ಜೀ ಕನ್ನಡ ವಾಹಿನಿಯಲ್ಲಿ (Zee Kannada) ಪ್ರಸಾರ ಕಾಣುತ್ತಿರುವ ಅಣ್ಣಯ್ಯ ಧಾರಾವಾಹಿ (Annayya Serial) ರೋಚಕ ತಿರುವು ಪಡೆದುಕೊಂಡಿದೆ. ರಶ್ಮಿ ಬದುಕಲ್ಲಿ ಕೇವಲ ಸೀನ ಮಾತ್ರವಲ್ಲ, ಸೀನನ ತಾಯಿಯ ಪಾತ್ರ ಕೂಡ ಇದೆ. ಆಕೆ ರಶ್ಮಿಗೆ (Rashmi) ಒಂದೊತ್ತು ಊಟ ಹಾಕಲು ಹಿಂದೆ ಮುಂದೆ ನೋಡುತ್ತಿದ್ದಾಳೆ. ರಶ್ಮಿಯ ತುತ್ತಿನ ಗುಟ್ಟು ಕೂಡ ಶಿವು (Shivu) ಮುಂದೆ ರಿವೀಲ್ ಆಗಿದೆ.
ಶಿವಣ್ಣನನ್ನ ನೋಡಿ ಲೀಲಮ್ಮ ಗಲಿಬಿಲಿ
ಇದೀಗ ಶಿವು ಸೀದಾ ಮಾದಪ್ಪನ ಮನೆಗೆ ಬಂದಿದ್ದಾನೆ. ಶಿವಣ್ಣನನ್ನ ನೋಡಿ ಲೀಲಮ್ಮ ಗಲಿಬಿಲಿ ಆಗಿದ್ದಾಳೆ. ಸೀನನಿಗೆ ಕ್ಲಾಸ್ ತೆಗೆದುಕೊಂಡಂತೆ ತನಗೂ ಕ್ಲಾಸ್ ತೆಗೆದುಕೊಳ್ಳಬಹುದು ಎಂಬ ಚಿಂತೆ ಲೀಲಮ್ಮನಿಗೆ. ಆದರೂ ಶಿವು ಮನೆಗೆ ಬರುತ್ತಲೇ ಕೆಂಡದಂತೆ ಲೀಲಮ್ಮನಿಗೆ ಗುರಾಯಿಸಿ ನೋಡಿದ್ದಾಳೆ. ಅಷ್ಟೇ ಅಲ್ಲ ಲೀಲಮ್ಮ ನೀರು ಕೊಡವಾಗಲೂ ಶೇಕ್ ಆಗಿದ್ದಾಳೆ. ಶಿವು ಈಗ ಮಾದಪ್ಪ ಬರೋದರೊಳಗೆ ಲೀಲಮ್ಮನಿಗೆ ಗತಿ ಕಾಣಿಸೋದು ಕನ್‌ಫರ್ಮ್ ಆದಂತಿದೆ.
ಶಾರದಮ್ಮ ರಶ್ಮಿಗೆ ಒಂದೊತ್ತು ಊಟವನ್ನೂ ಹಾಕ್ತಾ ಇಲ್ಲ ಅನ್ನೋ ಕಹಿ ಸತ್ಯವನ್ನು ರಿವೀಲ್ ಮಾಡಿದ್ದಾಳೆ. ಇದು ಶಿವು ಕಿವಿಗೆ ಬಿದ್ದಿದೆ. ಈ ಸತ್ಯ ಹೇಳಿ ಶಾಕ್ ಗಿದ್ದಾನೆ ಶಿವು. ಸೊಸೆಯನ್ನು ಕರೆದುಕೊಂಡು ಹೋದ ಶಿವುನ ಮನ ಒಲಿಸಿ. ಮತ್ತೆ ತನ್ನ ಮುದ್ದಿನ ಸೊಸೆಯನ್ನು ಮನೆಗೆ ಕರೆದುಕೊಂಡು ಹೋಗಿ ದೀಪ ಹಚ್ಚಲು, ಶಿವು ಮನೆ ಮುಂದೆ ಧರಣಿ ಕುತ್ತಿದ್ದ ಮಾದಪ್ಪ. ಅಂತೂ ರಶ್ಮಿಯನ್ನು ಕರೆದುಕೊಂಡು ಹೋಗಿದ್ದಾನೆ ಮಾದಪ್ಪಣ್ಣ.
ಇದನ್ನೂ ಓದಿ: Amruthadhaare Serial: ಜೈಲಿನಿಂದ ರಿಲೀಸ್ ಆದ ಜೈದೇವ್! ಮಾಸ್ಟರ್ ಪ್ಲ್ಯಾನ್ ಏನು?
ಪಿಂಕಿ ಸೀನಾನನ್ನು ಲವ್ ಮಾಡಿದ್ದು ಮತ್ತು ಮದುವೆಯಾಗಲು ತುದಿಕಾಲಲ್ಲಿ ನಿಂತಿರುವುದು ಎಲ್ಲವೂ ಆಸ್ತಿಗೋಸ್ಕರ. ಆದರೆ ಸೀನಾಗೆ ಆಸ್ತಿಯೇ ಇಲ್ಲ ಅಂದರೆ, ನಿಜವಾಗಿಯೂ ಪಿಂಕಿ ಮದುವೆಗೆ ಒಪ್ಪಿಗೆ ಸೂಚಿಸುತ್ತಾಳೆಯೇ ಖಂಡಿತಾ ಇಲ್ಲ.
ಇದನ್ನೂ ಓದಿ: Annayya Serial: ಶಿವಣ್ಣನೆದುರು ತುತ್ತಿನ ಗುಟ್ಟು ರಟ್ಟಾಯ್ತು! ತಂಗಿಗೆ ಹಿಂಸೆ ಕೊಟ್ಟವರನ್ನು ಸುಮ್ಮನೆ ಬಿಡ್ತಾನಾ?
ಈಗ ಮಾದಪ್ಪನ ಮುಂದೆ ಪಿಂಕಿಯ ಅಸಲಿ ಮುಖ ಬಯಲಾಗಿದೆ. ಮಾದಪ್ಪ ಮತ್ತು ಪಾರು ಇಬ್ಬರೂ ಜೊತೆ ಸೇರಿ ಸಮಸ್ಯೆಗೆ ಪರಿಹಾರ ಕಂಡು ಹಿಡಿಯುತ್ತಾರೆಯೇ ನೋಡಬೇಕು.ಅಷ್ಟೇ ಅಲ್ಲ ಮಾದಪ್ಪ ಗನ್ ತೋರಿಸಿ ಮಗ ಹಾಗೂ ತಾಯಿಗೆ ಸರಿಯಾಗಿ ಪಾಠ ಕೂಡ ಕಲಿಸಿದ್ದಾನೆ.