ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Amruthadhare Serial: ಗೌತಮ್ ದಿವಾನ್ ಅಖಾಡಕ್ಕಿಳಿದ್ರೆ ಆಟ ಬೇರೇನೆ ಇರತ್ತೆ; ಜೈದೇವ್‌ಗೆ ಇದೆ ಮುಂದೆ ಹಬ್ಬ!

Amruthadhare Serial: ಅಮೃತಧಾರೆ ಧಾರಾವಾಹಿಯಲ್ಲಿ ಮಹತ್ವದ ಬದಲಾವಣೆ ಮಾಡುವ ಸಮಯ ಬಂದಿದೆ. ಇಷ್ಟೂ ದಿನ ಮಲ್ಲಿ ಹಾಗೂ ಸುನಿ ಬಗ್ಗೆಯೇ ಕಥೆ ಸಾಗುತ್ತಿದೆ. ಆದರೀಗ ಬದಲಾವಣೆ ಆಗುವ ಲಕ್ಷಣ ತೋರುತ್ತಿದೆ. ಗೌತಮ್‌ ದಿವಾನ್‌ ಮತ್ತೆ ಕಮ್‌ ಬ್ಯಾಕ್‌ ಆಗುತ್ತಿದ್ದಾನೆ. ಗೌತಮ್ ಈ ಬಾರಿ ಆಯ್ಕೆ ಮಾಡಿಕೊಂಡಿರುವುದು ಸ್ಟಾಕ್ ಬ್ರೋಕಿಂಗ್ ಬಿಸಿನೆಸ್. ಶೇರ್ ಮಾರ್ಕೆಟ್ ಅಂದರೆ ನಷ್ಟ ಎನ್ನುವವರ ಮುಂದೆ ಸಾಧಿಸಿ ತೋರಿಸಲು ಅವರು ಮುಂದಾಗಿದ್ದಾರೆ. ಈ ಪಯಣದಲ್ಲಿ ಅವರಿಗೆ ಪತ್ನಿ ಭೂಮಿಕಾ ಭರ್ಜರಿ ಸಾಥ್ ನೀಡುತ್ತಿದ್ದಾರೆ.

ಅಮೃತಧಾರೆ ಧಾರಾವಾಹಿ

ಅಮೃತಧಾರೆ ಧಾರಾವಾಹಿಯಲ್ಲಿ (amruthadhare serial) ಮಹತ್ವದ ಬದಲಾವಣೆ ಮಾಡುವ ಸಮಯ ಬಂದಿದೆ. ಇಷ್ಟೂ ದಿನ ಮಲ್ಲಿ ಹಾಗೂ ಸುನಿ ಬಗ್ಗೆಯೇ ಕಥೆ ಸಾಗುತ್ತಿದೆ. ಆದರೀಗ ಬದಲಾವಣೆ ಆಗುವ ಲಕ್ಷಣ ತೋರುತ್ತಿದೆ. ಗೌತಮ್‌ ದಿವಾನ್‌ (Gowtham Diwan) ಮತ್ತೆ ಕಮ್‌ ಬ್ಯಾಕ್‌ ಆಗುತ್ತಿದ್ದಾನೆ. ಗೌತಮ್ ಈ ಬಾರಿ ಆಯ್ಕೆ ಮಾಡಿಕೊಂಡಿರುವುದು ಸ್ಟಾಕ್ ಬ್ರೋಕಿಂಗ್ ಬಿಸಿನೆಸ್. ಶೇರ್ ಮಾರ್ಕೆಟ್ (Share market) ಅಂದರೆ ನಷ್ಟ ಎನ್ನುವವರ ಮುಂದೆ ಸಾಧಿಸಿ ತೋರಿಸಲು ಅವರು ಮುಂದಾಗಿದ್ದಾರೆ. ಈ ಪಯಣದಲ್ಲಿ ಅವರಿಗೆ ಪತ್ನಿ ಭೂಮಿಕಾ ಭರ್ಜರಿ ಸಾಥ್ ನೀಡುತ್ತಿದ್ದಾರೆ.

ತನ್ನ ಹಾದಿಯನ್ನು ಮರೆತಿಲ್ಲ ಗೌತಮ್‌

ಜೈದೇವ್‌ ಎಷ್ಟೇ ಕಾಟ ಕೊಟ್ಟರೂ ಗೌತಮ್‌ ತನ್ನ ಹಾದಿಯನ್ನು ಮರೆತಿಲ್ಲ. ಉದ್ಯಮ ಮಾಡಲು ಆತನು ಸಿದ್ಧನಾಗಿದ್ದಾನೆ. ಎದುರಾಳಿ ಜೊತೆಯೇ ಕೈ ಜೋಡಿಸಿದ್ದಾನೆ. ಜೈದೇವ್‌ ಗೌತಮ್‌ ಬಳಿ ಇರೋ ಎಲ್ಲ ಆಸ್ತಿಗಳನ್ನು ಕಬಳಿಸಿದ. ಇದ್ದ ತಂದೆಯ ಸಮಾಧಿಯನ್ನೂ ಕಸಿದುಕೊಂಡ. ಆದರೂ ಜೈದೇವ್‌ ದಾಹ ಮಾತ್ರ ತೀರುತ್ತಿಲ್ಲ.

ಇದನ್ನೂ ಓದಿ: Actor Yash: ಪತ್ನಿ ರಾಧಿಕಾ ಜೊತೆ ಹೊಸ ಲುಕ್‌ನಲ್ಲಿ ಕಂಡ ರಾಕಿಂಗ್ ಸ್ಟಾರ್ ಯಶ್!

ಗೌತಮ್‌ ಈಗ ಬ್ಯುಸಿನೆಸ್‌ ಮಾಡಲು ನಿರ್ಧಾರ ಮಾಡಿದ್ದಾನೆ. ಬ್ರೋಕರ್ ಆ್ಯಪ್ ಒಂದನ್ನು ಆರಂಭಿಸಿದ್ದಾನೆ. ಇದು ಸದ್ಯ ಸ್ಟಾರ್ಟ್​​ಅಪ್. ಆದರೆ, ಇದನ್ನು ದೊಡ್ಡದಾಗಿ ಬೆಳೆಸುವ ಆಲೋಚನೆ ಆತನಿಗೆ ಇದೆ. ಶೇರ್ ಮಾರ್ಕೆಟ್ ಅಂದ ಕೂಡಲೇ ಭೂಮಿಕಾ ಸ್ವಲ್ಪ ಹೆದರಿದ್ದಾರೆ. ಇದು ತುಂಬಾನೇ ರಿಸ್ಕ್ ಅಲ್ವಾ ಎಂದು ಪ್ರಶ್ನೆ ಮಾಡುತ್ತಾರೆ. ಆದರೆ ಗೌತಮ್ ಅವರಿಗೆ ತಮ್ಮ ಸಾಮರ್ಥ್ಯದ ಮೇಲೆ ನಂಬಿಕೆಯಿದೆ ಎಂದಿದ್ದಾನೆ.



ಹೊಸ ಆಫೀಸ್‌ ಕೂಡ ನೋಡಿ ಇಟ್ಟಿದ್ದಾನೆ ಗೌತಮ್‌. ಸ್ನೇಹಿತ ಆನಂದ್‌ಗೆ ಹೊಸ ಆಫೀಸ್‌ ಹಾಗೂ ತನ್ನ ಪ್ಲ್ಯಾನ್‌ ಅನ್ನು ವಿವರಿಸಿದ್ದಾನೆ. ಅಷ್ಟೇ ಅಲ್ಲ ಆನಂದ್‌ ಕೂಡ ಕೊಂಚ ಹೆದರಿದ್ದಾನೆ. ಶತ್ರು ಜೊತೆ ಕೈ ಜೋಡಿಸಿರುವ ಬಗ್ಗೆ ಅಸಮಾಧಾನ ಹೊರ ಹಾಕಿದ್ದಾನೆ.

ಜೈದೇವ್‌ಗೂ ಭಯ ಶುರುವಾಯ್ತು!

ಅತ್ತ ಜೈದೇವ್‌ಗೂ ಭಯ ಕಾಡಲು ಶುರುವಾಗಿದೆ. ಇದು ಸ್ಟಾರ್ಟ್​ ಮಾತ್ರವೇ ಆಗಿದೆ ಎಂದು ಆತ ಭಯ ಬಿದ್ದಿದ್ದ. ಆದರೆ, ಗೌತಮ್ ಏನೇ ಮಾಡಿದರೂ ಅದರಲ್ಲಿ ಯಶಸ್ಸು ಕಾಣುತ್ತಾನೆ ಎಂಬುದನ್ನು ಆತ ಸರಿಯಾಗಿ ಬಲ್ಲನು. ಹೀಗಾಗಿ, ಈಗಲೇ ಆತನಿಗೆ ಭಯ ಶುರುವಾಗಿದೆ. ಇನ್ನೊಂದು ಕಡೆ ಗೌತಮ್‌ ಹೊಸ ಉದ್ಯಮ ಶುರು ಮಾಡಿದ್ದರೆ, ಮುಂಬರುವ ದಿನಗಳಲ್ಲಿ ಗೌತಮ್ ದಿವಾನ್ ಅವರ ಹೊಸ ಉದ್ಯಮಕ್ಕೆ ಯಾವ ರೀತಿ ಅಡೆತಡೆಗಳು ಬರುತ್ತವೆ? ಯಾರೆಲ್ಲರ ಕೈವಾಡ ಇದೆ ಎಂಬುದು ಗೊತ್ತಾಗಲಿದೆ.

ಇದನ್ನೂ ಓದಿ: Amruthadhaare serial Kannada: ಶಕುಂತಲಾ ಎದುರೇ ಜೈದೇವ್‌ ಅಹಂಕಾರದ ಮಾತು! ಗೌತಮ್ ದಿವಾನ್ ಮುಂದಿನ ಹೆಜ್ಜೆ ಏನು?

ಜೈದೇವ್‌ಗೂ ಓವರ್‌ ಕಾನ್‌ಫಿಡೆನ್ಸ್‌ ಬಂದಾಗಿದೆ. ಶಕುಂತಲಾ ಮಗನಿಗೆ ಈಗಾಗಲೇ ವಾರ್ನ್‌ ಮಾಡಿದ್ದರೂ ಅದನ್ನು ಕೇಳುವ ಪರಿಸ್ಥಿತಿಯಲ್ಲಿ ಜೈದೇವ್‌ ಇಲ್ಲ. ಅಮೃತಧಾರೆ’ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿದೆ. ಛಾಯಾ ಸಿಂಗ್ ಭೂಮಿಕಾ ಎನ್ನುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರ ಸಂಜೆ 7 ಗಂಟೆಗೆ ಪ್ರಸಾರ ಕಾಣುತ್ತಿದೆ.

Yashaswi Devadiga

View all posts by this author