ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Kannada Serial TRP: ಕುಸಿದ ಅಣ್ಣಯ್ಯ ಧಾರಾವಾಹಿ ಟಿಆರ್​ಪಿ: ನಂಬರ್ 1 ಧಾರಾವಾಹಿ ಇದುವೇ ನೋಡಿ

12ನೇ ವಾರದ ಸೀರಿಯಲ್ TRP ಲೆಕ್ಕಾಚಾರ ನೋಡೋದಾದರೆ 11ನೇ ವಾರದಲ್ಲಿ ಮೊದಲ ಸ್ಥಾನದಲ್ಲಿದ್ದ ಅಣ್ಣಯ್ಯ ಧಾರಾವಾಹಿ ಇದೀಗ ಮೂರನೇ ಸ್ಥಾನಕ್ಕೆ ಕುಸಿದಿದೆ. ಇದು 7.6 ಟಿವಿಆರ್ ಪಡೆದುಕೊಂಡಿದೆ. ಮೊದಲ ಸ್ಥಾನಕ್ಕೆ ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ ಜಿಗಿದಿದೆ.

ಕುಸಿದ ಅಣ್ಣಯ್ಯ ಧಾರಾವಾಹಿ ಟಿಆರ್​ಪಿ: ನಂ. 1 ಧಾರಾವಾಹಿ ಇದುವೇ ನೋಡಿ

Kannada Serial TRP

Profile Vinay Bhat Apr 4, 2025 4:11 PM

ಕನ್ನಡ ಕಿರುತೆರೆಯಲ್ಲಿ ಸೀರಿಯಲ್​ಗಳ (Kannada Serial) ಲೆಕ್ಕಾಚಾರ ವಾರದಿಂದ ವಾರಕ್ಕೆ ಬದಲಾಗುತ್ತ ಇರುತ್ತದೆ. ಪ್ರತಿವಾರ ನಿರ್ದೇಶಕರು ಜನರನ್ನು ಸೆಳೆಯಲು ಒಂದಲ್ಲ ಒಂದು ಟ್ವಿಸ್ಟ್ ಕೊಡುತ್ತಾ ಇರುತ್ತಾರೆ. ಇದರಲ್ಲಿ ಕೆಲವು ವರ್ಕೌಟ್ ಆದರೆ ಇನ್ನೂ ಕೆಲವು ಧಾರಾವಾಹಿಗೆ ಕೆಟ್ಟ ಕಮೆಂಟ್​ಗಳು ಬರುತ್ತವೆ. ಯಾವ ಧಾರಾವಾಹಿ ಹಿಟ್ ಆಯಿತು-ಫ್ಲಾಫ್ ಆಯಿತು ಎಂಬುದು ಪ್ರತಿ ವಾರದ ಟಿಆರ್​​ಪಿ ಮೂಲಕ ತಿಳಿಯಲಿದೆ. ಒಂದೇ ಚಾನೆಲ್​ನಲ್ಲಿ ಪ್ರಸಾರ ಆಗುವ ಧಾರಾವಾಹಿಗಳಾದರೂ ಅವುಗಳ ಮಧ್ಯೆ ಟಿಆರ್​ಪಿ ಸ್ಪರ್ಧೆ ಇದ್ದೇ ಇರುತ್ತದೆ. ಒಳ್ಳೆಯ ಕ್ವಾಲಿಟಿ ಕಂಟೆಂಟ್​ ಕೊಟ್ಟರೇ ವೀಕ್ಷಕರು ಖಂಡಿತ ಕೈ ಬಿಡೋದಿಲ್ಲ.

ಇದೀಗ 12ನೇ ವಾರದ ಟಿಆರ್‌ಪಿ ರೇಟಿಂಗ್ಸ್‌ ಹೊರಬಿದ್ದಿದೆ. ಕೆಲ ಧಾರಾವಾಹಿಗಳ ಸಮಯ ಬದಲಾವಣೆಯಿಂದ ಟಿಆರ್​ಪಿ ಕುಸಿದಿದೆ. ಹೊಸ ಧಾರಾವಾಹಿ ಆದ ಕಾರಣ ಆರಂಭದಲ್ಲಿ ಧಾರಾವಾಹಿಗಳಿಗೆ ಉತ್ತಮ ವೀಕ್ಷಕರಿರುತ್ತಾರೆ. ಆದರೆ, ಮುಂದಿನ ದಿನಗಳಲ್ಲಿ ಸೀರಿಯಲ್ ಹೇಗೆ ಸಾಗುತ್ತೆ ಎಂಬುದು ಮುಖ್ಯ. ಕಳೆದ ಕೆಲವು ತಿಂಗಳುಗಳಿಂದ 2-3 ವರ್ಷಗಳಷ್ಟು ಹಳೆಯ ಸೀರಿಯಲ್‌ಗಳ ಟಿಆರ್‌ಪಿ ಕುಸಿದಿದ್ದು ಇನ್ನೂ ಮೇಲೆದ್ದಿಲ್ಲ.

ಕನ್ನಡದ ನಂಬರ್ 1 ಸೀರಿಯಲ್ ಯಾವುದು?

12ನೇ ವಾರದ ಸೀರಿಯಲ್ ಟಿಆರ್​ಪಿ ಲೆಕ್ಕಾಚಾರ ನೋಡೋದಾದರೆ 11ನೇ ವಾರದಲ್ಲಿ ಮೊದಲ ಸ್ಥಾನದಲ್ಲಿದ್ದ ಅಣ್ಣಯ್ಯ ಧಾರಾವಾಹಿ ಇದೀಗ ಮೂರನೇ ಸ್ಥಾನಕ್ಕೆ ಕುಸಿದಿದೆ. ಇದು 7.6 ಟಿವಿಆರ್ ಪಡೆದುಕೊಂಡಿದೆ. ಮೊದಲ ಸ್ಥಾನಕ್ಕೆ ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ ಜಿಗಿದಿದೆ. ಇದು ಕಳೆದ ವಾರ 7.7 ಟಿವಿಆರ್ ಪಡೆದುಕೊಂಡು ಎರಡನೇ ಸ್ಥಾನದಲ್ಲಿತ್ತು. 12ನೇ ವಾರ ಇದು ನಂಬರ್‌ 1 ಸ್ಥಾನಕ್ಕೇರಿದ್ದು, ಬರೋಬ್ಬರಿ 8.0 ಟಿವಿಆರ್‌ ದಾಖಲಿಸಿದೆ.

ಎರಡನೇ ಸ್ಥಾನದಲ್ಲಿ ಲಕ್ಷ್ಮೀ ನಿವಾಸ ಧಾರಾವಾಹಿ ಇದೆ. ಇದು 11ನೇ ವಾರ ನಾಲ್ಕನೇ ಸ್ಥಾನದಲ್ಲಿತ್ತು. ಸದ್ಯ ಶ್ರೀಲಂಕಾ ಪ್ರವಾಸದ ಸಂಚಿಕೆಗಳು ಪ್ರಸಾರವಾಗುತ್ತಿದ್ದು, 7.7 ಟಿವಿಆರ್‌ ಪಡೆದಿದೆ. 7.5 ಟಿವಿಆರ್ ಪಡೆಯುವ ಮೂಲಕ ನಾ ನಿನ್ನ ಬಿಡಲಾರೆ ಸೀರಿಯಲ್‌ ನಾಲ್ಕನೇ ಸ್ಥಾನದಲ್ಲಿದೆ. ಅಮ್ಮ - ಮಗಳ ಪ್ರೀತಿಯ ಜೊತೆಗೆ, ಹಾರರ್ ಹಾಗೂ ಥ್ರಿಲ್ಲರ್ ಅಂಶಗಳನ್ನು ಈ ಧಾರಾವಾಹಿ ಒಳಗೊಂಡಿದೆ.

Bhagya Lakshmi Serial: ಭಾಗ್ಯಾಳ ಸೈಕಲ್ ಪಂಚರ್: ಸರಿಯಾದ ಸಮಯಕ್ಕೆ ತಲುಪುತ್ತ ಕೈ ತುತ್ತು?

6.6 ಟಿವಿಆರ್‌ ದಾಖಲಿಸಿ ಅಮೃತಧಾರೆ ಸೀರಿಯಲ್‌ ಐದನೇ ಸ್ಥಾನದಲ್ಲಿದೆ. ರಾತ್ರಿ 10 ಗಂಟೆಗೆ ಪ್ರಸಾರವಾಗುವ ಬ್ರಹ್ಮಗಂಟು ಸೀರಿಯಲ್‌ 5.9 ಟಿಆರ್‌ಪಿ ಪಡೆದು, ಸುಸ್ಥಿತಿಯಲ್ಲಿದೆ. ಆರಕ್ಕೇರದೇ ಮೂರಕ್ಕಿಳಿಯದೇ ಯಥಾಸ್ಥಿತಿ ಕಾಯ್ದುಕೊಂಡು ಆರನೇ ಸ್ಥಾನದಲ್ಲಿದೆ. ಉಳಿದಂತೆ, ಪುಟ್ಟಕ್ಕನ ಮಕ್ಕಳು ಧಾರಾವಾಹಿ 4.9 ಟಿವಿಆರ್‌ ಮತ್ತು ಶ್ರೀರಸ್ತು ಶುಭಮಸ್ತು ಧಾರಾವಾಹಿ 3.0 ಟಿವಿಆರ್ ಗಳಿಸಿದೆ. ಕಲರ್ಸ್‌ ಕನ್ನಡದ ಭಾಗ್ಯಲಕ್ಷ್ಮೀ 4.7 ಟಿಆರ್‌ಪಿ ಪಡೆದು, ಕಲರ್ಸ್‌ನ ನಂಬರ್‌ 1 ಸೀರಿಯಲ್‌ ಆಗಿದೆ.

ರಿಯಾಲಿಟಿ ಶೋ ವಿಚಾರಕ್ಕೆ ಬಂದರೆ, ಸರಿಗಮಪ ರಿಯಾಲಿಟಿ ಶೋಗೆ 12ನೇ ವಾರ 6.8 ಟಿವಿಆರ್‌ ಬಂದಿದೆ. ಭರ್ಜರಿ ಬ್ಯಾಚುಲರ್ಸ್ ಶೋ 6.0 ಟಿವಿಆರ್‌ ದಾಖಲಿಸಿದೆ. ಕಲರ್ಸ್ ಕನ್ನಡ ವಾಹಿನಿಯ ಬಾಯ್ಸ್ ವರ್ಸಸ್ ಗರ್ಲ್ಸ್ ಕಾರ್ಯಕ್ರಮಕ್ಕೆ 3.2 ಟಿವಿಆರ್‌ ಬಂದಿದೆ. ಸೃಜನ್ ಲೋಕೇಶ್‌ ಹಾಗೂ ಯೋಗರಾಜ್‌ ಭಟ್‌ ನೇತೃತ್ವದ ಮಜಾ ಟಾಕೀಸ್ ಅಷ್ಟೊಂದು ಕ್ಲಿಕ್ ಆಗುತ್ತಿಲ್ಲ. ಇದಕ್ಕೆ 12ನೇ ವಾರ ಕೂಡ ಕೇವಲ 1.4 ಟಿವಿಆರ್ ಸಿಕ್ಕಿದೆ.