ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Mooguthi Malli Serial: ‘ಮೂಗುತಿ ಮಲ್ಲಿ’ಗೆ ಚಂದನ್ ಗೌಡ ನಾಯಕ; ಸೀರಿಯಲ್‌ ಯಾವಾಗಿನಿಂದ ಶುರು?

Mooguthi Malli Serial: ಕನ್ನಡ ಕಿರುತೆರೆಯಲ್ಲಿ ‘ಗೊಂಬೆ’ ಅಂತಲೇ ಖ್ಯಾತಿ ಪಡೆದಿರುವ ನಟಿ ನೇಹಾ ಗೌಡ. ನೇಹಾ ಗೌಡ ಅವರ ಪತಿ ಚಂದನ್ ಗೌಡ ಕೂಡ ಸೀರಿಯಲ್‌ಗಳ ಕಡೆಗೆ ಮುಖ ಮಾಡಿ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ‘ ಅಂತರಪಟ’ ಎನ್ನುವ ಧಾರವಾಹಿಗೆ ನಾಯಕರಾಗಿ ನಟಿಸಿದ್ದರು . `ಅಂತರಪಟ’ ಸೀರಿಯಲ್‌ನಲ್ಲಿ ಶ್ರೀಮಂತ ಹುಡುಗ ಸುಶಾಂತ್ ರಾಜ್ ಪ್ರಧಾನ್ ಆಗಿ ಚಂದನ್ ಗೌಡ ಕಾಣಿಸಿಕೊಂಡಿದ್ದರು. ಇದೀಗ ಅಂತರಪಟ ಮುಗಿದು ಎರಡು ವರ್ಷಗಳ ನಂತರ ಚಂದನ್ ಗೌಡ ಮತ್ತೆ ಹೊಸ ಸೀರಿಯಲ್‌ ಮೂಲಕ ಕಮ್‌ಬ್ಯಾಕ್‌ ಆಗುತ್ತಿದ್ದಾರೆ.

‘ಮೂಗುತಿ ಮಲ್ಲಿ’ಗೆ ಚಂದನ್ ಗೌಡ ನಾಯಕ; ಸೀರಿಯಲ್‌ ಯಾವಾಗಿನಿಂದ ಶುರು?

ಚಂದನ್‌ ಗೌಡ -

Yashaswi Devadiga
Yashaswi Devadiga Mar 8, 2026 8:29 AM

ಕನ್ನಡ ಕಿರುತೆರೆಯಲ್ಲಿ (Kannada Serial) ‘ಗೊಂಬೆ’ ಅಂತಲೇ ಖ್ಯಾತಿ ಪಡೆದಿರುವ ನಟಿ ನೇಹಾ ಗೌಡ. ನೇಹಾ ಗೌಡ (Neha Gowda) ಅವರ ಪತಿ ಚಂದನ್ ಗೌಡ (Chandan Gowda) ಕೂಡ ಸೀರಿಯಲ್‌ಗಳ ಕಡೆಗೆ ಮುಖ ಮಾಡಿ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ‘ ಅಂತರಪಟ’ ಎನ್ನುವ ಧಾರವಾಹಿಗೆ ನಾಯಕರಾಗಿ ನಟಿಸಿದ್ದರು . `ಅಂತರಪಟ’ (Antarapata Serial) ಸೀರಿಯಲ್‌ನಲ್ಲಿ ಶ್ರೀಮಂತ ಹುಡುಗ ಸುಶಾಂತ್ ರಾಜ್ ಪ್ರಧಾನ್ ಆಗಿ ಚಂದನ್ ಗೌಡ ಕಾಣಿಸಿಕೊಂಡಿದ್ದರು. ಇದೀಗ ಅಂತರಪಟ ಮುಗಿದು ಎರಡು ವರ್ಷಗಳ ನಂತರ ಚಂದನ್ ಗೌಡ ಮತ್ತೆ ಹೊಸ ಸೀರಿಯಲ್‌ ಮೂಲಕ ಕಮ್‌ಬ್ಯಾಕ್‌ ಆಗುತ್ತಿದ್ದಾರೆ.

ಇದನ್ನೂ ಓದಿ: Allu Sirish: ಮಾವನಿಗೆ ಗೌರವ ಸಲ್ಲಿಸಿದ ಅಲ್ಲು ಸಿರೀಶ್; ಭಾವುಕ ಪೋಸ್ಟ್‌ ವೈರಲ್‌

‘ಮೂಗುತಿ ಮಲ್ಲಿ’ ಧಾರಾವಾಹಿ

ಉದಯ ಟಿವಿಯಲ್ಲಿ ಶೀಘ್ರದಲ್ಲಿ ಪ್ರಸಾರವಾಗಲಿರುವ ‘ಮೂಗುತ್ತಿ ಮಲ್ಲಿ’ ಧಾರಾವಾಹಿಗೆ ನಾಯಕರಾಗಿ ಆಯ್ಕೆಯಾಗಿದ್ದಾರೆ. ಆ ಮೂಲಕ ಎರಡನೇ ಬಾರಿ ನಾಯಕನಾಗುವ ಅವಕಾಶ ಪಡೆದಿದ್ದಾರೆ ಚಂದನ್ ಗೌಡ. ಆಷ್ಟ್ರೇಲಿಯಾದಲ್ಲಿ ಕೆಲಸದಲ್ಲಿದ್ದ ಚಂದನ್, ಪತಿ ಜೊತೆ ರಿಯಾಲಿಟಿ ಶೋನಲ್ಲಿ ನಟಿಸಲು, ಕೆಲಸವನ್ನೇ ಬಿಟ್ಟು ಬಂದಿದ್ದರು.

ಬಳಿಕ ಡ್ಯಾನ್ಸ್ ಶೋ ‘ಡ್ಯಾನ್ಸಿಂಗ್ ಶೋ’ ನಲ್ಲೂ ಸ್ಪರ್ಧಿಯಾಗಿ ಭಾಗವಹಿಸಿ, ಸೈ ಎನಿಸಿಕೊಂಡಿದ್ದರು. ‘ರಾಜಾ ರಾಣಿ’ ಕಪಲ್ ರಿಯಾಲಿಟಿ ಶೋನಲ್ಲಿ ಪತ್ನಿ ನೇಹಾ ಗೌಡ ಜೊತೆ ಭಾಗವಹಿಸಿ, ವಿಜೇತರಾಗಿ ರಾಜ - ರಾಣಿ ಪಟ್ಟ ಪಡೆದಿದ್ದರು.

ಬಳಿಕ ‘ಡ್ಯಾನ್ಸಿಂಗ್ ಚಾಂಪಿಯನ್’ ಶೋನಲ್ಲೂ ಸ್ಪರ್ಧಿಸಿದ ಚಂದನ್ ಗೌಡ ಸೈ ಎನಿಸಿಕೊಂಡಿದ್ದರು. ‘ಮೂಗುತ್ತಿ ಮಲ್ಲಿ’ ರಾವಾಹಿಯಲ್ಲಿ ತನುಜಾ ನಾಯಕಿಯಾಗಿ ನಟಿಸುತ್ತಿದ್ದು, ಯಾವಾಗ ಪ್ರಸಾರ ಆರಂಭವಾಗುತ್ತೆ ಎನ್ನುವ ಬಗ್ಗೆ ಮಾಹಿತಿ ಇಲ್ಲ.

ಇದನ್ನೂ ಓದಿ: Thalapathy Vijay: ಡಿವೋರ್ಸ್ ವದಂತಿ ನಡುವೆ ದಳಪತಿ ವಿಜಯ್ ಬೇಸರದ ಮಾತು

ಇನ್ನು ನೇಹಾ ಗೌಡ ಕೂಡ ಮಗಳ ಪೋಷಣೆಯಲ್ಲಿ ಬ್ಯುಸಿಯಾಗಿದ್ದಾರೆ, ನೇಹಾ ಗೌಡ 'ಲಕ್ಷ್ಮಿ ಬಾರಮ್ಮ' ಬಾರಮ್ಮ ಧಾರಾವಾಹಿಯ ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದರು. ಈ ಧಾರಾವಾಹಿಯಲ್ಲಿ ಗೊಂಬೆ ಪಾತ್ರ ನಿರ್ವಹಿಸುವಾ ಮೂಲಕ ಮನೆಮಾತಾಗಿದ್ದರು. ಜೊತೆಗೆ ತಮಿಳು ಸೀರಿಯಲ್ ನಲ್ಲೂ ನಟಿಸುತ್ತಿದ್ದಾರೆ. ಬಿಗ್ ಬಾಸ್ ಕನ್ನಡ ಸೀಸನ್ 9ರಲ್ಲಿ ಭಾಗವಹಿಸಿದ್ದರು,