ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Karavali movie controversy: 'ಕರಾವಳಿ' ಸಿನಿಮಾ ವಿವಾದದ ಬಗ್ಗೆ ರಕ್ಷಿತಾ ಪ್ರೇಮ್ ಹೇಳಿದ್ದೇನು?

Karavali movie controversy: ಇಂದು ನಟಿ ಮೇಘನಾ ರಾಜ್ (Meghana Raj) ಸಹ ವಿವಾದದ ಬಗ್ಗೆ ಮಾತನಾಡಿದ್ದಾರೆ. ಇದೀಗ ನಟಿ, ನಿರ್ಮಾಪಕಿ ರಕ್ಷಿತಾ ಪ್ರೇಮ್ ಸಹ ವಿವಾದದ ಬಗ್ಗೆ ಪೋಸ್ಟ್ ಹಂಚಿಕೊಂಡಿದ್ದು, ಪ್ರಜ್ವಲ್ ದೇವರಾಜ್ ಪರ ನಿಂತಿದ್ದಾರೆ. ನಿರ್ದೇಶಕಿ ಸುನಯನಾ ಸುರೇಶ್ ಬರೆದ ಅಭಿಪ್ರಾಯವನ್ನು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ರಕ್ಷಿತಾ ಪ್ರೇಮ್ (Rakshiha Prem) ಹಂಚಿಕೊಂಡಿದ್ದಾರೆ. ಆ ಮೂಲಕ ಪ್ರಜ್ವಲ್ ದೇವರಾಜ್‌ಗೆ ರಕ್ಷಿತಾ ಪ್ರೇಮ್ ಪರೋಕ್ಷ ಬೆಂಬಲ ನೀಡಿದ್ದಾರೆ.

'ಕರಾವಳಿ' ಸಿನಿಮಾ ವಿವಾದದ ಬಗ್ಗೆ ರಕ್ಷಿತಾ ಪ್ರೇಮ್ ಹೇಳಿದ್ದೇನು?

ರಕ್ಷಿತಾ ಪ್ರೇಮ್‌ -

Yashaswi Devadiga
Yashaswi Devadiga Jul 10, 2026 8:43 PM

ಪ್ರಜ್ವಲ್ ದೇವರಾಜ್ (Prajwal Devaraj) ಬದಲಿಗೆ ಬೇರೊಬ್ಬರಿಂದ ಸಿನಿಮಾಕ್ಕೆ ಡಬ್ಬಿಂಗ್ ಮಾಡಿಸಲಾಗಿದ್ದು, ಇದು ಪ್ರಜ್ವಲ್ ಅಭಿಮಾನಿಗಳನ್ನು, ಖುದ್ದು ಪ್ರಜ್ವಲ್ ಅವರನ್ನೂ ಸಹ ಕೆರಳಿಸಿದೆ. ಈ ವಿವಾದ ಕುರಿತಂತೆ ನಿನ್ನೆ ನಿರ್ದೇಶಕ ಪನ್ನಗಾಭರಣ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದರು, ಇಂದು ನಟಿ ಮೇಘನಾ ರಾಜ್ (Meghana Raj) ಸಹ ವಿವಾದದ ಬಗ್ಗೆ ಮಾತನಾಡಿದ್ದಾರೆ. ಇದೀಗ ನಟಿ, ನಿರ್ಮಾಪಕಿ ರಕ್ಷಿತಾ ಪ್ರೇಮ್ ಸಹ ವಿವಾದದ ಬಗ್ಗೆ ಪೋಸ್ಟ್ ಹಂಚಿಕೊಂಡಿದ್ದು, ಪ್ರಜ್ವಲ್ ದೇವರಾಜ್ ಪರ ನಿಂತಿದ್ದಾರೆ. ನಿರ್ದೇಶಕಿ ಸುನಯನಾ ಸುರೇಶ್ ಬರೆದ ಅಭಿಪ್ರಾಯವನ್ನು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ರಕ್ಷಿತಾ ಪ್ರೇಮ್ (Rakshiha Prem) ಹಂಚಿಕೊಂಡಿದ್ದಾರೆ. ಆ ಮೂಲಕ ಪ್ರಜ್ವಲ್ ದೇವರಾಜ್‌ಗೆ ರಕ್ಷಿತಾ ಪ್ರೇಮ್ ಪರೋಕ್ಷ ಬೆಂಬಲ ನೀಡಿದ್ದಾರೆ.

ನ್ಯಾಯಸಮ್ಮತವಲ್ಲ!

''ಇತ್ತೀಚಿನ ವರ್ಷಗಳಲ್ಲಿ ಸಂಭಾವನೆ ಅಥವಾ ಪಾವತಿ ವಿವಾದಗಳ ಕಾರಣದಿಂದ ನಾಯಕಿಯರು ಮತ್ತು ಪೋಷಕ ನಟರ ಧ್ವನಿಯನ್ನು ಅನೇಕ ಬಾರಿ ಬದಲಾಯಿಸಲಾಗಿದೆ. ಆದರೆ ಆ ಸಂದರ್ಭಗಳಲ್ಲಿ ಹೆಚ್ಚಿನ ವಿರೋಧ ವ್ಯಕ್ತವಾಗಲಿಲ್ಲ. ಈಗ ಅದೇ ವಿಚಾರ ಒಬ್ಬ ನಾಯಕ ನಟನಿಗೆ ಸಂಬಂಧಿಸಿದ್ದರಿಂದ ದೊಡ್ಡ ಸುದ್ದಿಯಾಗುತ್ತಿದೆ.

ಇದನ್ನೂ ಓದಿ: Rishab Shetty: ಏಕಾಏಕಿ ಕಿಚ್ಚ ಸುದೀಪ್‌ ಭೇಟಿ ಮಾಡಿದ ರಿಷಬ್‌ ದಂಪತಿ! ಏನಿದು ಮ್ಯಾಟರ್‌?

ಲಿಂಗ ಅಥವಾ ಸ್ಥಾನಮಾನ ಯಾವುದೇ ಆಗಿರಲಿ... ಒಬ್ಬ ನಟನನ್ನು ಪರದೆಯ ಮೇಲೆ ಕೇವಲ ಅವರ ರೂಪ ಅಥವಾ ಅಭಿನಯದಿಂದ ಮಾತ್ರವಲ್ಲ, ಅವರ ಧ್ವನಿಯಿಂದಲೂ ಗುರುತಿಸಲಾಗುತ್ತದೆ. ಒಬ್ಬ ನಟ ತನ್ನ ಶ್ರಮ, ಸಮಯ ಮತ್ತು ಪ್ರತಿಭೆ ಹೊರಹಾಕಿರುವ ಪಾತ್ರಕ್ಕೆ ಸ್ವತಃ ಡಬ್ಬಿಂಗ್ ಮಾಡುವ ಅವಕಾಶವನ್ನು ಕಸಿದುಕೊಳ್ಳುವುದು ನ್ಯಾಯಸಮ್ಮತವಲ್ಲ. ಸಂಭಾವನೆ ಪಾವತಿ ಸಂಬಂಧಿತ ವಿವಾದಗಳಿಗೆ ನ್ಯಾಯಯುತ ಪರಿಹಾರ ಇರಬೇಕು. ಆದರೆ ಅದಕ್ಕಾಗಿ ಒಬ್ಬ ನಟ ತನ್ನ ಅಭಿನಯವನ್ನು ಸಂಪೂರ್ಣಗೊಳಿಸುವ ಹಕ್ಕನ್ನು ಕಸಿದುಕೊಳ್ಳಬಾರದು.

ಈ ಚರ್ಚೆ ಪ್ರತಿಯೊಬ್ಬ ನಟನಿಗೂ ಸಮಾನವಾಗಿ ಅನ್ವಯಿಸಬೇಕು'' ಎಂದು ನಿರ್ದೇಶಕಿ ಸುನಯನಾ ಸುರೇಶ್ ಹಾಕಿದ್ದ ಇನ್ಸ್ಟಾಗ್ರಾಮ್‌ ಪೋಸ್ಟ್‌ ಅನ್ನು ರಕ್ಷಿತಾ ಪ್ರೇಮ್ ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಶೇರ್ ಮಾಡಿದ್ದಾರೆ. ಆ ಮೂಲಕ ಪ್ರಜ್ವಲ್ ದೇವರಾಜ್ ಪರ ತಮ್ಮ ನಿಲುವು ವ್ಯಕ್ತಪಡಿಸಿದ್ದಾರೆ ರಕ್ಷಿತಾ ಪ್ರೇಮ್.

ಇದನ್ನೂ ಓದಿ: Swayambhu Movie: ‘ನಾಗಬಂಧಂ’ ಮೂಲಕ ನಭಾ ನಟೇಶ್ ಭರ್ಜರಿ ಕಮ್‌ಬ್ಯಾಕ್

ಗುರುದತ್ ಗಾಣಿಗಾ ನಿರ್ದೇಶಿಸಿರುವ ‘ಕರಾವಳಿ’ ಸಿನಿಮಾನಲ್ಲಿ ಪ್ರಜ್ವಲ್ ದೇವರಾಜ್ ಜೊತೆಗೆ ರಾಜ್ ಬಿ ಶೆಟ್ಟಿ, ಮಿತ್ರಾ, ರಮೇಶ್ ಇಂದಿರಾ ಇನ್ನೂ ಕೆಲ ಪ್ರತಿಭಾವಂತ ನಟರು ನಟಿಸಿದ್ದಾರೆ. ನಾಯಕಿಯರಾಗಿ ಸಂಪದ ಮತ್ತು ಸುಷ್ಮಿತಾ ಭಟ್ ನಟಿಸಿದ್ದಾರೆ.