ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bigg Boss Kannada 12: ಚೈತ್ರಾ ಜೊತೆ ಕೈ ಜೋಡಿಸಿದ ರಜತ್‌! ದುರಹಂಕಾರ ನಮ್ಮ ಹತ್ರ ಬೇಡ ಅಂತ ಅಶ್ವಿನಿಗೆ ಆವಾಜ್‌!

Ashwini Gowda: ಈ ವಾರ ಮನೆ ವಿಲನ್‌ ಮನೆ ಆಗಿದೆ. ವಿಲನ್‌ ಕೊಟ್ಟ ಟಾಸ್ಕ್‌ಗಳಿಗೂ ಮನೆಮಂದಿ ತತ್ತರಿಸಿ ಹೋಗಿದ್ದಾರೆ. ಪ್ರೊಮೋದಲ್ಲಿ ಕುಂಟೆಬಿಲ್ಲೆ ಆಟದ ವೇಳೆ ನಡೆದಿರುವ ಜಟಾಪಟಿಯನ್ನು ನೋಡಬಹುದಾಗಿದೆ. ಆಟದ ಉಸ್ತುವಾರಿ ವಹಿಸಿಕೊಂಡಿರುವ ಅಶ್ವಿನಿ ಗೌಡ ಅವರು, ಕುಂಟೆಬಿಲ್ಲೆ ಆಟದಲ್ಲಿ ಯಾರೂ ಯಾರಿಗೂ ಹೇಳಿಕೊಡಬಾರದು ಎಂದು ಚೈತ್ರಾ ಕುಂದಾಪುರ ಅವರಿಗೆ ಆವಾಜ್​ ಹಾಕಿದ್ದಾರೆ.

ಚೈತ್ರಾ ಜೊತೆ ಕೈ ಜೋಡಿಸಿದ ರಜತ್‌; ಅಶ್ವಿನಿಗೆ ಆವಾಜ್‌!

ಬಿಗ್‌ ಬಾಸ್‌ ಕನ್ನಡ -

Yashaswi Devadiga
Yashaswi Devadiga Dec 12, 2025 6:27 PM

ಬಿಗ್‌ ಬಾಸ್‌ ಮನೆಯಲ್ಲಿ (Bigg Boss Kannada 12) ಸ್ಪರ್ಧಿಗಳ ಮಧ್ಯೆ ಪೈಪೋಟಿ ಜಾಸ್ತಿ ಆಗುತ್ತಿದೆ. ವೈಲ್ಡ್‌ ಕಾರ್ಡ್‌ ಎಂಟ್ರಿ ಕೊಟ್ಟಿದ್ದ ರಜತ್‌ (Rajath) ಹಾಗೂ ಚೈತ್ರಾ (Chaithra) ಈ ವಾರ ಸಖತ್‌ ಅಬ್ಬರಿಸಿದ್ದಾರೆ. ಅದರಲ್ಲೂ ಈ ವಾರ ಮನೆ ವಿಲನ್‌ ಮನೆ ಆಗಿದೆ. ವಿಲನ್‌ ಕೊಟ್ಟ ಟಾಸ್ಕ್‌ಗಳಿಗೂ ಮನೆಮಂದಿ ತತ್ತರಿಸಿ ಹೋಗಿದ್ದಾರೆ. ಪ್ರೊಮೋದಲ್ಲಿ ಕುಂಟೆಬಿಲ್ಲೆ ಆಟದ ವೇಳೆ ನಡೆದಿರುವ ಜಟಾಪಟಿಯನ್ನು ನೋಡಬಹುದಾಗಿದೆ. ಆಟದ ಉಸ್ತುವಾರಿ ವಹಿಸಿಕೊಂಡಿರುವ ಅಶ್ವಿನಿ ಗೌಡ (Ashwini Gowda) ಅವರು, ಕುಂಟೆಬಿಲ್ಲೆ ಆಟದಲ್ಲಿ ಯಾರೂ ಯಾರಿಗೂ ಹೇಳಿಕೊಡಬಾರದು ಎಂದು ಚೈತ್ರಾ ಕುಂದಾಪುರ ಅವರಿಗೆ ಆವಾಜ್​ ಹಾಕಿದ್ದಾರೆ.

ಚೈತ್ರಾ-ಅಶ್ವಿನಿ ನಡುವೆ ಮಾತಿನ ಚಕಮಕಿ

ಕೂತಿರೋರು ಯಾರಿಗೂ ಏನನ್ನೂ ಹೇಳಿಕೊಡಬಾರದು ಅಂತ ಅಶ್ವಿನಿ ಕೂಗಾಡಿದ್ದಾರೆ. ರೂಲ್ಸ್‌ ಗೊತ್ತಿಲ್ಲದೆ ಹತ್ತು ಸಲ ಪಾಠ ಮಾಡಿಕೊಳ್ಳುವವರು ನನಗೆ ಹೇಳೋ ಅವಶ್ಯಕತೆ ಇಲ್ಲ ಅಂತ ಚೈತ್ರಾ ಇದಕ್ಕೆ ಟಾಂಗ್‌ ಕೊಟ್ಟಿದ್ದಾರೆ. ಉಸ್ತುವಾರಿ ಕೇಳುವ ಅಧಿಕಾರ ಪ್ರತಿಯೊಬ್ಬರಲ್ಲಿಯೂ ಇದೆ ಎಂದಿದ್ದಾರೆ ಅಶ್ವಿನಿ.

ಇದನ್ನೂ ಓದಿ: Bigg Boss Kannada 12: ಗಿಲ್ಲಿ ವಿಲನ್‌ ಆದ್ರೆ, ರಕ್ಷಿತಾ ಕುತಂತ್ರಿ ಎಂದ ಕಾವ್ಯ!

ಕೊನೆಗೆ ಮಧ್ಯೆ ಪ್ರವೇಶಿಸಿದ ರಜತ್​ ಉರಿಯುವ ಬೆಂಕಿಗೆ ತುಪ್ಪ ಸುರಿದು ಆಡಕ್ಕೆ ಯೋಗ್ಯತೆ ಇಲ್ಲ ಅಂದ್ರು ಇಂಥ ಡ್ರಾಮಾಗಳಿಗೆ ಏನೂ ಕೊರತೆ ಇಲ್ಲ ಎಂದರು. ಬಳಿಕ ಚೈತ್ರಾ ಕೂಡ ಫೂಟೇಜ್‌ ಬೇಕು ಅಂತ ಕೂಗಾಡ್ತಾ ಇದ್ದಾರೆ ಅಂತ ಅಶ್ವಿನಿಗೆ ಟಾಂಗ್‌ ಕೊಟ್ಟರು. ಚೈತ್ರಾಗೆ ಕೂಡ ಈ ವೇಳೆ ಅಶ್ವಿನಿ ಕೂಗಾಡಿದ್ದಾರೆ.

ವೋಟಿಂಗ್ ಲೈನ್ಸ್ ಓಪನ್ ಆಗಿಲ್ಲ

ಸೀಸನ್ 12 ಈಗಾಗಲೇ 74 ದಿನ ಪೂರೈಸಿದೆ. ಇಬ್ಬರು ಅತಿಥಿಗಳು ಸೇರಿ ಒಟ್ಟು 13 ಜನ ಬಿಗ್‌ಬಾಸ್ ಮನೆಯಲ್ಲಿದ್ದಾರೆ. ರಘು ಹಾಗೂ ಸೂರಜ್ ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಮನೆ ಒಳಗೆ ಹೋಗಿದ್ದರು.

ಕಲರ್ಸ್‌ ಕನ್ನಡ ಪ್ರೋಮೋ

ಕಳೆದ ಸೀಸನ್ ಸ್ಪರ್ಧಿಗಳಾದ ರಜತ್, ಚೈತ್ರಾ ಕುಂದಾಪುರ 2 ವಾರಗಳಿಂದ ಅತಿಥಿಗಳಾಗಿ ಮನೆ ಒಳಗೆ ಇದ್ದಾರೆ.ಕೊನೆ ವಾರ ಅಭಿಷೇಕ್ ಬಿಗ್‌ಬಾಸ್ ಜರ್ನಿ ಮುಗಿಸಿ ಹೊರಗಡೆ ಬಂದಿದ್ದರು. ಕೆಲವರು ಅದೃಷ್ಟದಿಂದ ಇನ್ನು ಮನೆಯೊಳಗೆ ಉಳಿದುಕೊಂಡಿದ್ದಾರೆ. ಈ ವಾರ ಮನೆಯಿಂದ ಹೊರಬರಲು ನಾಮಿನೇಟ್ ಪ್ರಕ್ರಿಯೆ ಕೂಡ ನಡೆದಿತ್ತು. ಗಿಲ್ಲಿಯನ್ನು ಕಾವ್ಯಾ ನಾಮಿನೇಟ್ ಮಾಡಿದ್ದು ಮನೆ ಒಳಗೆ ಹಾಗೂ ಹೊರಗೆ ಭಾರೀ ಚರ್ಚೆ ಹುಟ್ಟಾಕ್ಕಿತ್ತು. ಆದರೆ ಈವರೆಗೆ ವೋಟಿಂಗ್ ಲೈನ್ಸ್ ಓಪನ್ ಆಗಿಲ್ಲ.

ಹಾಗಾಗಿ ಈ ವಾರ ಎಲಿಮಿನೇಷನ್ ಇರುವುದಿಲ್ಲ ಎನ್ನುವ ಊಹಾಪೋಹ ಶುರುವಾಗಿದೆ.ಈ ವಾರ ಎಲಿಮಿನೇಷನ್ ನಡೆಯದಿದ್ದರೆ ಮುಂದಿನ ವಾರ ಡಬಲ್ ಎಲಿಮಿನೇಷನ್ ಸಾಧ್ಯತೆ ದಟ್ಟವಾಗಿದೆ ಎನ್ನುವ ಮಾತುಗಳು ಕೇಳಿಬರ್ತಿದೆ.

ಇದನ್ನೂ ಓದಿ: Bigg Boss Kannada 12: ಗಿಲ್ಲಿನ ನಾಮಿನೇಟ್ ಮಾಡೋಕೆ ಇರೋ ಬೇರೆ ರೀಸನ್ ಏನು? ರಜತ್‌ ಬಾಯಲ್ಲಿ ಒಮ್ಮೆ ಕೇಳಿ ಬಿಡಿ

ಸ್ಪರ್ಧಿಗಳ ಲುಕ್ ಈ ವಾರ ಬದಲಾಗಿದೆ. ಮಾಳು ಹೇರ್‌ಸ್ಟೈಲ್ ಕೂಡ ಬದಲಾಗಿದೆ. ಅದಕ್ಕೆ ಸಂಬಂಧಿಸಿದ ಪ್ರೋಮೊ ರಿಲೀಸ್ ಆಗಿದೆ.