ಜೀ ಕನ್ನಡ ವಾಹಿನಿಯಲ್ಲಿ (Zee Kannada) ಪ್ರಸಾರ ಕಾಣುತ್ತಿರುವ ಅಣ್ಣಯ್ಯ (Annaya Serial) ಧಾರಾವಾಹಿಯಲ್ಲಿ ಸೀನಾ (Seena Pinki) ಮತ್ತು ಪಿಂಕಿಯ ಕಳ್ಳಾಟ ಎಲ್ಲರ ಮುಂದೆ ಬಯಲಾಗುವ ಸಮಯ ಬಂದಿದೆ. ಇಷ್ಟು ದಿನ ರಶ್ಮಿ ಎಲ್ಲರಿಂದಲೂ ಮುಚ್ಚಿಟ್ಟ ಗುಟ್ಟು ಪಾರು ಮುಂದೆ ಬಯಲಾಗಿದೆ. ತನ್ನ ಗಂಡ ಒಳ್ಳೆಯವನೆಂದು, ತನ್ನ ಜೊತೆ ಅನ್ಯೋನ್ಯತೆಯಿಂದ ಇರುವುದಾಗಿ ಎಲ್ಲರನ್ನು ನಂಬಿಸಿದ್ದ ಗುಂಡಮ್ಮ (Gundamma), ಇದೀಗ ಶಿವುಗೂ (Shivu) ವಿಚಾರ ಗೊತ್ತಾಗುವಂತೆ ಆಗಿದೆ.
ಸೀನನ ಪ್ರೀತಿಗೆ ಅಮ್ಮನ ಸಾಥ್
ಪಿಂಕಿ ಮತ್ತು ಸೀನನ ಲವ್ ಸ್ಟೋರಿ ಮೊದಲಿಂದಲೂ ನಡೆಯುತ್ತಿತ್ತು. ಇದ್ದಕ್ಕಿದ್ದಂತೆ ರಶ್ಮಿ ಜೊತೆ ಮದುವೆಯಾದ ಕಾರಣ ಸೀನನ ಪ್ರೀತಿಗೆ ಅಮ್ಮನ ಸಾಥ್ ಕೂಡ ಇತ್ತು. ಇನ್ನು ಶಿವು ಯಾವಾಗಲೂ ತನ್ನ ತಂಗಿಯರ ಮದುವೆಯಾಗಬೇಕು ಎನ್ನುವ ಯೋಚನೆಯನ್ನು ಮಾತ್ರ ಮಾಡುತ್ತಿದ್ದ, ಆದರೆ ತಂಗಿಯರ ಜೀವನ ಹೇಗಿರಬಹುದು ಎನ್ನುವ ಯೋಚನೆ ಕೂಡ ಮಾಡಿರಲಿಲ್ಲ.
ಇದನ್ನೂ ಓದಿ: Deepika Padukone: ʻಕಿಂಗ್ʼ ಚಿತ್ರೀಕರಣದ ಫೋಟೋ ಲೀಕ್; ದೀಪಿಕಾ- ಶಾರುಖ್ ಜೋಡಿ ಕಂಡು ಫ್ಯಾನ್ಸ್ ಖುಷ್
ಶಿವು ಈಗ ತಂಗಿಯರಿಗೆ ಒಳ್ಳೆಯದಾಗಬೇಕು ಎಂದು ಹರಕೆ ಹೊತ್ತಿದ್ದಾನೆ. ಒಂದು ಕಡೆ ಶಿವು ಹರಕೆ ಕಂಪ್ಲೀಟ್ ಮಾಡ್ತಾ ಇದ್ದರೆ, ಇನ್ನೊಂದು ಕಡೆ ಸೀನ , ಪಿಂಕಿಯನ್ನು ಮದುವೆ ಆಗಲು ಸಜ್ಜಾಗುತ್ತಿದ್ದ, ಈ ಮದುವೆಗೆ ಮಾವನ ಕೈವಾಡವೂ ಇದೆ.
ಮಕ್ಕಳ ಜೊತೆ ಹುಲಿ ಮುಖವಾಡ ಧರಿಸುತ್ತಿರುವ ಶಿವು ನೇರವಾಗಿ ಬಂದಿದ್ದು , ಪಿಂಕಿ ಸೀನ ಮದುವೆ ಆಗೋ ಸ್ಥಳಕ್ಕೆ. ಅಲ್ಲಿ ಅವರಿಬ್ಬರನ್ನು ನೋಡಿ ಶಾಕ್ ಆಗುತ್ತಾನೆ ಶಿವು. ಅಷ್ಟೇ ಅಲ್ಲ, ಸೀನ ಕೂಡ ಶಿವು ಅಂತ ತಿಳಿಯದೇ, ಹೋಗಿ ಶಿವುಗೆ ಹೇಳು. ಏನು ಕಿತ್ತುಕೊಳ್ಳೋಕೆ ಆಗತ್ತೆ, ಮಾಡಿಕೊಳ್ಳಲು ಹೇಳು ಎನ್ನುತ್ತಾನೆ.
ಮುಖವಾಡ ತೆಗೆದು ಶಿವು , ರೌದ್ರಾವತಾರ ತಾಳುತ್ತಾನೆ. ಮದುವೆ ನಿಲ್ಲಿಸಿ, ಸೀನನ ಮೇಲೆ ಕೈ ಎತ್ತಿದ್ದಾನೆ.
ಇದನ್ನೂ ಓದಿ: Amruthadhaare Serial: ಮುಳುಗುತ್ತಿರುವ ಸಾಮ್ರಾಜ್ಯವನ್ನ ಹೇಗೆ ಕಾಪಾಡಿಕೊಳ್ತಾನೆ ಗೌತಮ್ ದಿವಾನ್?
ಇನ್ನೂ, ತಾಯಿ, ಮಗನನ್ನು ಒಂದು ಮಾಡಲು ಪಾರ್ವತಿ ನಾನಾ ಕಸರತ್ತು ಮಾಡುತ್ತಿದ್ದರೆ, ಇತ್ತ ಶಿವು ತನಗೆ ಅರಿವಿಲ್ಲದೆ ಅಮ್ಮನಿಗೆ ಹತ್ತಿರವಾಗುತ್ತಿದ್ದಾನೆ. ಸದ್ಯ ಈ ದೃಶ್ಯವು ಪ್ರೇಕ್ಷಕರ ಗಮನ ಸೆಳೆದಿದೆ.