ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Annayya Serial: ತಂಗಿಗಾಗಿ ಒಂದು ಹೆಜ್ಜೆ ಮುಂದೆ ಇಟ್ಟ ಶಿವಣ್ಣ; ಸೊಸೆಗಾಗಿ ಮುದ್ದಿನ ಮಾವ ಧರಣಿ

Annayya Serial: ಪಿಂಕಿ ಮತ್ತು ಸೀನನ ಲವ್ ಸ್ಟೋರಿ ಮೊದಲಿಂದಲೂ ನಡೆಯುತ್ತಿತ್ತು. ಇದ್ದಕ್ಕಿದ್ದಂತೆ ರಶ್ಮಿ ಜೊತೆ ಮದುವೆಯಾದ ಕಾರಣ ಸೀನನ ಪ್ರೀತಿಗೆ ಅಮ್ಮನ ಸಾಥ್‌ ಕೂಡ ಇತ್ತು. ಇನ್ನು ಶಿವು ಯಾವಾಗಲೂ ತನ್ನ ತಂಗಿಯರ ಮದುವೆಯಾಗಬೇಕು ಎನ್ನುವ ಯೋಚನೆಯನ್ನು ಮಾತ್ರ ಮಾಡುತ್ತಿದ್ದ, ಆದರೆ ತಂಗಿಯರ ಜೀವನ ಹೇಗಿರಬಹುದು ಎನ್ನುವ ಯೋಚನೆ ಕೂಡ ಮಾಡಿರಲಿಲ್ಲ.

ಅಣ್ಣಯ್ಯ ಧಾರಾವಾಹಿ

ಜೀ ಕನ್ನಡ ವಾಹಿನಿಯಲ್ಲಿ (Zee Kannada) ಪ್ರಸಾರ ಕಾಣುತ್ತಿರುವ ಅಣ್ಣಯ್ಯ (Annayya Serial) ಸೀರಿಯಲ್‌ನಲ್ಲಿ ರೋಚಕ ಟ್ವಿಸ್ಟ್‌ ಪಡೆದು ಸಾಗುತ್ತಿದೆ. ಸೀನ ಹಾಗೂ ಪಿಂಕಿಯ ಕಳ್ಳಾಟ ಶಿವುಗೆ ಅಂತೂ ಗೊತ್ತಾಗಿದೆ. ಪಿಂಕಿ ಮತ್ತು ಸೀನನ ಲವ್ ಸ್ಟೋರಿ (Pinki Seena Love stoty) ಮೊದಲಿಂದಲೂ ನಡೆಯುತ್ತಿತ್ತು. ಇದ್ದಕ್ಕಿದ್ದಂತೆ ರಶ್ಮಿ (Rashmi) ಜೊತೆ ಮದುವೆಯಾದ ಕಾರಣ ಸೀನನ ಪ್ರೀತಿಗೆ ಅಮ್ಮನ ಸಾಥ್‌ ಕೂಡ ಇತ್ತು. ಆದರೀಗ ಎಲ್ಲ ಅನುಮಾನಗಳಿಗೂ ಫುಲ್‌ ಸ್ಟಾಪ್‌ ಇಟ್ಟಿದ್ದಾನೆ ಶಿವು.

ಸೀನನ ಪ್ರೀತಿಗೆ ಅಮ್ಮನ ಸಾಥ್‌

ಪಿಂಕಿ ಮತ್ತು ಸೀನನ ಲವ್ ಸ್ಟೋರಿ ಮೊದಲಿಂದಲೂ ನಡೆಯುತ್ತಿತ್ತು. ಇದ್ದಕ್ಕಿದ್ದಂತೆ ರಶ್ಮಿ ಜೊತೆ ಮದುವೆಯಾದ ಕಾರಣ ಸೀನನ ಪ್ರೀತಿಗೆ ಅಮ್ಮನ ಸಾಥ್‌ ಕೂಡ ಇತ್ತು. ಇನ್ನು ಶಿವು ಯಾವಾಗಲೂ ತನ್ನ ತಂಗಿಯರ ಮದುವೆಯಾಗಬೇಕು ಎನ್ನುವ ಯೋಚನೆಯನ್ನು ಮಾತ್ರ ಮಾಡುತ್ತಿದ್ದ, ಆದರೆ ತಂಗಿಯರ ಜೀವನ ಹೇಗಿರಬಹುದು ಎನ್ನುವ ಯೋಚನೆ ಕೂಡ ಮಾಡಿರಲಿಲ್ಲ. ಶಿವು ಈಗ ತಂಗಿಯರಿಗೆ ಒಳ್ಳೆಯದಾಗಬೇಕು ಎಂದು ಹರಕೆ ಹೊತ್ತಿದ್ದಾನೆ.

ಇದನ್ನೂ ಓದಿ: Amruthadhaare Serial: ದಿವಾನ್ ಮನೆಯಲ್ಲಿ ಗೌತಮ್ - ಭೂಮಿಕಾ ರಾಜ್ಯಭಾರ; ಪೊಲೀಸ್ ಕೈಗೆ ಸಿಕ್ಕಿರೋ ಕೇಡಿ ಕತೆ ಹರೋಹರ!

ಒಂದು ಕಡೆ ಶಿವು ಹರಕೆ ಕಂಪ್ಲೀಟ್‌ ಮಾಡ್ತಾ ಇದ್ದರೆ, ಇನ್ನೊಂದು ಕಡೆ ಸೀನ , ಪಿಂಕಿಯನ್ನು ಮದುವೆ ಆಗಲು ಸಜ್ಜಾಗುತ್ತಿದ್ದ, ಈ ಮದುವೆಗೆ ಮಾವನ ಕೈವಾಡವೂ ಇದೆ. ಮಕ್ಕಳ ಜೊತೆ ಹುಲಿ ಮುಖವಾಡ ಧರಿಸುತ್ತಿರುವ ಶಿವು ನೇರವಾಗಿ ಬಂದಿದ್ದು , ಪಿಂಕಿ ಸೀನ ಮದುವೆ ಆಗೋ ಸ್ಥಳಕ್ಕೆ. ಅಲ್ಲಿ ಅವರಿಬ್ಬರನ್ನು ನೋಡಿ ಶಾಕ್‌ ಆಗುತ್ತಾನೆ ಶಿವು.



ಮಾದಪ್ಪನ ಮುಂದೆಯೇ ಮಗ ಸೀನನಿಗೆ ಸರಿಯಾಗಿ ಪೆಟ್ಟು ಕೊಟ್ಟಿದ್ದಾನೆ ಶಿವು. ಅಷ್ಟೇ ಅಲ್ಲ ರಶ್ಮಿ ಬಾಡಿ ವಿಚಾರವಾಗಿ ಕೆಟ್ಟದ್ದಾಗಿ ಮಾತನಾಡಿದ್ದಾನೆ. ಅದು ಶಿವು ಕೋಪಕ್ಕೆ ಕಾರಣವಾಗಿದೆ. ಹೀಗಾಗಿ ತಂಗಿಯನ್ನು ಮನೆಗೆ ಕರೆದುಕೊಂಡು ಬಂದಿದ್ದಾನೆ ಶಿವು.

ಆದರೆ ಇದು ಮಾದಪ್ಪನಿಗೆ ಇಷ್ಟವಿಲ್ಲ. ನಮ್ಮ ಮನೆಯ ಲಕ್ಷ್ಮೀಯನ್ನು ಕಳುಹಿಸಿಕೊಡು ಇಲ್ಲ ಅಂದರೆ ನಿಮ್ಮ ಮನೆ ಮುಂದೆ ಧರಣಿಗೆ ನಿಲ್ಲುತ್ತೇನೆ ಎಂದಿದ್ದಾನೆ ಮಾದಪ್ಪಣ್ಣ.

ಇದನ್ನೂ ಓದಿ: Maa Inti Bangaram: ‘ಮಾ ಇಂಟಿ ಬಂಗಾರಂ’ ಬಿಡುಗಡೆ ಮುಂದೂಡಿಕೆ; ಹೊಸ ದಿನಾಂಕ ರಿವೀಲ್‌

ಅತ್ತ ಪಿಂಕಿಯ ದುರುದ್ದೇಶ ಏನೂ ಎಂಬುದರ ಬಗ್ಗೆಯೂ ಮಾದಪ್ಪಣ್ಣ ಪಾರು ಮುಂದೆ ಹೇಳಿದ್ದಾನೆ. ಆಸ್ತಿಗಾಗಿ ಸೀನ ಹಿಂದೆ ಬಂದಿದ್ದಾಳೆ. ಆಕೆ ಕೆಟ್ಟವಳು ಎಂದಿದ್ದಾನೆ. ಒಟ್ಟಾರೆಯಾಗಿ ರಶ್ಮಿ ಬದುಕು ಪಾರು ಹೇಗೆ ಸರಿ ಮಾಡ್ತಾಳೇ ಅನ್ನೋದು ವೀಕ್ಷಕರಲ್ಲಿ ಇರೋ ಕುತೂಹಲ.

Yashaswi Devadiga

View all posts by this author