ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Amruthadhaare Serial: ಮಾತೃ ದ್ರೋಹಕ್ಕೆ ತಕ್ಕ ಶಾಸ್ತಿ; ಕೇಡಿ ಜೇಡಿಗೆ ಶಕುಂತಲಾ ಪಾಠ

Amruthadhaare Serial: ಗೌತಮ್‌ ದಿವಾನ್‌ ಕುಟುಂಬ ಈಗ ಮತ್ತೆ ತಮ್ಮ ಸಾಮ್ರಾಜ್ಯಕ್ಕೆ ಮರಳಿ ಬಂದಿದೆ. ಅದರಲ್ಲೂ ಜೈದೇವ್‌ಗೆ ತಕ್ಕ ಶಾಸ್ತಿ ಮಾಡಿದ್ದಾಳೆ ಶಕುಂತಲಾ. ಈಗ ಸ್ವತಃ ಶಕುಂತಲಾ ಜೆಡಿ ವಿರುದ್ಧ ತಿರುಗಿಬಿದ್ದಿದ್ದಾಳೆ. ಈಗ ಜಯದೇವ್ ಕಷ್ಟದಲ್ಲಿ ಇದ್ದಾನೆ. ಆದರೆ, ಈ ಸಂದರ್ಭದಲ್ಲಿ ಜಯದೇವ್ಗೆ ಸಹಾಯ ಮಾಡಲು ಶಕುಂತಲ ರೆಡಿ ಇಲ್ಲ. ಆತನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ಮಾತೃ ದ್ರೋಹಕ್ಕೆ ತಕ್ಕ ಶಾಸ್ತಿ; ಕೇಡಿ ಜೇಡಿಗೆ ಶಕುಂತಲಾ ಪಾಠ

ಅಮೃತಧಾರೆ ಧಾರಾವಾಹಿ -

Yashaswi Devadiga
Yashaswi Devadiga May 9, 2026 9:42 AM

ಜೀ ಕನ್ನಡ ವಾಹಿನಿಯಲ್ಲಿ (Zee Kannada) ಪ್ರಸಾರ ಕಾಣುತ್ತಿರುವ ಅಮೃತಧಾರೆಯಲ್ಲಿ (amruthadhaare serial) ಗೌತಮ್‌ ದಿವಾನ್‌ ಕುಟುಂಬ ಈಗ ಮತ್ತೆ ತಮ್ಮ ಸಾಮ್ರಾಜ್ಯಕ್ಕೆ ಮರಳಿ ಬಂದಿದೆ. ಅದರಲ್ಲೂ ಜೈದೇವ್‌ಗೆ ತಕ್ಕ ಶಾಸ್ತಿ ಮಾಡಿದ್ದಾಳೆ ಶಕುಂತಲಾ (Shakuntala). ಈಗ ಸ್ವತಃ ಶಕುಂತಲಾ ಜೆಡಿ ವಿರುದ್ಧ ತಿರುಗಿಬಿದ್ದಿದ್ದಾಳೆ. ಈಗ ಜಯದೇವ್ (Jaidev) ಕಷ್ಟದಲ್ಲಿ ಇದ್ದಾನೆ. ಆದರೆ, ಈ ಸಂದರ್ಭದಲ್ಲಿ ಜಯದೇವ್ಗೆ ಸಹಾಯ ಮಾಡಲು ಶಕುಂತಲ ರೆಡಿ ಇಲ್ಲ. ಆತನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ಗೌತಮ್‌ ದಿವಾನ್‌ ಸದ್ಯ ಮನೆಗೆ ವಾಪಸ್‌ ಬಂದು ಪೂಜೆಯಲ್ಲಿ ಭಾಗಿಯಾಗಿದ್ದಾನೆ. ಅಷ್ಟೇ ಅಲ್ಲ ಈ ವೇಳೆ ಮಗಳು ಮಿಂಚು ಬಗ್ಗೆ ಪುರೋಹಿತರು ಪೂಜೆ ಇಂದ ಆಚೆ ಇರಬೇಕು ಅಂದಾಗ, ಗೌತಮ್‌, ಮಕ್ಕಳು ದೇವರ ಸಮಾನ. ಮಿಂಚು ನನ್ನ ಮಗಳು ಎಂದು ಹೇಳಿದ್ದಾನೆ.

ಇದನ್ನೂ ಓದಿ: Aakhri Sawal Trailer: ಗಾಂಧಿ ಹತ್ಯೆ, ಬಾಬರಿ ಮಸೀದಿ ಧ್ವಂಸ! ಆರ್​ಎಸ್​ಎಸ್​ ಕುರಿತ ‘ಆಖ್ರಿ ಸವಾಲ್’ ಟ್ರೈಲರ್‌ ಔಟ್‌

ಮಗಳನ್ನು ಹುಡುಕಲು ಸಹಾಯ ಮಾಡ್ತಾರಾ ಅಖಿಲಾಂಡೇಶ್ವರಿ?

ಮಿಂಚು ವಿಚಾರ ಬಂದಾಗ, ಭೂಮಿಕಾ ತನ್ನ ಇನ್ನೊಂದು ಮಗು ಮಿಸ್‌ ಆಗಿರೋ ಬಗ್ಗೆ ಅಖಿಲಾಂಡೇಶ್ವರಿ ಮುಂದೆ ಹೇಳಿದ್ದಾಳೆ. ಆಗ ಅಖಿಲಾಂಡೇಶ್ವರಿ, ತನಗೆ ಪರಿಚಯ ಇರೋರಿಗೆ ಮಗು ಮಿಸ್ಸಿಂಗ್‌ ಆಗಿದೆಯಾ ಇಲ್ಲವಾ ಅನ್ನೋದು ಹುಡುಕುವ ಪ್ರಯತ್ನ ಮಾಡುವೆ. ನಿಮ್ಮ ಮಗು ನಿಮಗೆ ಸಿಕ್ಕೇ ಸಿಗುತ್ತೇ ಎಂದಿದ್ದಾರೆ.ಹೀಗಾಗಿ ಮಿಂಚುನೇ ಗೌತಮ್‌ ಮಗಳಾ ಅನ್ನೋದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.

ಮಾತೃ ದ್ರೋಹಕ್ಕೆ ತಕ್ಕ ಶಾಸ್ತಿ!

ದಿಯಾಳ ಹಿಂದೆ ತಿರುಗುತ್ತಿದ್ದ ಜೈದೇವ್​ಗೆ ಆಕೆ ಸರಿಯಾದ ಬುದ್ಧಿ ಕಲಿಸಿ ಪೊಲೀಸರನ್ನು ಕರೆಸಿದ್ದಾಳೆ. ಜೈದೇವ್‌ ಜೈಲುಪಾಲಾಗಿದ್ದಾನೆ. ಬೀದಿಗೆ ತಂದು ಬಾಯಿಗೆ ಬಂದ ಹಾಗೆ ಬಯ್ದಿರೋ ಮಗನ ಎಲ್ಲಾ ನೆನಪುಗಳನ್ನು​ ನೆನಪಿಸಿಕೊಂಡ ಶಕುಂತಲಾ ಪೊಲೀಸರ ಬಳಿ, ಅವನು ಯಾರೆಂದೇ ನನಗೆ ಗೊತ್ತಿಲ್ಲ, ಚೆನ್ನಾಗಿ ರುಬ್ಬಿ ಎಂದಿದ್ದಾಳೆ. ಇಷ್ಟು ಹೇಳುತ್ತಿದ್ದಂತೆಯೇ ಪೊಲೀಸರು ಜೈದೇವನ ಅಂಗಿ ಎಲ್ಲಾ ಬಿಚ್ಚಿಸಿ ಚೆನ್ನಾಗಿ ಬಾರಿಸಿದ್ದಾರೆ.

ಜಯದೇವ್ ಹೊರಹಾಕುತ್ತಿದ್ದಂತೆ ಶಕುಂತಲಾಳನ್ನು ಸಾಲ ಕೊಟ್ಟವರು ಬಂದು ಹಿಡಿದುಕೊಂಡು ಹೋದರು. ಆಕೆಗೆ ಟಾರ್ಚರ್ ಕೊಡೋಕೆ ಆರಂಭಿಸಿದರು. ಕೊನೆಗೆ ಆಕೆಯ ಸಹಾಯಕ್ಕೆ ಬಂದಿದ್ದು ಗೌತಮ್. ಈ ವಿಷಯದಲ್ಲಿ ಆಕೆಯ ಸಹಾಯಕ್ಕೆ ಗೌತಮ್ ನಿಂತಿದ್ದು, ಶಕುಂತಲಾ ಈಗ ಜೈದೇವ್‌ ವಿರುದ್ಧ ತಿರುಗಿ ಬಿದ್ದಿದ್ದಾಳೆ.

ದಿಯಾ ಜೊತೆ ಸೇರಿಕೊಂಡು ಬ್ಲಡಿ ಮದರ್ ಸೆಂಟಿಮೆಂಟ್‌ ಕ್ಲೋಸ್ ಮಾಡಿದ್ದ ಜೈದೇವ್‌ಗೆ ತಾಯಿ ಶಕುಂತಲಾ ಶಾಕ್ ನೀಡಿದ್ದಾಳೆ. ಅಂತಿಮವಾಗಿ ಜೈಲಿನಲ್ಲಿ ಕುಳಿತು ವಿಕೃತವಾಗಿ ನಗುತ್ತಿರೋ ಜೈದೇವ್‌ ನಟನೆಗೂ ವೀಕ್ಷಕರು ಫಿದಾ ಆಗಿದ್ದಾರೆ. ಕಥೆ ಸಾಗುತ್ತಿರೋದು ನೋಡಿ ಶೀಘ್ರದಲ್ಲೇ ಸೀರಿಯಲ್‌ ಅಂತ್ಯ ಆಗುತ್ತೆ ಎನ್ನಲಾಗುತ್ತಿದೆ.

ಇದನ್ನೂ ಓದಿ: Amruthadhaare Serial: ಅಡೆತಡೆಗಳು‌ ಸಾವಿರ ಬಂದರೂ ಮಗಳನ್ನು ಬಿಟ್ಟುಕೊಡದ ಗೌತಮ್‌!

ʻಅಮೃತಧಾರೆ’ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿದೆ. ಛಾಯಾ ಸಿಂಗ್ ಭೂಮಿಕಾ ಎನ್ನುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರ ಸಂಜೆ 7 ಗಂಟೆಗೆ ಪ್ರಸಾರ ಕಾಣುತ್ತಿದೆ