ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Amruthadhare Serial: ಗೌತಮ್ - ಭೂಮಿ ಒಂದು ಮಾಡೋಕೆ ಮಿಂಚು - ಆಕಾಶ್ ಒಂದಾದ್ರು! ಇನ್ನು ಬರೀ ಒಲವ ಅಮೃತಧಾರೆ

Kannada Serial: ಅಪ್ಪು ಹಾಗೂ ಮಿಂಚು ಇಬ್ಬರು ಸೇರಿ ಭೂಮಿಕಾ ಹಾಗೂ ಗೌತಮ್‌ ಅವರನ್ನು ಒಂದು ಮಾಡಲು ಪಣ ತೊಟ್ಟಿದ್ದಾರೆ. ಇವರಿಬ್ಬರದ್ದು ಮದುವೆ ಆಗಿದೆ ಎಂದು ಅಪ್ಪು ಹಾಗೂ ಮಿಂಚುಗೆ ಗೊತ್ತಾಗಿರೋ ವಿಚಾರ ಭೂಮಿಕಾ, ಗೌತಮ್‌ಗೆ ಗೊತ್ತಿಲ್ಲ. ಕಳೆದ ವಾರದ ಎಪಿಸೋಡ್ ಗಳಲ್ಲಿ ಜ್ವರದಿಂದ ಪೂರ್ತಿಯಾಗಿ ಕಂಗಾಲಾಗಿ ಹಾಸಿಗೆ ಹಿಡಿದಿದ್ದ ಗೌತಮ್ ನ ಭೂಮಿ ಆರೈಕೆ ಮಾಡಿ, ಮದ್ದು, ಊಟ ಕೊಟ್ಟು ಗುಣಮುಖರಾಗುವಂತೆ ಮಾಡಿದ್ದಾಳೆ.

ಅಮೃತಧಾರೆ ಧಾರಾವಾಹಿ

ಜೀ ಕನ್ನಡ ವಾಹಿನಿಯಲ್ಲಿ (Zee Kannada) ಪ್ರಸಾರ ಕಾಣುತ್ತಿರುವ ಅಮೃತಧಾರೆ ಧಾರಾವಾಹಿ (Amruthadhare Serial) ಕುತೂಹಲ ಘಟ್ಟ ತಲುಪಿದೆ. ಭೂಮಿಕಾ (Bhoomika) ಹಾಗೂ ಗೌತಮ್‌ (Gowtham) ಹತ್ತಿರವಾಗುವ ಘಳಿಗೆ ಬಂದೇ ಬಿಟ್ಟಿದೆ. ಇದೀಗ ಮಿಂಚು (Minchu) ಹಾಗೂ ಅಪ್ಪುನೇ (Appu) ಇವರಿಬ್ಬರ ಪ್ರೀತಿಗೆ ಸೇತುವೆ ಆಗಲಿದ್ದಾರೆ. ಮನೆಯ ಕಪಾಟಿನ ಮೇಲಿರುವ ಸೂಟ್‌ಕೇಸ್‌ ತೆಗೆಯುವಾಗ, ಅಪ್ಪುಗೆ ಫೋಟೋ ಸಿಕ್ಕಿದೆ. ಇಷ್ಟು ದಿನ ತನ್ನ ಜೊತೆ ಸಲುಗೆಯಿಂದ ಇದ್ದ ಗೌತಮ್‌ ಯಾರೆಂಬುದು ಅಂತೂ ಅಪ್ಪುಗೆ ಗೊತ್ತಾಗಿದೆ.

ಗೌತಮ್‌ನನ್ನು ಕಂಡು ಅಪ್ಪಿಕೊಂಡ ಅಪ್ಪು

ಖುಷಿಯಿಂದ ಓಡಿ ಹೋಗಿರುವ ಆಕಾಶ್, ಗೌತಮ್‌ನನ್ನು ಕಂಡು ಅಪ್ಪಿಕೊಂಡಿದ್ದಾನೆ. ಅಪ್ಪ ಎಂದು ಕರೆದಿದ್ದಾನೆ. ಭೂಮಿಕಾಗೆ ಅಪ್ಪ ಮಗನನ್ನು ಕಂಡು ಖುಷಿಯಾಗಿದೆ. ಇದೇ ಸಮಯದಲ್ಲಿ ಮಿಂಚುಗೆ ಕೂಡ ಮನೆಯಲ್ಲಿ ಆಲ್ಬಂ ಸಿಕ್ಕಿದ್ದು ತನಗೆ ಸಿಕ್ಕ ಆಲ್ಬಂನಲ್ಲಿ ಗೌತಮ್ ಮತ್ತು ಆಕಾಶ್ ಜೊತೆಯಲ್ಲಿರುವ ಫೋಟೊಗಳನ್ನು ಕಂಡು ಮಿಂಚು ಆಶ್ಚರ್ಯಗೊಂಡಿದ್ದಾಳೆ. ಆಘಾತಗೊಂಡಿದ್ದಾಳೆ. ಆದರೆ ಮಿಂಚು ನೋಡಿ ವೀಕ್ಷಕರು ಅಪ್ಪನಿಂದ ದೂರವಾಗ್ತಾಳೆ ಅಂದುಕೊಂಡಿದ್ದರು. ಆದರೀಗ ಉಲ್ಟಾ ಆಗಿದೆ.

ಇದನ್ನೂ ಓದಿ: Bigg Boss Kannada 12: ಬರ್ತ್‌ಡೇ ಪಾರ್ಟಿಗೆ ಗಿಲ್ಲಿನ ಮಾತ್ರ ಸೇರಿಸಲ್ಲ! ಹೀಗ್ಯಾಕೆ ಅಂದ್ರು ಡಾಗ್‌ ಸತೀಶ್‌?

ಒಂದು ಮಾಡಲು ಪಣ

ಹೌದು ಅಪ್ಪು ಹಾಗೂ ಮಿಂಚು ಇಬ್ಬರು ಸೇರಿ ಭೂಮಿಕಾ ಹಾಗೂ ಗೌತಮ್‌ ಅವರನ್ನು ಒಂದು ಮಾಡಲು ಪಣ ತೊಟ್ಟಿದ್ದಾರೆ. ಇವರಿಬ್ಬರದ್ದು ಮದುವೆ ಆಗಿದೆ ಎಂದು ಅಪ್ಪು ಹಾಗೂ ಮಿಂಚುಗೆ ಗೊತ್ತಾಗಿರೋ ವಿಚಾರ ಭೂಮಿಕಾ, ಗೌತಮ್‌ಗೆ ಗೊತ್ತಿಲ್ಲ.

ಕಳೆದ ವಾರದ ಎಪಿಸೋಡ್ ಗಳಲ್ಲಿ ಜ್ವರದಿಂದ ಪೂರ್ತಿಯಾಗಿ ಕಂಗಾಲಾಗಿ ಹಾಸಿಗೆ ಹಿಡಿದಿದ್ದ ಗೌತಮ್ ನ ಭೂಮಿ ಆರೈಕೆ ಮಾಡಿ, ಮದ್ದು, ಊಟ ಕೊಟ್ಟು ಗುಣಮುಖರಾಗುವಂತೆ ಮಾಡಿದ್ದಾಳೆ.



ಇನ್ನು ಮುಂದೆ ಪುಟಾಣಿಗಳ ಮುದ್ದಾದ ಕಸರತ್ತು ಶುರುವಾಗಲಿದೆ. ಅದಕ್ಕಾಗಿಯೇ ವೀಕ್ಷಕರು ಸಿಕ್ಕಾಪಟ್ಟೆ ಕುತೂಹಲದಿಂದ ಕಾಯುತ್ತಿದ್ದಾರೆ.

ಇನ್ನೊಂದು ಕಡೆ, ಮಲ್ಲಿಯನ್ನು ಆಸ್ತಿಗೆ ಸಹಿ ಹಾಕಲು ಮನೆಗೆ ಕರೆದ ಜೈದೇವ್‌ಗೆ ಮಲ್ಲಿ ಡಿವೋರ್ಸ್‌ ಶಾಕ್‌ ನೀಡಿದ್ದಾಳೆ. ತನ್ನ ಗಂಡನ ಮುಂದೆ ನಿಂತು ಮಾತನಾಡೊದಕ್ಕೆನೇ ಹೆದರುತ್ತಿದ್ದ ಮಲ್ಲಿಯ ಧೈರ್ಯಕ್ಕೆ ಎಲ್ಲರೂ ಶಾಕ್‌ ಆಗಿದ್ದಾರೆ.

ಇದನ್ನೂ ಓದಿ: Bigg Boss Kannada 12: ಗಿಲ್ಲಿ ಮಾಡಿದ ಆ ಒಂದು ತಪ್ಪಿಂದ ಇಡೀ ಮನೆಗೆ ಶಿಕ್ಷೆ!

ಅಮೃತಧಾರೆ’ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿದೆ. ಛಾಯಾ ಸಿಂಗ್ ಭೂಮಿಕಾ ಎನ್ನುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರ ಸಂಜೆ 7 ಗಂಟೆಗೆ ಪ್ರಸಾರ ಕಾಣುತ್ತಿದೆ.

Yashaswi Devadiga

View all posts by this author