ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Anirudh Shastri: ದಾಂಪತ್ಯ ಜೀವನಕ್ಕೆ ಕಾಲಿಟ್ಟ ಗಾಯಕ ಅನಿರುದ್ಧ್ ಶಾಸ್ತ್ರಿ

Anirudh Shastri Marriage: 'ಸರಿಗಮಪ', 'ಎದೆ ತುಂಬಿ ಹಾಡುವೆನು' ರಿಯಾಲಿಟಿ ಶೋಗಳ ಮೂಲಕ ಜನಪ್ರಿಯತೆ ಪಡೆದುಕೊಂಡಿರುವ ಗಾಯಕ ಅನಿರುದ್ಧ ಶಾಸ್ತ್ರಿ ಅವರು ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಫೆ. 26ರಂದು ಕುಟುಂಬಸ್ಥರ ಸಮ್ಮುಖದಲ್ಲಿ ಅನಿರುದ್ಧ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಗಾಯಕ ಅನಿರುದ್ಧ್‌ ಶಾಸ್ತ್ರಿ - ಭರತನಾಟ್ಯ ಕಲಾವಿದೆ ಶ್ರೇಯಾ ಬಾಲಾಜಿ ಅವರ ವಿವಾಹ ಮಹೋತ್ಸವ ಅದ್ಧೂರಿಯಾಗಿ ನಡೆದಿದೆ.

ಅನಿರುದ್ಧ ಶಾಸ್ತ್ರಿ

'ಸರಿಗಮಪ', 'ಎದೆ ತುಂಬಿ ಹಾಡುವೆನು' ರಿಯಾಲಿಟಿ ಶೋಗಳ ಮೂಲಕ ಜನಪ್ರಿಯತೆ ಪಡೆದುಕೊಂಡಿರುವ ಗಾಯಕ ಅನಿರುದ್ಧ ಶಾಸ್ತ್ರಿ (anirudh shastri) ಅವರು ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಫೆ. 26ರಂದು ಕುಟುಂಬಸ್ಥರ ಸಮ್ಮುಖದಲ್ಲಿ ಅನಿರುದ್ಧ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಗಾಯಕ ಅನಿರುದ್ಧ್‌ ಶಾಸ್ತ್ರಿ - ಭರತನಾಟ್ಯ (Bharata Natya) ಕಲಾವಿದೆ ಶ್ರೇಯಾ ಬಾಲಾಜಿ ಅವರ ವಿವಾಹ (Marriage) ಮಹೋತ್ಸವ ಅದ್ಧೂರಿಯಾಗಿ ನಡೆದಿದೆ.

ಭರತನಾಟ್ಯ ಕಲಾವಿದೆ ಶ್ರೇಯಾ ಬಾಲಾಜಿ ಅವರನ್ನ ಅನಿರುದ್ಧ್‌ ಶಾಸ್ತ್ರಿ ಮದುವೆಯಾಗಿದ್ದಾರೆ. ಇತ್ತೀಚೆಗಷ್ಟೇ ಬೆಂಗಳೂರಿನ ಪ್ಯಾಲೇಸ್‌ ಗ್ರೌಂಡ್ಸ್‌ನಲ್ಲಿ ಗಾಯಕ ಅನಿರುದ್ದ್‌ ಶಾಸ್ತ್ರಿ - ಶ್ರೇಯಾ ಬಾಲಾಜಿ ವಿವಾಹ ಮಹೋತ್ಸವ ಅದ್ಧೂರಿಯಾಗಿ ನಡೆದಿದೆ. ಶಾಸ್ತ್ರೋಕ್ತವಾಗಿ, ಸಂಪ್ರದಾಯಬದ್ಧವಾಗಿ, ಅಷ್ಟೇ ಗ್ರ್ಯಾಂಡ್‌ ಆಗಿ ಅನಿರುದ್ಧ್ ಶಾಸ್ತ್ರಿ - ಶ್ರೇಯಾ ಬಾಲಾಜಿ ಕಲ್ಯಾಣ ಜರುಗಿದೆ.

ಇದನ್ನೂ ಓದಿ: Ranabaali Movie : ʻರಣಬಾಲಿʼ ಸಿನಿಮಾದ ವಿಜಯ್‌ -ರಶ್ಮಿಕಾ ಲುಕ್‌ ಔಟ್‌! ತೆರೆ ಮೇಲೆ ಮತ್ತೆ ಒಂದಾದ ವಿರೋಷ್‌

ಕನ್ನಡದ ಕೆಲವು ಸಿನಿಮಾಗಳಲ್ಲಿ ಬಾಲನಟನಾಗಿ ನಟಿಸಿ ಎಲ್ಲರ ಗಮನ ಸೆಳೆದಿದ್ದ ಅನಿರುದ್ಧ ಶಾಸ್ತ್ರಿ ಕನ್ನಡ ಚಿತ್ರರಂಗದ ಜನಪ್ರಿಯ ಗಾಯಕರಾಗಿ ಹೊರ ಹೊಮ್ಮಿದ್ದಾರೆ. ಈಗಾಗಲೇ ಕನ್ನಡದಲ್ಲಿ ಹಲವು ಸೂಪರ್ ಹಿಟ್ ಗೀತೆಗಳನ್ನು ಹಾಡಿರುವ ಅನಿರುದ್ಧ ಶಾಸ್ತ್ರಿ, ದರ್ಶನ್ ನಟನೆಯ 'ಕಾಟೇರ' ಚಿತ್ರದ ಥೀಮ್ ಸಾಂಗ್ ಹಾಡಿ ಸದ್ದು ಮಾಡಿದ್ದರು. ಬಳಿಕ ಕಿಚ್ಚ ಸುದೀಪ್ ನಟನೆಯ 'ಮಾರ್ಕ್' ಸಿನಿಮಾ ಕಾಳಿ ಹಾಡು ಕೂಡ ಹಾಡಿದ್ದರು.

ಎಸ್‌ಪಿ ಬಾಲಸುಬ್ರಹ್ಮಣ್ಯಂ ಮತ್ತು ಜಾನಕಿ ಅವರಂತ ಖ್ಯಾತ ಗಾಯಕರೊಂದಿಗೆ ವೇದಿಕೆ ಹಂಚಿಕೊಂಡಿದ್ದರು.



ಮೂಡಿಸಿದ್ದಾರೆ. ನಟ ಮತ್ತು ಗಾಯಕ.ಇವರು `ಗೋಸಿ ಗ್ಯಾಂಗ್',`ತಿರ್ಬೋಕಿಗಳು'ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ. ಜನವರಿ 23, 1997 ರಂದು ಜನಿಸಿದ ಶಾಸ್ತ್ರಿ, ಹೈಮಂಶು ಜ್ಯೋತಿ ಕಲಾ ಪೀಠದಲ್ಲಿ ತಮ್ಮ ಶಿಕ್ಷಣವನ್ನು ಪೂರ್ಣಗೊಳಿಸಿದರು. ಅವರ ಸಂಗೀತ ಪ್ರಯಾಣವು ಚಿಕ್ಕಂದಿನಿಂದಲೇ ಪ್ರಾರಂಭವಾಯಿತು, ಮತ್ತು 2005 ರಲ್ಲಿ, ಅವರು ಕನ್ನಡ ಚಲನಚಿತ್ರ ರಾಕ್ಷಸದಲ್ಲಿ ಶಿವ ರಾಜ್‌ಕುಮಾರ್ ಅವರ ಮಗನ ಪಾತ್ರದಲ್ಲಿ ಬಾಲನಟನಾಗಿ ಪದಾರ್ಪಣೆ ಮಾಡಿದರು.

ಇದನ್ನೂ ಓದಿ: Pragathi Shetty Birthday: ಪ್ರೀತಿ ಬೆಳೆಸುತ್ತಿರು, ಕೀರ್ತಿ ಗಳಿಸುತ್ತಿರು; ಮುದ್ದಿನ ಮಡದಿ ಪ್ರಗತಿ ಶೆಟ್ಟಿಗೆ ರಿಷಬ್‌ ಕ್ಯೂಟ್‌ ವಿಶ್‌

ಈ ಅಭಿನಯವು ಅವರಿಗೆ 2005 ರಲ್ಲಿ ಅತ್ಯುತ್ತಮ ಬಾಲನಟನಿಗಾಗಿ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಯನ್ನು ತಂದುಕೊಟ್ಟಿತು. ನಟನೆಯ ಜೊತೆಗೆ, ಶಾಸ್ತ್ರಿ ಹಲವಾರು ಪ್ರಮುಖ ಗಾಯನ ರಿಯಾಲಿಟಿ ಶೋಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದರು.

Yashaswi Devadiga

View all posts by this author