AR Rahman: ಗಾಯಕ ಯೇಸುದಾಸ್ ಅವರನ್ನು ಭೇಟಿಯಾಗಿ ವಿಶೇಷ ಪೋಸ್ಟ್ ಹಂಚಿಕೊಂಡ ಗಾಯಕ ಎ. ಆರ್. ರೆಹಮಾನ್!
ಜಾಗತಿಕ ಮಟ್ಟದಲ್ಲಿ ಆಸ್ಕರ್ ಪ್ರಶಸ್ತಿ ಪುರಸ್ಕೃತರಾದ ಗಾಯಕ ಹಾಗೂ ಸಂಗೀತ ನಿರ್ದೇಶಕರಾದ ಎ. ಆರ್. ರೆಹಮಾನ್ ಅವರು ತಮ್ಮ ಸಂಗೀತ ಜ್ಞಾನದಿಂದಲೇ ಕೋಟ್ಯಾಂ ತರ ಅಭಿಮಾನಿಗನ್ನು ಹೊಂದಿ ದ್ದಾರೆ. ಸೋಶಿಯಲ್ ಮಿಡಿಯಾದಲ್ಲಿ ಕೂಡ ಸಾಕಷ್ಟು ಅಭಿಮಾನಿಗಳನ್ನು ಹೊಂದಿರುವ ಇವರು ಆಗಾಗ ತಮ್ಮ ಸಂಗೀತ ಕಾರ್ಯಕ್ರಮಗಳ ಫೋಟೊ ಹಾಗೂ ವಿಡಿಯೋ ಅಪ್ಲೋಡ್ ಮಾಡುತ್ತಿರುತ್ತಾರೆ. ಈ ಬಾರಿ ಕೂಡ ಭಾರತದ ಶ್ರೇಷ್ಠ ಗಾಯಕ ಕೆ.ಜೆ. ಯೇಸುದಾಸ್ ಅವರನ್ನು ಸ್ವಗೃಹದಲ್ಲಿ ಭೇಟಿಯಾಗಿದ್ದ ಖುಷಿಯ ವಿಚಾರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.


ನವದೆಹಲಿ: ಬರ್ಸೋರೆ ಮೇಘಾ, ಹೋಸನಾ, ದಿಲ್ ಸೆ ರೆ ಸೇರಿದಂತೆ ಅನೇಕ ಹಿಟ್ ಸಾಂಗ್ ನೀಡಿ, ಜಾಗತಿಕ ಮಟ್ಟದಲ್ಲಿ ಆಸ್ಕರ್ ಪ್ರಶಸ್ತಿ ಪುರಸ್ಕೃತರಾದ ಗಾಯಕ ಹಾಗೂ ಸಂಗೀತ ನಿರ್ದೇಶಕರಾದ ಎ. ಆರ್. ರೆಹಮಾನ್ (AR Rahman) ಅವರು ತಮ್ಮ ಸಂಗೀತ ಜ್ಞಾನದಿಂದಲೇ ಕೋಟ್ಯಾಂತರ ಅಭಿಮಾನಿಗನ್ನು ಹೊಂದಿದ್ದಾರೆ. ಸೋಶಿಯಲ್ ಮಿಡಿಯಾದಲ್ಲಿ ಕೂಡ ಸಾಕಷ್ಟು ಅಭಿಮಾನಿಗಳನ್ನು ಹೊಂದಿರುವ ಇವರು ಆಗಾಗ ತಮ್ಮ ಸಂಗೀತ ಕಾರ್ಯಕ್ರಮಗಳ ಫೋಟೊ ಹಾಗೂ ವಿಡಿಯೋ ಅಪ್ಲೋಡ್ ಮಾಡುತ್ತಿರುತ್ತಾರೆ. ಈ ಬಾರಿ ಕೂಡ ಭಾರತದ ಶ್ರೇಷ್ಠ ಗಾಯಕ ಕೆ.ಜೆ. ಯೇಸುದಾಸ್(KJ Yesudas) ಅವರನ್ನು ಸ್ವಗೃಹದಲ್ಲಿ ಭೇಟಿಯಾಗಿದ್ದ ಖುಷಿಯ ವಿಚಾರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ಸಂಗೀತ ದಿಗ್ಗಜರನ್ನು ಒಟ್ಟಿಗೆ ಕಂಡು ಅಭಿಮಾನಿಗಳು ಪೋಸ್ಟ್‌ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಗಾಯಕ ಕೆ.ಜೆ. ಯೇಸುದಾಸ್ ಅವರನ್ನು ಡಲ್ಲಾಸ್ ನಲ್ಲಿರುವ ಅವರ ಸ್ವಗೃಹದಲ್ಲಿ ಸಂಗೀತ ನಿರ್ದೇಶಕ, ಗಾಯಕರಾದ ಎ. ಆರ್. ರೆಹಮಾನ್ ಭೇಟಿಯಾಗಿದ್ದಾರೆ. ಯೇಸುದಾಸ್ ಅವರು ಸಂಗೀತ ಕ್ಷೇತ್ರದಲ್ಲಿ ಸಂಶೋಧನಾ ಕಾರ್ಯ ಮಾಡುತ್ತಿರುವ ಬಗ್ಗೆ ಮತ್ತು ಕರ್ನಾಟಕ ಸಂಗೀತದ ಮೇಲಿನ ಅವರ ಆಸಕ್ತಿ, ವಿಶೇಷ ಒಲವಿನ ಬಗ್ಗೆ ಗಾಯಕ ಎ. ಆರ್. ರೆಹಮಾನ್ ಅವರು ಆಶ್ಚರ್ಯಚಕಿತ ರಾಗಿದ್ದೇನೆಂದು ತಮ್ಮ ಪೋಸ್ಟ್ ನಲ್ಲಿ ತಿಳಿಸಿ ಫೋಟೊ ಹಂಚಿಕೊಂಡಿದ್ದಾರೆ.
ಎ.ಆರ್. ರೆಹಮಾನ್ ಅವರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಯೇಸುದಾಸ್ ಜೊತೆಗಿನ ಫೋಟೊವನ್ನು ಪೋಸ್ಟ್ ಮಾಡಿದ್ದಾರೆ. ನಾನು ನನ್ನ ಬಾಲ್ಯದಿಂದಲೂ ಬಹಳ ಇಷ್ಟ ಪಡುವ ಗಾಯಕ ಯೇಸುದಾಸ್ ಅವರನ್ನು ಇಂದು ಭೇಟಿಯಾದೆ. ಅವರ ಸಂಶೋಧನಾ ಕಾರ್ಯ ಮತ್ತು ಭಾರತೀಯ ಶಾಸ್ತ್ರೀಯ (ಕರ್ನಾಟಕ) ಸಂಗೀತದ ಮೇಲಿನ ಅವರ ಪ್ರೀತಿಯನ್ನು ನೋಡಿ ನನಗೆ ಆಶ್ಚರ್ಯವಾಯಿತು ಎಂದು ಬರೆದುಕೊಂಡಿದ್ದಾರೆ.
ಎ.ಆರ್. ರೆಹಮಾನ್ ಅವರೊಂದಿಗೆ ಹಲವಾರು ಗಾಯಕರು ಕೂಡ ಅಲ್ಲಿ ಬಂದಿದ್ದರು. ರೆಹ ಮಾನ್ ಅವರು ಸದ್ಯ ದಿ ವಂಡರ್ ಮೆಂಟ್ ಟೂರ್ ಗಾಗಿ ಉತ್ತರ ಅಮೆರಿಕಾದಲ್ಲಿದ್ದಾರೆ. ಅಮೆರಿಕಾದಾದ್ಯಂತ 15 ಕ್ಕೂ ಹೆಚ್ಚು ನಗರಗಳಲ್ಲಿ ಸಂಗೀತ ಪ್ರದರ್ಶನ ನೀಡಲಿದ್ದಾರೆ. ಮೊದಲ ದಿನದ ಸಂಗೀತ ಕಾರ್ಯ ಕ್ರಮವು ಜುಲೈ 18 ರಂದು ವ್ಯಾಂಕೋವರ್‌ನಲ್ಲಿ ನಡೆದಿದ್ದು ಕೊನೆಯ ಸಂಗೀತ ಕಾರ್ಯಕ್ರಮ ಆಗಸ್ಟ್ 18 ರಂದು ಬೋಸ್ಟನ್‌ನಲ್ಲಿ ನಡೆಯಲಿದೆ. ಈ ಮೂಲಕ ಯೇಸುದಾಸ್ ಜೊತೆಗೆ ಅವರು ಫೋಟೊ ಹಂಚಿಕೊಳ್ಳುವ ಮೂಲಕ ತಮ್ಮ ನೆಚ್ಚಿನ ಗಾಯಕ ಎಂದು ಅವರನ್ನು ಕೊಂಡಾಡಿದ್ದು ಅಭಿಮಾನಿಗಳಿಗೆ ಈ ವಿಚಾರ ಬಹಳ ಖುಷಿ ನೀಡಿದೆ.
ಗಾಯಕ ಕೆ.ಜೆ. ಯೇಸುದಾಸ್ ಅವರು ಮಲಯಾಳಂ, ತಮಿಳು, ತೆಲುಗು, ಕನ್ನಡ, ಹಿಂದಿ, ಒಡಿಯಾ, ಬಂಗಾಳಿ ಮತ್ತು ತುಳು ಸೇರಿದಂತೆ ವಿವಿಧ ಭಾರತೀಯ ಭಾಷೆಗಳಲ್ಲಿ 50,000 ಕ್ಕೂ ಹೆಚ್ಚು ಹಾಡು ಗಳನ್ನು ಹಾಡಿ ಖ್ಯಾತಿಯನ್ನು ಪಡೆದಿದ್ದಾರೆ. ಎಂಟು ಬಾರಿ ಅತ್ಯುತ್ತಮ ಮೇಲ್ ಬ್ಯಾಗ್ರೌಂಡ್ ಸಿಂಗರ್ ರಾಷ್ಟ್ರೀಯ ಪ್ರಶಸ್ತಿಯನ್ನು ಗೆದ್ದಿರುವ ಇವರಿಗೆ ಗಾನಗಂಧರ್ವನ್ ಎಂದು ಕೂಡ ಪ್ರೀತಿಯಿಂದ ಕರೆಯಲಾಗುತ್ತದೆ. ಒಂದೇ ದಿನದಲ್ಲಿ ನಾಲ್ಕು ವಿಭಿನ್ನ ಭಾಷೆಗಳಲ್ಲಿ 16 ಹೊಸ ಹಾಡುಗಳನ್ನು ಹಾಡಿ ರೆಕಾರ್ಡ್ ಮಾಡಿದ ವಿಶ್ವ ದಾಖಲೆಯನ್ನು ಕೂಡ ಇವರು ಹೊಂದಿದ್ದಾರೆ.