ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Anusha Hegde: 'ರಾಧಾ ರಮಣ ಧಾರಾವಾಹಿ' ಖ್ಯಾತಿಯ ನಟಿ ಅನುಷಾ ಹೆಗಡೆ ಬದುಕಲ್ಲಿ ಬಿರುಗಾಳಿ! ಡಿವೋರ್ಸ್ ಘೋಷಿಸಿದ ನಟಿ

Radha Ramana Serial: ರಾಧಾ-ರಮಣ ಧಾರಾವಾಹಿಯಲ್ಲಿ ನೆಗೆಟಿವ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ನಟಿ ಅನುಷಾ ಬಾಳಲ್ಲಿ ಬಿರುಕು ಮೂಡಿದೆ. ಮೂರು ವರ್ಷದ ಮದುವೆ ಜೀವನ ಮುಗಿದಿದೆ. ಈ ಬಗ್ಗೆ ಅವರೇ ಸೋಶಿಯಲ್‌ ಮೀಡಿಯಾ ಪೋಸ್ಟ್‌ ಹಂಚಿಕೊಂಡಿದ್ದಾರೆ. ನಟಿ ಅವರು ನಟ ಪ್ರತಾಪ್ (Prathap) ಜೊತೆ ಹೈದರಾಬಾದ್‌ನಲ್ಲಿ ಅದ್ದೂರಿಯಾಗಿ ಮದುವೆ ಮಾಡಿಕೊಂಡಿದ್ದರು. ಇದೀಗ ನಟಿ ಡಿವೋರ್ಸ್‌ ತಗೊಂಡಿರೋದಾಗಿ ಹೇಳಿದ್ದಾರೆ. ಹೌದು, ಸೋಶಿಯಲ್‌ ಮೀಡಿಯಾ ಮೂಲಕ ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ.

ಅನುಷಾ ಹೆಗಡೆ

ರಾಧಾ-ರಮಣ (Radha Ramana) ಧಾರಾವಾಹಿಯಲ್ಲಿ ನೆಗೆಟಿವ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ನಟಿ ಅನುಷಾ ಬಾಳಲ್ಲಿ ಬಿರುಕು ಮೂಡಿದೆ. ಮೂರು ವರ್ಷದ ಮದುವೆ ಜೀವನ (Divorce) ಮುಗಿದಿದೆ. ಈ ಬಗ್ಗೆ ಅವರೇ ಸೋಶಿಯಲ್‌ ಮೀಡಿಯಾ ಪೋಸ್ಟ್‌ ಹಂಚಿಕೊಂಡಿದ್ದಾರೆ. ನಟಿ ಅವರು ನಟ ಪ್ರತಾಪ್ (Prathap) ಜೊತೆ ಹೈದರಾಬಾದ್‌ನಲ್ಲಿ ಅದ್ದೂರಿಯಾಗಿ ಮದುವೆ (Marriage) ಮಾಡಿಕೊಂಡಿದ್ದರು. ಇದೀಗ ನಟಿ ಡಿವೋರ್ಸ್‌ ತಗೊಂಡಿರೋದಾಗಿ ಹೇಳಿದ್ದಾರೆ. ಹೌದು, ಸೋಶಿಯಲ್‌ ಮೀಡಿಯಾ ಮೂಲಕ ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ.

ವಿಲನ್‌ ದೀಪಿಕಾ ಪಾತ್ರದಲ್ಲಿ ಅನುಷಾ

ರಾಧಾ ರಮಣ ಧಾರಾವಾಹಿಯಲ್ಲಿ ವಿಲನ್‌ ದೀಪಿಕಾ ಪಾತ್ರದಲ್ಲಿ ಅನುಷಾ ಹೆಗಡೆ ನಟಿಸುತ್ತಿದ್ದರು. ಸ್ಕಂದ ಅಶೋಕ್‌, ಶ್ವೇತಾ ಆರ್‌ ಪ್ರಸಾದ್‌ ಅವರು ಈ ಧಾರಾವಾಹಿಯಲ್ಲಿ ನಟಿಸುತ್ತಿದ್ದರು.

ಇದನ್ನೂ ಓದಿ: Rishab Shetty: ಪ್ರಗತಿ-ರಿಷಬ್ ಶೆಟ್ಟಿ ಪ್ರೀತಿಗೆ ದಶಕದ ಸಂಭ್ರಮ; ಕ್ಯೂಟ್‌ ಫೋಟೋ ಶೇರ್‌ ಮಾಡಿದ್ರು ಡಿವೈನ್ ಸ್ಟಾರ್

ಪೋಸ್ಟ್‌ನಲ್ಲಿ ಏನಿದೆ?

“ನಿಮಗೆ ಈಗಾಗಲೇ ತಿಳಿದಿರುವಂತೆ, 2023 ರಿಂದ ನನ್ನ ಮದುವೆ, ದಾಂಪತ್ಯ ಜೀವನದಲ್ಲಿ ಬದಲಾವಣೆಗಳು ನಡೆಯುತ್ತಿದ್ದವು. 2025 ರಲ್ಲಿ ನಾವು ಕಾನೂನುಬದ್ಧವಾಗಿ ಬೇರೆಯಾಗಿದ್ದೇವೆ. ನಿಮ್ಮ ಬೆಂಬಲಕ್ಕೆ ಧನ್ಯವಾದಗಳು. ಈ ಬಗ್ಗೆ ಹೆಚ್ಚಿನ ಚರ್ಚೆ ಅಥವಾ ಪ್ರಶ್ನೆಗಳನ್ನು ಮಾಡಬೇಡಿ ಎಂದು ವಿನಂತಿಸುತ್ತೇನೆ ನನ್ನ ಜೀವನದ ಈ ಅಧ್ಯಾಯವು ಪರಸ್ಪರ ಗೌರವ ಸಾಮರಸ್ಯದೊಂದಿಗೆ ಮುಕ್ತಾಯಗೊಂಡಿದೆ.

ನಾನು ಈಗ ಶಾಂತಿ ಮತ್ತು ಸ್ಪಷ್ಟತೆಯೊಂದಿಗೆ ನನ್ನ ವೃತ್ತಿಜೀವನ, ನನ್ನ ಕುಟುಂಬ ಮತ್ತು ವೈಯಕ್ತಿಕ ಬೆಳವಣಿಗೆಯ ಕಡೆಗೆ ಗಮನ ಹರಿಸಲು ನಿರ್ಧರಿಸಿದ್ದೇನೆ ಎಂದು ಅವರು ಹೇಳಿದ್ದಾರೆ.



ತೆಲುಗು ಚಿತ್ರರಂಗದಲ್ಲಿ ಬ್ಯುಸಿ

ಪ್ರತಾಪ್‌ ಸಿಂಗ್‌ ಅವರು ತೆಲುಗು ಚಿತ್ರರಂಗದಲ್ಲಿ ಬ್ಯುಸಿಯಿದ್ದಾರೆ. ಇವರು ರಜಪೂತ ಸಂಪ್ರದಾಯದವರು. ಪ್ರತಾಪ್‌ ಸಿಂಗ್‌ ಹಾಗೂ ಅನುಷಾ ಹೆಗಡೆ ಅವರು ‘ನಿನ್ನೆ ಪೆಲ್ಲಾಡ್ತ’ ಧಾರಾವಾಹಿಯಲ್ಲಿ ಒಟ್ಟಿಗೆ ನಟಿಸುತ್ತಿದ್ದರು.



ಇದನ್ನೂ ಓದಿ: Mouni Roy: ಮೌನಿ ರಾಯ್‌ಗೆ ವೃದ್ಧರಿಂದ ಕಿರುಕುಳ; ಬೇಸರ ಹೊರಹಾಕಿದ ನಟಿ

ತೆಲುಗು ವಾಹಿನಿಯ ಅವಾರ್ಡ್ ಫಂಕ್ಷನ್ ನಡೆದಿದ್ದು, ಆ ವೇದಿಕೆ ಮೇಲೆಯೇ ಅನುಷಾ ಹೆಗ್ಡೆಗೆ ಪ್ರತಾಪ್ ಸಿಂಗ್ ಶಾ ಲವ್ ಪ್ರಪೋಸ್ ಮಾಡಿದ್ದರು. ಮದುವೆಯ ದಿನ ಗೋಲ್ಡನ್ ಮತ್ತು ಕೆಂಪು ಬಣ್ಣದ ಕಾಂಬಿನೇಶನ್ ಇರುವ ಉಡುಗೆಯಲ್ಲಿ ವಧು ಅನುಷಾ ಹೆಗ್ಡೆ ಮತ್ತು ವರ ಪ್ರತಾಪ್ ಸಿಂಗ್ ಶಾ ಮಿಂಚಿದ್ದರು.

Yashaswi Devadiga

View all posts by this author