ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Rishab Shetty: ಹಾಲಿವುಡ್‌ನಲ್ಲಿ ಮಿಂಚಿದ ರಿಷಬ್ ಶೆಟ್ಟಿ! ಸ್ಪೈಡರ್ ಮ್ಯಾನ್ ಜೊತೆ ಡಿವೈನ್ ಸ್ಟಾರ್

Spider Man: ಸೋನಿ ಪಿಕ್ಚರ್ಸ್ ಎಂಟರ್‌ಟೈನ್‌ಮೆಂಟ್ ತನ್ನ ಅಧಿಕೃತ ಸೋಷಿಯಲ್ ಮೀಡಿಯಾ ಖಾತೆಗಳಲ್ಲಿ ರಿಷಬ್ ಶೆಟ್ಟಿ ಅಭಿನಯದ ವಿಶೇಷ ಪ್ರಚಾರದ ಪ್ರೋಮೋವನ್ನು ಹಂಚಿಕೊಂಡಿದೆ.‌ ಹಾಲಿವುಡ್ ದೈತ್ಯ ಸಂಸ್ಥೆ ಸೋನಿ ಪಿಕ್ಚರ್ಸ್ ಮುಂಬರುವ ‘ಸ್ಪೈಡರ್ ಮ್ಯಾನ್: ಬ್ರ್ಯಾಂಡ್ ನ್ಯೂ ಡೇ’ ಸಿನಿಮಾದ ವಿಶೇಷ ಪ್ರಚಾರಕ್ಕಾಗಿ ರಿಷಬ್ ಶೆಟ್ಟಿ ಅವರೊಂದಿಗೆ ಕೈಜೋಡಿಸಿದೆ.

ಸ್ಪೈಡರ್ ಮ್ಯಾನ್ ಜೊತೆ ಡಿವೈನ್ ಸ್ಟಾರ್!

ರಿಷಬ್‌ ಶೆಟ್ಟಿ -

Yashaswi Devadiga
Yashaswi Devadiga Jul 27, 2026 7:40 AM

‘ಕಾಂತಾರ’ ಖ್ಯಾತಿಯ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ (Rishab Shetty) ಇದೀಗ ಜಾಗತಿಕ ಮಟ್ಟದ ಅತಿದೊಡ್ಡ ಸೂಪರ್ ಹೀರೋ ಫ್ರಾಂಚೈಸಿ ‘ಸ್ಪೈಡರ್ ಮ್ಯಾನ್’ ಪ್ರಪಂಚಕ್ಕೆ ಕಾಲಿಡುವ ಮೂಲಕ ಕನ್ನಡ ಹಾಗೂ ಭಾರತೀಯ ಚಿತ್ರರಂಗ ಹೆಮ್ಮೆಪಡುವಂತೆ ಮಾಡಿದ್ದಾರೆ. ಹಾಲಿವುಡ್ ದೈತ್ಯ ಸಂಸ್ಥೆ ಸೋನಿ ಪಿಕ್ಚರ್ಸ್ ಮುಂಬರುವ ‘ಸ್ಪೈಡರ್ ಮ್ಯಾನ್: ಬ್ರ್ಯಾಂಡ್ ನ್ಯೂ ಡೇ’ (Spider-Man: Brand New Day) ಸಿನಿಮಾದ ವಿಶೇಷ ಪ್ರಚಾರಕ್ಕಾಗಿ ರಿಷಬ್ ಶೆಟ್ಟಿ ಅವರೊಂದಿಗೆ ಕೈಜೋಡಿಸಿದೆ. ಈ ಮೂಲಕ ಇಂತಹ ಬೃಹತ್ ಹಾಲಿವುಡ್ ಚಿತ್ರವೊಂದರ ಪ್ರಚಾರದ ಪ್ರಮುಖ ಭಾಗವಾಗಿ ಆಯ್ಕೆಯಾದ ಭಾರತದ ಮೊದಲ ನಟ ಎಂಬ ಐತಿಹಾಸಿಕ ಹೆಗ್ಗಳಿಕೆಗೆ ರಿಷಬ್ ಪಾತ್ರರಾಗಿದ್ದಾರೆ.

ಸೋನಿ ಪಿಕ್ಚರ್ಸ್‌ನಿಂದ ವಿಶೇಷ ಪ್ರೋಮೋ ಬಿಡುಗಡೆ

ಸೋನಿ ಪಿಕ್ಚರ್ಸ್ ಎಂಟರ್‌ಟೈನ್‌ಮೆಂಟ್ ತನ್ನ ಅಧಿಕೃತ ಸೋಷಿಯಲ್ ಮೀಡಿಯಾ ಖಾತೆಗಳಲ್ಲಿ ರಿಷಬ್ ಶೆಟ್ಟಿ ಅಭಿನಯದ ವಿಶೇಷ ಪ್ರಚಾರದ ಪ್ರೋಮೋವನ್ನು ಹಂಚಿಕೊಂಡಿದೆ.‌ "ರಿಷಬ್ ಶೆಟ್ಟಿ ಪೀಟರ್ ಪಾರ್ಕರ್ ಪ್ರಪಂಚಕ್ಕೆ ಪ್ರವೇಶಿಸುವುದನ್ನು ಯಾರೂ ನಿರೀಕ್ಷಿಸಿರಲಿಲ್ಲ..." ಎಂಬ ಶೀರ್ಷಿಕೆಯೊಂದಿಗೆ ಬಿಡುಗಡೆಯಾಗಿರುವ ಈ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.

ಇದನ್ನೂ ಓದಿ: Deepika Chikhalia: ಸಾಯಿ ಪಲ್ಲವಿ ನಟನೆಗೆ ಹಳೆಯ ಸೀತಾ ಪಾತ್ರಧಾರಿ ಮೆಚ್ಚುಗೆ!

'ಸ್ಪೈಡರ್ ಮ್ಯಾನ್: ನೋ ವೇ ಹೋಮ್' ಅಂತ್ಯದಲ್ಲಿ ಪೀಟರ್ ಪಾರ್ಕರ್ ತನ್ನ ನೆನಪನ್ನು ಜಗತ್ತೇ ಮರೆಯುವಂತೆ ಮಾಡುವ ಸನ್ನಿವೇಶ, ಆತನ ಒಂಟಿತನ ಮತ್ತು ‘ಸೂಪರ್-ಹೀರೋಯಿಸಂ’ ಪರಿಕಲ್ಪನೆಯನ್ನು ರಿಷಬ್‌ ಶೆಟ್ಟಿ ಈ ಪ್ರೋಮೋದಲ್ಲಿ ಅದ್ಭುತವಾಗಿ ವಿವರಿಸಿದ್ದಾರೆ.

ಏನಿದು 'ಬ್ರ್ಯಾಂಡ್ ನ್ಯೂ ಡೇ' ಕಥಾಹಂದರ?

ಈ ಚಿತ್ರವು 'ಸ್ಪೈಡರ್ ಮ್ಯಾನ್: ನೋ ವೇ ಹೋಮ್' ಸಿನಿಮಾದ ಮುಂದುವರಿದ ಭಾಗವಾಗಿದೆ.‌ ಪೀಟರ್ ಪಾರ್ಕರ್ (ಟಾಮ್ ಹಾಲ್ಯಾಂಡ್) ತನ್ನ ಆಪ್ತ ಸ್ನೇಹಿತ ನೆಡ್ (ಜೇಕಬ್ ಬಾಟಲಾನ್) ಹಾಗೂ ಪ್ರಿಯತಮೆ ಎಂಜೆ (ಜೆಂಡಾಯಾ) ಸೇರಿದಂತೆ ಇಡೀ ಜಗತ್ತಿನ ನೆನಪಿನಿಂದ ದೂರಾಗುತ್ತಾನೆ. ನ್ಯೂಯಾರ್ಕ್ ನಗರದಲ್ಲಿ ಸಂಪೂರ್ಣ ಒಂಟಿಯಾಗಿ, ತನ್ನ ನಿಜವಾದ ಗುರುತನ್ನು ಯಾರಿಗೂ ತಿಳಿಸದೆ, ಪೂರ್ಣಾವಧಿ ಸ್ಪೈಡರ್ ಮ್ಯಾನ್ ಆಗಿ ಅಪರಾಧಗಳ ವಿರುದ್ಧ ಹೋರಾಡುವ ರೋಮಾಂಚನಕಾರಿ ಕಥೆಯನ್ನು ಈ ಸಿನಿಮಾ ಹೊಂದಿದೆ.

ಜುಲೈ 30ಕ್ಕೆ ಜಾಗತಿಕ ಮಟ್ಟದಲ್ಲಿ ಅದ್ಧೂರಿ ರಿಲೀಸ್

ಚಿತ್ರ ಬಿಡುಗಡೆಗೆ ಇನ್ನು ಕೇವಲ ಮೂರು ದಿನಗಳು ಬಾಕಿ ಇರುವಂತೆಯೇ ಭಾರತದಲ್ಲಿ ಟಿಕೆಟ್ ಅಡ್ವಾನ್ಸ್ ಬುಕಿಂಗ್‌ನಲ್ಲಿ 'ಸ್ಪೈಡರ್ ಮ್ಯಾನ್: ಬ್ರ್ಯಾಂಡ್ ನ್ಯೂ ಡೇ' ಹೊಸ ದಾಖಲೆ ಬರೆಯುತ್ತಿದೆ.

ಇದನ್ನೂ ಓದಿ: Nandagokula Serial: 300 ಸಂಚಿಕೆ ಪೂರೈಸಿದ ‘ನಂದಗೋಕುಲ’; ನಿರ್ದೇಶಕನ ಪೋಸ್ಟ್‌ಗೆ ವೀಕ್ಷಕರ ಮೆಚ್ಚುಗೆ

ಟಾಮ್ ಹಾಲ್ಯಾಂಡ್ ಅಭಿನಯದ ಈ ಸಿನಿಮಾ ಜುಲೈ 30 ರಂದು ವಿಶ್ವಾದ್ಯಂತ ಇಂಗ್ಲಿಷ್, ಕನ್ನಡ, ಹಿಂದಿ, ತಮಿಳು, ತೆಲುಗು ಮತ್ತು ಮಲಯಾಳಂ ಸೇರಿದಂತೆ ಪ್ರಮುಖ ಭಾಷೆಗಳಲ್ಲಿ ಅದ್ಧೂರಿಯಾಗಿ ಚಿತ್ರಮಂದಿರಗಳಿಗೆ ಅಪ್ಪಳಿಸಲಿದೆ.