ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Amruthadhaare Serial: ಡುಮ್ಮ ಸರ್ -ಭೂಮಿ ಟೀಚರ್ ಬಾಳಲ್ಲಿ ನಿತ್ಯ ಪ್ರೇಮೋತ್ಸವ!

Amruthadhaare Kannada Serial : ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿರುವ ‘ಅಮೃತಧಾರೆ' ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್ ಬರೋ ಸಮಯ ಬಂದಿದೆ. ಗೌತಮ್‌ ಉದ್ಯಮ ಶುರು ಮಾಡೋದಾಗಿ ಹೇಳಿದ್ದಾನೆ. ಇನ್ನೊಂದು ಕಡೆ ಜೈದೇವ್‌ ಹಾಗೂ ಸುನಿ ಮಾಸ್ಟರ್‌ ಪ್ಲ್ಯಾನ್‌ ಮಾಡಿರುವಂತಿದೆ. ಮಲ್ಲಿ ಡೈರೆಕ್ಟ್‌ ಆಗಿ ಸುನಿಗೆ ಮನೆಗೆ ಆಹ್ವಾನಿಸಿದ್ದಾಳೆ. ಮುಂದೇನಾಗುತ್ತೆ?

ಅಮೃತಧಾರೆ ಧಾರಾವಾಹಿ

ಜೀ ಕನ್ನಡ ವಾಹಿನಿಯಲ್ಲಿ(Zee Kannada) ಪ್ರಸಾರ ಕಾಣುತ್ತಿರುವ ‘ಅಮೃತಧಾರೆ' (Amruthadhaare Serial ) ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್ ಬರೋ ಸಮಯ ಬಂದಿದೆ. ಗೌತಮ್‌ (Gowtham) ಉದ್ಯಮ ಶುರು ಮಾಡೋದಾಗಿ ಹೇಳಿದ್ದಾನೆ. ಅದಕ್ಕೂ ಮುಂಚೆ ಈಗ ಪ್ರೀತಿ ಸಂಕೇತದಂತಿರೋ ನಮ್ ಡುಮ್ಮ ಸಾರ್ ಭೂಮಿ (Bhoomika) ಟೀಚರ್ ಬಾಳಲ್ಲಿ ನಿತ್ಯ ಪ್ರೇಮೋತ್ಸವ ಶುರು ಆಗಿದೆ. ಅದರಲ್ಲೂ ಆಕಾಶ್‌ ಕೇಳೋ ಪ್ರಶ್ನೆಗೆ ಸುಸ್ತಾಗಿದ್ದಾಳೆ ಭೂಮಿಕಾ.

ಹಾಲು -ಜೇನಿನಂತೆ ಸುಖವಾಗಿ ಸಂಸಾರ

ಭೂಮಿಕಾ- ಹಾಗೂ ಗೌತಮ್‌ ಹಾಲು -ಜೇನಿನಂತೆ ಸುಖವಾಗಿ ಸಂಸಾರ ಮಾಡುತ್ತಿದ್ದಾರೆ. ಪ್ರೇಮಿಗಳ ದಿನಾಚರಣೆ ಅಂದರೆ ಏನು ಅಂತ ಅಮ್ಮನಿಗೆ ಆಕಾಶ್‌ ಕೇಳಿದ್ದಾನೆ. ಭೂಮಿಕಾ ಎಷ್ಟೇ ತಿಳಿ ಹೇಳಿದ್ರೂ ಆಕಾಶ್‌ ಪ್ರಶ್ನೆಗಳ ಮಳೆ ಸುರಿಸಿದ್ದಾನೆ. ಆಕಾಶ್‌ ಮುಗ್ದತೆಗೆ ಭೂಮಿಕಾ ಕೂಡ ನಾಚಿ ನಿರಾಗಿದ್ದಾಳೆ. ಇಷ್ಟೆಲ್ಲ ಆದ ಮೇಲೆ ಆಕಾಶ್‌ ಕೇಕ್‌ ಮಾಡೋ ಐಡಿಯಾ ಕೊಟ್ಟಿದ್ದಾನೆ. ಇದನ್ನ ಕದ್ದು ಕೇಳಿದ ಆಕಾಶ್‌ ಅಕ್ಕ, ಗೌತಮ್‌ಗೆ ಹೇಳಿದ್ದಾಳೆ. ಗೌತಮ್‌ ಕೂಡ ಭೂಮಿಕಾಗೆ ಸರ್‌ಪ್ರೈಸ್‌ ಕೊಡೋದಾಗಿ ಪ್ಲ್ಯಾನ್‌ ಮಾಡಿದ್ದಾನೆ.

ಇದನ್ನೂ ಓದಿ: Darshan Birthday: ಪ್ರತಿ ದಿನವನ್ನೂ ಸಂಭ್ರಮಿಸೋ ವ್ಯಕ್ತಿ; ಪತಿಗೆ ವಿಜಯಲಕ್ಷ್ಮೀ ಕ್ಯೂಟ್‌ ವಿಶ್

ಕೋಪಿಸುವ ಹುಡುಗರನು, ಯಾರೂ ಪ್ರೀತಿಸಬಾರದು...

ಪ್ರೀತಿಸುವ ಹುಡುಗಿಯರ, ಯಾರೂ ನಿಂದಿಸಬಾರದು...

ಕೋಪಿಸಿದರೂ ನಿಂದಿಸಿದರೂ ನಾನು ನಿನ್ನ ಪ್ರೀತಿಸುವೇ! ಅಂತ ವಿಡಿಯೋ ಕ್ಲಿಪ್‌ ಶೇರ್‌ ಮಾಡಿದೆ ವಾಹಿನಿ.

ಭೂಮಿ ಕಾಳಜಿಯನ್ನ ಅಪಾರ್ಥ ಮಾಡ್ಕೊಂಡ್ಲಾ ಮಲ್ಲಿ?

ಮಲ್ಲಿ ಕಾಲೇಜ್‌ಗೆ ಬಂಕ್‌ ಹಾಕುತ್ತಿರುವ ವಿಚಾರ ಭುಮಿಕಾಗೆ ಗೊತ್ತಾಗಿದೆ. ಟಿಫಿನ್‌ ಬಾಕ್ಸ್‌ ಕೊಡಲಿಕ್ಕೆ ಅಂತ ಕಾಲೇಜಿಗೆ ಬಂದ ಭೂಮಿಗೆ ಮಲ್ಲಿ ಒಬ್ಬ ಹುಡುಗನ ಜೊತೆ ಸುತ್ತುತ್ತಾ ಇರುವ ವಿಚಾರ ಆಕೆಯ ಸ್ನೇಹಿತೆಯಿಂದ ತಿಳಿದಿದೆ. ಮಲ್ಲಿ ಕ್ಲಾಸ್‌ ಬಂಕ್‌ ಮಾಡಿ ಹುಡುಗನ ಜೊತೆ ಸುತ್ತುತ್ತಿದ್ದಾಳೆ ಅನ್ನೋ ವಿಚಾರ ಕೇಳಿ ನಮ್‌ ಭೂಮಿಗೆ ತಲೆ ಸುತ್ತಿದಂತೆ ಆಗಿಬಿಟ್ಟಿದೆ. ಅಲ್ಲಿಂದ ಮಲ್ಲಿ ಬಗ್ಗೆ ಜಾಸ್ತಿ ಯೋಚನೆ ಮಾಡ್ತಾ ಇದ್ದಾಳೆ.

ಈಗ ಬೇಕು ಅಂತಲೇ ಮಲ್ಲಿಗೆ ಹುಡುಗ ನೋಡಲು ಬರ್ತಾ ಇದ್ದಾರೆ ಸಂಜೆ ಬೇಗ ಬಂದು ಬಿಡು ಎಂದಿದ್ದಾಳೆ ಭೂಮಿ. ಮತ್ತೊಂದು ಕಡೆ ಮಲ್ಲಿ ಕಾಲೇಜ್‌ಗೆ ಹೋದ ಬಳಿಕ, ಭೂಮಿಕಾ ತನ್ನ ಬಗ್ಗೆ ವಿಚಾರಿಸುವ ಬಗ್ಗೆ ತಿಳಿದು ಮಲ್ಲಿ ಅಪಾರ್ಥ ಮಾಡಿಕೊಂಡಿದ್ದಾಳೆ. ಮಲ್ಲಿ ಈಗ ಮನೆಗೆ ಹೋದ ಬಳಿ ಭೂಮಿಕಾ ಜೊತೆ ಶಾಂತವಾಗಿ ವರ್ತಿಸುತ್ತಾಳಾ, ಕೋಪ ಆಗ್ತಾಳಾ? ಅನ್ನೋದೇ ವೀಕ್ಷಕರಲ್ಲಿ ಇರೋ ಕುತೂಹಲ.



ಜೈದೇವ್‌ ಮಾಸ್ಟರ್‌ ಪ್ಲ್ಯಾನ್‌

ಇನ್ನೊಂದು ಕಡೆ ಜೈದೇವ್‌ ಮಾಸ್ಟರ್‌ ಪ್ಯಾನ್‌ ಮಾಡ್ತಿದ್ದಾನೆ, ಮಲ್ಲಿ ಮುಂದೆ ಗೌತಮ್‌ ಹಾಗೂ ಭೂಮಿಕಾ ಮದುವೆ ಪ್ರಸ್ತಾಪ ಇಟ್ಟಾಗ, ಸುನಿ ಪ್ರಪೋಸ್‌ ಮಾಡಿರೋ ವಿಚಾರ ಹೇಳಿದ್ದಾಳೆ. ಇದೀಗ ಗೌತಮ್‌ ಹಾಗೂ ಭೂಮಿಕಾ ಪ್ರಪೋಸ್‌ ಮಾಡಿದವನ ಜೊತೆಗೆ ಮಾತುಕತೆ ಮಾಡಬೇಕು ಅಂತ ಹೇಳಿದ್ದಾರೆ. ಇದೀಗ ಸುನಿಗೆ ಮಲ್ಲಿ ಮನೆಗೆ ಕರೆದಿದ್ದಾಳೆ. ಇದರಿಂದ ಸುನಿ ಸಖತ್‌ ಶಾಕ್‌ ಆಗಿದ್ದಾನೆ. ಇನ್ನು ಜೈದೇವ್‌ ಯಾವ ರೀತಿ ಪ್ಲ್ಯಾನ್‌ ಮಾಡ್ತಾನೆ ಅನ್ನೋದೇ ಕುತೂಹಲ.



ಇದನ್ನೂ ಓದಿ: Darshan Birthday: ಉಸಿರಿರುವವರೆಗೂ ನಿಮ್ಮ ಹಿಂದೆ ಇರ್ತೀವಿ ಅಣ್ಣ! ದರ್ಶನ್‌ಗೆ ಧನ್ವೀರ್‌ ವಿಶ್‌

ಅತ್ತ ಜಯದೇಗ್‌ಗೂ ಸಂಕಷ್ಟ ಎದುರಾಗಿದೆ. ಅವರು ಮಾಡಿದ ಸಾಲದಿಂದ ಸಂಕಷ್ಟ ಬಂದಿದೆ. ಬ್ಯಾಂಕ್ನವರು ಮನೆಗೆ ಬಂದು ಪೀಡಿಸುತ್ತಿದ್ದಾರೆ. ಇದರಿಂದ ಮುಂದಿನ ದಿನಗಳಲ್ಲಿ ಸಾಕಷ್ಟು ಸಮಸ್ಯೆ ಎದುರಿಸೋ ಪರಿಸ್ಥಿತಿ ಬರಬಹುದು.

ಅಮೃತಧಾರೆ’ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿದೆ. ಛಾಯಾ ಸಿಂಗ್ ಭೂಮಿಕಾ ಎನ್ನುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರ ಸಂಜೆ 7 ಗಂಟೆಗೆ ಪ್ರಸಾರ ಕಾಣುತ್ತಿದೆ

Yashaswi Devadiga

View all posts by this author