ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Amruthadhaare Serial: ಜಯದೇವ್‌ ಕುತಂತ್ರ ಗೌತಮ್‌ಗೆ ಗೊತ್ತಾಗದೇ ಹೋಯ್ತಾ? ಜೆಡಿ ಅನಾಚಾರ ಒಂದೆರಡಲ್ಲ

Amruthadhaare Kannada Serial: ಅಮೃತಧಾರೆಯಲ್ಲಿ ಸದ್ಯ ಜೈದೇವ್‌ (Jaidev) ಕುತಂತ್ರ ಮಿತಿ ಮೀರುತ್ತಿದೆ. ಒಂದು ಕಡೆ ಗೌತಮ್‌ ದಿವಾನ್‌ ಆಸ್ತಿಯನ್ನು ಕಬಳಸಿದರೂ ಇನ್ನಷ್ಟು ತೊಂದರೆ ಕೊಡಲು ನೋಡುತ್ತಿದ್ದಾನೆ. ಮಲ್ಲಿ ಜೀವನ ಹಾಳಾಗಬೇಕು ಅಂತ ಸುನಿಯನ್ನು ಛೂ ಬಿಟ್ಟರೂ ಇನ್ನೂ ಸುಮ್ಮನಾಗುತ್ತಿಲ್ಲ ಕೆಡಿ ಜೈದೇವ್‌. ಗೌತಮ್‌ ದಿವಾನ್‌ , ತನ್ನ ತಂದೆಯ ಸಮಾಧಿ ಬಳಿ ಬಂದು ಪೂಜೆ ಮಾಡುತ್ತಿದ್ದನು. ಆಗ ಜಯದೇವ್‌ ಇದನ್ನೆಲ್ಲ ತಡೆದು, ತನ್ನ ತಂದೆಗೆ ಬಾಯಿಗೆ ಬಂದ ಹಾಗೆ ಬೈದು, ಪಿಂಡ ಬಿಡೋದಿಲ್ಲ ಎಂದು ತಕರಾರು ಎತ್ತಿದ್ದಾನೆ.

ಅಮೃತಧಾರೆ ಧಾರಾವಾಹಿ

ಅಮೃತಧಾರೆಯಲ್ಲಿ (amruthadhaare Serial) ಸದ್ಯ ಜೈದೇವ್‌ (Jaidev) ಕುತಂತ್ರ ಮಿತಿ ಮೀರುತ್ತಿದೆ. ಒಂದು ಕಡೆ ಗೌತಮ್‌ ದಿವಾನ್‌ ಆಸ್ತಿಯನ್ನು ಕಬಳಸಿದರೂ ಇನ್ನಷ್ಟು ತೊಂದರೆ ಕೊಡಲು ನೋಡುತ್ತಿದ್ದಾನೆ. ಮಲ್ಲಿ ಜೀವನ ಹಾಳಾಗಬೇಕು ಅಂತ ಸುನಿಯನ್ನು ಛೂ ಬಿಟ್ಟರೂ ಇನ್ನೂ ಸುಮ್ಮನಾಗುತ್ತಿಲ್ಲ ಕೆಡಿ ಜೈದೇವ್‌. ಗೌತಮ್‌ ದಿವಾನ್‌ (gowtham Diwan), ತನ್ನ ತಂದೆಯ ಸಮಾಧಿ ಬಳಿ ಬಂದು ಪೂಜೆ ಮಾಡುತ್ತಿದ್ದನು. ಆಗ ಜಯದೇವ್‌ ಇದನ್ನೆಲ್ಲ ತಡೆದು, ತನ್ನ ತಂದೆಗೆ ಬಾಯಿಗೆ ಬಂದ ಹಾಗೆ ಬೈದು, ಪಿಂಡ ಬಿಡೋದಿಲ್ಲ ಎಂದು ತಕರಾರು ಎತ್ತಿದ್ದಾನೆ.

ಗೌತಮ್‌ ದಿವಾನ್‌ ಹೊಸ ಹೆಜ್ಜೆ

ಅಮ್ಮನ ಮಾತಿಗೆ ಬೆಲೆ ಕೊಟ್ಟು ಗೌತಮ್‌ ದಿವಾನ್‌ ಹೊಸ ಬ್ಯುಸಿನೆಸ್‌ ಶುರು ಮಾಡಬೇಕು ಅಂತ ನಿರ್ಧಾರ ಮಾಡಿದ್ದಾನೆ. ಅದಕ್ಕಾಗಿ ಸಾಕಷ್ಟು ತಯಾರಿಯನ್ನೂ ನಡೆಸುತ್ತಿದ್ದಾನೆ. ಗೌತಮ್‌ನ ಸಾಮ್ರ್ಯಾಜ್ಯ ಜೈದೇವ್‌ ಕುತಂತ್ರದಿಂದ ಎಲ್ಲವೂ ಅವನ ಪಾಲಾಯ್ತು. ಅದೆಷ್ಟೋ ವರುಷ ಗೌತಮ್‌ ಹಾಗೂ ಭೂಮಿ ದೂರ ದೂರ ಇರೋ ಹಾಗಾಯ್ತು. ಆದರೆ ಈಗ ಹಾಗಲ್ಲ. ಭೂಮಿ ಗೌತಮ್‌ ಒಂದಾಗಿದ್ದಾರೆ. ಗೌತಮ್‌ ಯಾವುದೇ ಕೆಲಸಕ್ಕೆ ಕೈ ಹಾಕಿದ್ರೂ ಭೂಮಿ ಸಾಥ್‌ ಇದ್ದೆ ಇರುತ್ತದೆ.

ಇದನ್ನೂ ಓದಿ: Toxic teaser: ಕೇವಲ 24 ಗಂಟೆಗಳಲ್ಲಿ ‘ಟಾಕ್ಸಿಕ್’ ಟೀಸರ್ ಯಾವ ಭಾಷೆಯಲ್ಲಿ ಹೆಚ್ಚು ವೀಕ್ಷಣೆ ಗೊತ್ತಾ?

ಗೌತಮ್‌ ಕೋಪ ನೆತ್ತಿಗೇರಿತು

ಗೌತಮ್‌ ದಿವಾನ್‌, ತನ್ನ ತಂದೆಯ ಸಮಾಧಿ ಬಳಿ ಬಂದು ಪೂಜೆ ಮಾಡುತ್ತಿದ್ದನು. ಆಗ ಜಯದೇವ್‌ ಇದನ್ನೆಲ್ಲ ತಡೆದು ತಂದೆಗೆ ಬಾಯಿಗೆ ಬಂದ ಹಾಗೇ ಬೈದಿದ್ದಾನೆ. ಇದು ಗೌತಮ್‌ ಕೋಪ ನೆತ್ತಿಗೇರಿ ಜಯದೇವ್‌ ಕಪಾಳಕ್ಕೆ ಬಾರಿಸಿದ್ದಾನೆ. ಜೈದೇವ್‌ ಮಾತು ದಿನೇ ದಿನೇ ಮಿತಿ ಮೀರುತ್ತಿದೆ. ಹೀಗಾಗಿ ಗೌತಮ್‌ ಮತ್ತೆ ಜೈದೇವ್‌ ಆಸ್ತಿಯನ್ನ ವಾಪಸ್ಸ್‌ ಪಡೆದುಕೊಳ್ಳೋದರಲ್ಲಿಯೂ ಆಶ್ವರ್ಯ ಇಲ್ಲ.

ಇನ್ನೊಂದು ಕಡೆ ಗೌತಮ್‌ ದಿವಾನ್‌ಗೆ ಕೊಟ್ಟಿದ್ದನ್ನು ಮರಳಿ ಪಡೆಯೋ ವ್ಯಕ್ತಿತ್ವವೂ ಅವನದ್ದಲ್ಲ. ಹೀಗಾಗಿ ಮುಂದೆ ಗೌತಮ್‌ ಯಾವ ರೀತಿ ನಿರ್ಧಾರ ತೆಗೆದುಕೊಳ್ಳುತ್ತಾನೆ ಅನ್ನೋದು ವೀಕ್ಷಕರಲ್ಲಿ ಇರುವ ಕುತೂಹಲ.

ಮಲ್ಲಿ-ಸುನಿ ವಿಚಾರ ಗೌತಮ್‌ಗೆ ಗೊತ್ತಾಗತ್ತ?

ಇನ್ನೊಂದು ಕಡೆ ಸುನಿ ಕೂಡ ಜೈದೇವ್‌ ಕಡೆಯೋನು ಅನ್ನೋದು ಗೊತ್ತೇ ಇದೆ. ಆದರೆ ಈ ವಿಚಾರ ಇನ್ನೂ ಭೂಮಿ ಹಾಗೂ ಗೌತಮ್‌ಗೆ ಗೊತ್ತಾಗಿಲ್ಲ. ಮಲ್ಲಿ ಮಾತ್ರ ಸದ್ಯಕ್ಕಂತೂ ತನ್ನದೇ ಲೋಕದಲ್ಲಿ ಇದ್ದಾಳೆ. ಸುನಿ ಕೂಡ ತಾನು ಪೂಜಿಸೋ ಗೌತಮ್‌ ಸಿಕ್ಕಿದ್ದಾಗಿನಿಂದ ಖುಷಿ ಆಗಿದ್ದಾನೆ. ಗೌತಮ್‌ ಜೊತೆಗಿರೋ ಫೋಟೋವನ್ನು ಮಲ್ಲಿಗೆ ಕಳುಹಿಸಿ ಸಂತಸ ವ್ಯಕ್ತಪಡಿಸಿದ್ದಾನೆ.



ಸುನಿಗೂ ಕೂಡ ಗೌತಮ್‌ ಮಲ್ಲಿ ಭಾವ ಅನ್ನೋದು ಗೊತ್ತಾಗಿದೆ. ಹೀಗಾಗಿ ತಾನು ಪೂಜಿಸೋ ಗೌತಮ್‌ಗೆ ಮೋಸ ಮಾಡಲು ಹೇಗೆ ಸಾಧ್ಯ ಅಂತ ಮನಸ್ಸಲ್ಲಿ ಅಂದುಕೊಂಡಿದ್ದಾನೆ. ಗೌತಮ್‌ ಮೇಲಿನ ಗೌರವದಿಂದ ಜೈದೇವ್‌ ಎಲ್ಲ ಕುತಂತ್ರಗಳನ್ನೂ ಸುನಿ ಹೇಳಿ ಬಿಡ್ತಾನಾ? ಅನ್ನೋದು ಕುತೂಹಲವಿದೆ.

ಇದನ್ನೂ ಓದಿ: Karna Kannada Serial: ಕರ್ಣನ ಹೆಸರಿಗೆ ಅಂಟಿದ ಕಳಂಕವನ್ನು ದೂರ ಮಾಡಲು ಒಂದಾಯ್ತು ಸ್ತ್ರೀ ಶಕ್ತಿ!

ಅಮೃತಧಾರೆ’ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿದೆ. ಛಾಯಾ ಸಿಂಗ್ ಭೂಮಿಕಾ ಎನ್ನುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರ ಸಂಜೆ 7 ಗಂಟೆಗೆ ಪ್ರಸಾರ ಕಾಣುತ್ತಿದೆ

Yashaswi Devadiga

View all posts by this author