ಜೈದೇವ್ (Jaidev) ವಿರುದ್ಧ ಭೂಮಿಕಾ (Bhoomika) ಗೂಢಚಾರಿಕೆ ಆರಂಭಿಸಿರೋದು ಗೊತ್ತೇ ಇದೆ. ಐಪಿಎಸ್ ಆದ್ರೂ ಮಲ್ಲಿಯಿಂದ ಆಗದ ಕೆಲಸವನ್ನು ಭೂಮಿಕಾ ಮಾಡಲು ಹೊರಟಿದ್ದಳು. ವಿಲನ್ ಜೈದೇವ್‌ನನ್ನು ಬಂಧಿಸಲು ಮಲ್ಲಿ ಮತ್ತು ಭೂಮಿಕಾ ಹೂಡಿದ ಹನಿಟ್ರ್ಯಾಪ್ (Honeytrap) ಈಗ ಫೇಲ್ ಆಗಿದೆ. ಪೊಲೀಸ್ ಅಧಿಕಾರಿ ಮಧುರಾಳ ನಿಜಬಣ್ಣ ಜೈದೇವ್‌ಗೆ ತಿಳಿದುಹೋಗಿದೆ.
ಭೂಮಿಕಾ ಮತ್ತು ಮಲ್ಲಿ ಹೊಸ ಯೋಜನೆ
ದಿಯಾ ಮತ್ತು ಅನು ಕಣ್ಮರೆಯ ಸತ್ಯವನ್ನು ಜೈದೇವನಿಂದ ಹೊರತರಲು, ಭೂಮಿಕಾ ಮತ್ತು ಮಲ್ಲಿ ಹೊಸ ಯೋಜನೆಯನ್ನು ರೂಪಿಸಿದ್ದರು. ಪೊಲೀಸ್ ಅಧಿಕಾರಿ ಮಧುರಾಳನ್ನು ಬಳಸಿಕೊಂಡು ಜೈದೇವನ ಹೆಣ್ಣಿನ ವೀಕ್ನೆಸ್ ಮೇಲೆ ದಾಳಿ ಮಾಡಲು ಮುಂದಾಗಿದ್ದರು. ಜೀವಾ ಕೂಡ ಇದಕ್ಕೆ ಸಾಥ್ ಕೂಡ ಕೊಟ್ಟಿದ್ದ.
ಇದನ್ನೂ ಓದಿ: Rashmika Mandanna: ಶೂಟಿಂಗ್‌ಗೆ ಮರಳುವ ಸಂತಸ ಹಂಚಿಕೊಂಡ ರಶ್ಮಿಕಾ
ಮಧುರಾ, ಇದೀಗ ಜೈದೇವ್ ಬಲೆಗೆ ಬಿದ್ದಿದ್ದಾಳೆ. ಜೈದೇವ್ ವಿಚಾರ ತಿಳಿದುಕೊಳ್ಳಲು ಆತನ ಮನೆಯಲ್ಲಿ ಮಧುರಾ ಆಶ್ರಯ ಪಡೆದುಕೊಂಡಿದ್ದಳು. ಜೈದೇವ್‌ಗಾಗಿ ಹಬ್ಬ ಆಚರಿಸಿ ರುಚಿಯಾದ ಅಡುಗೆ ಮಾಡಿದ್ದಳು. ಇನ್ನೇನು ಮಧುರಾ ರಚಿಸಿದ ವ್ಯೂಹದಲ್ಲಿ ಜೈದೇವ್ ಸಿಲುಕುತ್ತಾನೆ ಅನ್ನೋವಷ್ಟರಲ್ಲಿ ಬಿಗ್ ಟ್ವಿಸ್ಟ್ ಸಿಕ್ಕಿದೆ.
ಮಧುರಾ, ಪೊಲೀಸ್ ಅನ್ನೋ ಸತ್ಯ ಜೈದೇವ್‌ಗೆ ಗೊತ್ತಾಗಿದೆ. ಮೊಬೈಲ್ ಬೆಡ್ ಮೇಲೆಯೇ ಇಟ್ಟು ರೂಮ್ ಬಾಗಿಲು ಹಾಕಿಕೊಳ್ಳದೇ ಎಲ್ಲೋ ಹೋಗಿದ್ದಾಳೆ. ಈ ವೇಳೆ ಮಧುರಾಗೆ ಮಲ್ಲಿ ಕಾಲ್ ಮಾಡಿದ್ದಾಳೆ. ಮೊಬೈಲ್ ರಿಂಗ್ ಆಗುತ್ತಿರೋದನ್ನು ನೋಡಿದ ಜೈದೇವ್‌ಗೆ, ಚೆಕ್ ಮಾಡಿದಾಗ, ಅದು ತನ್ನ ಮಾಜಿ ಪತ್ನಿ, ಐಪಿಎಸ್ ಮಲ್ಲಿ ಎಂದು ಗೊತ್ತಾಗಿದೆ. ಮತ್ತೆ ಕಾಲ್ ರೆಕಾರ್ಡ್ ಚೆಕ್ ಮಾಡಿದಾಗ ಜೀವಾ ಮತ್ತು ಭೂಮಿಕಾ ಜೊತೆಯಲ್ಲಿಯೂ ಮಧುರಾ ಮಾತನಾಡಿರುವ ವಿಷಯ ಜೈದೇವ್ ಮುಂದೆ ಬಯಲಾಗಿದೆ.
ಮಲ್ಲಿ ಮಾಡಿರೋ ಪ್ಲಾನ್ ರಿವೀಲ್
ತನ್ನ ಮಾತುಗಳೆಲ್ಲಾ ರೆಕಾರ್ಡ್ ಮಾಡಿಕೊಂಡಿರುವ ಸೀಕ್ರೆಟ್ ಸಹ ತಿಳಿದಿದೆ. ಪೊಲೀಸ್ ಐಡೆಂಟಿಟಿ ಕಾರ್ಡ್ ಜೈದೇವ್‌ಗೆ ಸಿಕ್ಕಿದೆ. ಇಲ್ಲಿಗೆ ತನ್ನನ್ನು ಟ್ರ್ಯಾಪ್ ಮಾಡಲು ಮಲ್ಲಿ ಮಾಡಿರೋ ಪ್ಲಾನ್ ರಿವೀಲ್ ಆಗಿದೆ. ಮಧುರಾ ಹೇಗೆ ಜೈದೇವ್‌ನಿಂದ ತಪ್ಪಿಸಿಕೊಳ್ತಾಳೆ ಅನ್ನೋದೇ ಈಗ ವೀಕ್ಷಕರಲ್ಲಿ ಇರೋ ಕುತೂಹಲ.
ಇದನ್ನೂ ಓದಿ: Bigg Boss Kannada 13: ಅಗ್ನಿಪರೀಕ್ಷೆಯಲ್ಲಿ ಸ್ಪರ್ಧಿಗಳಿಗೆ ತೀರ್ಪುಗಾರರಿಂದ ಅವಮಾನ; ಸುದೀಪ್ ಹೇಳಿದ್ದೇನು
ಅಮೃತಧಾರೆʼ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿದೆ. ಛಾಯಾ ಸಿಂಗ್ ಭೂಮಿಕಾ ಎನ್ನುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರ ಸಂಜೆ 7 ಗಂಟೆಗೆ ಪ್ರಸಾರ ಕಾಣುತ್ತಿದೆ