ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Amruthadhaare serial: ಕುಡಿದ ಮತ್ತಿನಲ್ಲಿ ಜೈದೇವ್ ಸತ್ಯ ಬಾಯಿ ಬಿಡ್ತಾನಾ?

Amruthadhaare serial: ಜೈದೇವ್ ವಿರುದ್ಧ ಭೂಮಿಕಾ ಗೂಢಚಾರಿಕೆ ಆರಂಭಿಸಿದ್ದಾಳೆ. ಐಪಿಎಸ್ ಆದ್ರೂ ಮಲ್ಲಿಯಿಂದ ಆಗದ ಕೆಲಸವನ್ನು ಭೂಮಿಕಾ ಮಾಡಲು ಹೊರಟಿದ್ದಾಳೆ. ಅತ್ತ ಶಕುಂತಲಾಗೆ ಭಯ ಶುರುವಾಗಿದೆ. ತನ್ನ ಬೆನ್ನ ಹಿಂದೆ ಏನೋ ನಡೆಯುತ್ತಿದೆ ಅಂತ ಅನುಮಾನ ಶುರು ಆಗಿದೆ. ಆದ್ರೆ ಯಾರಿಂದಲೂ ಶಕುಂತಲಾಗೆ ಸ್ಪಷ್ಟವಾದ ಉತ್ತರ ಸಿಗುತ್ತಿಲ್ಲ.

Amruthadhaare serial: ಕುಡಿದ ಮತ್ತಿನಲ್ಲಿ ಜೈದೇವ್ ಸತ್ಯ ಬಾಯಿ ಬಿಡ್ತಾನಾ?

ಅಮೃತಧಾರೆ ಧಾರಾವಾಹಿ -

Yashaswi Devadiga
Yashaswi Devadiga Aug 26, 2026 10:59 AM

ಅಮೃತಧಾರೆಯಲ್ಲಿ (Amruthadhaare serial) ರೋಚಕ ಘಟ್ಟದತ್ತ ಸಾಗುತ್ತಿದೆ. ದಿಯಾ ಮತ್ತು ಅನು ಕಣ್ಮರೆಯ ಸತ್ಯವನ್ನು ಜೈದೇವನಿಂದ ಹೊರತರಲು, ಭೂಮಿಕಾ ಮತ್ತು ಮಲ್ಲಿ ಹೊಸ ಯೋಜನೆಯನ್ನು ರೂಪಿಸಿದ್ದಾರೆ. ಪೊಲೀಸ್ ಅಧಿಕಾರಿ ಮಧುರಾಳನ್ನು (Madhura) ಬಳಸಿಕೊಂಡು ಜೈದೇವನ (Jaidev) ಹೆಣ್ಣಿನ ವೀಕ್ನೆಸ್ ಮೇಲೆ ದಾಳಿ ಮಾಡಲು ಮುಂದಾಗಿದ್ದಾರೆ. ಜೀವಾ ಕೂಡ ಇದಕ್ಕೆ ಸಾಥ್‌ ಕೂಡ ಇದ್ದಾನೆ. ಜೈದೇವ್ (jaidev) ಸ್ನೇಹ ಬೆಳೆಸಿರುವ ಮಧುರಾ ಆತನೊಂದಿಗೆ ಕ್ಲೋಸ್ ಆಗಿದ್ದಾಳೆ. ಪಬ್‌ನಲ್ಲಿ ಕುಡಿದು ನಶೆಯಲ್ಲಿದ್ದ ಜೈದೇವ್‌ನನ್ನು ಮಧುರಾಳೇ ಮನೆಗೆ ಕರೆದುಕೊಂಡು ಬಂದಿದ್ದಾಳೆ.

ಅಲರ್ಟ್ ಆದ ಜೈದೇವ್

ದೇವ್ ಜೊತೆ ಮಾತನಾಡುತ್ತಾ, ದಿಯಾ ಬೇಬಿ ವಿಷಯ ಬಗ್ಗೆ ಮಧುರಾ ಕೇಳಿದ್ದಾಳೆ. ದಿಯಾ ಹೆಸರು ಕೇಳ್ತಿದ್ದಂತೆ ಅಲರ್ಟ್ ಆದ ಜೈದೇವ್, ಆಕೆ ಬಗ್ಗೆ ನಿನಗೆ ಹೇಗೆ ಗೊತ್ತು ಎಂದು ಪ್ರಶ್ನೆ ಮಾಡಿದ್ದಾನೆ., ನೀವೇ ಅಲ್ಲವಾ ದಿಯಾ ಹೆಸರು ಹೇಳಿದ್ದು ಎಂದು ಮರುಪ್ರಶ್ನೆ ಮಾಡಿದ್ದಾಳೆ.

ಇದನ್ನೂ ಓದಿ: Toxic Twitter Review: ಯಶ್ ಅಭಿನಯಕ್ಕೆ ಮನಸೋತ ಪ್ರೇಕ್ಷಕರು, ಆದ್ರೆ ನೆಟ್ಟಿಗರ ವಿಮರ್ಶೆಯೇ ಬೇರೆ!

ನನಗೆ ಯಾರ್ ಯಾರು ಮೋಸ ಮಾಡ್ತಾರೋ ಅವರೆಲ್ಲಾ ಹೋಗುವ ಜಾಗ ಅದು ಎಂದು ಹೇಳಿದ್ದಾನೆ. ಜೈದೇವ್ ಮತ್ತು ಮಧುರಾ ನಡುವಿನ ಮಾತುಗಳನ್ನು ದೂರದಿಂದಲೇ ಭೂಮಿಕಾ ಮತ್ತು ಮಲ್ಲಿ ಕೇಳಿಸಿಕೊಳ್ಳುತ್ತಿದ್ದಾರೆ.ಜೈದೇವ್‌ ಎಲ್ಲ ಸತ್ಯವನ್ನ ಹೇಳ್ತಾನಾ ಅನ್ನೋದೇ ಕುತೂಹಲ.



ಜೈದೇವ್ ವಿರುದ್ಧ ಭೂಮಿಕಾ ಗೂಢಚಾರಿಕೆ ಆರಂಭಿಸಿದ್ದಾಳೆ. ಐಪಿಎಸ್ ಆದ್ರೂ ಮಲ್ಲಿಯಿಂದ ಆಗದ ಕೆಲಸವನ್ನು ಭೂಮಿಕಾ ಮಾಡಲು ಹೊರಟಿದ್ದಾಳೆ. ಅತ್ತ ಶಕುಂತಲಾಗೆ ಭಯ ಶುರುವಾಗಿದೆ. ತನ್ನ ಬೆನ್ನ ಹಿಂದೆ ಏನೋ ನಡೆಯುತ್ತಿದೆ ಅಂತ ಅನುಮಾನ ಶುರು ಆಗಿದೆ. ಆದ್ರೆ ಯಾರಿಂದಲೂ ಶಕುಂತಲಾಗೆ ಸ್ಪಷ್ಟವಾದ ಉತ್ತರ ಸಿಗುತ್ತಿಲ್ಲ.

ಕಂಪನಿಯಲ್ಲಿ ನಡೆಯುತ್ತಿರೋ ವಿಷಯಗಳನ್ನು ತಿಳಿದುಕೊಳ್ಳಲು ಶಕುಂತಲಾ ಮುಂದಾಗಿದ್ದು, ಅಲ್ಲಿಯೂ ಫೇಲ್ ಆಗಿದ್ದಾಳೆ.

ಇದನ್ನೂ ಓದಿ: Amruthadhaare Serial: ಭೂಮಿ ಕೇಡಿಗಾಗಿ ಬೀಸಿರೋ ಬಲೆ 'ಜೀವ' ಇಂದ ಬಯಲಾಗುತ್ತಾ?

ಅಮೃತಧಾರೆʼ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿದೆ. ಛಾಯಾ ಸಿಂಗ್ ಭೂಮಿಕಾ ಎನ್ನುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರ ಸಂಜೆ 7 ಗಂಟೆಗೆ ಪ್ರಸಾರ ಕಾಣುತ್ತಿದೆ