ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

40ನೇ ವಯಸ್ಸಿನಲ್ಲಿ ಮತ್ತೆ ತಾಯಿಯಾಗುತ್ತಿದ್ದಾರೆ ಸೋನಮ್‌ ಕಪೂರ್; ಅದ್ದೂರಿಯಾಗಿ ನಡೆದ ಸೀಮಂತ ಶಾಸ್ತ್ರ

ನಟಿ ಸೋನಮ್‌ ಕಪೂರ್‌ ಅವರು 40ನೇ ವಯಸ್ಸಿನಲ್ಲಿ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಆ ಹಿನ್ನಲೆಯಲ್ಲಿ ಫೆಬ್ರವರಿ 8ರಂದು ಮುಂಬೈನಲ್ಲಿ ಅದ್ದೂರಿ ಸೀಮಂತ ಶಾಸ್ತ್ರ ಮಾಡಿಸಿಕೊಂಡಿದ್ದಾರೆ. ಪತಿ ಆನಂದ್ ಅಹುಜಾ ಮತ್ತು ಕಪೂರ್ ಕುಟುಂಬದ ಸದಸ್ಯರ ಸಮ್ಮುಖದಲ್ಲಿ ನಡೆದ ಈ ಸಮಾರಂಭಕ್ಕೆ ಕರೀನಾ ಕಪೂರ್ ಸೇರಿದಂತೆ ಹಲವು ಗಣ್ಯರು ಆಗಮಿಸಿ ಶುಭ ಹಾರೈಸಿದ್ದಾರೆ.

ಬಾಲಿವುಡ್ ನಟಿ ಸೋನಮ್ ಕಪೂರ್ ಅವರು ತಮ್ಮ ಅಭಿಮಾನಿಗಳಿಗೆ ಗುಡ್‌ ನ್ಯೂಸ್‌ ನೀಡಿದ್ದಾರೆ. ಅವರೀಗ ಎರಡನೇ ಬಾರಿಗೆ ತಾಯಿ ಆಗುತ್ತಿದ್ದಾರೆ. ಹಾಗಾಗಿ, ತಮ್ಮದೇ ಆದ ವಿಶಿಷ್ಟ ಶೈಲಿಯಲ್ಲಿ, ಸರಳ ಮತ್ತು ಸುಂದರವಾಗಿ ಸೀಮಂತ ಕಾರ್ಯಕ್ರಮವನ್ನು ಆಚರಿಸಿಕೊಂಡಿದ್ದಾರೆ. ಪತಿ ಆನಂದ್ ಅಹುಜಾ ಅವರೊಂದಿಗೆ ಎರಡನೇ ಮಗುವಿನ ನಿರೀಕ್ಷೆಯಲ್ಲಿರುವ ಸೋನಮ್‌, ಭಾನುವಾರ (ಫೆ.8) ತಮ್ಮ ಮುಂಬೈ ನಿವಾಸದಲ್ಲಿ ಆಪ್ತ ಸ್ನೇಹಿತರು, ಕುಟುಂಬಸ್ಥರು ಮತ್ತು ಚಿತ್ರರಂಗದ ಪ್ರಮುಖ ಗಣ್ಯರ ಸಮ್ಮುಖದಲ್ಲಿ ಖಾಸಗಿಯಾಗಿ ಸೀಮಂತ ಸಮಾರಂಭವನ್ನು ಆಯೋಜಿಸಿದ್ದರು.

ಸೋನಮ್ ಅವರ ಅಭಿರುಚಿಗೆ ತಕ್ಕಂತೆ, ಯಾವುದೇ ಆಡಂಬರವಿಲ್ಲದೆ, ಅತ್ಯಂತ ಅಚ್ಚುಕಟ್ಟಾಗಿ ಮತ್ತು ಅರ್ಥಪೂರ್ಣವಾಗಿ ಈ ಕಾರ್ಯಕ್ರಮ ನಡೆಯಿತು. ಸಂಪ್ರದಾಯ ಮತ್ತು ಆಧುನಿಕತೆಯ ಸಮ್ಮಿಲನದಂತೆ ಅವರ ಸೀಮಂತ ಸಂಭ್ರಮ ಕಂಗೊಳಿಸಿದ್ದು ವಿಶೇಷ.

Sonam Kapoor : 2ನೇ ಮಗುವಿನ ನಿರೀಕ್ಷೆಯಲ್ಲಿ ಬಾಲಿವುಡ್ ನಟಿ ಸೋನಮ್ ಕಪೂರ್

ಸೀಮಂತ ಶಾಸ್ತ್ರಕ್ಕಾಗಿ ಸೋನಮ್ ಕಪೂರ್‌ ಅವರು ವಿಭಿನ್ನ ಹಾಗೂ ಸುಂದರವಾದ ವಸ್ತ್ರ ವಿನ್ಯಾಸ ಮಾಡಿಸಿಕೊಂಡಿದ್ದರು. ನಿರಿಗೆಗಳಿಲ್ಲದೆ, ಸರಳವಾಗಿ ದುಪಟ್ಟಾ ಧರಿಸುವ ಮೂಲಕ ಆರಾಮದಾಯಕ ಫ್ಯಾಷನ್‌ಗೆ ಮೊದಲ ಆದ್ಯತೆ ನೀಡಿದ್ದರು. ಸೋನಮ್ ಅವರ ಮೇಕಪ್ ಮತ್ತು ಸ್ಟೈಲಿಂಗ್ ಮಿತವಾಗಿದ್ದರೂ ಆಕರ್ಷಕವಾಗಿತ್ತು.

ಯಾರೆಲ್ಲಾ ಬಂದಿದ್ದರು?

ಬಾಲಿವುಡ್‌ನ ಅನೇಕ ಗಣ್ಯರು ಸಮಾರಂಭದಲ್ಲಿ ಭಾಗವಹಿಸಿದ್ದರು. ಕರೀನಾ ಕಪೂರ್ ಖಾನ್, ಭೂಮಿ ಪೆಡ್ನೇಕರ್, ಶಬಾನಾ ಅಜ್ಮಿ, ಮಸಾಬಾ ಗುಪ್ತ, ಅನುಪಮ್‌ ಖೇರ್‌ ಸೇರಿದಂತೆ ಕಪೂರ್ ಕುಟುಂಬದ ಅನಿಲ್ ಕಪೂರ್, ಖುಷಿ ಕಪೂರ್, ಅನ್ಶುಲಾ, ಅರ್ಜುನ್‌ ಕಪೂರ್‌ ಮತ್ತು ಮಹೀಪ್ ಕಪೂರ್ ಮುಂತಾದವರು ಸೋನಮ್‌ ಉಪಸ್ಥಿತರಿದ್ದರು.

ಸೋನಮ್ ಕಪೂರ್ ಮದುವೆ ಆಗಿದ್ದು ಯಾವಾಗ?

ಬಾಲಿವುಡ್‌ ನಟ ಅನಿಲ್‌ ಕಪೂರ್‌ ಪುತ್ನಿ ಸೋನಮ್‌ ಕಪೂರ್‌ ಅವರು 2018ರ ಮೇ ತಿಂಗಳಲ್ಲಿ ದಾಂಪತ್ಯ ಬದುಕಿಗೆ ಕಾಲಿಟ್ಟಿದ್ದರು. ಉದ್ಯಮಿ ಆನಂದ್‌ ಅಹುಜಾ ಅವರ ಜೊತೆಗೆ ದಾಂಪತ್ಯ ಬದುಕಿಗೆ ಕಾಲಿಟ್ಟದ್ದ ಸೋನಮ್‌, 2022ರ ಆಗಸ್ಟ್‌ 20ರಂದು ಗಂಡು ಮಗುವಿಗೆ ಜನ್ಮದ ನೀಡಿದ್ದರು. ಆ ಮಗುವಿಗೆ ವಾಯು ಎಂದು ಹೆಸರಿಡಲಾಗಿದೆ. ಇದೀಗ 40ನೇ ವಯಸ್ಸಿನಲ್ಲಿ ಎರಡನೇ ಬಾರಿಗೆ ಅವರು ತಾಯಿ ಆಗುತ್ತಿದ್ದಾರೆ. ಸದ್ಯ ಅನಿಲ್‌ ಕಪೂರ್‌ ಕುಟುಂಬ ಮಗುವಿನ ಆಗಮನಕ್ಕಾಗಿ ಕಾದಿದೆ.