ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Amruthadhaare Serial: ಜೇಡಿಯ ಪೈಲ್ವಾನ್ ಈಗ ಭೂಮಿ ಕಣ್ಣೆದುರು! ಜೈದೇವ್‌ ಮುಂದಿನ ಪ್ಲ್ಯಾನ್‌ ಏನು?

Amruthadhaare Kannada Serial: ಮಲ್ಲಿ ಜೈದೇವ್‌ನಿಂದ ಮೋಸ ಹೋಗಿದ್ದು ಆಯ್ತು. ಸದ್ಯ ಒಂಟಿಯಾಗಿ ಬದುಕು ಸಾಗಿಸುತ್ತಿದ್ದಾಳೆ. ಜೆಡಿ ಕುತಂತ್ರಗಳಿಗೆ ಮತ್ತೆ ಬಲಿಯಾಗುತ್ತಿದ್ದಾಳೆ. ಮಲ್ಲಿಯ ನೆಮ್ಮದಿಯನ್ನು ಹಾಳು ಮಾಡಲು ಮುಂದಾಗಿದ್ದಾನೆ. ಮಲ್ಲಿ ದಿನ ನಿತ್ಯ ಕಣ್ಣೀರು ಹಾಕಬೇಕು ಎಂದು ಮಲ್ಲಿ ಹಿಂದೆ ಹುಡುಗನನ್ನು ಬಿಟ್ಟಿದ್ದಾನೆ. ಆತ ಕೂಡ ಪ್ರೀತಿಯ ನಾಟಕ ಮಾಡ್ತಿದ್ದಾನೆ. ಆದರೀಗ ಕೇಡಿ ಜೇಡಿಯ ಪೈಲ್ವಾನ್ ಈಗ ಭೂಮಿ ಕಣ್ಣೆದುರು ಬಂದು ನಿಂತಿದ್ದಾನೆ. ಮುಂದೆನಾಗುತ್ತೆ?

ಅಮೃತಧಾರೆ ಧಾರಾವಾಹಿ

ಜೀ ಕನ್ನಡ ವಾಹಿನಿಯಲ್ಲಿ (Zee Kannada) ಪ್ರಸಾರ ಕಾಣುತ್ತಿರುವ ಅಮೃತಧಾರೆಯಲ್ಲಿ (amruthadhaare Serial) ಈಗ ಮಲ್ಲಿ (Malli) ಮೇಲೆಯೇ ಕಥೆ ಸಾಗುತ್ತಿದೆ. ಅಮೃತಾಧಾರೆ ಮಲ್ಲಿ ಜೈದೇವ್‌ನಿಂದ ಮೋಸ ಹೋಗಿದ್ದು ಆಯ್ತು. ಸದ್ಯ ಒಂಟಿಯಾಗಿ ಬದುಕು ಸಾಗಿಸುತ್ತಿದ್ದಾಳೆ. ಜೆಡಿ ಕುತಂತ್ರಗಳಿಗೆ ಮತ್ತೆ ಬಲಿಯಾಗುತ್ತಿದ್ದಾಳೆ. ಮಲ್ಲಿಯ ನೆಮ್ಮದಿಯನ್ನು ಹಾಳು ಮಾಡಲು ಮುಂದಾಗಿದ್ದಾನೆ. ಮಲ್ಲಿ ದಿನ ನಿತ್ಯ ಕಣ್ಣೀರು ಹಾಕಬೇಕು ಎಂದು ಮಲ್ಲಿ ಹಿಂದೆ ಹುಡುಗನನ್ನು ಬಿಟ್ಟಿದ್ದಾನೆ. ಆತ ಕೂಡ ಪ್ರೀತಿಯ ನಾಟಕ ಮಾಡ್ತಿದ್ದಾನೆ. ಆದರೀಗ ಕೇಡಿ ಜೇಡಿಯ (JD) ಪೈಲ್ವಾನ್ ಈಗ ಭೂಮಿ ಕಣ್ಣೆದುರು ಬಂದು ನಿಂತಿದ್ದಾನೆ. ಮುಂದೆನಾಗುತ್ತೆ?

ಹೊಸ ಟ್ರ್ಯಾಕ್‌

'ಅಮೃತಧಾರೆ' ಧಾರಾವಾಹಿಯಲ್ಲಿ ಹೊಸ ಟ್ರ್ಯಾಕ್‌ ಶುರುವಾಗಿದೆ. ಮಲ್ಲಿ ಹೆಸರಲ್ಲಿರೋ ಆಸ್ತಿ ಹೊಡೆಯೋಕೆ ಜೆಡಿ ಕುತಂತ್ರಗಳನ್ನ ರೂಪಿಸುತ್ತಿದ್ದಾನೆ. ಆದ್ರೇ ಯಾವುದು ಫಲ ಕೊಡ್ತಿಲ್ಲ.ಕಿಲಾಡಿ ಯಶವಂತ್‌ನನ್ನ ಮಲ್ಲಿ ಹಿಂದೆ ಬಿಟ್ಟು ಪ್ರೀತಿ ನಾಟಕ ಮಾಡುವಂತೆ ಆರ್ಡರ್‌ ಮಾಡಿದ್ದಾನೆ. ಯಶವಂತ್‌-ಮಲ್ಲಿ ನಡುವೆ ಅಷ್ಟೇನೂ ಪ್ರೀತಿ ಶುರು ಆಗದೇ ಇದ್ದರೂ, ಇದರ ಬಗ್ಗೆ ಭೂಮಿಕಾ ಹಾಗೂ ಗೌತಮ್‌ ಗಮನಕ್ಕೆ ಬಂದಿದೆ.

ಇದನ್ನೂ ಓದಿ: Reality Show: ʻಬಿಗ್ ಬಾಸ್‌ʼಗೆ ಟಕ್ಕರ್‌ ಕೊಡಲು ಬಂದೇ ಬಿಡ್ತು ಹೊಸ ರಿಯಾಲಿಟಿ ಶೋ!

ಭೂಮಿ ತನಿಖೆಯಲ್ಲಿ ಎಲ್ಲ ಬಯಲು

ಮಲ್ಲಿ ಊಟದ ಬ್ಯಾಗ್​ ಬಿಟ್ಟು ಹೋದಳು ಎನ್ನುವ ಕಾರಣಕ್ಕೆ ಕಾಲೇಜ್​ಗೆ ಕೊಡಲು ಬಂದಾಗ, ಆಕೆ ತುಂಬಾ ಕ್ಲಾಸ್​ ಬಂಕ್​ ಮಾಡ್ತಿರೋದು ತಿಳಿದಿದೆ. ಭೂಮಿಕಾ ಕಾಲೇಜಿಗೆ ಬಂದು ವಿಚಾರಿಸಿರುವ ಬಗ್ಗೆ ಮಲ್ಲಿಗೆ ಗೊತ್ತಾಗಿದೆ. ಇದಾದ ಬಳಿಕ ಮಲ್ಲಿ ಹಾಗೂ ಭೂಮಿ ನಡುವೆ ಮನಸ್ತಾಪವೂ ಆಯ್ತು. ಅದನ್ನು ಗೌತಮ್‌ ಸರಿ ಮಾಡಿದ್ದು ಆಯ್ತು. ಮಲ್ಲಿಗೆ ಮತ್ತೆ ಜೀವನದಲ್ಲಿ ನೋವು ಆಗಬಾರದು ಎನ್ನುವ ಉದ್ದೇಶ ಭೂಮಿಯದ್ದು. ಹೀಗಾಗಿ ಗೌತಮ್‌ ಹಾಗೂ ಭೂಮಿ ಈಗ ಮಲ್ಲಿಯನ್ನು ಪ್ರಪೋಸ್‌ ಮಾಡಿದ ಹುಡುಗನನ್ನು ಮನಗೆ ಬರಲು ಹೇಳಿದ್ದಾರೆ.



ಕೇಡಿ ಜೇಡಿಯ ಪೈಲ್ವಾನ್ ಈಗ ಭೂಮಿ ಕಣ್ಣೆದುರು!

ಮಲ್ಲಿ ಕರೆ ಮಾಡಿ, ಯಶ್‌ವಂತ್‌ಗೆ ಮನೆಗೆ ಬರಲು ಹೇಳಿದ್ದಾಳೆ. ಲೊಕೇಶನ್‌ ಶೇರ್‌ ಮಾಡ್ತೀನಿ ಎಂದಿದ್ದಾಳೆ. ಇನ್ನು ಕಿಲಾಡಿ ಹುಡುಗ ಜೈದೇವ್‌ ಮುಂದೆ ಈ ಬಗ್ಗೆ ಹೇಳಿದ್ದಾನೆ. ಜೈದೇವ್‌ ಕೂಡ ಭೂಮಿ ಮನೆಗೆ ಹೋಗು ಉಳಿದಿದ್ದು ನಾನು ನೋಡಿಕೊಳ್ಳುವೆ ಎಂದಿದ್ದಾನೆ. ಇನ್ನೊಂದು ಕಡೆ ಭೂಮಿ ಮುಂದೆ ಹುಡುಗ ಪ್ರತ್ಯಕ್ಷವಾದಾಗ ಭೂಮಿ ಶಾಕ್‌ ಆಗಿದ್ದಾಳೆ. ಇಷ್ಟು ಚಿಕ್ಕ ಹುಡುಗನಾ ಅಂತ ಭೂಮಿ ಶಾಕ್‌ ಆಗಿದ್ದಾಳೆ. ಮುಂದೆ ಜೈದೇವ್‌ ಯಾವ ರೀತಿ ಕುತಂತ್ರ ಮಾಡ್ತಾನೆ ಅನ್ನೋದು ಇಂದಿನ ಸಂಚಿಕೆಯಲ್ಲಿ ಗೊತ್ತಾಗಲಿದೆ.

ಅಮ್ಮನ ಮೇಲೆ ಮುನಿಸಿಕೊಂಡ ಅಪ್ಪಿ

ಮತ್ತೊಂದು ಕಡೆ ಭೂಮಿಕಾ ಹಾಗೂ ಗೌತಮ್‌ ಒಂದಾಗಿರೋ ವಿಚಾರ ಭೂಮಿ ಅಮ್ಮ ಮಗಳು ಅಪ್ಪಿ ಮುಂದೆ ಹೇಳಿದ್ದಾಳೆ. ನಮ್ಮನ್ನು ಒಂದು ಮಾತು ಕರೆಯಲಿಲ್ಲ ಅಂತ ಅಪ್ಪಿ ಅಮ್ಮನ ಮೇಲೆ ಮುನಿಸಿಕೊಂಡಿದ್ದಾಳೆ. ಜೈದೇವ್‌ಗೆ ಈ ಎಲ್ಲ ವಿಚಾರ ತಿಳಿಯುತ್ತೇನೋ ಅಂತ ಭೂಮಿ ತಾಯಿ ಅಪ್ಪಿಗೆ ಈ ವಿಚಾರ ಹೇಳಿರಲಿಲ್ಲ. ಇದರ ಜೊತೆಗೆ ಧಾರಾವಾಹಿಯಲ್ಲಿ ಮತ್ತೆ ಮಹಿಮಾ ಪಾತ್ರ ಚೇಂಜ್‌ ಆಗಿದ್ದಾರೆ. ಹೊಸ ನಟಿ ಎಂಟ್ರಿ ಕೊಟ್ಟಿದ್ದಾರೆ. ಯಾರು ಆ ನಟಿ ಎನ್ನೋದು ಇನ್ನಷ್ಟೇ ಗೊತ್ತಾಗಬೇಕಿದೆ.

ಇದನ್ನೂ ಓದಿ: Amruthadhaare Serial: ಭೂಮಿ ಕಾಳಜಿಯನ್ನು ಅಪಾರ್ಥ ಮಾಡ್ಕೊಂಡ್ಳಾ ಮಲ್ಲಿ?

ʻಅಮೃತಧಾರೆ’ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿದೆ. ಛಾಯಾ ಸಿಂಗ್ ಭೂಮಿಕಾ ಎನ್ನುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರ ಸಂಜೆ 7 ಗಂಟೆಗೆ ಪ್ರಸಾರ ಕಾಣುತ್ತಿದೆ

Yashaswi Devadiga

View all posts by this author