Amruthadhare Serial: ಅಮೃತಧಾರೆ ಧಾರಾವಾಹಿಯಲ್ಲಿ ಮತ್ತೊಂದು ಟ್ವಿಸ್ಟ್: ಮುಖಾಮುಖಿಯಾದರು ಅಪ್ಪ-ಮಗ
ಐದು ವರ್ಷ ಕಳೆದರೂ ಆತನಿಗೆ ಭೂಮಿಕಾ ಮತ್ತು ಮಗ ಸಿಕ್ಕಿಲ್ಲ. ಅದರ ನಡುವೆಯೇ ಡ್ರೈವರ್ ಕೆಲಸದ ನಿಮಿತ್ತ ಗೌತಮ್ ಕೊಡಗು ಜಿಲ್ಲೆಯ ಕುಶಾಲನಗರಕ್ಕೆ ಹೋಗಬೇಕಾಗಿ ಬಂದಿದೆ. ವಿಶೇಷ ಎಂದರೆ ಕುಶಾಲನಗರದಲ್ಲಿಯೇ ಭೂಮಿಕಾ ತನ್ನ ಮಗನ ಜೊತೆ ವಾಸ ಮಾಡುತ್ತ ಇರುತ್ತಾಳೆ.

Amruthadare Serial -

ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಅಮೃತಧಾರೆ (Amruthadhare) ಧಾರಾವಾಹಿಯಲ್ಲಿ ಐದು ವರ್ಷಗಳ ನಂತರದ ಕಥೆ ಶುರುವಾಗಿದ್ದು, ಒಂದೊಂದು ಎಪಿಸೋಡ್ ರೋಚಕತೆ ಸೃಷ್ಟಿಸುತ್ತಿದೆ. ಕಳೆದ ವಾರ 9 ಟಿಆರ್ಪಿ ಪಡೆದುಕೊಂಡ ಈ ಧಾರಾವಾಹಿ ಈ ವಾರ ನಂಬರ್ ಒನ್ ಸ್ಥಾನಕ್ಕೇರುವ ಎಲ್ಲ ಲಕ್ಷಣ ಕಾಣುತ್ತಿದೆ. ಕ್ಯಾಬ್ ಡ್ರೈವರ್ ಆಗಿ ಸಾಮಾನ್ಯ ಜೀವನ ನಡೆಸುತ್ತಿರುವ ಗೌತಮ್ ಹಾಗೂ ಭೂಮಿಕಾ ಭೇಟಿ ಯಾವಾಗ ಆಗುತ್ತೊ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ. ಹೀಗಿರುವಾಗ ಮತ್ತೊಂದು ಟ್ವಿಸ್ಟ್ ಕೊಡಲಾಗಿದ್ದು ಭೂಮಿಕಾಗು ಮುನ್ನ ಗೌತಮ್ ಹಾಗೂ ಮಗನ ಅನಿರೀಕ್ಷಿತ ಭೇಟಿ ಆಗಿದೆ.
ತನ್ನ ಮಲತಾಯಿ ಶಕುಂತಲಾಳ ಎಲ್ಲ ಷಡ್ಯಂತ್ರ ತಿಳಿದ ನಂತರ ಗೌತಮ್ ನಿಮಗೇನು ಬೇಕು ಅದು ಸಿಗುತ್ತೆ ಎಂದು ಹೇಳಿ ಆಸ್ತಿ ಪತ್ರಗಳನ್ನು ನೀಡಿದ್ದಾನೆ. ಇವತ್ತಿಗೆ ನನ್ನ ಮತ್ತು ಈ ಮನೆಯ ಋಣ ಮುಗೀತು.. ನಾನು ನೆಮ್ಮದಿಯನ್ನು ಹುಡುಕಿಕೊಂಡು ಹೊರಡ್ತೀನಿ ಎಂದು ಮನೆಯಿಂದ ಹೊರನಡೆಯುತ್ತಾನೆ. ಅಲ್ಲಿಂದು ಐದು ವರ್ಷಗಳ ಮುಂದಿನ ಕಥೆ ಶುರುವಾಗಿದೆ. ಐದು ವರ್ಷಗಳಿಂದ ಕ್ಯಾಬ್ ಡ್ರೈವರ್ ಕೆಲಸ ಮಾಡುತ್ತಿರುವ ಗೌತಮ್ ತನ್ನ ಹೆಂಡತಿ ಭೂಮಿಕಾಳನ್ನು ಹುಡುಕುತ್ತ ಅಲೆದೂ ಅಲೆದೂ ಸುಸ್ತಾಗಿದ್ದಾನೆ.
ಐದು ವರ್ಷ ಕಳೆದರೂ ಆತನಿಗೆ ಭೂಮಿಕಾ ಮತ್ತು ಮಗ ಸಿಕ್ಕಿಲ್ಲ. ಅದರ ನಡುವೆಯೇ ಡ್ರೈವರ್ ಕೆಲಸದ ನಿಮಿತ್ತ ಗೌತಮ್ ಕೊಡಗು ಜಿಲ್ಲೆಯ ಕುಶಾಲನಗರಕ್ಕೆ ಹೋಗಬೇಕಾಗಿ ಬಂದಿದೆ. ವಿಶೇಷ ಎಂದರೆ ಕುಶಾಲನಗರದಲ್ಲಿಯೇ ಭೂಮಿಕಾ ತನ್ನ ಮಗನ ಜೊತೆ ವಾಸ ಮಾಡುತ್ತ ಇರುತ್ತಾಳೆ. ಗೌತಮ್ ಕಾರಿನಲ್ಲಿ ಹೋಗುತ್ತಿರುವಾಗ ಅವನ ಕಾರಿಗೆ ತನ್ನ ಮಗ ಆಕಾಶ್ ಅಡ್ಡ ಬಂದಿದ್ದಾನೆ. ಆದರೆ, ಇಲ್ಲಿ ಗೌತಮ್ಗೆ ಆತನೇ ತನ್ನ ಮಗ ಎಂದು ಹಾಗೂ ಆಕಾಶ್ಗೆ ಇವರೇ ನನ್ನ ಅಪ್ಪ ಎಂದು ತಿಳಿದಿಲ್ಲ.
ಚಿಕ್ಕ ಬಾಲಕ ಕಾರಿಗೆ ಅಡ್ಡ ಬಂದಿದ್ದನ್ನು ಕಂಡು ಕೋಪಗೊಂಡ ಗೌತಮ್ ಕಾರಿನಿಂದ ಇಳಿದು ಗದರಿದಾಗ, ಆಕಾಶ್ ನಾನೇನೋ ಚಿಕ್ಕ ಬಾಲಕ, ನೀವು ನೋಡಿ ಗಾಡಿ ಓಡಿಸಬಾರದೆ ಎಂದು ಪ್ರಶ್ನಿಸಿದ್ದಾನೆ. ಹೀಗೆ ಅನಿರೀಕ್ಷಿತವಾಗಿ ಅಪ್ಪ-ಮಗನ ಮಿಲನ ಆಗಿದೆ. ಗೌತಮ್ ತನ್ನ ಮಗ ಎನ್ನುವುದನ್ನು ಅರಿಯದೇ ಆತನನ್ನು ಕಾರಿನಲ್ಲಿ ಕುಳ್ಳರಿಸಿಕೊಂಡು ಹೋಗುವಾಗ ಹೆಸರು ಕೇಳಿದ್ದಾನೆ. ಆಗ ಆಕಾಶ್, ತನ್ನ ನಿಜವಾದ ಹೆಸರನ್ನು ಹೇಳದೇ ಮನೆಯಲ್ಲಿ ನನ್ನನ್ನು ಅಪ್ಪು ಎಂದು ಕರೆಯುತ್ತಾರೆ ಎಂದಿದ್ದಾನೆ. ಅಸಲಿ ಹೆಸರು ಹೇಳಿದ್ದರೆ ಗೌತಮ್ಗೆ ಅನುಮಾನ ಬರಬಹುದಿತ್ತು. ಆದರೆ, ಇಲ್ಲಿ ಆರೀತಿ ಆಗಿಲ್ಲ.
ಮತ್ತೊಂದೆಡೆ ಭೂಮಿಕಾ ಕೊಡಗಿನಲ್ಲಿ ಟೀಚರ್ ಆಗಿ ಕೆಲಸಕ್ಕೆ ಸೇರಿದ್ದಾಳೆ. ಆದರೆ ಇನ್ನೊಂದು ವಿಶೇಷತೆ ಎಂದರೆ ಭೂಮಿಕಾ ಮನೆಯಲ್ಲಿಯೇ ಮಲ್ಲಿ ಕೂಡ ಇದ್ದಾಳೆ. ಆಕಾಶ್ನನ್ನು ಮಲ್ಲಿ ನೋಡಿಕೊಳ್ಳುತ್ತಿದ್ದಾಳೆ. ಆಕಾಶ್ ಈಗ ಐದು ವರ್ಷದ ಬಾಲಕನಾಗಿದ್ದಾನೆ. ಮಲ್ಲಿ ಮತ್ತು ಆಕಾಶ್ ಸೇರಿ ಭೂಮಿಕಾಳನ್ನು ಫೂಲ್ ಮಾಡುವ ತಮಾಷೆಯನ್ನೂ ಈ ಪ್ರೊಮೋದಲ್ಲಿ ತೋರಿಸಲಾಗಿದೆ. ಈ ಧಾರಾವಾಹಿಯಲ್ಲಿನ ಇನ್ನೊಂದು ಸರ್ಪ್ರೈಎಸ್ ಎಲಿಮೆಂಟ್ ಎಂದರೆ ಆಕಾಶ್ ಎಂಬ ಬಾಲಕನ ಪಾತ್ರ ಮಾಡುತ್ತಿರುವುದು ಅಮೃತಧಾರೆ ಆನಂದ್ ಅವರ ರಿಯಲ್ ಪುತ್ರ.
Sanjana Galrani: ತೆಲುಗು ಬಿಗ್ ಬಾಸ್ನಲ್ಲಿ ಸಂಜನಾ ಗಲ್ರಾನಿ ಅಬ್ಬರ: ಮೊದಲ ವಾರವೇ ಕ್ಯಾಪ್ಟನ್ ಪಟ್ಟ?