ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Amruthadhaare Serial: ಮುದ್ದಿನ ಮಗಳನ್ನು ಮನೆಯಿಂದ ಆಚೆ ಹಾಕ್ತಾನಾ ಗೌತಮ್‌? ಜೋಡಿಯ ಮುಂದಿನ ನಿರ್ಧಾರ ಏನು?

Amruthadhaare Serial : ಮಹಿಮಾ ಸಾಕಷ್ಟು ಬಾರಿ ಮಗಳನ್ನು ಕಳೆದುಕೊಂಡಿದ್ದಾಳೆ. ಅದೇ ನೋವಿನಲ್ಲಿ ಇದ್ದಳು. ಶಕುಂತಲಾ ಸೇರಿದಂತೆ ಗೌತಮ್‌ ಹಾಗೂ ಭೂಮಿ ಮಹಿಮಾಗೆ ಸಮಾಧಾನ ಮಾಡಿದ್ದಾರೆ. ಮಹಿಮಾ ಮಗು ಕಳೆದುಕೊಂಡ ನೋವಲ್ಲೇ ಇದ್ದಾಳೆ, ಮಿಂಚು ಫೋಟೋ ಹಿಡಿದುಕೊಂಡು ಕಣ್ಣೀರಿಟ್ಟಿದ್ದಾಳೆ, ಇದನ್ನು ಗಮನಿಸಿದ ಭೂಮಿ ತಾಯಿ ಈಗ ಹೊಸ ಬೇಡಿಕೆ ಇಟ್ಟಿದ್ದಾರೆ. ಮಿಂಚುಳನ್ನು ಮಹಿಮಾಗೆ ದತ್ತು ಕೊಡಿ ಎಂದಿದ್ದಾರೆ. ಇದನ್ನು ಕೇಳಿ ಭೂಮಿ ಹಾಗೂ ಗೌತಮ್‌ ಶಾಕ್‌ ಆಗಿದ್ದಾರೆ. ಅಷ್ಟೇ ಅಲ್ಲ ದೂರದಲ್ಲಿ ಕೇಳಿಸಿಕೊಂಡ ಅಪ್ಪು ಕೂಡ ಶಾಕ್‌ ಆಗಿದ್ದಾನೆ.

Amruthadhaare : ಮುದ್ದಿನ ಮಗಳನ್ನು ಮನೆಯಿಂದ ಆಚೆ ಹಾಕ್ತಾನಾ ಗೌತಮ್‌?

ಅಮೃತಧಾರೆ ಧಾರಾವಾಹಿ -

Yashaswi Devadiga
Yashaswi Devadiga May 28, 2026 10:50 AM

ಜೀ ಕನ್ನಡ ವಾಹಿನಿಯಲ್ಲಿ (Zee Kannada) ಪ್ರಸಾರ ಕಾಣುತ್ತಿರುವ ಅಮೃತಧಾರೆಯಲ್ಲಿ(amruthadhaare serial) ರೋಚಕ ಟ್ವಿಸ್ಟ್‌ ಪಡೆದುಕೊಂಡಿದೆ. ಇನ್ನೇನು ಎಲ್ಲ ಸರಿ ಹೋಗುತ್ತೆ ಅನ್ನೋ ಅಷ್ಟರಲ್ಲಿ ಭೂಮಿ ಹಾಗೂ ಗೌತಮ್‌ (Bhoomi Gowtham) ಮುಂದೆ ಹೊಸ ಸವಾಲು ಎದುರಾಗಿದೆ. ಅತ್ತೆ ಮಾವನ ಬೇಡಿಕೆಗೆ ಗರಂ ಆಗಿದ್ದಾನೆ ಗೌತಮ್‌.

ಮಹಿಮಾ ಸಾಕಷ್ಟು ಬಾರಿ ಮಗಳನ್ನು ಕಳೆದುಕೊಂಡಿದ್ದಾಳೆ. ಅದೇ ನೋವಿನಲ್ಲಿ ಇದ್ದಳು. ಶಕುಂತಲಾ ಸೇರಿದಂತೆ ಗೌತಮ್‌ ಹಾಗೂ ಭೂಮಿ ಮಹಿಮಾಗೆ ಸಮಾಧಾನ ಮಾಡಿದ್ದಾರೆ. ಮಹಿಮಾ ಮಗು ಕಳೆದುಕೊಂಡ ನೋವಲ್ಲೇ ಇದ್ದಾಳೆ, ಮಿಂಚು ಫೋಟೋ ಹಿಡಿದುಕೊಂಡು ಕಣ್ಣೀರಿಟ್ಟಿದ್ದಾಳೆ, ಇದನ್ನು ಗಮನಿಸಿದ ಭೂಮಿ ತಾಯಿ ಈಗ ಹೊಸ ಬೇಡಿಕೆ ಇಟ್ಟಿದ್ದಾರೆ. ಮಿಂಚುಳನ್ನು ಮಹಿಮಾಗೆ ದತ್ತು ಕೊಡಿ ಎಂದಿದ್ದಾರೆ. ಇದನ್ನು ಕೇಳಿ ಭೂಮಿ ಹಾಗೂ ಗೌತಮ್‌ ಶಾಕ್‌ ಆಗಿದ್ದಾರೆ. ಅಷ್ಟೇ ಅಲ್ಲ ದೂರದಲ್ಲಿ ಕೇಳಿಸಿಕೊಂಡ ಅಪ್ಪು ಕೂಡ ಶಾಕ್‌ ಆಗಿದ್ದಾನೆ.

ಗೌತಮ್‌-ಭೂಮಿ ನಿರ್ಧಾರ ಎನು?

ಇಷ್ಟೆಲ್ಲ ಆದ ಬಳಿಕ ಗೌತಮ್‌ ಹಾಗೂ ಭೂಮಿ ಈ ಬಗ್ಗೆ ಚರ್ಚಸಿದ್ದಾರೆ. ಯಾಕೆ ಈ ರೀತಿ ಹೇಳಿದ್ದರು ಅರ್ಥ ಆಗಿಲ್ಲ. ಮಹಿಮಾಗೆ ಇಷ್ಟ ಆಗೋ ಥರ ಬೇರೆ ಯಾವುದಾದರೂ ಮಗುವನ್ನು ದತ್ತು ತೆಗೆದುಕೊಳ್ಳಲಿ. ಮಿಂಚುನೇ ಏಕೆ? ಪ್ರಪಂಚದಲ್ಲಿ ಸಾವಿರ ಅನಾಥ ಮಕ್ಕಳು ಇದ್ದಾರೆ. ಅವರಿಗೂ ಆಸರೆ ಆಗುತ್ತೆ ಎಂದು ಭೂಮಿ ಮುಂದೆ ಹೇಳಿದ್ದಾನೆ ಗೌತಮ್‌.

ಈ ಮಾತನ್ನು ಕೇಳಿಸಿಕೊಂಡ ಅಪ್ಪು, ಮಿಂಚುಗೆ ಹೇಳಿದ್ದಾನೆ. ಆದಷ್ಟು ಬೇಗ ಈ ಮನೆಯಿಂದ ಹೋಗ್ತಾ ಇರ್ತೀಯಾ. ಮನೆಯಿಂದ ಆಚೆ ಹಾಕ್ತಾರೆ ಎಂದಿದ್ದಾನೆ. ಮಿಂಚು ಕೂಡ ಈ ಬಗ್ಗೆ ಅಪ್ಪನಿಗೆ ಪ್ರಶ್ನೆ ಇಟ್ಟಿದ್ದಾಳೆ.

ಇದನ್ನೂ ಓದಿ: Crazy Star Ravichandran: ರವಿಚಂದ್ರನ್ ವಿರುದ್ಧ ಅತ್ಯಾಚಾರದ ಆರೋಪ; ಕಣ್ಣೀರಿಟ್ಟು ಕ್ಷಮೆ ಕೇಳಿದ ನಟಿ ಬಿಂದಿಯಾ!



ಅತ್ತ ಜೈದೇವ್‌ಗೂ ಮಿಂಚು ಸುಳಿವು ಸಿಕ್ಕಿದಂತಿದೆ. ಮಿಂಚುನೇ ಗೌತಮ್‌ ಮಗಳು ಅನ್ನೋ ಸತ್ಯ ಗೊತ್ತಾದರೆ ಸುಮ್ಮನೇ ಅಂತೂ ಬಿಡಲ್ಲ ಕೆಡಿ ಜೈದೇವ್‌. .ಎಲ್ಲಕ್ಕಿಂತ ಮುಖ್ಯವಾಗಿ ಮಗಳಿಂದ ಕಂಟಕ ಇದೆ ಎಂದು ಈ ಹಿಂದೆ ಜ್ಯೋತಿಷಿ ಭವಿಷ್ಯ ನುಡಿದಿದ್ದಾನೆ.

ಹೀಗಾಗಿ ಜೈದೇವ್‌ನ ಕಪಿಮುಷ್ಠಿಯಿಂದ ಮಗುವನ್ನು ಪಾರು ಮಾಡಲು ಹೋದಾಗ ಗೌತಮ್ ಪ್ರಾಣಕ್ಕೆ ಅಪಾಯವಾದರೂ ಆಗಬಹುದು.ಮುಂದೆ ಈ ಜೋಡಿ ಏನು ಮಾಡುತ್ತೆ ಅನ್ನೋದು ಮುಂದಿನ ಸಂಚಿಕೆಯಲ್ಲಿ ಗೊತ್ತಾಗಲಿದೆ.

ಇದನ್ನೂ ಓದಿ: Amruthadhaare Serial: ಮಹಿಮಾ ಬದುಕಿಗೆ ಭರವಸೆ ನೀಡಿದ ಗೌತಮ್ - ಭೂಮಿ; ಧನ್ಯವಾದ ಹೇಳಿದ ಶಕುಂತಲಾ!

ಅಮೃತಧಾರೆʼ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿದೆ. ಛಾಯಾ ಸಿಂಗ್ ಭೂಮಿಕಾ ಎನ್ನುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರ ಸಂಜೆ 7 ಗಂಟೆಗೆ ಪ್ರಸಾರ ಕಾಣುತ್ತಿದೆ