ಜೀ ಕನ್ನಡ ವಾಹಿನಿಯಲ್ಲಿ (Zee Kannada) ಪ್ರಸಾರ ಕಾಣುತ್ತಿರುವ ಅಮೃತಧಾರೆ (Amruthadhaare serial Kannada ) ಧಾರಾವಾಹಿಯಲ್ಲಿ ಜೈದೇವ್ ಹಠ ದಿನೇ ದಿನೇ ಹೆಚ್ಚಾಗುತ್ತಿದೆ. ಗೌತಮ್ ಬಳಿ ಇದ್ದ ಅಪ್ಪನ ಸಮಾಧಿಯ ಜಾಗವನ್ನೂ ಕಸಿದುಕೊಂಡಿದ್ದಾಗಿದೆ. ಆದರೀಗ ಈ ಬಗ್ಗೆ ಪ್ರಶ್ನೆ ಮಾಡಿದ ಪಾರ್ಥ ಹಾಗೂ ಶಕುಂತಲಾ ಎದುರೇ ವಾದಿಸಿದ್ದಾನೆ ಕುಲಪುತ್ರ ಜೈದೇವ್ (Jaidev). ಅಮ್ಮ ಅಂತ ನೋಡದೇ ಅತಿಯಾಗಿ ಕೂಗಾಡಿದ್ದಾನೆ.
ಅಹಂಕಾರದಿಂದ ಮೆರೆದಾಡಿದ ಜೈದೇವ್!
ಜೈದೇವ್ ಮಾಡಿರೋ ಕೆಲಸಕ್ಕೆ ಶಕುಂತಲಾ ಕೋಪದಲ್ಲಿ ಬೈದಿದ್ದಾಳೆ. ಇದನ್ನು ಸಹಿಸಿದ ಜೈದೇವ್, ʻಮಾತು ಎತ್ತಿದ್ದರೆ ಯಾವಾಗಲೂ ನನ್ನದೇ ತಪ್ಪು ಅಂತೀರಾ. ನೀವೇನು ಸಾಧುಗಳಾ?ಹಾಗೆ ನೋಡೋಕೆ ಹೋದರೆ ಇಲ್ಲಿ ಇರೋರು ಯಾರೂ ಸಾಚಗಳಲ್ಲ.
ಇದನ್ನೂ ಓದಿ: Rakshit Shetty: ಏಕಾಏಕಿ ಬೇಸರದ ಫೋಟೋ ಪೋಸ್ಟ್ ಮಾಡಿದ ರಕ್ಷಿತ್ ಶೆಟ್ಟಿ!
ಒಂದಲ್ಲ ಒಂದು ತಪ್ಪು ಮಾಡ್ತಾನೆ ಇದ್ದಾರೆ. ಬಾಯಲ್ಲಿ ವೇದಾಂತ, ತಿನ್ನೋದು ಬದನೆಕಾಯಿ ಕ್ಯಾಟಗರಿಗಳು ನೀವೆಲ್ಲ. ನಿಮಗೆ ಬೇಕಾದಾಗ ತಪ್ಪು ಮಾಡೋದು, ಯಾವನಾದ್ರೂ ಸಿಕ್ಕರೆ ಬಿಟ್ಟಿ ಉಪದೇಶ ಕೊಡೋದು. ನನಗೆ ಎಲ್ಲರ ಹಣೆ ಬರಹವೂ ಗೊತ್ತು. ನನಗೆ ನಾನೇ ಫಸ್ಟ್. ಉಳಿದವರೂ ಎಲ್ಲರೂ ಲಾಸ್ಟ್, ಯಾರಿಗೂ ಕೇರ್ ಮಾಡಲ್ಲʼ ಅಂತ ಅಹಂಕಾರದಿಂದ ಕೂಗಾಡಿದ್ದಾನೆ ಜೈದೇವ್.
ಮಲ್ಲಿಗೋಸ್ಕರ ಗೌತಮ್ ದಿಟ್ಟ ನಿರ್ಧಾರ
ಅತ್ತ ಭೂಮಿಕಾ ಕೂಡ ಗೌತಮ್ ತಂದೆಯ ಸಮಾಧಿಯನ್ನು ಜೈದೇವ್ ಬಿಟ್ಟುಕೊಟ್ಟಿರುವ ಬಗ್ಗೆ ಶಾಕ್ ಆಗಿದ್ದಾಳೆ. ಜೈದೇವ್ ಡಿವೋರ್ಸ್ ಪೇಪರ್ ಸಹಿ ಹಾಕೋದು ಮುಖ್ಯವಾಗಿತ್ತು. ಅದರಂತೆ ಗೌತಮ್ ಈ ನಿರ್ಧಾರಕ್ಕೆ ಬಂದಿದ್ದ. ಅಷ್ಟೇ ಅಲ್ಲ ನನ್ನ ಮನಸ್ಸಿನಲ್ಲಿ ನನ್ನ ತಂದೆ ಸದಾ ಇರ್ತಾರೆ. ಮಲ್ಲಿ ಜೀವನ ತುಂಬಾ ಮುಖ್ಯ ಎಂದಿದ್ದಾನೆ ಗೌತಮ್.
ಗೌತಮ್ ತನ್ನ ಸ್ನೇಹಿತ ಆನಂದ್‌ನನ್ನು ಜೈದೇವ್ ಬಳಿ ಡಿವೋರ್ಸ್‌ಗೆ ಸಹಿ ಹಾಕಲು ಕಳುಹಿಸಿದ್ದ. ಆದರೆ ಜೈದೇವ್ ಮಾತ್ರ ಡಿವೋರ್ಸ್ ಪೇಪರ್‌ಗೆ ಸಹಿ ಹಾಕಲು ಒಪ್ಪಲಿಲ್ಲ. ಗೌತಮ್ ತಂದೆಯ ಸಮಾಧಿ ಜಾಗವನ್ನು ಬರೆದುಕೊಡವಂತೆ ಡಿಮ್ಯಾಂಡ್ ಮಾಡಿದ್ದಾನೆ. ಅದರಂತೆ ಅವನ ಹೆಸರಿಗೆ ಸಮಾಧಿಯನ್ನೂ ಬರೆದುಕೊಟ್ಟಿದ್ದಾನೆ ಗೌತಮ್.
ಮುಂದೆ ಜೈದೇವ್ ಪ್ಲ್ಯಾನ್ ಏನು?
ಇನ್ನು ಮಲ್ಲಿ ಮದುವೆಯಾಗುತ್ತಿರುವ ಹುಡುಗ ಸುನಿಯನ್ನು ಕಳಿಸಿದ್ದು ಬೇರೆ ಯಾರು ಅಲ್ಲ. ಬದಲಿಗೆ ಸುನಿ ಎನ್ನುವ ವಿಚಾರ ಇನ್ನೂ ಗೌತಮ್ ಮತ್ತು ಭೂಮಿಕಾಗೆ ಗೊತ್ತಾಗಿಲ್ಲ. ಸುನಿ ಕೂಡ ಈಗ ಮಲ್ಲಿಯನ್ನು ಮನಸಾರೆ ಪ್ರೀತಿಯೂ ಮಾಡುತ್ತಿಲ್ಲ. ಮುಂದೆ ಜೈದೇವ್ ಪ್ಲ್ಯಾನ್ ಏನು? ಎಂಬುದು ಮುಂದಿನ ಸಂಚಿಕೆಯಲ್ಲಿ ಗೊತ್ತಾಗಲಿದೆ.
ಇದನ್ನೂ ಓದಿ: Amruthadhaare Serial: ಗೌತಮ್ ಮನಸ್ಸನ್ನು ಘಾಸಿಗೊಳಿಸಿದೆ ಜೈದೇವ್ ಹಾಕಿರೋ ಷರತ್ತು!
ಅಮೃತಧಾರೆ’ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿದೆ. ಛಾಯಾ ಸಿಂಗ್ ಭೂಮಿಕಾ ಎನ್ನುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರ ಸಂಜೆ 7 ಗಂಟೆಗೆ ಪ್ರಸಾರ ಕಾಣುತ್ತಿದೆ