ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Amruthadhaare Serial: ಜೋಡಿಗಳನ್ನ ಒಂದು ಮಾಡೋಕೆ ಲವ್ ಮಾಸ್ಟರ್ಸ್ ಹೊಸ ಐಡಿಯಾ!

Zee Kannada: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿರುವ ಅಮೃತಧಾರೆ ಕಥೆಯನ್ನ ಜನ ಇಷ್ಟ ಪಡುತ್ತಿದ್ದಾರೆ. ಇತ್ತೀಚೆಗೆ ಟಿಆರ್‌ಪಿಯಲ್ಲಿಯೂ ಸಖತ್‌ ಮುಂದಿದೆ ಧಾರಾವಾಹಿ. ಸದ್ಯ ಜೈದೇವ್‌ ಪ್ಲ್ಯಾನ್‌ ಸಕ್ಸೆಸ್‌ ಆಗಿದೆ. ಅಜ್ಜಿ ಆಸ್ತಿಗೆಲ್ಲಾ‌ ಈಗ ಕೇಡಿನೇ ಒಡೆಯ. ಇತ್ತ ಅಜ್ಜಿಗೆ ತನ್ನ ಆಸ್ತಿಯ ಮೇಲಿದ್ದ ಹಕ್ಕನ್ನೇ ಜೈದೇವ್ದು ರುಪಯೋಗ ಮಾಡಿಕೊಂಡು, ಆಕೆಯನ್ನು ವೃದ್ಧಾಶ್ರಮಕ್ಕೆ ಕಳುಹಿಸಿರುವುದು ಎಲ್ಲರಿಗೂ ದೊಡ್ಡ ಶಾಕ್ ನೀಡಿದೆ.

ಅಮೃತಧಾರೆ ಧಾರಾವಾಹಿ

ಜೀ ಕನ್ನಡ ವಾಹಿನಿಯಲ್ಲಿ (zee Kannada) ಪ್ರಸಾರ ಕಾಣುತ್ತಿರುವ ಅಮೃತಧಾರೆ (amruthadhaare serial) ಕಥೆಯನ್ನ ಜನ ಇಷ್ಟ ಪಡುತ್ತಿದ್ದಾರೆ. ಇತ್ತೀಚೆಗೆ ಟಿಆರ್‌ಪಿಯಲ್ಲಿಯೂ ಸಖತ್‌ ಮುಂದಿದೆ ಧಾರಾವಾಹಿ. ಸದ್ಯ ಜೈದೇವ್‌ ಪ್ಲ್ಯಾನ್‌ ಸಕ್ಸೆಸ್‌ ಆಗಿದೆ. ಅಜ್ಜಿ ಆಸ್ತಿಗೆಲ್ಲಾ‌ ಈಗ ಕೇಡಿನೇ ಒಡೆಯ. ಇತ್ತ ಅಜ್ಜಿಗೆ ತನ್ನ ಆಸ್ತಿಯ ಮೇಲಿದ್ದ ಹಕ್ಕನ್ನೇ ಜೈದೇವ್ (Jaidev) ದುರುಪಯೋಗ ಮಾಡಿಕೊಂಡು, ಆಕೆಯನ್ನು ವೃದ್ಧಾಶ್ರಮಕ್ಕೆ ಕಳುಹಿಸಿರುವುದು ಎಲ್ಲರಿಗೂ ದೊಡ್ಡ ಶಾಕ್ ನೀಡಿದೆ. ಅಜ್ಜಿಯ ಕಷಾಯದಲ್ಲಿ ಔಷಧ ಹಾಕಿ, ಹೆಬ್ಬೆರಳಿನ ಅಚ್ಚನ್ನೂ ಪಡೆದು ಆಸ್ತಿಯನ್ನು ಕಬಳಿಸುವ ಪ್ಲ್ಯಾನ್‌ ತಿಳಿದು ಎಲ್ಲರೂ ಅಚ್ಚರಿಗೊಂಡಿದ್ದಾರೆ.

ವೃದ್ಧಾಶ್ರಮಕ್ಕೆ ಅಜ್ಜಿ

ಅಜ್ಜಿ ಬಂದ ಮೇಲೆ ಭಾಗ್ಯ ಎಲ್ಲ ಸರಿ ಹೋಗತ್ತೆ ಅಂತ ನಿರಾಳವಾಗಿದ್ದಳು. ಆದ್ರೆ ಆಗಿದ್ದೇ ಬೇರೆ. ಇದ್ದಕ್ಕಿದ್ದಂತೆ ಅಜ್ಜಿ ಕಾಣಿಯಾಗಿರೋದು ಶಾಕ್‌ ಕೊಟ್ಟಿದೆ. ಇದನ್ನ ಶಕುನಿ ಮಾವ ಆನಂದ್‌ಗೆ ಹೇಳಿದ್ದಾನೆ. ಇದೆಲ್ಲದಕ್ಕೂ ಕಾರಣ ಜೈದೇವ್‌ ಅಂತ. ಅಷ್ಟೇ ಅಲ್ಲ ವೃದ್ಧಾಶ್ರಮಕ್ಕೆ ಅಜ್ಜಿಯನ್ನ ಇಟ್ಟಿದ್ದಾನೆ. ಅಷ್ಟೂ ಆಸ್ತಿ ಜೈದೇವ್‌ ಪಾಲಾಗಿದೆ ಎಂದಿದ್ದಾನೆ. ಇದು ಆನಂದ್‌ಗೆ ಶಾಕ್‌ ಆಗಿದೆ.

ಇದನ್ನೂ ಓದಿ: Bigg Boss Kannada 12: ಚೈತ್ರಾ ಜೊತೆ ಕೈ ಜೋಡಿಸಿದ ರಜತ್‌! ದುರಹಂಕಾರ ನಮ್ಮ ಹತ್ರ ಬೇಡ ಅಂತ ಅಶ್ವಿನಿಗೆ ಆವಾಜ್‌!



ಅಜ್ಜಿಯ ಗುರಿ

ಆ ಬಳಿಕ ಅಜ್ಜಿಯ ಬಳಿ ಭಾಗ್ಯಮ್ಮ ಆನಂದ್‌ ಬಂದಿದ್ದಾರೆ. ಭಾಗ್ಯಮ್ಮ ಮಾತಾಡೋದು ನೋಡಿ ಅಜ್ಜಿ ಫುಲ್‌ ಖುಷ್‌ ಆಗಿದ್ದಾಳೆ. ಮೊದಲೇ ಇವರಿಬ್ಬರನ್ನು ಒಟ್ಟುಗೂಡಿಸಿದ್ದ ಅಜ್ಜಿ ಮತ್ತೆ ಒಂದಾಗಿಸುವ ಜವಾಬ್ದಾರಿ ತಾನೇ ತೆಗೆದುಕೊಂಡಿದ್ದಾಳೆ. ಈ ಬಾರಿ, ಅವರು ದೊಡ್ಡ ಪ್ಲ್ಯಾನ್ ಮಾಡಿ ‘ಸಾಯುತ್ತಿರುವ ನಾಟಕ’ವನ್ನೇ ಆಡಿದ್ದಾಳೆ. ತನ್ನ ಕೊನೆಯಾಸೆಯ ನೆಪದಲ್ಲಿ ಜೋಡಿಯನ್ನು ಒಟ್ಟುಗೂಡಿಸಬೇಕೆಂಬುದು ಅಜ್ಜಿಯ ಗುರಿ.

ಅಜ್ಜಿ ಸಡನ್‌ ಆಗಿ ಬೀಳುತ್ತಾರೆ. ಆಗ ಆನಂದ್‌ ಮತ್ತು ಭಾಗ್ಯಮ್ಮಗೆ ಹೆದರಿಕೆ ಆಗತ್ತೆ. ಅದು ನೋಡಿದ್ರೆ ಅಜಜ್ಜಿಯ ನಾಟಕ ಆಗಿರುತ್ತದೆ. ನನ್ನ ಕೊನೆಯಾಸೆ ಈಡೇರಿಸಲಿ, ಗೌತಮ್–ಭೂಮಿಕಾ ಇಬ್ಬರನ್ನೂ ಕರೆದುಕೊಂಡು ಬಾ ಅಂತ ಆನಂದ್‌ಗೆ ಅಜ್ಜಿ ಹೇಳಿದ್ದಾಳೆ. ಗೌತಮ್–ಭೂಮಿಕಾ ಒಂದಾದರೆ, ಎಲ್ಲರೂ ಸೇರಿ ಜೈದೇವ್–ಶಕುಂತಲಾಗೆ ಪಾಠ ಕಲಿಸುವುದು ಪಕ್ಕಾ ಅಂತ ವೀಕ್ಷಕರು ಕಮೆಂಟ್‌ ಮಾಡುತ್ತಿದ್ದಾರೆ.

ಇದನ್ನೂ ಓದಿ: Amruthadhare Serial: ಗೌತಮ್ - ಭೂಮಿ ಒಂದು ಮಾಡೋಕೆ ಮಿಂಚು - ಆಕಾಶ್ ಒಂದಾದ್ರು! ಇನ್ನು ಬರೀ ಒಲವ ಅಮೃತಧಾರೆ

ಅಮೃತಧಾರೆ’ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿದೆ. ಛಾಯಾ ಸಿಂಗ್ ಭೂಮಿಕಾ ಎನ್ನುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರ ಸಂಜೆ 7 ಗಂಟೆಗೆ ಪ್ರಸಾರ ಕಾಣುತ್ತಿದೆ.

Yashaswi Devadiga

View all posts by this author