ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Toxic movie: ‘ಟಾಕ್ಸಿಕ್’ ಟೀಸರ್, ಟ್ರೋಲ್‌ಗಳಿಗೆ ಖಡಕ್ ಉತ್ತರ ನೀಡಿದ ಯಶ್ ತಾಯಿ ಪುಷ್ಪಾ

Toxic movie: ಚಿತ್ರರಂಗದ ಸಮಸ್ಯೆಗಳ ಬಗ್ಗೆ ಯಶ್‌ ಅಮ್ಮ ಪುಷ್ಪಾ ಅರುಣ್‌ಕುಮಾರ್ ಮಾಧ್ಯಮಗಳ ಜೊತೆ ಮಾತನಾಡಿದ್ದಾರೆ. ಟ್ರೆಂಡ್‌ಗೆ ತಕ್ಕಂತೆ ಸಿನಿಮಾಗಳು ಬರ್ತಿವೆ. ಪ್ರೇಕ್ಷಕರಿಗೆ ಅಭಿರುಚಿಗೆ ತಕ್ಕಂತೆ ಸಿನಿಮಾ ಮಾಡ್ತಾರೆ. ಅಭಿರುಚಿ ಬದಲಾದಂತೆ ಕಥೆ, ಸಿನಿಮಾ ಎಲ್ಲವೂ ಬದಲಾಗುತ್ತದೆ ಎಂದು ಪುಷ್ಪಾ ಅರುಣ್‌ಕುಮಾರ್ ಅಭಿಪ್ರಾಯಪಟ್ಟಿದ್ದಾರೆ.

‘ಟಾಕ್ಸಿಕ್’ ಟೀಸರ್, ಟ್ರೋಲ್‌ಗಳಿಗೆ ಖಡಕ್ ಉತ್ತರ ನೀಡಿದ ಯಶ್ ತಾಯಿ ಪುಷ್ಪಾ

ಟಾಕ್ಸಿಕ್‌ ಸಿನಿಮಾ -

Yashaswi Devadiga
Yashaswi Devadiga May 25, 2026 11:32 AM

ಟಾಕ್ಸಿಕ್’ ಸಿನಿಮಾದ (Toxic Movie) ಟೀಸರ್​​ನಲ್ಲಿ ಬೋಲ್ಡ್ ದೃಶ್ಯ ಇತ್ತು. ಈ ಚಿತ್ರದ ಟೀಸರ್​​ಗೆ ಅನೇಕರು ಟೀಕೆ ಹೊರಹಾಕಿದ್ದರು. ಚಿತ್ರರಂಗದ ಸಮಸ್ಯೆಗಳ ಬಗ್ಗೆ ಯಶ್‌ (Yash) ಅಮ್ಮ ಪುಷ್ಪಾ ಅರುಣ್‌ಕುಮಾರ್ ಮಾಧ್ಯಮಗಳ ಜೊತೆ ಮಾತನಾಡಿದ್ದಾರೆ. ಟ್ರೆಂಡ್‌ಗೆ ತಕ್ಕಂತೆ ಸಿನಿಮಾಗಳು ಬರ್ತಿವೆ. ಪ್ರೇಕ್ಷಕರಿಗೆ ಅಭಿರುಚಿಗೆ ತಕ್ಕಂತೆ ಸಿನಿಮಾ ಮಾಡ್ತಾರೆ. ಅಭಿರುಚಿ ಬದಲಾದಂತೆ ಕಥೆ, ಸಿನಿಮಾ ಎಲ್ಲವೂ ಬದಲಾಗುತ್ತದೆ ಎಂದು ಪುಷ್ಪಾ ಅರುಣ್‌ಕುಮಾರ್ (Pushpa Arunkumar) ಅಭಿಪ್ರಾಯಪಟ್ಟಿದ್ದಾರೆ.

ಹೀಗೆ ಇರುತ್ತದೆ ಎಂದು ನಿರ್ಧರಿಸಲು ಸಾಧ್ಯವಿಲ್ಲ

ಯಾವಾಗ ಯೂತ್ಸ್ ಬದಲಾಗುತ್ತಾರೋ, ಹಳೆಯ ಕಾಲದ ಸಿನಿಮಾಗಳನ್ನು ನೋಡಲು ಇಷ್ಟಪಡುತ್ತಾರೋ ಆಗ ನಿರ್ದೇಶಕರು ಅಂತಹ ಸಿನಿಮಾಗಳನ್ನೇ ಮಾಡುತ್ತಾರೆ. ಟೀಸರ್ ಎನ್ನುವುದು ಕೇವಲ ಪ್ರೇಕ್ಷಕರನ್ನು ಸೆಳೆಯುವ ಒಂದು ಸಣ್ಣ ಆಕರ್ಷಣೆಯಷ್ಟೇ. ಟೀಸರ್ ನೋಡಿಯೇ ಇಡೀ ಸಿನಿಮಾ ಹೀಗೆ ಇರುತ್ತದೆ ಎಂದು ನಿರ್ಧರಿಸಲು ಸಾಧ್ಯವಿಲ್ಲ. ಚಿತ್ರಮಂದಿರಕ್ಕೆ ಹೋಗಿ ಇಡೀ ಸಿನಿಮಾ ನೋಡಿದ ಮೇಲಷ್ಟೇ ಅದರ ಸಂಪೂರ್ಣ ಕಥೆ ತಿಳಿಯುತ್ತದೆ ಎಂದಿದ್ದಾರೆ.

ಇದನ್ನೂ ಓದಿ: Ananya Panday: ಭರತನಾಟ್ಯ ದೃಶ್ಯ ವೈರಲ್; ಭಾರಿ ಟೀಕೆಗೆ ಗುರಿಯಾದ ಅನನ್ಯಾ ಪಾಂಡೆ

ನೀವು ಚಿತ್ರಮಂದಿರಕ್ಕೆ ಹೋಗಿ ಸಿನಿಮಾ ನೋಡಿದ್ದೀರಾ? ನೀವು ಚಿತ್ರಮಂದಿರಕ್ಕೆ ಹೋಗಿ ಎದ್ದು ಬರುವಂತೆ ಯಶ್ ಸಿನಿಮಾ ಮಾಡಿದ್ದಾರಾ? ಟೀಸರ್ ಮಾತ್ರವೇ ಸಿನಿಮಾ ಅಲ್ಲ. ಅದು ಇನ್ವಿಟೇಷನ್ ಮಾತ್ರ,ನಿಮ್ಮ ಸಿನಿಮಾನಾ ಫಾರಿನ್ ಅವ್ರು ನೋಡ್ತಾರಾ? ಫಾರಿನ್ ಅವ್ರು ನೋಡ್ಬೇಕು ಅಂದಾಗ ಎಲ್ಲಾ ಅಂದ್ರೆ ಎಲ್ಲಾ ತರಹದ ಸಿನಿಮಾ ಮಾಡ್ಬೇಕು.. ಕರ್ನಾಟಕದಲ್ಲಿ ಮಾತ್ರ ಸಿನಿಮಾ ಹೋಗಲ್ಲ, ಎಲ್ಲಾ ಕಡೆಯಿಂದ ಥಿಯೇಟರ್ ತಂದ್ಕೊಳ್ಳಿ ಅಂತ ಅವ್ರು ಹೇಳಿದ್ದು" ಎಂದು ವಿವರಿಸಿದ್ದಾರೆ.

ನಮ್ಮವರು ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಳ್ಳುವ ಬಿಗ್ ಬಜೆಟ್ ಸಿನಿಮಾಗಳನ್ನು ಮಾಡಲು ಹೆಚ್ಚು ಸಮಯ ತೆಗೆದುಕೊಳ್ಳುತ್ತಿದ್ದಾರೆ ಎಂದು ಬೇಜಾರು ಮಾಡಿಕೊಳ್ಳಬೇಕೋ ಅಥವಾ ಅವರು ಇಷ್ಟು ದೊಡ್ಡ ಸಾಧನೆ ಮಾಡುತ್ತಿದ್ದಾರೆ ಎಂದು ಹೆಮ್ಮೆ ಪಡಬೇಕೋ ನೀವೇ ಹೇಳಿ’ಎಂದು ಪ್ರಶ್ನಿಸುವ ಮೂಲಕ ಬೆಂಬಲಿಸಿದ್ದಾರೆ.

ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕ ನಂತರವೂ ಗೋವಾ ಇನ್ನೂ ಪೋರ್ಚುಗೀಸರ ಆಡಳಿತದಲ್ಲಿದ್ದ ಸಮಯದ ಹಿನ್ನೆಲೆಯಲ್ಲಿ ಈ ಚಿತ್ರ ಮೂಡಿಬರಲಿದೆ. ಈ ವಿಶಿಷ್ಟ ಐತಿಹಾಸಿಕ ಹಿನ್ನೆಲೆಯು ಚಿತ್ರಕ್ಕೆ ಅಂತರರಾಷ್ಟ್ರೀಯ ಮಟ್ಟದ ದೃಶ್ಯ ವೈಭವವನ್ನು ನೀಡುವುದರ ಜೊತೆಗೆ, ಭಾರತೀಯ ಇತಿಹಾಸ ಮತ್ತು ಅಸ್ಮಿತೆಯ ಪರಿಚಯವನ್ನು ಮಾಡುತ್ತದೆ.

‘ಜಾನ್ ವಿಕ್’ ಮತ್ತು ‘ಫಾಸ್ಟ್ ಅಂಡ್ ಫ್ಯೂರಿಯಸ್’ ಖ್ಯಾತಿಯ ಹೆಸರಾಂತ ಸಾಹಸ ನಿರ್ದೇಶಕ ಜೆ. ಜೆ. ಪೆರ್ರಿ ‘ಟಾಕ್ಸಿಕ್’ ಚಿತ್ರದ ಸಾಹಸ ದೃಶ್ಯಗಳನ್ನು ಸಂಯೋಜಿಸಿದ್ದಾರೆ. ಕುತೂಹಲಕರ ವಿಷಯವೆಂದರೆ, ಭಾರತೀಯ ಚಿತ್ರರಂಗಕ್ಕೆ ಏನಾದರೂ ಹೊಸತು ಮತ್ತು ತೀವ್ರವಾದಂತಹ ಅನುಭವ ನೀಡುವ ಸಲುವಾಗಿ ಪೆರ್ರಿ ಅವರು ಇಲ್ಲಿ ಭಾರತೀಯ ಸಾಹಸ ತಂಡಗಳ ಜೊತೆ ಕೆಲಸ ಮಾಡಿದ್ದಾರೆ.

ಇದನ್ನೂ ಓದಿ: Hera Pheri 3: ʻಹೇರಾ ಫೇರಿ 3’ ಸಿನಿಮಾದಿಂದ ಮತ್ತೆ ಹೊರಬಂದ ಪರೇಶ್ ರಾವಲ್? ಕಾರಣ ಏನು?

ಈ ಚಿತ್ರದಲ್ಲಿ ನಯನತಾರಾ, ಕಿಯಾರಾ ಅಡ್ವಾಣಿ, ಹುಮಾ ಖುರೇಷಿ, ರುಕ್ಮಿಣಿ ವಸಂತ್, ತಾರಾ ಸುತಾರಿಯಾ ಮತ್ತು ಬ್ರಿಟಿಷ್ ನಟ ಡ್ಯಾರೆಲ್ ಡಿಸಿಲ್ವಾ ಅವರಂತಹ ಕಲಾವಿದರ ದಂಡೇ ಇದೆ.