ಜೀ ಕನ್ನಡ ವಾಹಿನಿಯಲ್ಲಿ (Zee Kannada) ಪ್ರಸಾರ ಕಾಣುತ್ತಿರುವ ಅಮೃತಧಾರೆಯಲ್ಲಿ (Amruthadhare Serial) ಗೌತಮ್ ಹೊಸ ಬ್ಯುಸಿನೆಸ್ ಶುರು ಮಾಡಿದ್ದಾನೆ. ಬರೋಬ್ಬರಿ ಐದು ವರ್ಷಗಳ ನಂತರ ಉದ್ಯಮದಲ್ಲಿ ಮಿಂಚಲು ರೆಡಿಯಾಗಿದ್ದಾನೆ. ಅತ್ತ ಜೈದೇವ್‌ಗೆ (Jaidev) ಈ ವಿಚಾರ ನುಂಗಲಾರದ ತುತ್ತು ಆಗಿದೆ. ಗೌತಮ್ ನಡೆ ಜೈದೇವ್‌ಗೆ ಭಯ ತರಿಸವಂತೆ ಮಾಡಿದೆ.
ಬ್ಯುಸಿನೆಸ್ ಮಾಡಲು ನಿರ್ಧಾರ
ಗೌತಮ್ ಈಗ ಬ್ಯುಸಿನೆಸ್ ಮಾಡಲು ನಿರ್ಧಾರ ಮಾಡಿದ್ದಾನೆ. ಬ್ರೋಕರ್ ಆ್ಯಪ್ ಒಂದನ್ನು ಆರಂಭಿಸಿದ್ದಾನೆ. ಇದು ಸದ್ಯ ಸ್ಟಾರ್ಟ್ಅಪ್. ಆದರೆ, ಇದನ್ನು ದೊಡ್ಡದಾಗಿ ಬೆಳೆಸುವ ಆಲೋಚನೆ ಆತನಿಗೆ ಇದೆ. ಹೊಸ ಆಫೀಸ್ ಕೂಡ ನೋಡಿ ಇಟ್ಟಿದ್ದಾನೆ ಗೌತಮ್.
ಇದನ್ನೂ ಓದಿ: Thalapathy Vijay: ಡಿವೋರ್ಸ್ ವದಂತಿ ನಡುವೆ ದಳಪತಿ ವಿಜಯ್ ಬೇಸರದ ಮಾತು
ಸ್ನೇಹಿತ ಆನಂದ್‌ಗೆ ಹೊಸ ಆಫೀಸ್ ಹಾಗೂ ತನ್ನ ಪ್ಲ್ಯಾನ್ ಅನ್ನು ವಿವರಿಸಿದ್ದಾನೆ. ಅಷ್ಟೇ ಅಲ್ಲ ಸ್ನೇಹಿತ ಆನಂದ್‌ನನ್ನು ಬ್ಯುಸಿನೆಸ್ ಪಾರ್ಟನರ್ ಆಗಿ ಮಾಡಿಕೊಂಡಿದ್ದಾನೆ. ಈ ಸಮಯದಲ್ಲಿ ತನ್ನ ಸ್ನೇಹವನ್ನು ಮರೆದಿದ್ದಾನೆ ಗೌತಮ್.
ಕೇಡಿ ಜೆಡಿ ಎದೆಯಲ್ಲಿ ನಡುಕ ಶುರು
ಹೊಸ ಕಂಪನಿ ವಿಚಾರವಾಗಿ ಮಾಧ್ಯಮ ಗೌತಮ್‌ನನ್ನು ಸಂದರ್ಶನ ಮಾಡಿದೆ. ಆ ವೇಳೆ ಹಳೆ ಕಂಪನಿಯನ್ನು ತನ್ನ ತಮ್ಮಂದಿರೇ ನೋಡಿಕೊಳ್ಳುತ್ತಿದ್ದಾರೆ ಎಂದು ಗೌತಮ್ ಹೇಳಿದ್ದಾನೆ.ಅಷ್ಟೇ ಅಲ್ಲ ತನ್ನ ಬ್ಯುಸಿನೆಸ್ ಬಗ್ಗೆ ವಿವರವಾಗಿ ಹೇಳಿಕೊಂಡಿದ್ದಾನೆ ಗೌತಮ್. ಇದು ಜೈದೇವ್ ಎದೆಯಲ್ಲಿ ನಡುಕ ಶುರು ಆಗಿದೆ. ಮುದೊಂದು ದಿನ ಜೈದೇವ್‌ಗೆ ಸಖತ್ ಕಾಂಪೀಟ್ ಮಾಡಲು ರೆಡಿಯಾಗಿದ್ದಾನೆ ಗೌತಮ್.
ವೀಕ್ಷಕರಂತೂ ಗೌತಮ್ ಕಮ್ ಬ್ಯಾಕ್ ಆಗಿರೋದು ನೋಡಿ ಸಖತ್ ಖುಷ್ ಆಗಿದ್ದಾರೆ. ಕಮೆಂಟ್‌ನಲ್ಲಿ JD ಗೆ ಅಸಲಿ ಆಟ ಹೇಗೆ ಇರುತ್ತೆ ಅಂತ ಗೊತ್ತಾಗುತ್ತೆ ಎಂದು ಬರೆದುಕೊಂಡಿದ್ದಾರೆ. ಗೌತಮ್ ಅವರನ್ನ ಸೂಟ್ ಬೂಟ್‌ನಲ್ಲಿ ನೋಡೋದೇ ಚೆಂದ ಅಂತ ಕಮೆಂಟ್ ಮಾಡಿದ್ದಾರೆ.
ಗೌತಮ್ ಹೊಸ ಉದ್ಯಮ ಶುರು
ಗೌತಮ್ ಏನೇ ಮಾಡಿದರೂ ಅದರಲ್ಲಿ ಯಶಸ್ಸು ಕಾಣುತ್ತಾನೆ ಎಂಬುದನ್ನು ಆತ ಸರಿಯಾಗಿ ಬಲ್ಲನು. ಹೀಗಾಗಿ, ಈಗಲೇ ಆತನಿಗೆ ಭಯ ಶುರುವಾಗಿದೆ. ಇನ್ನೊಂದು ಕಡೆ ಗೌತಮ್ ಹೊಸ ಉದ್ಯಮ ಶುರು ಮಾಡಿದ್ದರೆ, ಮುಂಬರುವ ದಿನಗಳಲ್ಲಿ ಗೌತಮ್ ದಿವಾನ್ ಅವರ ಹೊಸ ಉದ್ಯಮಕ್ಕೆ ಯಾವ ರೀತಿ ಅಡೆತಡೆಗಳು ಬರುತ್ತವೆ? ಯಾರೆಲ್ಲರ ಕೈವಾಡ ಇದೆ ಎಂಬುದು ಗೊತ್ತಾಗಲಿದೆ.
ಮಲ್ಲಿಗೆ ಪರೀಕ್ಷೆ ಬರೆಯಲು ತೊಂದರೆ
ಗೌತಮ್ ಈಗಾಗಲೇ ಮಲ್ಲಿ ತಂಟೆಗೆ ಬರಬೇಡ ಅಂತ ಜೈದೇವ್‌ಗೆ ವಾರ್ನ್ ಮಾಡಿದ್ದರೂ ಸುಮ್ಮನಾಗುತ್ತಿಲ್ಲ. ಮಲ್ಲಿ ಪರೀಕ್ಷೆ ಬರೆಯದಂತೆ ತೊಂದರೆ ಕೊಡುತ್ತಿದ್ದಾನೆ ಜೈದೇವ್. ಮೊದಲಿಗೆ ಸುನಿಯನ್ನ ಕಳಿಸಿದ್ದರೂ ಆ ಪ್ಲ್ಯಾನ್ ವರ್ಕೌಟ್ ಆಗಿಲ್ಲ. ಹೀಗಾಗಿ ತಾನೇ ಈಗ ಮಲ್ಲಿ ಏಕ್ಸಾಮ್ ಹಾಳು ಮಾಡಲು ನಿಂತಿದ್ದಾನೆ ಜೈದೇವ್.
ಇದನ್ನೂ ಓದಿ: Mooguthi Malli Serial: ‘ಮೂಗುತಿ ಮಲ್ಲಿ’ಗೆ ಚಂದನ್ ಗೌಡ ನಾಯಕ; ಸೀರಿಯಲ್ ಯಾವಾಗಿನಿಂದ ಶುರು?
ಜೈದೇವ್‌ಗೂ ಓವರ್ ಕಾನ್‌ಫಿಡೆನ್ಸ್ ಬಂದಾಗಿದೆ. ಶಕುಂತಲಾ ಮಗನಿಗೆ ಈಗಾಗಲೇ ವಾರ್ನ್ ಮಾಡಿದ್ದರೂ ಅದನ್ನು ಕೇಳುವ ಪರಿಸ್ಥಿತಿಯಲ್ಲಿ ಜೈದೇವ್ ಇಲ್ಲ. ಅಮೃತಧಾರೆ’ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿದೆ. ಛಾಯಾ ಸಿಂಗ್ ಭೂಮಿಕಾ ಎನ್ನುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರ ಸಂಜೆ 7 ಗಂಟೆಗೆ ಪ್ರಸಾರ ಕಾಣುತ್ತಿದೆ.