ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Amruthadhaare Serial: ಜೈಲಿನಿಂದ ಜೆಡಿ ಬಿಡುಗಡೆ ಮಾಡಿಸಿದ ಶಕುನಿ ಮಾಮಾ; ಗೌತಮ್ - ಭೂಮಿಕಾಗೆ ಮಕ್ಕಳನ್ನ ಸಂಭಾಳಿಸೊದೇ ಈಗ ಪೀಕಲಾಟ!

Amruthadhaare Serial: ಕುತೂಹಲ ಎನ್ನುವಂತೆ ಶಕುನಿ ಮಾಮಾ ಜೈದೇವನ ರಕ್ಷಣೆಗೆ ಬಂದಿದ್ದಾನೆ. ಅವನನ್ನು ಜೈಲಿನಿಂದ ಬಿಡಿಸಿಕೊಂಡು ಹೋಗಲು ಬಂದಾಗ, ನಿಮ್ಮ ಯಾರ ಸಹವಾಸ ನನಗೆ ಬೇಡ ಎಂದಿದ್ದಾನೆ ಜೈದೇವ್​. ಅತ್ತ ಗೌತಮ್‌ ಮಕ್ಕಳೊಂದಿಗೆ ಸಂತೋಷ ದಿನಗಳನ್ನು ಕಳೆಯುತ್ತಿದ್ದಾನೆ. ಈ ಪ್ರೋಮೋ ನೋಡಿ ಸಂತಸ ವ್ತಕ್ತಪಡಿಸುತ್ತಿದ್ದಾರೆ ವೀಕ್ಷಕರು.

ಅಮೃತಧಾರೆ ಧಾರಾವಾಹಿ

ಜೀ ಕನ್ನಡ ವಾಹಿನಿಯಲ್ಲಿ (Zee Kannada) ಪ್ರಸಾರ ಕಾಣುತ್ತಿರುವ ಅಮೃತಧಾರೆಯಲ್ಲಿ (amruthadhaare serial ) ಜೈದೇವ್‌ ಈಗ ಕಂಬಿ ಎಣಿಸುತ್ತಿದ್ದಾನೆ. ಜಯದೇವ್ ಕಷ್ಟದಲ್ಲಿ ಇದ್ದಾನೆ. ಆದರೆ, ಈ ಸಂದರ್ಭದಲ್ಲಿ ಜಯದೇವ್ಗೆ ಸಹಾಯ ಮಾಡಲು ಶಕುಂತಲ ಮುಂದೆ ಬರಲೇ ಇಲ್ಲ. ಈಗ ಸ್ವತಃ ಮಾವ ಬಂದು ಜೈದೇವ್‌ (Jaidev) ರಿಲೀಸ್‌ ಮಾಡಿಕೊಂಡು ಹೋಗಲು ಬಂದಿದ್ದಾನೆ.

ದಿಯಾಳ ಹಿಂದೆ ತಿರುಗುತ್ತಿದ್ದ ಜೈದೇವ್​ಗೆ ಆಕೆ ಸರಿಯಾದ ಬುದ್ಧಿ ಕಲಿಸಿ ಪೊಲೀಸರನ್ನು ಕರೆಸಿದ್ದಾಳೆ. ಜೈದೇವ್‌ ಜೈಲುಪಾಲಾಗಿದ್ದಾನೆ. ಬೀದಿಗೆ ತಂದು ಬಾಯಿಗೆ ಬಂದ ಹಾಗೆ ಬಯ್ದಿರೋ ಮಗನ ಎಲ್ಲಾ ನೆನಪುಗಳನ್ನು​ ನೆನಪಿಸಿಕೊಂಡ ಶಕುಂತಲಾ ಪೊಲೀಸರ ಬಳಿ, ಅವನು ಯಾರೆಂದೇ ನನಗೆ ಗೊತ್ತಿಲ್ಲ, ಚೆನ್ನಾಗಿ ರುಬ್ಬಿ ಎಂದಿದ್ದಾಳೆ. ಇಷ್ಟು ಹೇಳುತ್ತಿದ್ದಂತೆಯೇ ಪೊಲೀಸರು ಜೈದೇವನ ಅಂಗಿ ಎಲ್ಲಾ ಬಿಚ್ಚಿಸಿ ಚೆನ್ನಾಗಿ ಬಾರಿಸಿದ್ದಾರೆ.

ಇದನ್ನೂ ಓದಿ: Raj B Shetty: ಸದ್ದಿಲ್ಲದೇ ಬಾಲಿವುಡ್‌ಗೆ ಎಂಟ್ರಿ ಕೊಟ್ಟ ರಾಜ್ ಬಿ ಶೆಟ್ಟಿ, ; ಟ್ರೈಲರ್‌ ಔಟ್‌

ಜೈದೇವನ ರಕ್ಷಣೆಗೆ ಶಕುನಿ ಮಾಮಾ

ಇದೇ ಹೊತ್ತಿನಲ್ಲಿ ಕುತೂಹಲ ಎನ್ನುವಂತೆ ಶಕುನಿ ಮಾಮಾ ಜೈದೇವನ ರಕ್ಷಣೆಗೆ ಬಂದಿದ್ದಾನೆ. ಅವನನ್ನು ಜೈಲಿನಿಂದ ಬಿಡಿಸಿಕೊಂಡು ಹೋಗಲು ಬಂದಾಗ, ನಿಮ್ಮ ಯಾರ ಸಹವಾಸ ನನಗೆ ಬೇಡ ಎಂದಿದ್ದಾನೆ ಜೈದೇವ್​.

ಕೊನೆಗೆ ಪೊಲೀಸರು ಧಮ್ಕಿ ಕೊಟ್ಟ ಮೇಲೆ ಹೋಗಲು ಒಪ್ಪಿಕೊಂಡಿದ್ದಾನೆ. ಶಕುನಿ ಮಾಮಾ ಡಬಲ್​ ಗೇಮ್ ಆಡ್ತಿದ್ದಾನಾ, ಅಥವಾ ಗೌತಮ್​ ಹೇಳಿದಂತೆ ಜೈದೇವನನ್ನು ಬಿಡಿಸಿಕೊಂಡು ಹೋಗಲು ಬಂದಿದ್ದಾನಾ ಎನ್ನುವುದು ಇನ್ನಷ್ಟೇ ತಿಳಿಯಬೇಕಿದೆ.



ಅಖಿಲಾಂಡೇಶ್ವರಿ ಇದಾಗಲೇ ಗೌತಮ್​ ಮತ್ತು ಭೂಮಿಕಾಗೆ ಮಗಳನ್ನು ಹುಡುಕಿ ಕೊಡುವ ಜವಾಬ್ದಾರಿ ಹೊತ್ತಿದ್ದಾಳೆ. ಗೌತಮ್​- ಭೂಮಿಕಾ ರಿಯಲ್​ ಮಗಳ ತಲೆಗೆ ಜೈದೇವ್​ ಏನೇನೋ ತುಂಬಿ ಅವಳನ್ನು ವಿಲನ್​ ಮಾಡುವ ಸಾಧ್ಯತೆ ಇದೆ ಅನ್ನೋದು ವೀಕ್ಷಕರ ಅಭಿಪ್ರಾಯ.

ಗೌತಮ್ - ಭೂಮಿಕಾಗೆ ಮಕ್ಕಳನ್ನ ಸಂಭಾಳಿಸೊದೇ ಈಗ ಪೀಕಲಾಟ!

ಅತ್ತ ಗೌತಮ್‌ ಮಕ್ಕಳೊಂದಿಗೆ ಸಂತೋಷ ದಿನಗಳನ್ನು ಕಳೆಯುತ್ತಿದ್ದಾನೆ. ಈ ಪ್ರೋಮೋ ನೋಡಿ ಸಂತಸ ವ್ತಕ್ತಪಡಿಸುತ್ತಿದ್ದಾರೆ ವೀಕ್ಷಕರು.

ಇದನ್ನೂ ಓದಿ: Amruthadhaare Serial: ಮಾತೃ ದ್ರೋಹಕ್ಕೆ ತಕ್ಕ ಶಾಸ್ತಿ; ಕೇಡಿ ಜೇಡಿಗೆ ಶಕುಂತಲಾ ಪಾಠ

ʻಅಮೃತಧಾರೆ’ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿದೆ. ಛಾಯಾ ಸಿಂಗ್ ಭೂಮಿಕಾ ಎನ್ನುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರ ಸಂಜೆ 7 ಗಂಟೆಗೆ ಪ್ರಸಾರ ಕಾಣುತ್ತಿದೆ

Yashaswi Devadiga

View all posts by this author