ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Anil Kapoor: 43 ವರ್ಷ ಪೂರೈಸಿದ 'ಪಲ್ಲವಿ ಅನು ಪಲ್ಲವಿ': ನೆನಪಿಸಿಕೊಂಡ ನಟ ಅನಿಲ್ ಕಪೂರ್, ರಿಷಬ್‌ ಟ್ವೀಟ್‌ ಏನು?

Rishab Shetty: ಬಾಲಿವುಡ್ ಚಿತ್ರರಂಗದಲ್ಲಿ ದೊಡ್ಡ ಹೆಸರು ಮಾಡಿರುವ ನಟ ಅನಿಲ್ ಕಪೂರ್ ಎಂಬುದು ಬಹಳಷ್ಟು ಜನಕ್ಕೆ ಗೊತ್ತು. ಬೇಟಾ, ಜುದಾಯಿ, ರೂಪ್‌ ಕಿ ರಾಣಿ ಚೋರೋಂಕಾ ರಾಜಾ, ನಾಯಕ್, ಮಿಸ್ಟರ್ ಇಂಡಿಯಾ, ವೀರಾಸತ್ ಹಾಗೂ ಕರ್ಮ, ಹೀಗೆ ಅನೇಕ ಸಿನಿಮಾಗಳ ಮೂಲಕ ಖ್ಯಾತಿ ಗಳಿಸಿದವರು. ಅನಿಲ್ ಕಪೂರ್ ಅವರು ಅಭಿನಯಿಸಿದ ಏಕೈಕ ಕನ್ನಡ ಸಿನಿಮಾ ‘ಪಲ್ಲವಿ ಅನುಪಲ್ಲವಿʼ . ಈ ಸಿನಿಮಾ ತೆರೆಕಂಡು ಈಗ 43 ವರ್ಷಗಳು ಕಳೆದಿವೆ.

43 ವರ್ಷ ಪೂರೈಸಿದ 'ಪಲ್ಲವಿ ಅನು ಪಲ್ಲವಿ'; ರಿಷಬ್‌ ಟ್ವೀಟ್‌ ಏನು?

ಅನಿಲ್‌ ಕಪೂರ್‌ -

Yashaswi Devadiga
Yashaswi Devadiga Jan 7, 2026 6:02 PM

ಬಾಲಿವುಡ್ ಚಿತ್ರರಂಗದಲ್ಲಿ (Bollywood Cinema) ದೊಡ್ಡ ಹೆಸರು ಮಾಡಿರುವ ನಟ ಅನಿಲ್ ಕಪೂರ್ (Anil Kapoor) . ಬೇಟಾ, ಜುದಾಯಿ, ರೂಪ್‌ ಕಿ ರಾಣಿ ಚೋರೋಂಕಾ ರಾಜಾ, ನಾಯಕ್, ಮಿಸ್ಟರ್ ಇಂಡಿಯಾ, ವೀರಾಸತ್ ಹಾಗೂ ಕರ್ಮ, ಹೀಗೆ ಅನೇಕ ಸಿನಿಮಾಗಳ ಮೂಲಕ ಖ್ಯಾತಿ ಗಳಿಸಿದವರು. ಅನಿಲ್ ಕಪೂರ್ ಅವರು ಅಭಿನಯಿಸಿದ ಏಕೈಕ ಕನ್ನಡ ಸಿನಿಮಾ ‘ಪಲ್ಲವಿ ಅನುಪಲ್ಲವಿʼ (Pallavi Anupallavi). ಈ ಸಿನಿಮಾ ತೆರೆಕಂಡು ಈಗ 43 ವರ್ಷಗಳು ಕಳೆದಿವೆ. ಅದನ್ನು ಈಗ ಅನಿಲ್ ಕಪೂರ್ ನೆನಪು ಮಾಡಿಕೊಂಡಿದ್ದಾರೆ. ಇದೀಗ ರಿಷಬ್‌ (Rishab Shetty) ಅವರು ಈ ಬಗ್ಗೆಯೂ ಬರೆದುಕೊಂಡಿದ್ದಾರೆ.

ಅನಿಲ್ ಕಪೂರ್ ಟ್ವೀಟ್‌ ಏನು?

43 ವರ್ಷಗಳ ಹಿಂದೆ, ನಾನು ಕನ್ನಡ ಚಿತ್ರರಂಗಕ್ಕೆ ನನ್ನ ಮೊದಲ ಹೆಜ್ಜೆ ಇಟ್ಟಿದ್ದೆ. ಅಂದಿನಿಂದ ಇಲ್ಲಿಯವರೆಗೆ, ಕನ್ನಡ ಚಿತ್ರರಂಗವು ಜಾಗತಿಕವಾಗಿ ಭಾರತೀಯ ಸಿನಿಮಾವನ್ನು ಹೇಗೆ ಮರು ವ್ಯಾಖ್ಯಾನಿಸುತ್ತಿದೆ ಮತ್ತು ಅಭಿವೃದ್ಧಿ ಹೊಂದುತ್ತಿದೆ ಎಂಬುದನ್ನು ನೋಡುವುದು ಅದ್ಭುತವಾಗಿದೆ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: Bigg Boss Kannada 12: ʻಮುಖವಾಡ ಬೇಗ ಬದಲಾಗತ್ತೆʼ; ಅಶ್ವಿನಿಗೆ ರಕ್ಷಿತಾ ಭರ್ಜರಿ ಕೌಂಟರ್‌!



ರಿಷಬ್‌ ಟ್ವೀಟ್‌ ಏನು?

ಈ ಟ್ವೀಟ್‌ವನ್ನು ಹಂಚಿಕೊಂಡ ರಿಷಬ್‌, ನಿಮ್ಮ ಬಗ್ಗೆ ನಮಗೆ ತುಂಬಾ ಹೆಮ್ಮೆ ಇದೆ ಸರ್! ನಿಮ್ಮ ಪ್ರಯಾಣ ಇಲ್ಲಿಂದ ಪ್ರಾರಂಭವಾಯಿತು, ಮತ್ತು ಇಂದು ನೀವು ಭಾರತೀಯ ಚಿತ್ರರಂಗದ ನಿಜವಾದ ದಂತಕಥೆಯಾಗಿ ನಿಂತಿದ್ದೀರಿ. ನಿಮ್ಮನ್ನು ಭೇಟಿಯಾಗಲು ಮತ್ತು ಅಂತಹ ಅದ್ಭುತ ಸಂಭಾಷಣೆ ನಡೆಸಲು ನನಗೆ ಸಂಪೂರ್ಣ ಗೌರವವಾಗಿದೆ. ಪಲ್ಲವಿ ಅನುಪಲ್ಲವಿ ನನ್ನ ನೆಚ್ಚಿನ ಚಿತ್ರಗಳಲ್ಲಿ ಒಂದಾಗಿದೆ ಎಂದು ಬರೆದುಕೊಂಡಿದ್ದಾರೆ.

ರಾಜ್ಯ ಚಲನಚಿತ್ರ ಪ್ರಶಸ್ತಿ

ಪಲ್ಲವಿ ಅನು ಪಲ್ಲವಿ ಚಿತ್ರವು ಹಲವಾರು ಕಾರಣಗಳಿಗಾಗಿ ವಿಶಿಷ್ಟವಾಗಿದ್ದು, ಈ ಚಿತ್ರದ ಮೂಲಕ ಮಣಿರತ್ನಂ ಅವರು ನಿರ್ದೇಶಕರಾಗಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು. ಇಂದು ದೇಶದ ಅತ್ಯುತ್ತಮ ಚಲನಚಿತ್ರ ನಿರ್ಮಾಪಕರು ಮತ್ತು ನಿರ್ದೇಶಕರಲ್ಲಿ ಒಬ್ಬರಾಗಿದ್ದಾರೆ.

Rishab shetty

1983ರಲ್ಲಿ ಬಿಡುಗಡೆಯಾದ ಈ ಚಿತ್ರದಲ್ಲಿ ಅನಿಲ್ ಕಪೂರ್, ಲಕ್ಷ್ಮಿ ಮತ್ತು ಕಿರಣ್ ವೈರಾಲೆ ಮುಖ್ಯ ಭೂಮಿಕೆಯಲ್ಲಿದ್ದರು. ಸಿನಿಮಾ ನಿರ್ಮಾಣದಲ್ಲಿ ಯಾವುದೇ ತರಬೇತಿ ಪಡೆದಿಲ್ಲದ ಮಣಿರತ್ನಂ ಅವರಿಗೆ ಅತ್ಯುತ್ತಮ ಚಿತ್ರಕಥೆಗಾಗಿ ಮತ್ತು ಅತ್ಯುತ್ತಮ ಛಾಯಾಗ್ರಹಣಕ್ಕಾಗಿ ಬಾಲು ಮಹೇಂದ್ರ ಅವರಿಗೆ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ಲಭಿಸಿತು.

ಇದನ್ನೂ ಓದಿ: Bigg Boss Kannada 12: ಬಿಗ್ ಬಾಸ್‌ ಫಿನಾಲೆ ಯಾವಾಗ? ಫಿನಾಲೆಗೆ ಎಂಟ್ರಿ ಕೊಡೋದು ಎಷ್ಟು ಸ್ಪರ್ಧಿಗಳು?

ಈ ಚಿತ್ರಕ್ಕೆ ತಮಿಳು ಚಿತ್ರರಂಗದ ಮತ್ತೊಬ್ಬ ದಿಗ್ಗಜ ಬಾಲು ಮಹೇಂದ್ರ ಅವರ ಛಾಯಾಗ್ರಹಣವಿದೆ. ಅಲ್ಲದೆ, ಬಿ ಲೆನಿನ್ ಅವರ ಸಂಕಲನವಿದೆ. ಈ ಚಿತ್ರಕ್ಕೆ ಇಳಯರಾಜ ಅವರ ಸಂಗೀತ ಸಂಯೋಜನೆಯಿತ್ತು. ಈಗಾಗಲೇ ‘ಟಾಕ್ಸಿಕ್’ ಸಿನಿಮಾದಲ್ಲಿ ಅನಿಲ್ ಕಪೂರ್ ನಟಿಸಿರಬಹುದು ಎಂದು ಕೆಲಸ ಅಭಿಮಾನಿಗಳು ಊಹಿಸಿದ್ದಾರೆ.