ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Raghavi Aralagundagi: ಅಮ್ಮನಿಗೆ ಸುಳ್ಳು ಹೇಳಿ ನಟನೆಗೆ ಬಂದೆ; ಅಣ್ಣಯ್ಯ'ರಾಣಿ' ಮುಕ್ತ ಮಾತು

Annayya serial: ಈಗಾಗಲೇ ಹಲವು ರಾಘವಿ ಧಾರಾವಾಹಿಗಳಲ್ಲಿ ನಟಿಸಿ, ಅನುಭವ ಪಡೆದುಕೊಂಡಿದ್ದಾರೆ. 'ಜೇನುಗೂಡು' ಧಾರಾವಾಹಿ ಎಲ್ಲರಿಗೂ ನೆನಪಿರಬಹುದು. ಅದರಲ್ಲಿ ನಯನಾ ಪಾತ್ರವನ್ನ ಅದ್ಭುತವಾಗಿ ನಿಭಾಯಿಸಿದ್ದರು 'ಮಂಗಳಗೌರಿ ಮದುವೆ', 'ಅಂತರಪಟ' ಧಾರಾವಾಹಿಯಲ್ಲೂ ನಟಿಸಿದ್ದಾರೆ. ಅಷ್ಟೇ ಯಾಕೆ ಶಾರ್ಟ್ ಮೂವಿಗಳಲ್ಲೂ ನಟಿಸಿದ್ದಾರೆ.

ಅಮ್ಮನಿಗೆ ಸುಳ್ಳು ಹೇಳಿ ನಟನೆಗೆ ಬಂದೆ; ಅಣ್ಣಯ್ಯ'ರಾಣಿ' ಮುಕ್ತ ಮಾತು

ರಾಘವಿ ಅರಳಗುಂಡಗಿ -

Yashaswi Devadiga
Yashaswi Devadiga Apr 30, 2026 7:17 PM

ಜೀ ಕನ್ನಡದಲ್ಲಿ 'ಅಣ್ಣಯ್ಯ' (Annayya serial) ಧಾರಾವಾಹಿಗೆ ಅದರದ್ದೇ ಆದ ಫ್ಯಾನ್‌ ವರ್ಗವಿದೆ. ಅಣ್ಣಯ್ಯನ ಕಷ್ಟಗಳನ್ನು ಅರ್ಥ ಮಾಡಿಕೊಂಡು, ತಕ್ಕ ತಂಗಿಯಂದಿರಾಗಿ ಬದುಕುತ್ತಿದ್ದಾರೆ ರಾಧ, ರಮ್ಯಾ, ರತ್ನ ಸೇರಿ ನಾಲ್ವರು ತಂಗಿಯರು.ಅದರಲ್ಲಿ ರಾಣಿ ಪಾತ್ರಧಾರಿ ರಾಘವಿ ಅರಳಗುಂಡಗಿ (Raghavi Aralagundagi). ಇನ್ನು ರಾಘವಿ ಅವರು ಪಕ್ಕಾ ಉತ್ತರ ಕರ್ನಾಟಕದ (Uttarakarnataka) ಹುಡುಗಿ. ಕಲಬುರಗಿಯಿಂದ ನಟನೆಗಾಗಿ ಬೆಂಗಳೂರಿಗೆ ಬಂದವರು. ಇದೀಗ ನಟಿ ಸಂದರ್ಶನವೊಂದರಲ್ಲಿ ತಮ್ಮ ಜರ್ನಿ ಬಗ್ಗೆ ಮುಕ್ತವಾಗಿ ಹೇಳಿಕೊಂಡಿದ್ದಾರೆ.

ಮಿರರ್‌ ಮುಂದೆ ನಿಂತು ನಟನೆ ಪ್ರ್ಯಾಕ್ಟಿಸ್‌!

ಎಲ್ಲರಿಗೂ ನಾನು ರಾಣಿ ಅಂತ ಪರಿಚಯ ಆಗಿದ್ದೀನಿ. ನಾನು ಉತ್ತರ ಕರ್ನಾಟಕದವಳು. ಗುಲ್ಬರ್ಗದಲ್ಲಿಯೇ ನಾನು ಎಜುಕೇಶನ್‌ ಮುಗಿಸಿದ್ದು. ನಟನೆ ಮಾಡಬೇಕು ಅಂತ ಬೆಂಗಳೂರಿಗೆ ಬಂದೆ. ಇನ್ನು ನಟನೆ ಫೀಲ್ಡ್‌ ಬರುವಾಗ ತುಂಬಾ ಕಷ್ಟ ಪಟ್ಟೇ ಬಂದಿದ್ದು. ನಾನು ಮಿರರ್‌ ಮುಂದೆ ನಿಂತು ಪ್ರ್ಯಾಕ್ಟಿಸ್‌ ಮಾಡ್ತಿದ್ದೆ. ಕೊನೆಗೂ ನಾನು ಒಂದು ಸೀರಿಯಲ್‌ ಸೆಲೆಕ್ಟ್‌ ಆದೆ.

ಇದನ್ನೂ ಓದಿ: KD The Devil: ಧ್ರುವ ಸರ್ಜಾ ನಟನೆಯ ‘KD’ ಇಂದು ತೆರೆಗೆ; ಆದ್ರೂ ಫ್ಯಾನ್ಸ್‌ಗೆ ಬೇಸರ ಏಕೆ?

ನಾನು ಒಬ್ಬಳೆ ಬೆಂಗಳೂರಿಗೆ ಬಂದೆ. ಅಂಜಿಕೆ ಇತ್ತು. ಪಿಜಿಯಲ್ಲಿ ಇದ್ದೆ. ಅಲ್ಲೇ ಜರ್ನಿ ಶುರು ಆಯ್ತು. ನಾನು ಮನೆಲಿ ಸುಳ್ಳು ಹೇಳಿ ಬಂದಿದ್ದೆ. ಮನೇಲಿ ಹೆದರಿಕೆ ಕೂಡ ಇತ್ತು. ಅವರಿಗೂ ಭಯ ಇತ್ತು. ಮನೇಲಿ ಮದುವೆ ಆಗಲೇಬೇಕು ಅಂತ ಅಮ್ಮ ಹೇಳಿದ್ದರು. ಆದರೆ ನನ್ನ ಕಾಲ ಮೇಲೆ ನಿಲ್ಲಬೇಕು ಅಂತ ನಾನು ಕನಸು ಹೊತ್ತು ಬೆಂಗಳೂರಿಗೆ ಬಂದೆ. ಅಂತೂ ಸುಳ್ಳು ಹೇಳಿ ಕೋರ್ಸ್‌ ಮಾಡಬೇಕು ಅಂತ ಮನೇಲಿ ಹೇಳಿ ಬಂದೆ ಎಂದರು.

ನಾನು ಮೊದಲು ಸಹಾಯಕಿ ನಿರ್ದೇಶಕಿ ಆಗಿ ಸೇರಿಕೊಂಡೆ . ಕಾಂಟೆಕ್ಟ್‌ ಸಿಗಬೇಕು ಅಂತ ಸೇರಿಕೊಂಡೆ. ಕೊನೆಗೆ ಜನರ ಪರಿಚಯವಾಗಿ ಆಡಿಷನ್​ ಕೊಟ್ಟು ಸೀರಿಯಲ್​ಗೆ ಸೆಲೆಕ್ಟ್​ ಆದೆ ಎಂದಿದ್ದಾರೆ. ಅಂದಹಾಗೆ ಅಣ್ಣಯ್ಯ ಸೀರಿಯಲ್​ಗೂ ಮುನ್ನ ನಟಿ ರಾಘವಿ ಅವರು, 'ಜೇನುಗೂಡು' ಧಾರಾವಾಹಿಯಲ್ಲಿ ನಯನಾ ಪಾತ್ರ ಮಾಡಿದ್ದರು. 'ಮಂಗಳಗೌರಿ ಮದುವೆ', 'ಅಂತರಪಟ' ಸೀರಿಯಲ್​ ನಟಿಸಿದ್ದರು.

ಇದನ್ನೂ ಓದಿ: Amruthadhaare Serial : ಅಹಂಕಾರ ತ್ಯಜಿಸಿ ಪಶ್ಚಾತಾಪದಲ್ಲಿ ಮಿಂದೆದ್ದ ಶಕುಂತಲಾ! ಬೀದಿಗೆ ಬಂದ ಜಯದೇವ್

'ಮಂಗಳಗೌರಿ ಮದುವೆ', 'ಅಂತರಪಟ' ಧಾರಾವಾಹಿಯಲ್ಲೂ ನಟಿಸಿದ್ದಾರೆ. ಅಷ್ಟೇ ಯಾಕೆ ಶಾರ್ಟ್ ಮೂವಿಗಳಲ್ಲೂ ನಟಿಸಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಂತೂ ಸಿಕ್ಕಾಪಟ್ಟೆ ಶೈನ್ ಆಗಿದ್ದಾರೆ. ಇವರ ಕೆಲವೊಂದು ರೀಲ್ಸ್ ಮಿಲಿಯನ್ ಗಟ್ಟಲೇ ಓಡಿದೆ.