ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Sanjay Dutt: ಸಂಕೇತ ಭಾಷೆಯಲ್ಲೂ ಬಿಡುಗಡೆ ಆಗಲಿದೆ ಸಂಜಯ್ ದತ್ ಮೂವಿ

Sanjay Dutt: ರಾಷ್ಟ್ರೀಯ ಪ್ರಶಸ್ತಿ ವಿಜೇತ ಚಲನಚಿತ್ರ ನಿರ್ಮಾಪಕ ಅಭಿಜೀತ್ ಮೋಹನ್ ವಾರಂಗ್ ನಿರ್ದೇಶನದ "ಆಕ್ರಿ ಸವಾಲ್" ಚಿತ್ರವನ್ನು ನಿಖಿಲ್ ನಂದಾ ಮತ್ತು ಸಂಜಯ್ ದತ್ ನಿರ್ಮಿಸಿದ್ದಾರೆ, ಪುನೀತ್ ನಂದಾ, ಡಾ. ದೀಪಕ್ ಸಿಂಗ್, ಗೌರವ್ ದುಬೆ ಮತ್ತು ಉಜ್ವಲ್ ಆನಂದ್ ಸಹ-ನಿರ್ಮಾಣ ಮಾಡಿದ್ದಾರೆ. ಈ ಚಿತ್ರವು ಮೇ 8, 2026 ರಂದು ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಲಿದೆ.

Sanjay Dutt: ಸಂಕೇತ ಭಾಷೆಯಲ್ಲೂ ಬಿಡುಗಡೆ ಆಗಲಿದೆ ಸಂಜಯ್ ದತ್ ಮೂವಿ

ಸಂಜಯ್‌ ದತ್‌ -

Yashaswi Devadiga
Yashaswi Devadiga Apr 22, 2026 8:33 AM

ವಾರಕ್ಕೊಮ್ಮೆ ಹಲವಾರು ಚಲನಚಿತ್ರಗಳು (Cinema) ಬಿಡುಗಡೆಯಾಗುವ ಸಮಯದಲ್ಲಿ ಸಂಜಯ್ ದತ್ (Sanjay Datt) ನಟನೆಯ ‘ಆಖ್ರಿ ಸವಾಲ್’ ಸಿನಿಮಾ ( Aakhri Sawal Movie) ಕೂಡ ಸಖತ್‌ ಸುದ್ದಿಯಲ್ಲಿದೆ. ಸಂಜಯ್ ದತ್ ನಟಿಸಿರುವ ಈ ಚಿತ್ರವು ಅದರ ಆಕರ್ಷಕ ಕಥಾಹಂದರಕ್ಕಾಗಿ ಮಾತ್ರವಲ್ಲದೆ ಹೊಸ ವಿಧಾನಕ್ಕಾಗಿಯೂ ಗಮನಾರ್ಹ ನಿರೀಕ್ಷೆಯನ್ನು ಹುಟ್ಟುಹಾಕಿದೆ. ವಿಶ್ವದ ಅತಿದೊಡ್ಡ ಸ್ವಯಂಸೇವಕ ಸಂಘಟನೆಯಾದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಇತಿಹಾಸದ ಬಗ್ಗೆ ಟೀಸರ್ ರಿವೀಲ್‌ ಆಗಿತ್ತು. ಸಂಜಯ್ ದತ್ ನಟನೆಯ ‘ಆಖ್ರಿ ಸವಾಲ್’ ಸಿನಿಮಾ ಸಂಕೇತ ಭಾಷೆಯಲ್ಲೂ ಬಿಡುಗಡೆ (Indian Sign Language) ಆಗಲಿದೆ. ಶ್ರವಣ ದೋಷ ಇರುವ ಪ್ರೇಕ್ಷಕರಿಗೂ ಸಿನಿಮಾವನ್ನು ತಲುಪಿಸಬೇಕು ಎಂಬ ಉದ್​ದೇಶದಿಂದ ಹೊಸ ಪ್ರಯತ್ನ ಮಾಡಲಾಗಿದೆ.

ದೊಡ್ಡ ಹೆಜ್ಜೆ

ಶ್ರವಣ ದೋಷವಿರುವವರಿಗೆ ಸಿನಿಮಾ ಅನುಭವ ಅಷ್ಟು ಸುಲಭವಲ್ಲ. ಈ ಕೊರತೆಯನ್ನು ನೀಗಿಸಲು ‘ಆಖ್ರಿ ಸವಾಲ್’ ತಂಡ ಮುಂದಾಗಿದೆ. ಭಾರತದಲ್ಲಿ ಸುಮಾರು 4ರಿಂದ 5 ಕೋಟಿ ಜನರು ದೃಷ್ಟಿ ಮತ್ತು ಶ್ರವಣ ದೋಷದ ಸಮಸ್ಯೆ ಎದುರಿಸುತ್ತಿದ್ದಾರೆ. ಈ ಚಿತ್ರವು ಅವರಿಗೂ ಲಭ್ಯವಾಗಲಿ ಎಂಬ ಉದ್ದೇಶದಿಂದ ದೊಡ್ಡ ಹೆಜ್ಜೆ ಇಟ್ಟಿದೆ.

ಇದನ್ನೂ ಓದಿ: Dhurandhar Movie: ‘ಧುರಂಧರ್’ ಸಿನಿಮಾದ ಮೇಕಿಂಗ್ ವಿಡಿಯೋ ಚಿತ್ರಮಂದಿರದಲ್ಲಿ? ರಿಲೀಸ್‌ ಯಾವಾಗ?

ಸಿನಿಮಾ ಬಿಡುಗಡೆಯಾದ ಮೊದಲ ದಿನದಿಂದಲೇ ಭಾರತೀಯ ಸಂಕೇತ ಭಾಷೆಯ ಆವೃತ್ತಿಯು ಚಿತ್ರಮಂದಿರಗಳಲ್ಲಿ ಲಭ್ಯವಿರಲಿದೆ. ‘ಸಿನಿಮಾ ಎಂಬುದು ಕೇವಲ ಮನರಂಜನೆಯಲ್ಲ. ಅದು ಎಲ್ಲರಿಗೂ ತಲುಪುವ ಮಾಧ್ಯಮವಾಗಬೇಕು. ಈ ಚಿತ್ರದ ಮೂಲಕ ನಾವು ಕೋಟ್ಯಂತರ ವಿಶೇಷ ಚೇತನ ಪ್ರೇಕ್ಷಕರಿಗೆ ಹತ್ತಿರವಾಗುತ್ತಿದ್ದೇವೆ’ ಎಂದು ಚಿತ್ರತಂಡ ತಿಳಿಸಿದೆ.

ರಾಷ್ಟ್ರೀಯ ಪ್ರಶಸ್ತಿ ವಿಜೇತ ಚಲನಚಿತ್ರ ನಿರ್ಮಾಪಕ ಅಭಿಜೀತ್ ಮೋಹನ್ ವಾರಂಗ್ ನಿರ್ದೇಶನದ "ಆಕ್ರಿ ಸವಾಲ್" ಚಿತ್ರವನ್ನು ನಿಖಿಲ್ ನಂದಾ ಮತ್ತು ಸಂಜಯ್ ದತ್ ನಿರ್ಮಿಸಿದ್ದಾರೆ, ಪುನೀತ್ ನಂದಾ, ಡಾ. ದೀಪಕ್ ಸಿಂಗ್, ಗೌರವ್ ದುಬೆ ಮತ್ತು ಉಜ್ವಲ್ ಆನಂದ್ ಸಹ-ನಿರ್ಮಾಣ ಮಾಡಿದ್ದಾರೆ. ಈ ಚಿತ್ರವು ಮೇ 8, 2026 ರಂದು ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಲಿದೆ.



ಸಂಜಯ್ ದತ್ ನಟಿಸಿ, ನಿರ್ಮಿಸಿರೋ ‘ಆಖ್ರಿ ಸವಾಲ್’ ಮೊದಲಿನಿಂದಲೂ ಸಾಕಷ್ಟು ಕುತೂಹಲ ಮೂಡಿಸುತ್ತಾ ಬರುತ್ತಿದೆ. ಈ ಚಿತ್ರದ ಪೋಸ್ಟರ್​​ಗಳು ಗಮನ ಸೆಳೆದಿವೆ. ಈಗ ಚಿತ್ರ ತಂಡ ಒಂದಷ್ಟು ಹೊಸ ಪೋಸ್ಟರ್​​ಗಳನ್ನು ರಿಲೀಸ್ ಮಾಡಿದೆ.

ಇದನ್ನೂ ಓದಿ: Prakash Raj : ರಾಮಾಯಣದ ಬಗ್ಗೆ ವಿವಾದ; ಪ್ರಕಾಶ್ ರಾಜ್ ವಿರುದ್ಧ ದೂರು ದಾಖಲು

ಇದರಲ್ಲಿ ಒಂದಷ್ಟು ಪ್ರಶ್ನೆಗಳಿವೆ. ಈವರೆಗೆ ಯಾರೂ ಕೇಳದ ಪ್ರಶ್ನೆಗಳು. ಇದಕ್ಕೆಲ್ಲ ಉತ್ತರ ‘ಆಖ್ರಿ ಸವಾಲ್’ ಸಿನಿಮಾದಲ್ಲಿ ಸಿಗಲಿದೆಯೇ ಎಂಬ ಪ್ರಶ್ನೆ ಮೂಡಿದೆ.