ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ʻರಕ್ಕಸಪುರದೋಳ್‌ʼ ಹೀರೋ ರಾಜ್‌ ಬಿ ಶೆಟ್ಟಿಗೆ ಪ್ರೀತಿಯಿಂದ ಪತ್ರ ಬರೆದ ವಿಲನ್‌ ಅನಿರುದ್ಧ್‌ ಭಟ್‌

Rakkasapuradol movie: ʻರಕ್ಕಸಪುರದೋಳ್‌ʼ ಚಿತ್ರದಲ್ಲಿ ನಾಯಕನಾಗಿ ರಾಜ್ ಬಿ ಶೆಟ್ಟಿ ಮಿಂಚಿದ್ದರೆ, ವಿಲನ್ ಆಗಿ ಅನಿರುದ್ಧ್ ಭಟ್ ಅಬ್ಬರಿಸಿದ್ದಾರೆ. ತಮಗೆ ಸಿಕ್ಕ ಭರ್ಜರಿ ಮೆಚ್ಚುಗೆಯ ಹಿಂದೆ ರಾಜ್ ಬಿ ಶೆಟ್ಟಿ ಅವರ ದೊಡ್ಡ ಕೊಡುಗೆಯು ಇದೆ ಎಂದು ಅನಿರುದ್ಧ್ ಭಟ್ ಪತ್ರದ ಮೂಲಕ ಕೃತಜ್ಞತೆ ಸಲ್ಲಿಸಿದ್ದಾರೆ. "ಸಿನಿಮಾ ಯಾರಿಂದ ಬೇಕಾದರೂ ಕಲಿಯಬಹುದು, ಆದರೆ ಮನುಷ್ಯತ್ವವನ್ನು ರಾಜ್ ಸರ್ ಅವರಿಂದ ಕಲಿಯಬೇಕು" ಎಂದಿದ್ದಾರೆ.

‌ಈಚೆಗಷ್ಟೇ ತೆರೆಕಂಡು ಉತ್ತಮ ಪ್ರತಿಕ್ರಿಯ ಪಡೆದುಕೊಳ್ಳುತ್ತಿರುವ ಸಿನಿಮಾ ʻರಕ್ಕಸಪುರದೋಳ್‌ʼ. ಈ ಸಿನಿಮಾದಲ್ಲಿ ರಾಜ್‌ ಬಿ ಶೆಟ್ಟಿ ಹೀರೋ ಆಗಿ ಮಿಂಚಿದ್ದಾರೆ. ಜೊತೆಗೆ ವಿಲನ್‌ ಪಾತ್ರ ಮಾಡಿರುವ ನಟ ಅನಿರುದ್ಧ ಭಟ್‌ ಅವರು ಕೂಡ ಎಲ್ಲರಿಂದ ಭಾರಿ ಪ್ರಶಂಸೆ ಗಿಟ್ಟಿಸುತ್ತಿದ್ದಾರೆ. ಇದೀಗ ತಮಗೆ ಸಿಕ್ಕಿರುವ ಮೆಚ್ಚುಗೆಗೆ ರಾಜ್‌ ಬಿ ಶೆಟ್ಟಿ ಅವರು ಕೂಡ ಎಷ್ಟು ಕಾರಣರು ಎಂಬುದನ್ನು ನಟ ಅನಿರುದ್ಧ್‌ ಭಟ್‌ ಅವರು ಪತ್ರದ ಮೂಲಕ ಬರೆದುಕೊಂಡಿದ್ದಾರೆ.

ಅನಿರುದ್ಧ್‌ ಭಟ್‌ ಬರೆದ ಪತ್ರದಲ್ಲಿ ಏನಿದೆ?

"ಪ್ರೀತಿಯ ರಾಜ್ ಸರ್.. ಇದು ಪತ್ರ ಬರೆಯುವಾಗ ಶುರು ಮಾಡ್ತೀವಲ್ಲ… 'ಪ್ರೀತಿಯ....' ಅದಲ್ಲ. ಕಳೆದ ಒಂದೂವರೆ ಎರಡು ವರ್ಷದಲ್ಲಿ ಇವರೊಡನೆ ಕಳೆದ ಒಂದಷ್ಟು ಕ್ಷಣಗಳನ್ನು ಮೆಲುಕು ಹಾಕುತ್ತಿದ್ದರೆ, ಬರುವ ಭಾವನೆ ಪ್ರೀತಿ ಅಷ್ಟೇ.. ರಾಜ್ ಸರ್ ಅಂದರೆ ಪ್ರೀತಿ. ಹಾಗಾಗಿ, ಪ್ರೀತಿಯ ರಾಜ್ ಸರ್.. ನಿಮಗೆ ಪರ್ಸನಲ್ ಆಗಿ ಇದನ್ನ ಹೇಳ್ತಿದ್ದೆ..‌ ಆದ್ರೆ ಎಲ್ಲರಿಗೂ ಗೊತ್ತಾಗ್ಲಿ ಅಂತ ಇಲ್ಲಿ ಹೇಳ್ತಾ ಇದೀನಿ. ಥ್ಯಾಂಕ್ಯೂ, ನಾನು ಮೊದಲಿಗೆ ಹೆದರಿದ್ದೆ. ಈ ಪಾತ್ರ ಮಾಡೋದಕ್ಕೆ.. ನನ್ನ ಕೈಯಲ್ಲಿ ಆಗತ್ತ ಇದು ಅಂತ ಅನ್ಕೊಂಡಿದ್ದೆ. ʻನೀನ್ ಮಾಡ್ತಿಯಾ ಮಗ, ಮಾಡುʼ ಅಂತ ನೀವು ಅಂದಮೇಲೆನೆ ನಂಗೆ ನನ್ನ ಮೇಲೆ ಒಂದು ನಂಬಿಕೆ ಬಂದಿದ್ದು.

Rakkasapuradhol Official Trailer: ಮಾಸ್ ಪೊಲೀಸ್ ಅಧಿಕಾರಿಯಾಗಿ ಬಂದ್ರು ರಾಜ್ ಬಿ ಶೆಟ್ರು ! ಹೇಗಿದೆ ರಕ್ಕಸಪುರದೋಳ್ ಟ್ರೈಲರ್‌?

ಅಣ್ಣನ ಸ್ಥಾನದಲ್ಲಿ ನಿಂತು ಸಮಾಧಾನ ಮಾಡಿದ್ದೀರಾ

ಈ ಪಾತ್ರ ಮಾಡಿದ್ದು, ಶೂಟಿಂಗ್ ಪೂರ್ತಿ ನನ್ನಂತಹ ಹೊಸಬನನ್ನು ತಾಳ್ಮೆಯಿಂದ ಸಹಿಸಿಕೊಂಡು, ತುಂಬಾ ಪ್ರೀತಿಯಿಂದ ತಿದ್ದಿದ್ದೀರ. ಜೊತೆಯಲ್ಲಿ ಕೂರಿಸಿಕೊಂಡು ಊಟ ಮಾಡಿಸಿದ್ದೀರ. ಕ್ಲೈಮ್ಯಾಕ್ಸ್‌ ಶೂಟಿಂಗ್ ರಾತ್ರಿ ‌ ಪ್ಯಾಕಪ್‌ ಆದ್ಮೇಲೆ , ಸರಿಯಾಗಿ ಮಾಡಿಲ್ಲ ನಾನು ಅಂತ ಅಳುತ್ತಾ ನಡ್ಕೊಂಡು ಹೋಗ್ತಿದ್ದ ನಂಗೆ, ಒಬ್ಬ ಅಣ್ಣನ ಸ್ಥಾನದಲ್ಲಿ ನಿಂತು, ಅಪ್ಪಿಕೊಂಡು ಸಮಾಧಾನ ಮಾಡಿದ್ದೀರಾ.. ಎಷ್ಟ್ ಪ್ರೀತಿ ಇದೆ ಗುರು ಇವರಲ್ಲಿ ಅಂತ ನಾನು ಅಂದ್ಕೊಳ್ತಾ ಇರೋವಾಗ, ʻಇನ್ನೂ ಬೇಕಾದಷ್ಟು ಪ್ರೀತಿ ಇದೆ ನೋಡುʼ ಅನ್ನೋ ಥರ, ಸಿನಿಮಾ ರಿಲೀಸ್ ಆದ್ಮೇಲೆ ನನ್ನನ್ನ ಜನ ಗುರುತಿಸೋ ಹಾಗೆ ಮಾಡಿದ್ದೀರಾ. ‌

ಒಳ್ಳೆಯ ಗುಣಗಳನ್ನು ನಿಮ್ಮಿಂದ ಕಲಿತೆ

ನನ್ನ ಖುಷಿಯನ್ನ ನಿಮ್ಮ ಖುಷಿ ಅನ್ನೋ ಥರ, ನನ್ನನ್ನ ಮುಂದೆ ಕಳಿಸಿ ನೀವು ಹಿಂದೆ ನಿಂತಿದ್ದೀರ.. ಹೇಳ್ತಾ ಹೋದರೆ ಸಾಕಾಗಲ್ಲ ಜಾಗ ಇಲ್ಲಿ… ಕೊನೆಯದಾಗಿ ಇಷ್ಟೇ ಹೇಳ್ತಿನಿ ಸರ್… ಸಿನಿಮಾ ಯಾರಿಂದ ಬೇಕಾದರೂ ಕಲಿಯಬಹುದು.. ಬಟ್‌ ಒಬ್ಬ ಒಳ್ಳೆಯ ಮನುಷ್ಯನಾಗುವುದು, ಒಳ್ಳೆಯ ಗುಣಗಳನ್ನು ಕಲಿಯುವುದು, ನಿಷ್ಕಲ್ಮಶವಾಗಿರುವುದು, "ಪ್ರೀತಿಯೇ ಆಗಿರುವುದು" ಹೇಗೆ ಅನ್ನೋದು, ನಿಮ್ಮಿಂದ ಸ್ವಲ್ಪ ಕಲಿತೆ… ಇನ್ನೂ ಕಲಿಯಬೇಕೆಂಬ ಹಂಬಲ… ನೋಡೋಣ… ಅಷ್ಟೇ ಸರ್...‌ ಲವ್‌ ಯೂ..