ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Amruthadhaare Serial: ದಿಯಾ‌ ಕಾಣೆಯಾಗಿರೋ ವಿಷ್ಯ ಜೈದೇವ್ ನೆಮ್ಮದಿ ಕೆಡಿಸ್ತಿದೆ! ಮುಂದೇನು?

Amruthadhaare: ಇನ್ನೊಂದು ಕಡೆ 'ಅಮೃತಧಾರೆ' ಧಾರಾವಾಹಿಯಲ್ಲಿ ಪ್ರೇಕ್ಷಕರು ನಂಬಲಾಗದ ಟ್ವಿಸ್ಟ್ ಎದುರಾಗಿದೆ. ಕಥಾನಾಯಕಿ ಭೂಮಿಕಾಗೆ ಸ್ತನ ಕ್ಯಾನ್ಸರ್ ಇರುವುದು ದೃಢಪಟ್ಟಿದ್ದು, ಅಭಿಮಾನಿಗಳಲ್ಲಿ ತೀವ್ರ ಬೇಸರ ಮೂಡಿಸಿದೆ. ಆದರೆ, ಈ ಶಾಕಿಂಗ್ ವರದಿಯ ಹಿಂದೆ ಗೌತಮ್ ಮಲತಾಯಿ ಶಾಕುಂತಲಾದೇವಿಯ ಕುತಂತ್ರ ಇರಬಹುದೇ ಎಂಬ ಬಲವಾದ ಅನುಮಾನ ಈಗ ವೀಕ್ಷಕರಲ್ಲಿ ಮೂಡಿದೆ.

ಅಮೃತಧಾರೆ ಧಾರಾವಾಹಿ

ಜೀ ಕನ್ನಡ ವಾಹಿನಿಯಲ್ಲಿ (Zee Kannada) ಪ್ರಸಾರ ಕಾಣುತ್ತಿರುವ ಅಮೃತಧಾರೆಯಲ್ಲಿ (Amruthadhaare Serial) ದಿನೇ ದಿನೇ ರೋಚಕ ಟ್ವಿಸ್ಟ್‌ ಪಡೆದು ಸಾಗುತ್ತಿದೆ. ಸದ್ಯ ಜೈದೇವ್‌ಗೆ ದಿಯಾಳದ್ದೇ ತಲೆ ನೋವಾಗಿದೆ. ಇನ್ನೊಂದು ಕಡೆ 'ಅಮೃತಧಾರೆ' ಧಾರಾವಾಹಿಯಲ್ಲಿ ಪ್ರೇಕ್ಷಕರು ನಂಬಲಾಗದ ಟ್ವಿಸ್ಟ್ ಎದುರಾಗಿದೆ. ಕಥಾನಾಯಕಿ ಭೂಮಿಕಾಗೆ ಸ್ತನ ಕ್ಯಾನ್ಸರ್ (Breast Cancer) ಇರುವುದು ದೃಢಪಟ್ಟಿದ್ದು, ಅಭಿಮಾನಿಗಳಲ್ಲಿ ತೀವ್ರ ಬೇಸರ ಮೂಡಿಸಿದೆ. ಆದರೆ, ಈ ಶಾಕಿಂಗ್ ವರದಿಯ ಹಿಂದೆ ಗೌತಮ್ ಮಲತಾಯಿ ಶಾಕುಂತಲಾದೇವಿಯ (Shakuntala Devi) ಕುತಂತ್ರ ಇರಬಹುದೇ ಎಂಬ ಬಲವಾದ ಅನುಮಾನ ಈಗ ವೀಕ್ಷಕರಲ್ಲಿ ಮೂಡಿದೆ.

ದಿಯಾಳ ಬಾಯ್‌ಫ್ರೆಂಡ್‌ಗೆ ಅನುಮಾನ

ಹೌದು ಜೈದೇವ್‌ ಈಗಾಗಲೇ ದಿಯಾಳನ್ನ ಕೊಲೆ ಮಾಡಿದ್ದಾನೆ. ಆದರೆ ಈ ಬಗ್ಗೆ ದಿಯಾಳ ಬಾಯ್‌ಫ್ರೆಂಡ್‌ಗೆ ಅನುಮಾನ ಮೂಡಿದೆ. ನೇರವಾಗಿ ಜೈದೇವ್‌ ಬಳಿ ಬಂದು ದಿಯಾಳ ಬಗ್ಗೆ ಪ್ರಶ್ನೆ ಇಟ್ಟಿದ್ದಾನೆ. ದಿಯಾಳಿಗೆ ಏನಾದರೂ ಹೆಚ್ಚು ಕಡಿಮೆ ಆದರೆ ತಾನು ಸುಮ್ಮನೆ ಇರೋಲ್ಲ ಅಂತ ವಾರ್ನ್‌ ಕೂಡ ಮಾಡಿದ್ದಾನೆ. ಅಷ್ಟೇ ಅಲ್ಲ ಸಣ್ಣ ಸುಳಿವೂ ಸಿಕ್ಕರೂ ಪೊಲೀಸ್‌ ಮೊರೆ ಹೋಗುತ್ತೇನೆ ಎಂದಿದ್ದಾನೆ. ಇದು ಜೈದೇವ್‌ಗೆ ತಲೆ ಕೆಡಿಸಿಕೊಳ್ಳುವಂತೆ ಮಾಡಿದೆ. ಸಣ್ಣ ಸುಳಿವೂ ಸಿಗದಂತೆ ಇರಲು ಎಚ್ಚರ ವಹಿಸುತ್ತಿದ್ದಾನೆ.

ಇದನ್ನೂ ಓದಿ: Karavali movie controversy: 'ಕರಾವಳಿ' ಸಿನಿಮಾ ವಿವಾದದ ಬಗ್ಗೆ ರಕ್ಷಿತಾ ಪ್ರೇಮ್ ಹೇಳಿದ್ದೇನು?

ಇನ್ನೊಂದು ಕಡೆ ಭೂಮಿಕಾಗೆ ಬ್ರೆಸ್ಟ್‌ ಕ್ಯಾನ್ಸರ್‌. ಈ ಟ್ವಿಸ್ಟ್ ಪ್ರೇಕ್ಷಕರಿಗೆ ಮತ್ತು ಅಭಿಮಾನಿಗಳಿಗೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಸದಾ ಎಲ್ಲರಿಗೂ ಒಳ್ಳೆಯದನ್ನೇ ಬಯಸುವ ಭೂಮಿಕಾಗೆ ಇಂತಹ ಕಾಯಿಲೆ ಬರಬಾರದಿತ್ತು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಫ್ಯಾನ್ಸ್ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಗೌತಮ್ ಮಲತಾಯಿ ಶಾಕುಂತಲಾದೇವಿ ಭೂಮಿಕಾಗೆ ನಿಜವಾಗಿಯೂ ಕ್ಯಾನ್ಸರ್ ಇಲ್ಲದಿದ್ದರೂ, ವೈದ್ಯರೊಂದಿಗೆ ಕೈಜೋಡಿಸಿ ಶಾಕುಂತಲಾ ಈ ಸುಳ್ಳು ವರದಿಯನ್ನು ಸೃಷ್ಟಿಸಿರಬಹುದು ಎಂಬ ಬಲವಾದ ಅನುಮಾನ ವೀಕ್ಷಕರಲ್ಲಿದೆ.

ರುಟೀನ್​ ಚೆಕಪ್​ ಮಾಡಿಸಿಕೊಂಡಿದ್ದರು ದಂಪತಿ. ಈ ವೇಳೆ ಭೂಮಿಕಾ ಬ್ರೆಸ್ಟ್​ ಕ್ಯಾನ್ಸರ್​ ಇರುವುದು ತಿಳಿದಿದೆ. ಅಷ್ಟಕ್ಕೂ ಈಗಿನ ಕಾಲದಲ್ಲಿ ಬ್ರೆಸ್ಟ್​ ಕ್ಯಾನ್ಸರ್​ ಎನ್ನುವುದು ಸರ್ವೇ ಸಾಮಾನ್ಯ ಎನ್ನುವಂತಾಗಿದೆ. ಇದನ್ನೇ ಸೀರಿಯಲ್​ನಲ್ಲಿಯೂ ತಂದಿದ್ದು, ಅದನ್ನು ಹೇಗೆ ನಿಭಾಯಿಸಬೇಕು ಎಂದು ಹೇಳುವುದನ್ನು ಸೀರಿಯಲ್​​ ಕಲಿಸುವಂತೆ ಕಾಣುತ್ತಿದೆ.



ಇನ್ನೊಂದು ಕಡೆ ಶಕುಂತಲಾ ನಡೆಯೂ ವೀಕ್ಷಕರಿಗೆ ಅನುಮಾನ ಸೃಷ್ಟಿಸಿದೆ. ಪೂರ್ಣ ಆಸ್ತಿಗಾಗಿ ಮಗನಿಂದ ಕೆಲವು ಸಹಿಯನ್ನು ಪಡೆದುಕೊಂಡಿದ್ದಾಳೆ. ಆದರೆ ಮೊದಲಿಗೆ ಕೆಡಿ ಜಯದೇವ್‌ ಸಹಿ ಹಾಕೊಲ್ಲ ಎಂದಿದ್ದಾನೆ. ಆದರೆ ಏಕಾಏಕಿ ಅಮ್ಮನ ಮಾತನ್ನು ನಂಬಿ ತನ್ನ ಬಳಿ ಇರುವ ಆಸ್ತಿಯನ್ನು ಬರೆದುಕೊಟ್ಟಿದ್ದಾಳೆ.

ಇದನ್ನೂ ಓದಿ: Amruthadhaare Serial: ಭೂಮಿಕಾಗೆ ಬ್ರೆಸ್ಟ್ ಕ್ಯಾನ್ಸರ್! ಮುಂದಿರೋ ಸವಾಲನ್ನ ಹೇಗೆ ಎದುರಿಸ್ತಾಳೆ?

ಅಮೃತಧಾರೆʼ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿದೆ. ಛಾಯಾ ಸಿಂಗ್ ಭೂಮಿಕಾ ಎನ್ನುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರ ಸಂಜೆ 7 ಗಂಟೆಗೆ ಪ್ರಸಾರ ಕಾಣುತ್ತಿದೆ

Yashaswi Devadiga

View all posts by this author