ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Rakkasapuradhol Official Trailer: ಮಾಸ್ ಪೊಲೀಸ್ ಅಧಿಕಾರಿಯಾಗಿ ಬಂದ್ರು ರಾಜ್ ಬಿ ಶೆಟ್ರು ! ಹೇಗಿದೆ ರಕ್ಕಸಪುರದೋಳ್ ಟ್ರೈಲರ್‌?

Raj B shetty: ರಾಜ್ ಬಿ ಶೆಟ್ಟಿ ಭಿನ್ನ ಭಿನ್ನ ಪಾತ್ರಗಳ ಮೂಲಕ ಮಿಂಚುತ್ತಿದ್ದಾರೆ. ಹೀರೋ, ಕಾಮಿಡಿಯನ್‌ ಸೇರಿದಂತೆ ಅನೇಕ ಪಾತ್ರಗಳಲ್ಲಿ ಮಿಂಚಿದ್ದಾರೆ, ‘ಲ್ಯಾಂಡ್​​ಲಾರ್ಡ್’ ಸಿನಿಮಾನಲ್ಲಿ ಖಡಕ್ ವಿಲನ್ ಆಗಿ ಗಮನ ಸೆಳೆದ ರಾಜ್ ಬಿ ಶೆಟ್ಟಿ ಈಗ ಸಖತ್ ಮಾಸ್ ಪೊಲೀಸ್ ಅಧಿಕಾರಿಯಾಗಿ ಪ್ರೇಕ್ಷಕರೆದುರು ಬಂದಿದ್ದಾರೆ. ‘ರಕ್ಕಸಪುರದೊಳ್’ ಸಿನಿಮಾ ಟ್ರೈಲರ್‌ ಔಟ್‌ ಆಗಿದೆ. ಸಿನಿಮಾದಲ್ಲಿ ಅವರದ್ದು ಸಖತ್ ಮಾಸ್ ಪೊಲೀಸ್ ಅಧಿಕಾರಿಯ ಪಾತ್ರ. ಹೇಗಿದೆ ಟ್ರೈಲರ್‌?

ಮಾಸ್ ಪೊಲೀಸ್ ಅಧಿಕಾರಿಯಾಗಿ ಬಂದ್ರು ರಾಜ್ ಬಿ ಶೆಟ್ರು !

ರಾಜ್‌ ಬಿ ಶೆಟ್ಟಿ -

Yashaswi Devadiga
Yashaswi Devadiga Jan 29, 2026 8:40 PM

ರಾಜ್ ಬಿ ಶೆಟ್ಟಿ (Raj B Shetty) ಭಿನ್ನ ಭಿನ್ನ ಪಾತ್ರಗಳ ಮೂಲಕ ಮಿಂಚುತ್ತಿದ್ದಾರೆ. ಹೀರೋ, ಕಾಮಿಡಿಯನ್‌ ಸೇರಿದಂತೆ ಅನೇಕ ಪಾತ್ರಗಳಲ್ಲಿ ಮಿಂಚಿದ್ದಾರೆ, ‘ಲ್ಯಾಂಡ್​​ಲಾರ್ಡ್’ ಸಿನಿಮಾನಲ್ಲಿ ಖಡಕ್ ವಿಲನ್ ಆಗಿ ಗಮನ ಸೆಳೆದ ರಾಜ್ ಬಿ ಶೆಟ್ಟಿ ಈಗ ಸಖತ್ ಮಾಸ್ ಪೊಲೀಸ್ (Police) ಅಧಿಕಾರಿಯಾಗಿ ಪ್ರೇಕ್ಷಕರೆದುರು ಬಂದಿದ್ದಾರೆ. ‘ರಕ್ಕಸಪುರದೊಳ್’ ಸಿನಿಮಾ (Rakkasapuradhol Official Trailer) ಟ್ರೈಲರ್‌ ಔಟ್‌ ಆಗಿದೆ. ಸಿನಿಮಾದಲ್ಲಿ ಅವರದ್ದು ಸಖತ್ ಮಾಸ್ ಪೊಲೀಸ್ ಅಧಿಕಾರಿಯ ಪಾತ್ರ. ಹೇಗಿದೆ ಟ್ರೈಲರ್‌.

ಹೇಗಿದೆ ಟ್ರೈಲರ್‌?

‘ರಕ್ಕಸಪುರದೊಳ್’ ಸಿನಿಮಾದ ಹೆಸರೇ ಹೇಳುವಂತೆ ಇದು ಒಂದು ಊರಿನ ಕತೆ,. ‘ರಕ್ಕಸಪುರದೊಳ್’ ಸಿನಿಮಾ ಸಸ್ಪೆನ್ಸ್ ಥ್ರಿಲ್ಲರ್ ಜೊತೆಗೆ ಆಕ್ಷನ್ ಮತ್ತು ಕಾಮಿಡಿ ಕೂಡ ಇದೆ. ಸಖತ್ ಆಕ್ಷನ್ ದೃಶ್ಯಗಳ ತುಣುಕುಗಳನ್ನು ತೋರಿಸಲಾಗಿದೆ.

ಇದನ್ನೂ ಓದಿ: ಡಾಲಿ ಪಿಕ್ಚರ್ಸ್‌ನ 6ನೇ ಸಿನಿಮಾ ಘೋಷಿಸಿದ ನಟ ಧನಂಜಯ; ʻಹೆಗ್ಗಣ ಮುದ್ದುʼ ಸಿನಿಮಾಗೆ ಅರುಣ್‌ ಸಾಗರ್‌ ಪುತ್ರಿ ನಾಯಕಿ

ಕೊಲೆಗಳ ತನಿಖೆಯನ್ನು ನಡೆಸಲು ಬರುವ ಪೊಲೀಸ್ ಅಧಿಕಾರಿ ರಾಜ್ ಬಿ ಶೆಟ್ಟಿ. ಆದ್ರೆ ಅವರನ್ನ ನೋಡಿ ಪೊಲೀಸ್‌ ಹೌದಾ ಅನ್ನೋದೇ ಅಲ್ಲಿ ಇರೋರಿಗೆ ಅನುಮಾನ. ಸಮವಸ್ತ್ರ ಧರಿಸಿಲ್ಲ. ಗಡ್ಡ ಬಿಟ್ಟ, ಸದಾ ಕುಡಿಯುವ ರೀತಿ ಕಾಣಿಸಿಕೊಂಡಿದ್ದಾರೆ.

ರಿಲೀಸ್‌ ಯಾವಾಗ?

ಸಿನಿಮಾ ನಿರ್ಮಾಣ ಮಾಡಿರುವುದು ಕೆಎನ್ ಎಂಟರ್ಪೈಸಸ್​​ನ ರವಿ ವರ್ಮಾ, ಕೆವಿಎನ್ ಪ್ರೊಡಕ್ಷನ್ಸ್​​ ನವರು ಸಿನಿಮಾವನ್ನು ಪ್ರೆಸೆಂಟ್ ಮಾಡಿದ್ದಾರೆ. ನಿರ್ದೇಶಕ ರವಿ ಸಾರಂಗ ಅವರ ಚೊಚ್ಚಲ ನಿರ್ದೇಶನದಲ್ಲಿ ಮೂಡಿಬಂದಿರುವ ರಕ್ಕಸಪುರದೋಳ್ ಸಿನಿಮಾ ಫೆ.6 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ತಿಳಿಸಿದೆ. 'ರಕ್ಕಸಪುರದೋಳ್' ಸಿನಿಮಾದ ಟ್ರೇಲರ್‌ ಅನ್ನು ಇಂದು ನಟ ಸುದೀಪ್‌ (Sudeep) ಅವರು ಬಿಡುಗಡೆ ಮಾಡಿದ್ದಾರೆ.

ರಕ್ಕಸಪುರದೋಳ್ ಸಿನಿಮಾ ಟ್ರೈಲರ್‌



ಈ ಪಾತ್ರ ತುಂಬಾ ಸೆಟಲ್‌ ಪಾತ್ರ. ಅವನದ್ದೇ ಆದ ಹೋರಾಟದಲ್ಲಿ ಇರ್ತಾನೆ. ಇದುಇಂದು ಸರಳ ಕಟೆಂಟ್‌ ಸಿನಿಮಾ. ಸಿನಿಮಾದಲ್ಲಿ ಬೇರೆ ಬೇರೆ ರೀತಿ ಸಿನಿಮಾ ಬರಬೇಕು. ಇದರಲ್ಲಿ ಒಳ್ಳೆಯ ಕಥೆ ಇದೆ ಎಂದರು ರಾಜ್‌.

ಇದನ್ನೂ ಓದಿ: John Abraham: ಜಾನ್ ಅಬ್ರಾಹಂ ನೋಡಿ ಫ್ಯಾನ್ಸ್ ಶಾಕ್ ! ಆರೋಗ್ಯದ ಬಗ್ಗೆ ನೆಟ್ಟಿಗರ ಕಮೆಂಟ್‌

‘ಸಿದ್ದಯ್ಯ ಸ್ವಾಮಿ ಬನ್ನಿ’ ಹಾಡು ಸಾಮಾಜಿಕ ಜಾಲತಾಣಗಳಲ್ಲಿ ಭರ್ಜರಿ ಟ್ರೆಂಡ್ ಆಗಿದ್ದು, ರೀಲ್ಸ್ ಹಾಗೂ ಶಾರ್ಟ್ ವೀಡಿಯೋಗಳಲ್ಲಿ ವ್ಯಾಪಕವಾಗಿ ಬಳಕೆಯಾಗುತ್ತಿದೆ. ರಾಜ್ ಬಿ. ಶೆಟ್ಟಿ ಅವರ ಜೊತೆಗೆ ಈ ಚಿತ್ರದಲ್ಲಿ ಅನೇಕ ಅನುಭವೀ ಮತ್ತು ಯುವ ಕಲಾವಿದರು ಅಭಿನಯಿಸಿದ್ದಾರೆ.‘