ಜೀ ಕನ್ನಡ ವಾಹಿನಿಯಲ್ಲಿ (Zee Kannada) ಪ್ರಸಾರ ಕಾಣುತ್ತಿರುವ ಅಣ್ಣಯ್ಯ ಧಾರಾವಾಹಿ (Annayya serial) ರೋಚಕ ತಿರುವು ಪಡೆದುಕೊಂಡಿದೆ. ಇಷ್ಟೂ ದಿನ ಪಿಂಕಿ ಹಾಗೂ ರಶ್ಮಿ, ಸೀನ ವಿಚಾರವನ್ನು ಅಣ್ಣನಿಂದ ಗುಟ್ಟಾಗಿ ಇರಿಸಿದ್ದಳು ಪಾರು. ಆದರೀಗ ಎಲ್ಲ ಸೀಕ್ರೆಟ್ ಬಯಲಿಗೆ ಬಂದಿದೆ. ಗುಂಡು ಜೀವದ ಜೊತೆ ಆಟ ಆಡಿದ ಜಿಮ್ ಸೀನನನ್ನ ಶಿವಣ್ಣ (Shivanna) ಸುಮ್ನೆ ಬಿಡೋನಲ್ಲ. ಈ ಪ್ರೋಮೋ ಔಟ್ ಆಗಿದೆ.
ಸೀಕ್ರೆಟ್ ವಿಷ್ಯ ಶಿವು ಮುಂದೆ ರಿವೀಲ್
ಪಾರು, ಶಿವು ಮಲಗಿದ್ದಾಗ, ಪಾರುಗೆ ಕೆಟ್ಟ ಕನಸು ಬೀಳುತ್ತದೆ. ಏನೋ ಕೆಟ್ಟದಾಗುತ್ತದೆ ಎಂದು ಗಾಬರಿ ಆಗುತ್ತಾಳೆ. ಆಗ ಶಿವು ಕೂಡ ಪಾರುಗೆ ಸಮಾಧಾನ ಮಾಡುತ್ತಾಳೆ. ಇನ್ನೇನು ದೇವಿಗೆ ಹರಕೆ ತೀರಿಸುವ ಸಮಯದಲ್ಲಿ ಸೀನು ಹಾಗೂ ಪಿಂಕಿಯ ಸೀಕ್ರೆಟ್ ವಿಷ್ಯ ಶಿವು ಮುಂದೆ ರಿವೀಲ್ ಆಗುತ್ತದೆ. ಇದು ಶಿವು ಕೋಪ ನೆತ್ತಿಗೇರಿಸಿದೆ. ಸೀನನನ್ನು ಎತ್ತಿ, ಸುಮ್ಮನೆ ಬಿಡೋದಿಲ್ಲ ಅಂತ ಶಿವು ಹೇಳಿದ್ದಾನೆ.
ಒಟ್ಟಿನಲ್ಲಿ ಪ್ರೋಮೋ ಕಂಡು ಸಖತ್ ಥ್ರಿಲ್ ಆಗಿದ್ದಾರೆ ವೀಕ್ಷಕರು. ಮತ್ತೆ ಮತ್ತೆ ಪ್ರೋಮೋ ನೋಡೋ ಆಸೆಯನ್ನು ವ್ಯಕ್ತಪಡಿಸಿದ್ದಾರೆ ವೀಕ್ಷಕರು.
ಇದನ್ನೂ ಓದಿ: Mahavatar Parshuram: ‘ಮಹಾವತಾರ’ ಸರಣಿಯ ಎರಡನೇ ಸಿನಿಮಾವನ್ನು ಘೋಷಿಸಿದ ಹೊಂಬಾಳೆ
ಪಾರು ತಂದೆ ವೀರಭದ್ರನು ಸೊಸೆ ರತ್ನಾಳ ಎದುರು ಅಸಲಿ ಮುಖ ಈಗಾಗಲೇ ತೋರಿಸಿದ್ದಾನೆ. ಅದೇ ವೇಳೆ ಮನೆಗೆ ಆಗಮಿಸಿದ ಪಾರ್ವತಿಯು ಕುತಂತ್ರಿ ಬುದ್ದಿಯ ಅಪ್ಪನನ್ನು ಅನುಮಾನದಿಂದ ಪ್ರಶ್ನೆ ಮಾಡಿದ್ದಾಳೆ. ಆದರೆ, ರತ್ನಾಳು ಮಾವ(ವೀರಭದ್ರನು ತನಗೆ ಮಾಡಿದ ಅವಮಾನದ ಬಗ್ಗೆ ಅತ್ತಿಗೆ ಪಾರ್ವತಿ ಹತ್ತಿರ ಹೇಳಿಕೊಂಡಿಲ್ಲ. ಇಷ್ಟಾದರೂ ಆಸ್ಪತ್ರೆ ವಿಚಾರವಾಗಿಯೂ ಮಸಲತ್ತು ಮಾಡಿದ್ದ ವೀರಭದ್ರ. ಆದರೆ ಅಲ್ಲಿಯೂ ಫೇಲ್ ಆಗಿದ್ದಾನೆ.
ಇನ್ನೂ, ತಾಯಿ, ಮಗನನ್ನು ಒಂದು ಮಾಡಲು ಪಾರ್ವತಿ ನಾನಾ ಕಸರತ್ತು ಮಾಡುತ್ತಿದ್ದರೆ, ಇತ್ತ ಶಿವು ತನಗೆ ಅರಿವಿಲ್ಲದೆ ಅಮ್ಮನಿಗೆ ಹತ್ತಿರವಾಗುತ್ತಿದ್ದಾನೆ. ಸದ್ಯ ಈ ದೃಶ್ಯವು ಪ್ರೇಕ್ಷಕರ ಗಮನ ಸೆಳೆದಿದೆ.
ಪಾರ್ವತಿ ಎದುರು ತಂದೆ ವೀರಭದ್ರನ ದುಷ್ಟತನದ ಮುಖವಾಡ ಕಳಚ್ಚುತ್ತಾ, ತನ್ನ ಆಸೆಯಂತೆಯೇ ತಾಯಿ, ಮಗ ಒಂದಾಗುತ್ತಾರಾ ಎಂಬುವುದು ಮುಂದಿನ ಸಂಚಿಕೆ ಗೊತ್ತಾಗಲಿದೆ.ಮತ್ತೊಂದು ಕಡೆ ರಶ್ಮಿ ಬದುಕು ಕೂಡ ಸರಿಯಾಗಿ ಸಾಗುತ್ತಿಲ್ಲ.
ಇದನ್ನೂ ಓದಿ: Kara trailer: ಧನುಷ್ ಅಭಿನಯದ 'Kara'ಚಿತ್ರದ ಟ್ರೈಲರ್ ಔಟ್!
ರಶ್ಮಿಗೆ ಡಿವೋರ್ಸ್ ಕೊಡಬೇಕು ಅಂತಿದ್ದ ಸೀನಗೆ ಚಮಕ್ ಕೊಟ್ಟಿದ್ದಾನೆ ಮಾದಪ್ಪ. ಸೀನ ಅಮ್ಮನಿಗೂ ನಾನೂ ಡಿವೋರ್ಸ್ ಕೊಡುವೆ ಅಂತ ಹೇಳಿದ್ದಾನೆ. ಹೀಗಾಗಿ ರಶ್ಮಿಗೂ ಮಾದಪ್ಪಣ್ಣ ಬುದ್ಧಿವಾದ ಹೇಳಿದ್ದಾನೆ.