ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Darshan Birthday: ಪ್ರತಿ ದಿನವನ್ನೂ ಸಂಭ್ರಮಿಸೋ ವ್ಯಕ್ತಿ; ಪತಿಗೆ ವಿಜಯಲಕ್ಷ್ಮೀ ಕ್ಯೂಟ್‌ ವಿಶ್

vijayalakshmi darshan: ನಟ ದರ್ಶನ್ ಜೈಲಿನಲ್ಲಿ ತಮ್ಮ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪದ ಹಿನ್ನೆಲೆಯಲ್ಲಿ ದರ್ಶನ್‌ ಜೈಲಿನಲ್ಲಿ ಇರುವ ಪರಿಸ್ಥಿತಿಯಲ್ಲೂ ಅಭಿಮಾನಿಗಳ ಉತ್ಸಾಹ ಕಡಿಮೆಯಾಗಿಲ್ಲ. ತಮ್ಮ ಪ್ರಿಯ ನಟನ ಅನುಪಸ್ಥಿತಿಯಲ್ಲೂ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಲು ರಾಜ್ಯದಾದ್ಯಂತ ಅಭಿಮಾನಿ ಸಂಘಗಳು ಸಿದ್ಧತೆ ನಡೆಸಿವೆ. ಇದೀಗ ದರ್ಶನ್ ಪತ್ನಿ ವಿಜಯಲಕ್ಷ್ಮೀ ಅವರು ಪ್ರೀತಿಯಿಂದ ಪತಿಗೆ ವಿಶ್ ಮಾಡಿದ್ದಾರೆ.

ಪ್ರತಿ ದಿನವನ್ನೂ ಸಂಭ್ರಮಿಸೋ ವ್ಯಕ್ತಿ; ಪತಿಗೆ ವಿಜಯಲಕ್ಷ್ಮೀ ಕ್ಯೂಟ್‌ ವಿಶ್

ನಟ ದರ್ಶನ್‌ -

Yashaswi Devadiga
Yashaswi Devadiga Feb 16, 2026 7:45 AM

ನಟ ದರ್ಶನ್ (Darshan) ಅವರಿಗೆ ಇಂದು (ಫೆಬ್ರವರಿ 16) ಜನ್ಮದಿನ. ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪದ ಹಿನ್ನೆಲೆಯಲ್ಲಿ ದರ್ಶನ್‌ ಜೈಲಿನಲ್ಲಿ ಇರುವ ಪರಿಸ್ಥಿತಿಯಲ್ಲೂ ಅಭಿಮಾನಿಗಳ (Fans) ಉತ್ಸಾಹ ಕಡಿಮೆಯಾಗಿಲ್ಲ. ತಮ್ಮ ಪ್ರಿಯ ನಟನ ಅನುಪಸ್ಥಿತಿಯಲ್ಲೂ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಲು ರಾಜ್ಯದಾದ್ಯಂತ ಅಭಿಮಾನಿ ಸಂಘಗಳು ಸಿದ್ಧತೆ ನಡೆಸಿವೆ. ಇದೀಗ ದರ್ಶನ್ ಪತ್ನಿ ವಿಜಯಲಕ್ಷ್ಮೀ (Vijayalakshmi Darshan) ಅವರು ಪ್ರೀತಿಯಿಂದ ಪತಿಗೆ ವಿಶ್ ಮಾಡಿದ್ದಾರೆ.

ವಿಜಯಲಕ್ಷ್ಮೀ ಪೋಸ್ಟ್‌

‘ಪ್ರತಿ ದಿನವನ್ನೂ ಸಂಭ್ರಮಿಸೋ ವ್ಯಕ್ತಿಗೆ ಜನ್ಮದಿನದ ಶುಭಾಶಯಗಳು’ ಎಂದು ವಿಜಯಲಕ್ಷ್ಮೀ ಇನ್​​ಸ್ಟಾಗ್ರಾಮ್​​ನಲ್ಲಿ ಬರೆದುಕೊಂಡಿದ್ದಾರೆ. ದರ್ಶನ್, ವಿನೀಶ್ ಹಾಗೂ ವಿಜಯಲಕ್ಷ್ಮೀ ಅವರು ಕೇಕ್ ಎದುರು ನಿಂತಿದ್ದಾರೆ. ಈ ಪೋಸ್ಟ್ ಗಮನ ಸೆಳೆದಿದೆ.

ಇದನ್ನೂ ಓದಿ: Lakshmi Nivasa Serial: ಮರಳಿ ಬಂದ 'ಶ್ರೀಕಾಂತ್'; ಲಕ್ಷ್ಮೀನಿವಾಸದಲ್ಲಿ ರೋಚಕ ತಿರುವು

ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಡಿ ಬಾಸ್ ಅಭಿಮಾನಿಗಳು ಬೃಹತ್‌ ಬ್ಯಾನರ್‌ಗಳು, ಪೋಸ್ಟರ್‌ಗಳು ಅಳವಡಿಸಿ ಹುಟ್ಟುಹಬ್ಬದ ಸಂಭ್ರಮಕ್ಕೆ ಸಜ್ಜಾಗಿದ್ದಾರೆ. ಕೆಲವೆಡೆ ಅನಾಥಾಶ್ರಮ ಮತ್ತು ವೃದ್ಧಾಶ್ರಮಗಳಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸುವ ಯೋಜನೆಯೂ ರೂಪುಗೊಂಡಿದೆ ಎನ್ನಲಾಗಿದೆ. ನಟ ದರ್ಶನ್‌ ಅವರ ಹುಟ್ಟುಹಬ್ಬ ಈ ಬಾರಿ ಬೇಸರದ ಪರಿಸ್ಥಿತಿಯಲ್ಲಿ ಬಂದಿದ್ದರೂ, ಅಭಿಮಾನಿಗಳ ಪ್ರೀತಿ ಮತ್ತು ನಿಷ್ಠೆ ಮಾತ್ರ ಅಷ್ಟೇ ಗಟ್ಟಿಯಾಗಿ ಕಾಣಿಸಿಕೊಂಡಿದೆ.

ಮೊದಲ ಬಾರಿಗೆ ಜೈಲಿನಲ್ಲೇ ಬರ್ತ್​​ಡೇ

ದರ್ಶನ್ ಅವರು ಜೀವನದಲ್ಲಿ ಮೊದಲ ಬಾರಿಗೆ ಜೈಲಿನಲ್ಲೇ ಬರ್ತ್​​ಡೇ ಆಚರಿಸಿಕೊಳ್ಳುತ್ತಿದ್ದಾರೆ. ಅಲ್ಲಿ ಹೆಚ್ಚಿನ ಸಂಭ್ರಮಕ್ಕೆ ಅವಕಾಶವಿಲ್ಲ. ವಿಜಯಲಕ್ಷ್ಮೀ ಅವರು ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಲಿದ್ದಾರೆ. ಆ ಬಳಿಕ ವಿಶೇಷ ಒಪ್ಪಿಗೆ ಪಡೆದು ಜೈಲಿಗೆ ತೆರಳಿ ದರ್ಶನ್ ಅವರನ್ನು ಭೇಟಿ ಮಾಡಿ ಬರುವ ಸಾಧ್ಯತೆ ಇದೆ.

ದರ್ಶನ್ ಫ್ಯಾನ್ಸ್ ಇದೀಗ ಕೇಳಿಕೊಳ್ಳುತಿರೋದು ಒಂದೇ ವಿಚಾರ ಅದೇನೆಂದರೆ ದರ್ಶನ್ ಆದಷ್ಟು ಬೇಗ ಜೈಲಿಂದ ಹೊರಬಂದು ಬಂದು ತಮ್ಮ ಮುಂದಿನ ಚಿತ್ರಗಳ ಮೂಲಕ ಅಭಿಮಾನಿಗಳನ್ನು ಮತ್ತಷ್ಟು ರಂಜಿಸಲಿ ಎಂದು. ಜೊತೆಗೆ ಮುಂದಿನ ವರ್ಷದ ಹುಟ್ಟುಹಬ್ಬವನ್ನು ಅಭಿಮಾನಿಗಳ ಜೊತೆಯಲ್ಲಿ ಅದ್ದೂರಿಯಾಗಿ ಆಚರಿಸಿಕೊಳ್ಳಲಿ ಎಂಬುದು ಅಭಿಮಾನಿಗಳ ನಿರೀಕ್ಷೆಯಾಗಿದೆ.

ಇದನ್ನೂ ಓದಿ: Mrunal Thakur: ಧನುಶ್ ಜೊತೆ ಗುಟ್ಟಾಗಿ ವಿವಾಹ ; ಮೃಣಾಲ್‌ ಮುಕ್ತ ಮಾತು!

ಹುಟ್ಟುಹಬ್ಬದ ಪ್ರಯುಕ್ತ ಅಭಿಮಾನಿಗಳು ಡಿ ಉತ್ಸವ ಮಾಡಲು ತಯಾರಿ ನಡೆಸಿದ್ದಾರೆ. ಬೆಂಗಳೂರು, ಮೈಸೂರು, ಹುಬ್ಬಳ್ಳಿ, ದಾವಣಗೆರೆ, ಕಲಬುರಗಿ ಸೇರಿದಂತೆ ಅನೇಕ ನಗರಗಳಲ್ಲಿ ಅಭಿಮಾನಿ ಸಂಘಗಳು ಈಗಾಗಲೇ ಬ್ಯಾನರ್‌ಗಳು, ಫ್ಲೆಕ್ಸ್‌ಗಳು ಅಳವಡಿಸಿ ಸಂಭ್ರಮಕ್ಕೆ ಸಜ್ಜಾಗಿವೆ. ಕೆಲವೆಡೆ ದರ್ಶನ್‌ ಅವರ ಹಳೆಯ ಹಿಟ್‌ ಸಿನಿಮಾಗಳ ವಿಶೇಷ ಪ್ರದರ್ಶನಕ್ಕೆ ಯೋಜನೆ ರೂಪಿಸಲಾಗಿದೆ.