ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿರುವ ಅಮೃತಧಾರೆ (Amruthdhaare serial) ಧಾರಾವಾಹಿಯಲ್ಲಿ ಭೂಮಿಕಾಗೆ ಕ್ಯಾನ್ಸರ್ ಬಂದಿದ್ದು, ಆಕೆಯ ಬದುಕು ಹೋರಾಟಮಯವಾಗಿದೆ. ಇನ್ನೊಂದೆಡೆ, ಇನ್ಸ್ಪೆಕ್ಟರ್ ಆಗಿ ಎಂಟ್ರಿ ಕೊಟ್ಟಿರುವ ಮಲ್ಲಿ, ಜೈದೇವ್ (Jaidev) ಮತ್ತು ಶಕುಂತಲಾ ಕುತಂತ್ರವನ್ನು ಬಯಲಿಗೆಳೆಯುವ ಹಂತದಲ್ಲಿ ಇರುವಂತಿದೆ.
ಕೆಲವು ದಿನಗಳ ಹಿಂದಿನ ಎಪಿಸೋಡ್‌ನಲ್ಲಿ ಗೌತಮ್ ದಿವಾನ್ ಅವರು ಎಚ್ಚರ ತಪ್ಪಿ ಬಿದ್ದಂತೆ ತೋರಿಸಲಾಗಿತ್ತು. ಅದಾದ ಮೇಲೆ ಗೌತಮ್ ಮತ್ತು ಭೂಮಿಕಾ ಇಬ್ಬರೂ ಬ್ಲಡ್ ಟೆಸ್ಟ್, ಹೆಲ್ತ್ ಚೆಕಪ್ ಮಾಡಿಸಿದ್ದರು. ವೀಕ್ಷಕರು ಅಂದುಕೊಂಡಿದ್ದರು, ಗೌತಮ್ ದಿವಾನ್‌ಗೆ ಏನೋ ದೊಡ್ಡ ಕಾಯಿಲೆ ಬಂದಿದೆ ಎಂದು. ಆದರೆ ಇದರಲ್ಲಿ ಆಗಿದ್ದು ಉಲ್ಟಾ.
ಇದನ್ನೂ ಓದಿ: Rishab Shetty: ಹಾಲಿವುಡ್‌ನಲ್ಲಿ ಮಿಂಚಿದ ರಿಷಬ್ ಶೆಟ್ಟಿ! ಸ್ಪೈಡರ್ ಮ್ಯಾನ್ ಜೊತೆ ಡಿವೈನ್ ಸ್ಟಾರ್
ಭೂಮಿಕಾಗೆ ಸ್ತನ ಕ್ಯಾನ್ಸರ್ ಇರುವುದಾಗಿ ರಿಪೋರ್ಟ್ ಬಂದಿದೆ. ಕ್ಯಾನ್ಸರ್ 3ನೇ ಹಂತದಲ್ಲಿದ್ದು, ಅದು ಬೇರೆ ಭಾಗಕ್ಕೂ ಸ್ಪ್ರೆಡ್ ಆಗಿದೆ. ಹೆಚ್ಚೆಂದರೆ 5 ತಿಂಗಳು ಜೀವಂತ ಇರಬಹುದು ಎಂದು ವೈದ್ಯರು ಹೇಳಿದ್ದಾರೆ. ಭೂಮಿಕಾ ಇದನ್ನ ಕೇಳಿ ದುಃಖಿತರಾಗಿದ್ದಾರೆ. ಪತಿಗೆ ಹೇಳಲಾಗದೆ ಒದ್ದಾಡುತ್ತಿದ್ದಾಳೆ. ಅದೇನೇನೋ ಸರ್ಕಸ್ ಮಾಡುತ್ತಿದ್ದಾಳೆ. ಆದರೆ ಇದನ್ನೆಲ್ಲ ನೋಡುತ್ತಿರುವ ವೀಕ್ಷಕರು ಮಾತ್ರ, ಧಾರಾವಾಹಿ ನಿರ್ದೇಶಕರಿಗೆ ಸಿಕ್ಕಾಪಟ್ಟೆ ಬೈಯ್ಯುತ್ತಿದ್ದಾರೆ.
ಕ್ಯಾನ್ಸರ್ ಎಂದಾಕ್ಷಣ ಕಿಮೋಥೆರಪಿಗೆ ಎಲ್ಲದ್ದಕ್ಕೂ ಮದ್ದು ಎನ್ನುವ ಅಂಶವನ್ನು ಈ ಸೀರಿಯಲ್ನಲ್ಲಿಯೂ ಹೇಳಲಾಗಿದ್ದು, ಅದರಂತೆ ಭೂಮಿಕಾಗೆ ಕಿಮೋಥೆರಪಿಗೆ ಡಾಕ್ಟರ್ ಶಿಫಾರಸು ಮಾಡಿದ್ದಾರೆ.
ಜೈದೇವ್ ಮತ್ತು ಶಕುಂತಲಾ ಗೌತಮ್ ಫ್ಯಾಮಿಲಿಯನ್ನು ಬೀದಿಗೆ ತರುವ ಹುನ್ನಾರ ಮಾಡುತ್ತಿದ್ದಾರೆ. ಇಲ್ಲಿಯವರೆಗೆ ಅವರಿಬ್ಬರೂ ಹೇಗೋ ತಪ್ಪಿಸಿಕೊಂಡಿದ್ದರು. ಅದರಲ್ಲಿಯೂ ಜೈದೇವ ದಿಯಾಳ ಕೊಲೆ ಮಾಡಿದ್ದು, ಇನ್ನೂ ಯಾರಿಗೂ ಗೊತ್ತಿಲ್ಲ. ಇದೀಗ ಮಲ್ಲಿ ಇನ್ಸ್ಪೆಕ್ಟರ್ ಆಗಿರುವ ಹಿನ್ನೆಲೆಯಲ್ಲಿ, ಜೈದೇವ್ಗೆ ಮುಹೂರ್ತ ಫಿಕ್ಸ್ ಆಗುವಂತಿದೆ. ಅದೇ ರೀತಿ, ಶಕುಂತಲಾ ಕುತಂತ್ರ ಕೂಡ ಬಯಲು ಮಾಡಿ ಆಕೆಗೂ ಮಗನ ಜೊತೆಗೇ ಜೈಲೂಟ ಹಾಕಿಸುತ್ತಾಳೆ. ಅಲ್ಲಿಗೆ ಜೈದೇವ್ ಮತ್ತು ಶಕುಂತಲಾರ ಕೆಟ್ಟ ದಿನ ಶುರುವಾದಂತಿದೆ. ಕೊನೆಗೂ ಗೆಲುವು ಗೌತಮ್ ಮತ್ತು ಭೂಮಿಕಾರದ್ದು ಆಗಿಯೇ ಆಗುತ್ತದೆ ಎನ್ನುವುದು ನಿಜನೇ.
ಅಮೃತಧಾರೆ ಸೀರಿಯಲ್ 2023ರ ಮೇ ತಿಂಗಳಿನಿಂದ ಪ್ರಸಾರವಾಗುತ್ತಿದೆ. ಸಾವಿರಕ್ಕೂ ಹೆಚ್ಚು ಎಪಿಸೋಡ್‌ಗಳನ್ನ ಪೂರೈಸಿದೆ. ಕಥೆ ಹಾಳು ಮಾಡಿ ಮುಗಿಸುವ ಬದಲು, ಎಲ್ಲವೂ ಚೆನ್ನಾಗಿರುವಾಗಲೇ ಮುಗಿಸಿ ಬಿಡಿ ಎಂದು ಪ್ರೇಕ್ಷಕರು ಒತ್ತಡ ಹೇರುತ್ತಿದ್ದಾರೆ.
ಇದನ್ನೂ ಓದಿ: Indian Idol 16 winner : ಈ ಬಾರಿಯ ಇಂಡಿಯನ್ ಐಡಲ್ 16ರ ವಿನ್ನರ್ ಇವರೇ!
ಅಮೃತಧಾರೆʼ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿದೆ. ಛಾಯಾ ಸಿಂಗ್ ಭೂಮಿಕಾ ಎನ್ನುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರ ಸಂಜೆ 7 ಗಂಟೆಗೆ ಪ್ರಸಾರ ಕಾಣುತ್ತಿದೆ