ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Pragathi Shetty Birthday: ಪ್ರೀತಿ ಬೆಳೆಸುತ್ತಿರು, ಕೀರ್ತಿ ಗಳಿಸುತ್ತಿರು; ಮುದ್ದಿನ ಮಡದಿ ಪ್ರಗತಿ ಶೆಟ್ಟಿಗೆ ರಿಷಬ್‌ ಕ್ಯೂಟ್‌ ವಿಶ್‌

Rishab Shetty: ‘ಕಾಂತಾರ’ ಸಿನಿಮಾ ನಟ ರಿಷಬ್ ಶೆಟ್ಟಿ ಅವರು ಮುದ್ದಿನ ಮಡದಿ ಪ್ರಗತಿ ಶೆಟ್ಟಿಗೆ ಕ್ಯೂಟ್‌ ಆಗಿ ಬರ್ತ್‌ಡೇ ವಿಶ್‌ ಮಾಡಿದ್ದಾರೆ. ಪ್ರಗತಿ ಶೆಟ್ಟಿ ಅವರು ಸದ್ಯ ಸಿನಿಮಾಗಳಿಗೆ ಕಾಸ್ಟ್ಯೂಮ್ ಡಿಸೈನ್ ಮಾಡುತ್ತಿದ್ದಾರೆ. ರಿಷಬ್ ಶೆಟ್ಟಿ ಸಿನಿಮಾ ಸೇರಿದಂತೆ ಬೇರೆ ಬೇರೆಯ ಸಿನಿಮಾಗಳಿಗೂ ಕಾಸ್ಟ್ಯೂಮ್ ಡಿಸೈನ್ ಮಾಡಿದ್ದರು.ರಿಷಬ್ ಶೆಟ್ಟಿ ಅವರು ಪತ್ನಿಯ ಜನ್ಮದಿನಕ್ಕೆ ವಿಶೇಷವಾದ ವಿಡಿಯೋ ಹಂಚಿಕೊಂಡಿದ್ದು ರಿಷಬ್‌ ಹೆಂಡತಿಯನ್ನು ಹೊಗಳಿದ್ದಾರೆ.

ಮುದ್ದಿನ ಮಡದಿ ಪ್ರಗತಿ ಶೆಟ್ಟಿಗೆ ರಿಷಬ್‌ ಕ್ಯೂಟ್‌ ವಿಶ್‌

ರಿಷಬ್‌-ಪ್ರಗತಿ ಶೆಟ್ಟಿ -

Yashaswi Devadiga
Yashaswi Devadiga Feb 28, 2026 12:17 PM

‘ಕಾಂತಾರ’ ಸಿನಿಮಾ (Kantara Movie) ನಟ ರಿಷಬ್ ಶೆಟ್ಟಿ (Rishab Shetty) ಅವರು ಮುದ್ದಿನ ಮಡದಿ ಪ್ರಗತಿ ಶೆಟ್ಟಿಗೆ ಕ್ಯೂಟ್‌ ಆಗಿ ಬರ್ತ್‌ಡೇ ವಿಶ್‌ ಮಾಡಿದ್ದಾರೆ. ಪ್ರಗತಿ ಶೆಟ್ಟಿ ಅವರು ಸದ್ಯ ಸಿನಿಮಾಗಳಿಗೆ ಕಾಸ್ಟ್ಯೂಮ್ ಡಿಸೈನ್ ಮಾಡುತ್ತಿದ್ದಾರೆ. ರಿಷಬ್ ಶೆಟ್ಟಿ ಸಿನಿಮಾ ಸೇರಿದಂತೆ ಬೇರೆ ಬೇರೆಯ ಸಿನಿಮಾಗಳಿಗೂ ಕಾಸ್ಟ್ಯೂಮ್ ಡಿಸೈನ್ (Costume Design) ಮಾಡಿದ್ದರು.ರಿಷಬ್ ಶೆಟ್ಟಿ ಅವರು ಪತ್ನಿಯ ಜನ್ಮದಿನಕ್ಕೆ ವಿಶೇಷವಾದ ವಿಡಿಯೋ ಹಂಚಿಕೊಂಡಿದ್ದು ರಿಷಬ್‌ ಹೆಂಡತಿಯನ್ನು ಹೊಗಳಿದ್ದಾರೆ.

ಪ್ರೀತಿ ಬೆಳೆಸುತ್ತಿರು.. ಕೀರ್ತಿ ಗಳಿಸುತ್ತಿರು

ರಿಷಬ್‌ ಪೋಸ್ಟ್‌ನಲ್ಲಿ, ತನ್ನ ಸುಕೋಮಲತೆಯನ್ನೆ ಶಕ್ತಿಯಾಗಿಸಿಕೊಂಡ ನಿನ್ನೊಳಗಿರುವ ಅಪರೂಪದ ಛಲ, ಮಾತೃತ್ವದ ಮಮತೆ, ವೃತ್ತಿಯೆಡಗಿನ ಏಕಾಗ್ರತೆ, ಏಕಕಾಲದಲ್ಲಿ ಎಲ್ಲವನ್ನೂ ನಿಭಾಯಿಸುವ ಕಾರ್ಯಕ್ಷಮತೆ ನನ್ನಲ್ಲಿ ಬೆರಗು ಮೂಡಿಸುತ್ತದೆ. ಅಷ್ಟೇ ಹೆಮ್ಮೆಯನ್ನೂ ತರುತ್ತದೆ. ಈ ಬಣ್ಣದ ಬದುಕಿನಲ್ಲಿ ಹೀಗೆ ಅಪರೂಪದ ಬೆಳದಿಂಗಳಿನಂತೆ ಸದಾ ಕಂಗೊಳಿಸುತ್ತಾ.. ಪ್ರೀತಿ ಬೆಳೆಸುತ್ತಿರು.. ಕೀರ್ತಿ ಗಳಿಸುತ್ತಿರು..ಹ್ಯಾಪಿ ಬರ್ತ್‌ಡೇ ಪ್ರಗತಿ ಎಂದು ಬರೆದುಕೊಂಡಿದ್ದಾರೆ. ]

ಇದನ್ನೂ ಓದಿ: Amruthadhaare Serial: ಮಲ್ಲಿ ಬದುಕಿನ ಸತ್ಯ ಅನಾವರಣ; ಸುನಿ ನಿರ್ಧಾರವನ್ನೇ ಬದಲಾಯಿಸುತ್ತಾ?

ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿರುವ ಪ್ರಗತಿ ಶೆಟ್ಟಿ ಅವರು ರಿಷಬ್ ಶೆಟ್ಟಿ ಅವರ ಸಿನಿಮಾ ಬಗ್ಗೆಯೂ ಮಾಹಿತಿ ಹಂಚಿಕೊಳ್ತಾರೆ, ಅಷ್ಟೇ ಅಲ್ಲದೆ ಹಬ್ಬ-ಹರಿದಿನ, ಸಮಾರಂಭಗಳ ಫೋಟೋಗಳನ್ನು ಕೂಡ ಹಂಚಿಕೊಳ್ತಾರೆ.

ಕನ್ನಡ ಚಿತ್ರರಂಗದ ಜನಪ್ರಿಯ ನಿರ್ದೇಶಕ ರಿಷಬ್‌ ಶೆಟ್ಟಿ. 2017ರಲ್ಲಿ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟರು, ರಿಷಬ್ ವೇಷಭೂಷಣ ವಿನ್ಯಾಸಕಿ ಪ್ರಗತಿಯನ್ನು ಚಲನಚಿತ್ರ ಕಾರ್ಯಕ್ರಮವೊಂದರಲ್ಲಿ ಭೇಟಿಯಾದರು. ಕೆಲವು ವಾರಗಳ ನಂತರ, ಅವರು ಫೇಸ್‌ಬುಕ್‌ನಲ್ಲಿ ಚಾಟ್ ಮಾಡಿ ಸ್ನೇಹಿತರಾದರು.

ಇದನ್ನೂ ಓದಿ: Ranabaali Movie : ʻರಣಬಾಲಿʼ ಸಿನಿಮಾದ ವಿಜಯ್‌ -ರಶ್ಮಿಕಾ ಲುಕ್‌ ಔಟ್‌! ತೆರೆ ಮೇಲೆ ಮತ್ತೆ ಒಂದಾದ ವಿರೋಷ್‌

ಕ್ರಮೇಣ, ಈ ಕಪಲ್‌ ಪ್ರೀತಿಯಲ್ಲಿ ಮುಳುಗಿದರು. 2017 ರಲ್ಲಿ ಮದುವೆಯಾದರು. ರಿಷಬ್ ಮತ್ತು ಪ್ರಗತಿ 2019 ರಲ್ಲಿ ರಣವಿತ್ ಅವರನ್ನು ಸ್ವಾಗತಿಸಿದರು. ಅವರ ಮಗಳು ರಾಧ್ಯಾ 2022 ರಲ್ಲಿ ಜನಿಸಿದಳು.ವರದಿಗಳ ಪ್ರಕಾರ, ಪ್ರಗತಿ 2019 ರ ಕನ್ನಡ ಭಾಷೆಯ ಚಲನಚಿತ್ರ ಬೆಲ್ ಬಾಟಮ್‌ನಲ್ಲಿ ರಿಷಬ್ ಅವರೊಂದಿಗೆ ವಸ್ತ್ರ ವಿನ್ಯಾಸಕಿಯಾಗಿ ಸೇರಿಕೊಂಡರು. ಅವರು ಕಾಂತಾರ (2022) ಚಿತ್ರಕ್ಕೂ ಕೆಲಸ ಮಾಡಿದ್ದಾರೆ.

ರಿಷಬ್‌ ಸಿನಿಮಾ ವಿಚಾರಕ್ಕೆ ಬಂದರೆ ಡಿವೈನ್‌ ಸ್ಟಾರ್‌ ರಿಷಬ್‌ ಶೆಟ್ಟಿ ಅಭಿನಯದ ʻಜೈ ಹನುಮಾನ್ʼ‌ ಸಿನಿಮಾಕ್ಕೆ ಕೊಪ್ಪಳದ ಗಂಗಾವತಿಯಲ್ಲಿರುವ ಅಂಜನಾದ್ರಿ ಬೆಟ್ಟದಲ್ಲಿ ಮುಹೂರ್ತ ನೆರವೇರಿದೆ. ಈ ಬಗ್ಗೆ ಖುಷಿ ಹಂಚಿಕೊಂಡಿರುವ ನಟ ರಿಷಬ್‌ ಶೆಟ್ಟಿ, "ಜೈ ಶ್ರೀ ರಾಮ.. ಹನುಮಂತನ ದೈವಿಕ ಜನ್ಮಸ್ಥಳವಾದ ಅಂಜನಾದ್ರಿ ಬೆಟ್ಟದಲ್ಲಿ ಜೈ ಹನುಮಾನ್...‌ ಈ ಪವಿತ್ರ ಪ್ರಯಾಣವನ್ನು ಪ್ರಾರಂಭಿಸುವುದು ನನ್ನ ಹೃದಯವನ್ನು ಅಪಾರ ಕೃತಜ್ಞತೆ ಮತ್ತು ಜವಾಬ್ದಾರಿಯಿಂದ ತುಂಬಿಸಿದೆ" ಎಂದು ಹೇಳಿಕೊಂಡಿದ್ದಾರೆ.