ಜೀ ಕನ್ನಡ ವಾಹಿನಿಯಲ್ಲಿ (Zee Kannada) ಪ್ರಸಾರ ಕಾಣುತ್ತಿರುವ ಅಮೃತಧಾರೆಯಲ್ಲಿ (amruthadhaare serial) ಗೌತಮ್ ದಿವಾನ್ ಹಾಗೂ ಭೂಮಿಕಾ ಮತ್ತೊಮ್ಮೆ ಸಂಕಷ್ಟಕ್ಕೆ ಗುರಿಯಾಗಿದ್ದಾರೆ. ಮಹಿಮಾಗೆ ಮಕ್ಕಳು ಆಗದೇ ಇರೋ ಸಂಗತಿ ತಿಳಿದು ಡಿಪ್ರೇಶನ್‌ಗೆ ಹೋಗಿದ್ದಾಳೆ. ಅಷ್ಟೇ ಅಲ್ಲ ಭೂಮಿ (Bhoomika) ತಾಯಿ ಇನ್ನೊಂದು ಡಿಮ್ಯಾಂಡ್ ಮಾಡಿದ್ದಾರೆ. ಇದನ್ನು ಕೇಳಿ ಶಾಕ್ ಆಗಿದ್ದಾನೆ ಗೌತಮ್.
ಸವಾಲನ್ನ ಹೇಗೆ ಎದುರಿಸ್ತಾರೆ ಗೌತಮ್ - ಭೂಮಿಕಾ ?
ಸೀರಿಯಲ್‌ನಲ್ಲಿ ಸದ್ಯ ಮಿಂಚು ಮೇಲೆ ಕಥೆ ಸಾಗುತ್ತಿದೆ. ಸದ್ಯ ಮಹಿಮಾ ಮಗು ಕಳೆದಕೊಂಡ ನೋವಿನಲ್ಲಿ ಇದ್ದಾಳೆ. ಮಗು ಇಲ್ಲ ಎನ್ನುವ ನೋವು ತುಂಬಾ ಕಾಡುತ್ತಿದೆ ಎಂದಿದ್ದಾರೆ ಭೂಮಿ ಅಮ್ಮ. ನನಗೆ ಒಂದು ಆಲೋಚನೆ ಬಂತು.ಮಿಂಚುನ ಮಹಿಮಾಗೆ ದತ್ತು ಕೊಟ್ಟಿದ್ದರೆ ಚೆನ್ನಾಗಿ ಇರೋದು ಎಂದಿದ್ದಾರೆ. ಇದನ್ನು ಕೇಳಿ ಶಾಕ್ ಆಗಿದ್ದಾರೆ ಭೂಮಿ ಹಾಗೂ ಗೌತಮ್. ಅಷ್ಟೇ ಅಲ್ಲ ಈ ವಿಚಾರ ಆಕಾಶ್ ಕಿವಿಗೂ ಬಿದ್ದಿದೆ. ಮುಂದೆ ಮಿಂಚು ಕಥೆ ಏನಾಗುತ್ತೆ ಅನ್ನೋದು ಕುತೂಹಲ ಇದೆ.
ಈಗ ಶಕುನಿ ಮಾಮನನ್ನು ಕಿಡ್ನಾಪ್ (Kidnap) ಮಾಡಿದ್ದಾನೆ ಜೈದೇವ್.ಮಿಂಚು ಫೋಟೋ ಜೈದೇವ್‌ಗೆ ಸಿಗದಂತೆ ಕಾಪಾಡಿಕೊಂಡಿದ್ದಾನೆ. ಗೌತಮ್ ಕೂಡ ಎಷ್ಟೇ ಕಾಲ್ ಮಾಡಿದ್ದರೂ ರಿಸೀವ್ ಮಾಡಲಾರದೇ ಲಕ್ಷ್ಮೀ ಕಾಂತ್ ಚಡಪಡಿಸಿದ್ದಾನೆ. ಜೈದೇವ್ ಕೂಡ ಈಗ ಶಕುನಿ ಮಾಮಗೆ ಟಾರ್ಚರ್ ಕೊಟ್ಟು ಗೌತಮ್‌ಗೆ ಬ್ಲಾಕ್ ಮೇಲ್ ಮಾಡಲು ಮುಂದಾಗಿದ್ದಾನೆ. ಮುಂದೆ ಮಿಂಚುಗೆ ಪ್ರಾಣಾಪಾಯ ಇದ್ಯಾ? ಗೌತಮ್‌ಗೆ ಕಂಟಕ ಆಗುತ್ತಾ ಅನ್ನೋದು ವೀಕ್ಷರಲ್ಲಿ ಇರುವ ಕುತೂಹಲ.
ಇದನ್ನೂ ಓದಿ: Kangana Ranaut: ಐಶ್ವರ್ಯಾ ರೈ ಲುಕ್ ಬಗ್ಗೆ ಟ್ರೋಲ್ ಮಾಡಿದವರಿಗೆ ಕಂಗನಾ ತಿರುಗೇಟು!
ಅಖಿಲಾಂಡೇಶ್ವರಿ ಹೇಳಿದ ಅಡ್ರೆಸ್‌ನ ಲಕ್ಷ್ಮೀಕಾಂತ್ ಏನೋ ಬರೆದುಕೊಂಡಿದ್ದಾನೆ. ಆದರೆ ಗೌತಮ್ ದಿವಾನ್ ಸಾಮ್ರಾಜ್ಯದಲ್ಲಿ ಉಂಡ ಮನೆಗೆ ಕನ್ನ ಹಾಕುವರ ಸಂತತಿ ಇನ್ನೂ ಹಾಗೇ ಇದೆ. ಹೌದು, ಅಸಲಿಗೆ ಜೈದೇವ್‌ಗೆ ಮಗುವಿನ ವಿಚಾರ ಲಕ್ಷ್ಮೀಕಾಂತ್ ಹೇಳ್ತಾನೆ ಎಂದು ಎಲ್ಲರು ಅಂದುಕೊಂಡಿದ್ದರು.
ಲಕ್ಷ್ಮೀಕಾಂತ್ ಮತ್ತು ಶಕುಂತಲಾ ಬದಲಾಗಿಲ್ಲ ಎಂದೇ ವಾದ ಮಾಡುತ್ತಿದ್ದರು. ಆದರೆ, ಗೌತಮ್‌ಗೆ ಈ ಖುಷಿಯ ವಿಷಯ ಹೇಳಬೇಕೆಂದುಕೊಂಡು ಲಕ್ಷ್ಮೀಕಾಂತ್ ಹೋಗಿದ್ದಾನೆ. ಆದರೆ ಲಕ್ಷ್ಮೀಕಾಂತ್ ಮತ್ತು ಅಖಿಲಾಂಡೇಶ್ವರಿಯ ಸಂಭಾಷಣೆ ಪೂರ್ತಿ ಕೇಳಿಸಿಕೊಂಡಿರುವ ಆಫೀಸ್‌ನಲ್ಲಿ ಕೆಲಸ ಮಾಡುವ ವ್ಯಕ್ತಿ ಜೈದೇವ್‌ಗೆ ಕರೆ ಮಾಡಿದ್ದಾನೆ.
ಮಗು ವಿಚಾರ ಹೇಳಿದ್ದಾನೆ. ಈ ಮೂಲಕ ಉಂಡ ಮನೆಗೆ ದ್ರೋಹ ಬಗೆದಿದ್ದಾನೆ.ಎಲ್ಲಕ್ಕಿಂತ ಮುಖ್ಯವಾಗಿ ಮಗಳಿಂದ ಕಂಟಕ ಇದೆ ಎಂದು ಈ ಹಿಂದೆ ಜ್ಯೋತಿಷಿ ಭವಿಷ್ಯ ನುಡಿದಿದ್ದಾನೆ. ಹೀಗಾಗಿ ಜೈದೇವ್‌ನ ಕಪಿಮುಷ್ಠಿಯಿಂದ ಮಗುವನ್ನು ಪಾರು ಮಾಡಲು ಹೋದಾಗ ಗೌತಮ್ ಪ್ರಾಣಕ್ಕೆ ಅಪಾಯವಾದರೂ ಆಗಬಹುದು.
ಇದನ್ನೂ ಓದಿ: Toxic movie: ‘ಟಾಕ್ಸಿಕ್’ ಟೀಸರ್, ಟ್ರೋಲ್‌ಗಳಿಗೆ ಖಡಕ್ ಉತ್ತರ ನೀಡಿದ ಯಶ್ ತಾಯಿ ಪುಷ್ಪಾ
ಅಮೃತಧಾರೆʼ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿದೆ. ಛಾಯಾ ಸಿಂಗ್ ಭೂಮಿಕಾ ಎನ್ನುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರ ಸಂಜೆ 7 ಗಂಟೆಗೆ ಪ್ರಸಾರ ಕಾಣುತ್ತಿದೆ