Amruthadhaare Serial: ಗೌತಮ್ ಮನಸ್ಸನ್ನು ಘಾಸಿಗೊಳಿಸಿದೆ ಜೈದೇವ್ ಹಾಕಿರೋ ಷರತ್ತು!
Amruthadhaare serial Kannada : ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿರುವ ಅಮೃತಧಾರೆ ಧಾರಾವಾಹಿಯಲ್ಲಿ ಜೈದೇವ್ ಕುತಂತ್ರ ಮಿತಿ ಮೀರುತ್ತಿದೆ. ಮಲ್ಲಿ ವಿಚಾರವನ್ನು ಬಳಸಿಕೊಂಡು ಗೌತಮ್‌ಗೆ ಸಖತ್ ತೊಂದರೆ ಕೊಡುತ್ತಿದ್ದಾನೆ. ಡಿವೋರ್ಸ್ ಪೇಪರ್ ಗೆ ಸಹಿ ಹಾಕುವಂತೆ ಆನಂದ್ ಜೈದೇವ್ ಗೆ ಹೇಳಿದ್ದಾನೆ. ಆದರೆ ಜೈದೇವ್ ಹಣ ಅಂದರೆ ಬಾಯಿ ಬಿಡುವ ವ್ಯಕ್ತಿ. ಈಗಾಗಲೇ ಎಲ್ಲ ಆಸ್ತಿಯನ್ನು ಕಬಳಿಸಿರುವ ಜೈದೇವ್ ಗೆ ಇನ್ನೂ ಸಮಾಧಾನ ಆಗಿಲ್ಲ. ಗೌತಮ್ ತಂದೆಯ ಸಮಾಧಿಯನ್ನೂ ಕೇಳುತ್ತಿದ್ದಾನೆ.
ಅಮೃತಧಾರೆ ಧಾರಾವಾಹಿ -
ಜೀ ಕನ್ನಡ ವಾಹಿನಿಯಲ್ಲಿ (Zee Kannada) ಪ್ರಸಾರ ಕಾಣುತ್ತಿರುವ ಅಮೃತಧಾರೆ ಧಾರಾವಾಹಿಯಲ್ಲಿ (Amruthadhaare Serial) ಜೈದೇವ್ ಕುತಂತ್ರ ಮಿತಿ ಮೀರುತ್ತಿದೆ. ಮಲ್ಲಿ ವಿಚಾರವನ್ನು ಬಳಸಿಕೊಂಡು ಗೌತಮ್‌ಗೆ ಸಖತ್ ತೊಂದರೆ ಕೊಡುತ್ತಿದ್ದಾನೆ. ಡಿವೋರ್ಸ್ ಪೇಪರ್ ಗೆ ಸಹಿ ಹಾಕುವಂತೆ ಆನಂದ್ ಜೈದೇವ್ ಗೆ ಹೇಳಿದ್ದಾನೆ. ಆದರೆ ಜೈದೇವ್ (Jaidev) ಹಣ ಅಂದರೆ ಬಾಯಿ ಬಿಡುವ ವ್ಯಕ್ತಿ. ಈಗಾಗಲೇ ಎಲ್ಲ ಆಸ್ತಿಯನ್ನು ಕಬಳಿಸಿರುವ ಜೈದೇವ್ ಗೆ ಇನ್ನೂ ಸಮಾಧಾನ ಆಗಿಲ್ಲ. ಗೌತಮ್ ತಂದೆಯ ಸಮಾಧಿಯನ್ನೂ ಕೇಳುತ್ತಿದ್ದಾನೆ.
ಗೌತಮ್ ತನ್ನ ಸ್ನೇಹಿತ ಆನಂದ್‌ನನ್ನು ಜೈದೇವ್ ಬಳಿ ಡಿವೋರ್ಸ್‌ಗೆ ಸಹಿ ಹಾಕಲು ಕಳುಹಿಸಿದ್ದ. ಆದರೆ ಜೈದೇವ್ ಮಾತ್ರ ಡಿವೋರ್ಸ್ ಪೇಪರ್‌ಗೆ ಸಹಿ ಹಾಕಲು ಒಪ್ಪಲಿಲ್ಲ. ಗೌತಮ್ ತಂದೆಯ ಸಮಾಧಿ ಜಾಗವನ್ನು ಬರೆದುಕೊಡವಂತೆ ಡಿಮ್ಯಾಂಡ್ ಮಾಡಿದ್ದಾನೆ. ಈ ವಿಚಾರವನ್ನು ಆನಂದ್ ಗೆಳೆಯ ಗೌತಮ್‌ಗೆ ಮುಟ್ಟಿಸಿದ್ದಾನೆ.
ಇದನ್ನೂ ಓದಿ: Breast Cancer : ಕ್ಯಾನ್ಸರ್ ಇರುವ ಬಗ್ಗೆ ಏಕಾಏಕಿ ಪೋಸ್ಟ್ ಮಾಡಿದ ಖ್ಯಾತ ನಟಿ
ಆನಂದ್‌ಗೆ ಬೇಸರ
ಅಷ್ಟೇ ಅಲ್ಲ, ಜೈದೇವ್ ಮೃಗ ವ್ಯಕ್ತಿ. ನಿನ್ನ ಸೆಂಟಿಮೆಂಟ್‌ಗೆ ಬೆಲೆಯೇ ಇಲ್ವಾ? ಆತ ಏನು ಮಾಡೋದಕ್ಕೆ ಹೇಸೋನಲ್ಲ ಅಂತ ಗೌತಮ್ ಬಳಿ ಆನಂದ ಬೇಸರ ವ್ಯಕ್ತಪಡಿಸಿದ್ದಾನೆ. ತಂದೆಯ ಕಾರ್ಯದಂದು ಗೌತಮ್ ಹೊಡದ ಏಟು ಜೈದೇವ್ ನ ಇನ್ನೂ ಕೆರಳಿಸಿದೆ. ಹೀಗಾಗಿಯೇ ಸೇಡು ತೀರಿಸಿಕೊಳ್ಳಲು ಹಾತೊರೆಯುತ್ತಿರುವ ಜೈದೇವ್ ಗೆ ಈಗ ಗೌತಮ್ ವಿರುದ್ದ ಹಗೆತನ ತೀರಿಸಿಕೊಳ್ಳಲು ಇನ್ನೊಂದು ಅವಕಾಶ ಸಿಕ್ಕಂತಾಗಿದೆ.
ಸದ್ಯ ಗೌತಮ್ ಅಪ್ಪನ ಸಮಾಧಿ ಮುಂದೆ ನಿಂತು, ಅಪ್ಪ ನಾನು ಜೀವನದಲ್ಲಿ ಏನೇ ನಿರ್ಧಾರ ತೆಗೆದುಕೊಂಡಿದ್ದರೂ ನೀವು ನೆನಪಾಗುತ್ತಿದ್ರಿ. ನಾನು ಈಗಲೂ ನಿರ್ಧಾರ ಮಾಡಿದೆ. ಜೀವ ಇರೋರಗೆ ಜೀವನ ಸಿಗೋದು ಮುಖ್ಯನಾ, ನಿಮ್ಮ ಸಮಾಧಿ ಇರೋ ಜಾಗ ಮುಖ್ಯನಾ ಅಂತ ತೂಕ ಮಾಡಿದೆ. ಮಲ್ಲಿ ಜೀವನ ಮುಖ್ಯ ಅನ್ನಿಸಿತು ಎಂದಿದ್ದಾನೆ.
ಆನಂದ್ ಜೊತೆ ಜೈದೇವ್ ಬಳಿ ಬಂದು ಗೌತಮ್ ತಂದೆಯ ಸಮಾಧಿ ಜಾಗದ ಪೇಪರ್ ಮೇಲೆ ಸಹಿ ಮಾಡಿದ್ಧಾನೆ. ಮಲ್ಲಿಯ ತಂಟೆಗೆ ಬರಬಾರದು, ಬಂದೀದೀಯಾ ಅಂತ ಗೊತ್ತಾದರೆ ನಾನು ಸುಮ್ಮನೆ ಇರಲ್ಲ ಎಂದು ಎಚ್ಚರಿಕೆ ನೀಡಿದ್ದಾನೆ.
ಸುನಿ ಬರ್ತ್‌ಡೇ ಸೆಲೆಬ್ರೇಷನ್ ಮೂಡ್‌ನಲ್ಲಿ ಮಲ್ಲಿ
ಇನ್ನೊಂದು ಕಡೆ ಸುನಿ ಬರ್ತ್‌ಡೇಯನ್ನ ಆಚರಿಸಿದ್ದಾಳೆ ಮಲ್ಲಿ. ತನ್ನ ಸ್ನೇಹಿತರು ಹಾಗೂ ಮಕ್ಕಳ ಜೊತೆ ಕೇಕ್ ಕಟ್ ಮಾಡಿ ಸಂಭ್ರಮಿಸಿದ್ದಾಳೆ.
ಇನ್ನು ಮಲ್ಲಿ ಮದುವೆಯಾಗುತ್ತಿರುವ ಹುಡುಗ ಸುನಿಯನ್ನು ಕಳಿಸಿದ್ದು ಬೇರೆ ಯಾರು ಅಲ್ಲ. ಬದಲಿಗೆ ಸುನಿ ಎನ್ನುವ ವಿಚಾರ ಇನ್ನೂ ಗೌತಮ್ ಮತ್ತು ಭೂಮಿಕಾಗೆ ಗೊತ್ತಾಗಿಲ್ಲ. ಸುನಿ ಕೂಡ ಈಗ ಮಲ್ಲಿಯನ್ನು ಮನಸಾರೆ ಪ್ರೀತಿಯೂ ಮಾಡುತ್ತಿಲ್ಲ. ಮುಂದೆ ಜೈದೇವ್ ಪ್ಲ್ಯಾನ್ ಏನು? ಎಂಬುದು ಮುಂದಿನ ಸಂಚಿಕೆಯಲ್ಲಿ ಗೊತ್ತಾಗಲಿದೆ.
ಇದನ್ನೂ ಓದಿ: Amruthadhaare Serial: ಗೌತಮ್ ಮೇಲಿನ ಸೇಡಿಗೆ ಕೇಡಿ ಜೇಡಿಯ ಭರ್ಜರಿ ಡಿಮ್ಯಾಂಡ್!
ಅಮೃತಧಾರೆ’ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿದೆ. ಛಾಯಾ ಸಿಂಗ್ ಭೂಮಿಕಾ ಎನ್ನುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರ ಸಂಜೆ 7 ಗಂಟೆಗೆ ಪ್ರಸಾರ ಕಾಣುತ್ತಿದೆ