ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Amruthadhaare Serial: ಹೆತ್ತ ಮಗ ಕೈಬಿಟ್ಟಾಯ್ತು; ಶಕುಂತಲಾಗೆ ಗೌತಮ್ ದಿವಾನ್‌ ಕಾವಲುಗಾರ!

Amruthadhaare Serial:ಶಕುಂತಲ, ಗೌತಮ್​​ಗೆ ಮಲತಾಯಿ. ಆತನಿಗೆ ಕೆಟ್ಟದಾಗಲಿ ಎಂದೇ ಬಯಸುತ್ತಾ ಬಂದಳು ಶಕುಂತಲ. ಆದರೆ ಗೌತಮ್‌ ಮಾತ್ರ ಕೊನೆಗೂ ಇದ್ದ ಎಲ್ಲ ಆಸ್ತಿಯನ್ನೂ ಮಕ್ಕಳ ಹೆಸರಿಗೆ ಬರೆದು ದೂರ ಹೋಗುತ್ತಾನೆ. ತಾಯಿಯನ್ನು ಅಪಾರ ಗೌರವ ಹಾಗೂ ಪ್ರೀತಿಯಿಂದ ಕಾಣುತ್ತಾನೆ.ಆಕೆಯ ಸಹಾಯಕ್ಕೆ ಗೌತಮ್‌ ಬರಲಿದ್ದಾನೆ. ಆನಂದ್‌ ಕೂಡ ಮಾವನಿಗೆ ಈ ವಿಚಾರ ಗೌತಮ್‌ಗೆ ಹೇಳದಂತೆ ಇರಲು ಹೇಳಿದ್ದರು. ಮಾವ ಗೌತಮ್‌ಗೆ ಈ ವಿಚಾರ ತಲುಪಿಸಿದ್ದಾನೆ. ಇದೀಗ ಶಕುಂತಲಾ ಮಾಡಿದ ತಪ್ಪಿಗೆ ಪಶ್ಚತ್ತಾಪ ಪಡುವಂತಾಗಿದೆ.

ಅಮೃತಧಾರೆ ಧಾರಾವಾಹಿ

ಜೀ ಕನ್ನಡ ವಾಹಿನಿಯಲ್ಲಿ (Zee Kannada) ಪ್ರಸಾರ ಕಾಣುತ್ತಿರುವ ಅಮೃತಧಾರೆಯಲ್ಲಿ(amruthadhaare serial ) ಜಯದೇವ್ ತನ್ನ ತಾಯಿ ಶಕುಂತಲಾಳನ್ನು (Shakuntala) ಮನೆಯಿಂದ ಹೊರಹಾಕಿದ್ದಾನೆ. ತನ್ನ ತಾಯಿ ಹಣ ಕೇಳಿದ್ದಕ್ಕೆ ಸಿಟ್ಟಾದ ಜಯದೇವ್, ಕೋಪದಲ್ಲಿ ತಾಯಿಗೆ ಹೊಡೆದು ಮನೆಯಿಂದ ದೂರಕ್ಕೆ ತಳ್ಳಿದ್ದಾನೆ. ಆಕೆಯ ಸಹಾಯಕ್ಕೆ ಗೌತಮ್‌ ಬರಲಿದ್ದಾನೆ. ಆನಂದ್‌ (Anand) ಕೂಡ ಮಾವನಿಗೆ ಈ ವಿಚಾರ ಗೌತಮ್‌ಗೆ ಹೇಳದಂತೆ ಇರಲು ಹೇಳಿದ್ದರು. ಮಾವ ಗೌತಮ್‌ಗೆ ಈ ವಿಚಾರ ತಲುಪಿಸಿದ್ದಾನೆ. ಇದೀಗ ಶಕುಂತಲಾ ಮಾಡಿದ ತಪ್ಪಿಗೆ ಪಶ್ಚತ್ತಾಪ ಪಡುವಂತಾಗಿದೆ.

ರೋಚಕ ಟ್ವಿಸ್ಟ್‌

ಧಾರಾವಾಹಿ ರೋಚಕ ಟ್ವಿಸ್ಟ್‌ ಪಡೆದು ಸಾಗುತ್ತಿದೆ. ಮಗ ಮಗ ಅಂತ ಬೀಗುತ್ತಿದ್ದ ಶಕುಂತಲಾ, ತಲೆ ತಗ್ಗಿಸುವಂತಾಗಿದೆ. ಜೈದೇವ್‌ ಅತ್ಯಂತ ಕ್ರೂರತೆಯಿಂದ ತಾಯಿಯನ್ನು ಮನೆಯಿಂದ ಆಚೆ ಹಾಕಿದ್ದಾನೆ. ಬಿಕ್ಕಿ ಬಿಕ್ಕಿ ಕಣ್ಣೀರಿಟ್ಟಿದ್ದಾಳೆ ಶಕುಂತಲಾ. ಈಗಾಗಲೇ ಶಕುಂತಲಾ ತಮ್ಮ, ಮಗನ ಪರ ವಹಿಸಿ ಇರಬೇಡ, ಹಣ ಅಂತ ಬಂದರೆ ಯಾರ ಮುಖವನ್ನೂ ನೋಡೋ ಮನುಷ್ಯ ಅಲ್ಲ ಅಂತ ಬುದ್ಧಿಮಾತನ್ನು ಹೇಳಿದ್ದ. ಆದರೀಗ ಅದೇ ಪರಿಸ್ಥಿತಿ ಬಂದಿದೆ.

ಇದನ್ನೂ ಓದಿ: Dhurandhar Movie: ‘ಧುರಂಧರ್’ ಸಿನಿಮಾದ ಮೇಕಿಂಗ್ ವಿಡಿಯೋ ಚಿತ್ರಮಂದಿರದಲ್ಲಿ? ರಿಲೀಸ್‌ ಯಾವಾಗ?

ಶಕುಂತಲ, ಗೌತಮ್​​ಗೆ ಮಲತಾಯಿ. ಆತನಿಗೆ ಕೆಟ್ಟದಾಗಲಿ ಎಂದೇ ಬಯಸುತ್ತಾ ಬಂದಳು ಶಕುಂತಲ. ಆದರೆ ಗೌತಮ್‌ ಮಾತ್ರ ಕೊನೆಗೂ ಇದ್ದ ಎಲ್ಲ ಆಸ್ತಿಯನ್ನೂ ಮಕ್ಕಳ ಹೆಸರಿಗೆ ಬರೆದು ದೂರ ಹೋಗುತ್ತಾನೆ. ತಾಯಿಯನ್ನು ಅಪಾರ ಗೌರವ ಹಾಗೂ ಪ್ರೀತಿಯಿಂದ ಕಾಣುತ್ತಾನೆ.

ಮನೆಯಿಂದ ಹೊರ ಹಾಕಿದ ಜೈದೇವ್‌!

ಕ್ಲಬ್​ಗೆ ತೆರಳಿದ್ದ ಶಕುಂತಲ, 3 ಕೋಟಿ ರೂಪಾಯಿ ಕಳೆದುಕೊಂಡಳು ಮತ್ತು ಈ ವೇಳೆ ಸಹಾಯಕ್ಕಾಗಿ ಜಯದೇವ್ ಬಳಿ ಹಣ ಕೇಳಿದಳು. ಅಷ್ಟೇ ಅಲ್ಲ ಗೌತಮ್‌ನನ್ನು ಹೊಗಳಿದ್ದಾಳೆ. ಇದು ಜಯದೇವ್ ಕೋಪಕ್ಕೆ ಕಾರಣ ಆಯಿತು. ಆತ ಕೂಗಾಡಿದ್ದಾನೆ. ಈ ಕೂಗಾಟದ ಬಳಿಕ ಮತ್ತಷ್ಟು ಸಿಟ್ಟಾದ ಜೆಡಿ, ಆಕೆಯನ್ನು ಕತ್ತು ಹಿಡಿದು ಹೊರಕ್ಕೆ ತಳ್ಳಿದ್ದಾನೆ.

ಇದೇ ಶಕುಂತಲಾ ತನ್ನ ಮಕ್ಕಳೊಂದಿಗೆ ಬೀದಿ ಪಾಲಾದಾಗ ಗೌತಮ್‌ ಅವರನ್ನು ಸಾಕಿ ಸಲಹುತ್ತಾನೆ. ಅದೇ ಪರಿಸ್ಥಿತಿ ಮತ್ತೆ ಶಕುಂತಲಾಗೆ ಎದುರಾಗಿದೆ.

ಇಷ್ಟೇ ಅಲ್ಲ ಶಕುಂತಲಾ ಗೆಳತಿ ಕೂಡ ಸಿಕ್ಕಿದ್ದೇ ಚಾನ್ಸ್‌ ಅಂತ, ಶಕುಂತಲಾಗೆ ಅವಮಾನ ಮಾಡಿದ್ದಾಳೆ. ಹಣ ಕೊಡದೇ ಇದ್ದಾಗ, ಶಕುಂತಲಾ ಮೈ ಮೇಲೆ ಇದ್ದ ಎಲ್ಲ ಒಡವೆಗಳನ್ನು ಕಸಿದುಕೊಂಡುಹಳೆಯ ಸೀರೆಯನ್ನು ಉಡಿಸಿದ್ದಾಳೆ. ಅಷ್ಟರ ಮಟ್ಟಿಗೆ ಶಕುಂತಲಾಗೆ ಅವಮಾನ ಮಾಡಿದ್ದಾಳೆ.



ಈಗ ತನ್ನ ತಾಯಿಯನ್ನು ಮನೆಯಿಂದ ಹೊರ ಹಾಕಲಾಗಿದೆ ಎಂಬ ವಿಷಯ ಗೌತಮ್​​ಗೆ ತಿಳಿದಿದೆ . ಈ ವಿಷಯವನ್ನು ಗೌತಮ್​​ಗೆ ತಿಳಿಸಿದ್ದು ಲಕ್ಷ್ಮೀಕಾಂತ್. ಹೀಗಾಗಿ ತನ್ನ ತಾಯಿಯನ್ನು ಮತ್ತೆ ಕರೆದುಕೊಂಡು ಬರ್ತಾನಾ? ಈಗ ಶಕುಂತಲಾ ಬದಲಾಗಿ ಗೌತಮ್‌ ಪರ ಇರ್ತಾಳಾ? ಜೈದೇವ್‌ಗೂ ಕೇಡು ಕಾಲಬರುತ್ತಾ? ಗೌತಮ್‌ ಮುಂದಿನ ನಡೆಯೇನು ಎನ್ನೋದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.

ಇದನ್ನೂ ಓದಿ: Sanjay Dutt: ಸಂಕೇತ ಭಾಷೆಯಲ್ಲೂ ಬಿಡುಗಡೆ ಆಗಲಿದೆ ಸಂಜಯ್ ದತ್ ಮೂವಿ

ಅಮೃತಧಾರೆ’ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿದೆ. ಛಾಯಾ ಸಿಂಗ್ ಭೂಮಿಕಾ ಎನ್ನುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರ ಸಂಜೆ 7 ಗಂಟೆಗೆ ಪ್ರಸಾರ ಕಾಣುತ್ತಿದೆ.

Yashaswi Devadiga

View all posts by this author