಾಯಾ ಸಿಂಗ್ ಭೂಮಿಕಾ ಎನ್ನುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರ ಸಂಜೆ 7 ಗಂಟೆಗೆ ಪ್ರಸಾರ ಕಾಣುತ್ತಿದೆ