ಅಮೃತಧಾರೆ ಧಾರಾವಾಹಿಯಲ್ಲಿ (Amruthadhaare serial) ಭಾರಿ ಟ್ವಿಸ್ಟ್ ಎದುರಾಗಿದ್ದು ಮನೇಲಿರೋದು ಭೂಮಿಕಾ ಅಲ್ಲಾ ಅನ್ನೋ ವಿಷ್ಯಾ ಮಲ್ಲಿಗೆ (Malli) ಸ್ಪಷ್ಟವಾಗಿದೆ. ಇನ್ನೊಂದು ಕಡೆ ಪ್ರಜ್ಞೆ ಬಂದ ಅಸಲಿ ಭೂಮಿಕಾ ಮನೆಗೆ ಕರೆ ಮಾಡಿದ್ದಾಳೆ. ಈ ವಿಷಯ ತಿಳಿದು ಶಕುಂತಲಾ ಮತ್ತು ಜೈದೇವ್ ಆತಂಕಗೊಂಡಿದ್ದಾರೆ. ಅಸಲಿ ಭೂಮಿಕಾ (Bhoomika) ವಾಪಸ್ ಬಂದರೆ ಇವರ ಕುತಂತ್ರ ಬಯಲಾಗಲಿದೆಯೇ ಎಂಬ ಕುತೂಹಲ ಮೂಡಿದೆ.
ಮಲ್ಲಿಗೆ ಡೌಟ್
ಅಮೃತಧಾರೆಯಲ್ಲಿ ಸದ್ಯ ದೀಪಿಕಾ ಎಂಟ್ರಿ ಆಗಿದ್ದಾಳೆ. ಜೈದೇವ್ ಮನೆಗೆ ಬಂದಾಗಿದೆ. ಮಲ್ಲಿ ಮನೆಯಿಂದ ಹೊರಗೆ ಹೋಗಿದ್ದಾಗಿದೆ. ದೀಪಿಕಾ ಬಂದ ಉದ್ದೇಶ ನೆರವೇರಿದೆ. ಆದರೆ ಇದು ಮಲ್ಲಿಗೆ ಡೌಟ್ ಬರುವಂತೆ ಆಗಿದೆ.
ಮನೆಯಿಂದ ಆಚೆ ಬಂದ ಮಲ್ಲಿ, ಭೂಮಿಕಾ ತಮ್ಮನ ಬಳಿ ಏನೋ ಎಡವಟ್ಟು ಆಗಿದೆ ಎಂದು ಅನುಮಾನ ಹೊರಗೆ ಹಾಕಿದ್ದಾಳೆ. ಮಕ್ಕಳ ಜೊತೆ ಮಾತಾಡೋ ರೀತಿ, ನಮ್ಮನ್ನ ನೋಡೋ ರೀತಿ ನೋಡಿದ್ರೆ ಇವರು ಭೂಮಿಕಾ ಅಲ್ಲ ಅನ್ನಿಸುತ್ತಿದೆ ಎಂದು ಮಲ್ಲಿ ಹೇಳಿದ್ದಾಳೆ.
ಅಷ್ಟಕ್ಕೂ ದೀಪಿಕಾ ತುಂಬಾ ಒಳ್ಳೆಯವಳು ಎಂದು ತೋರಿಸಲಾಗಿದೆ. ಅವಳಿಗೆ ಶಕುಂತಲಾ ಮತ್ತು ಜೈದೇವರ ಕುತಂತ್ರ ಗೊತ್ತಿಲ್ಲ. ಒಂದು ವೇಳೆ ಅಸಲಿ ವಿಷ್ಯ ಅವಳಿಗೆ ಗೊತ್ತಾದರೆ ಅವಳು ಕೂಡ ಸುಮ್ಮನೇ ಬಿಡುವವಳಲ್ಲ.ಆದರೆ, ಇದೀಗ ಅಸಲಿ ಭೂಮಿಕಾ ವಾಪಸ್ ಬಂದರೆ ಏನಾಗುತ್ತದೆ? ಶಕುಂತಲಾ ಮತ್ತು ಜೈದೇವ್ ಆಕೆಯನ್ನು ವಾಪಸ್ ಬರಲು ಕೊಡ್ತಾರಾ ಅಥವಾ ಇನ್ನೇನೋ ಕಿತಾಪತಿ ಮಾಡ್ತಾರಾ ಎನ್ನೋದನ್ನು ನೋಡಬೇಕಿದೆ.
ಇದನ್ನೂ ಓದಿ: Bigg Boss Kannada 13: ರಾಕ್ಷಸರಾಗಿ ಮಂಜ, ಕಾವ್ಯಾಗೆ ಕಾಟ ಕೊಟ್ಟು ರಣಕೇಕೆ! ಕಾಲಿಗೆ ಬಿದ್ದ ತಾಂಡವ್
ಇದೀಗ ಮಲ್ಲಿನೇ ಭೂಮಿ ಹಾಗೂ ದೀಪಿಕಾ ಟ್ವಿನ್ಸ್ ಸತ್ಯ ಬಯಲು ಮಾಡ್ತಾಳಾ? ಒಂದು ವೇಳೆ ಕಿತಾಪತಿ ತಿಳಿದರೆ, ಅಲ್ಲಿಗೆ ಶಕುಂತಲಾ ಮತ್ತು ಜೈದೇವನ ಅಸಲಿ ಮುಖ ಬಯಲಾಗುತ್ತದೆ. ಹೀಗಾದರೆ ಅಲ್ಲಿಗೆ ಇಬ್ಬರ ಕಥೆಯೂ ಮುಗಿದಂತೆ. ಗೌತಮ್ ಕೂಡ ಏಕಾಏಕಿ ಎಂಟ್ರಿ ಕೊಟ್ಟರೆ ಕಥೆಯಲ್ಲಿ ಇನ್ನಷ್ಟು ಬದಲಾವಣೆ ಆಗೋದು ಖಚಿತ.
ಇದನ್ನೂ ಓದಿ: Bigg Boss Kannada 13: ಅವಳು ಬೇಡ ಅಂದ್ರೂ ಬಿಡಲ್ಲ; ‘ಪ್ರೀತ್ಸೇ’ ಅಂತ ಸೋನಿಕಾ ಹಿಂದೆ ಬಿದ್ದ ಜಗ್ಗ ಮಮ್ಮಿ!
ಅಮೃತಧಾರೆʼ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿದೆ. ಛಾಯಾ ಸಿಂಗ್ ಭೂಮಿಕಾ ಎನ್ನುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರ ೭ ಗಂಟೆಗೆ ಪ್ರಸಾರ ಕಾಣುತ್ತಿದೆ.