ಖ್ಯಾತ ಸಂಗೀತ ಸಂಯೋಜಕ ಎ.ಆರ್. ರೆಹಮಾನ್ (A R Rahman) ಅವರು ಭಾನುವಾರ ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊ ಪೋಸ್ಟ್ (Social Media) ಅನ್ನು ಹಂಚಿಕೊಂಡಿದ್ದಾರೆ, ಇತ್ತೀಚಿನ ಸಂದರ್ಶನವೊಂದರಲ್ಲಿ ಧರ್ಮದ ಕಾರಣದಿಂದ ತಮಗೆ ಹಿಂದಿ ಚಿತ್ರರಂಗದಲ್ಲಿ ಅವಕಾಶ ಕಡಿಮೆ ಆಗಿದೆ ಎಂದು ಎ.ಆರ್. ರೆಹಮಾನ್ ಹೇಳಿದ್ದರು. ಅಲ್ಲದೇ ‘ಛಾವ’ ಸಿನಿಮಾದ ಬಗ್ಗೆ ಅವರು ಅಸಮಾಧಾನ ವ್ಯಕ್ತಪಡಿಸಿದ್ದರು. ಎ.ಆರ್. ರೆಹಮಾನ್ ಹೇಳಿಕೆ (Statement) ಭಾರಿ ಚರ್ಚೆಗಳನ್ನುಂಟು ಮಾಡಿತ್ತು. ಎ.ಆರ್. ರೆಹಮಾನ್ ಮಾಡಿದ ಹೇಳಿಕೆಗಳ ನಂತರ ಬಂದ ಪ್ರತಿಕ್ರಿಯೆಯನ್ನು ಉದ್ದೇಶಿಸಿ ಮಾತನಾಡುತ್ತಾ, ಉದ್ದೇಶಗಳನ್ನು "ಕೆಲವೊಮ್ಮೆ ತಪ್ಪಾಗಿ ಅರ್ಥೈಸಿಕೊಳ್ಳಬಹುದು" ಎಂದು ಹೇಳಿದರು, ಆದರೆ ಅವರು ತಮ್ಮ ಮಾತುಗಳಿಂದ ಯಾವುದೇ ನೋವುಂಟು ಮಾಡಲು ಬಯಸುವುದಿಲ್ಲ ಎಂದು ಹೇಳಿದರು.
ಭಾರತ ನನ್ನ ಸ್ಫೂರ್ತಿ
ರೋಜಾ", "ಬಾಂಬೆ" ಮತ್ತು "ದಿಲ್ ಸೇ.." ಮುಂತಾದ ಚಿತ್ರಗಳಲ್ಲಿ ಸಂಗೀತ ನೀಡಿದ ಖ್ಯಾತಿಯನ್ನು ಹೊಂದಿರುವ ರೆಹಮಾನ್, ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಒಂದು ಪೋಸ್ಟ್ ಹಂಚಿಕೊಂಡಿದ್ದು, ಅದರಲ್ಲಿ ಅವರು ಅದೇ ವಿಷಯವನ್ನು ವಿವರಿಸಿದ್ದಾರೆ.
"ಭಾರತ ನನ್ನ ಸ್ಫೂರ್ತಿ, ನನ್ನ ಗುರು ಮತ್ತು ನನ್ನ ಮನೆ. ಉದ್ದೇಶಗಳನ್ನು ಕೆಲವೊಮ್ಮೆ ತಪ್ಪಾಗಿ ಅರ್ಥೈಸಿಕೊಳ್ಳಬಹುದು ಎಂದು ನಾನು ಅರ್ಥಮಾಡಿಕೊಂಡಿದ್ದೇನೆ. ಆದರೆ ನನ್ನ ಉದ್ದೇಶ ಯಾವಾಗಲೂ ಸಂಗೀತದ ಮೂಲಕ ಉನ್ನತಿ, ಗೌರವ ಮತ್ತು ಸೇವೆ ಮಾಡುವುದು. ನಾನು ಎಂದಿಗೂ ನೋವುಂಟು ಮಾಡಲು ಬಯಸಿಲ್ಲ, ಮತ್ತು ನನ್ನ ಪ್ರಾಮಾಣಿಕತೆ ಅನುಭವಿಸಲ್ಪಡುತ್ತದೆ ಎಂದು ನಾನು ಭಾವಿಸುತ್ತೇನೆ" ಎಂದು ಅವರು ವೀಡಿಯೊದಲ್ಲಿ ಹೇಳಿದ್ದಾರೆ.
ನನ್ನ ಉದ್ದೇಶವನ್ನು ಬಲಪಡಿಸಿದೆ
", ಇದು ಯಾವಾಗಲೂ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಅನುಮತಿಸುವ ಮತ್ತು ಬಹುಸಂಸ್ಕೃತಿಯ ಧ್ವನಿಗಳನ್ನು ಆಚರಿಸುವ ಜಾಗವನ್ನು ರಚಿಸಲು ನನಗೆ ಅನುವು ಮಾಡಿಕೊಡುತ್ತದೆ. ಗೌರವಾನ್ವಿತ ಪ್ರಧಾನ ಮಂತ್ರಿ ಮತ್ತು ರೂಹ್-ಎ-ನೂರ್ ಅವರ ಮುಂದೆ ವೇವ್ಸ್ ಶೃಂಗಸಭೆಯಲ್ಲಿ ಪ್ರಸ್ತುತಪಡಿಸಲಾದ ಝಲಾವನ್ನು ಪೋಷಿಸುವುದು, ಯುವ ನಾಗಾ ಸಂಗೀತಗಾರರೊಂದಿಗೆ ಸಹಯೋಗ ಮಾಡುವುದು, ಸ್ಟ್ರಿಂಗ್ ಆರ್ಕೆಸ್ಟ್ರಾವನ್ನು ರಚಿಸುವುದು,
ಸನ್‌ಶೈನ್ ಆರ್ಕೆಸ್ಟ್ರಾಕ್ಕೆ ಮಾರ್ಗದರ್ಶನ ನೀಡುವುದು, ಭಾರತದ ಮೊದಲ ಬಹುಸಂಸ್ಕೃತಿಯ ವರ್ಚುವಲ್ ಬ್ಯಾಂಡ್ ಮತ್ತು ಹ್ಯಾನ್ಸ್ ಜಿಮ್ಮರ್ ಜೊತೆಗೆ ರಾಮಾಯಣವನ್ನು ಸಂಗೀತ ಮಾಡುವ ಗೌರವವಾದ ಸೀಕ್ರೆಟ್ ಮೌಂಟೇನ್ ಅನ್ನು ನಿರ್ಮಿಸುವುದು. ಪ್ರತಿಯೊಂದು ಪ್ರಯಾಣವು ನನ್ನ ಉದ್ದೇಶವನ್ನು ಬಲಪಡಿಸಿದೆ" ಎಂದು ಅವರು ಹೇಳಿದರು.
ಕೋಮುವಾದಿ ವಿಷಯ
ಇದಕ್ಕೂ ಮುಂಚೆ ಸಂದರ್ಶನದಲ್ಲಿ ಕಳೆದ ವರ್ಷಗಳಲ್ಲಿ ಹಿಂದಿ ಚಲನಚಿತ್ರೋದ್ಯಮದಲ್ಲಿ ಅಧಿಕಾರ ಬದಲಾವಣೆಯಿಂದಾಗಿ ತಮಗೆ ಕೆಲಸ ಕಡಿಮೆ ಆಗುತ್ತಿದೆ ಎಂದು ಹೇಳಿಕೊಂಡಿದ್ದರು. "ಕೋಮುವಾದಿ ವಿಷಯ"ದಿಂದಲೂ ಆಗಿರಬಹುದು ಎಂದು ಹೇಳಿದರು.
" ಹಿಂದಿ ಚಿತ್ರರಂಗದಿಂದ ಬರುತ್ತಿರುವ ಕೆಲಸಗಳು ಕಡಿಮೆಯಾಗಿರುವುದಕ್ಕೆ ಕಳೆದ 8 ವರ್ಷಗಳಲ್ಲಿ ಆದ ಪವರ್ ಶಿಫ್ಟ್ ಹಾಗೂ ಕಮ್ಯುನಲ್ ಥಿಂಗ್ ಅಂದರೆ ಧರ್ಮ ಕಾರಣವಿರಬಹುದು" ಎಂದು ಹೇಳಿದ್ದರು.
ನನಗೆ ಕೆಲಸಕ್ಕಾಗಿ ಹುಡುಕಾಟ ನಡೆಸುವ ಯಾವ ಇರಾದೆಯೂ ಇಲ್ಲ. ಕೆಲಸ ನನ್ನನ್ನು ಹುಡುಕಿಕೊಂಡು ಬರಬೇಕೆಂದು ನಾನು ಬಯಸುತ್ತೇನೆ ಇದಕ್ಕೆ ಕಾರಣ ನನ್ನ ಕೆಲಸದ ಪ್ರಾಮಾಣಿಕತೆ ಗಳಿಸಿಕೊಳ್ಳುವುದರಲ್ಲಿದೆ. ನಾನು ವಸ್ತುಗಳನ್ನು ಹುಡುಕುತ್ತಾ ಹೋದಾಗ ಅದು ನನಗೆ ಸರಿ ಕಾಣುವುದಿಲ್ಲ ಎಂದು ಹೇಳಿದ್ದರು.
ಇದನ್ನೂ ಓದಿ: Bigg Boss Kannada 12: ಕಿಚ್ಚನ ಚಪ್ಪಾಳೆ ಬಗ್ಗೆ ತಲೆಕೆಡಿಸಿಕೊಳ್ಳೋಬೇಡಿ, ನಿಮ್ಮ ಜೀವನ ಮೇಲೆ ಗಮನ ಹರಿಸಿ ; ಕಿಚ್ಚ ಸುದೀಪ್
AR ರೆಹಮಾನ್ ಅವರು ಈ ಮಾತುಗಳು ಈಗ ಸಾಕಷ್ಟು ವಿವಾದಕ್ಕೆ ಕಾರಣವಾಗಿದ್ದು, ಬಾಲಿವುಡ್ ನಲ್ಲಿ ಅವರನ್ನು ತಮ್ಮ ಧರ್ಮದ ಆಧಾರದ ಮೇಲೆ ಕೆಲಸ ನೀಡದೆ ಅವಕಾಶಗಳಿಂದ ವಂಚಿತರಾಗುವಂತೆ ಮಾಡಿದ್ದರೇ ಎಂಬ ಪ್ರಶ್ನೆಗಳು ಹುಟ್ಟುಕೊಂಡಿತ್ತು.