ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ರಹಸ್ಯವಾಗಿ ಈ ಪ್ಲ್ಯಾನ್‌ನಿಂದ ಸ್ಪರ್ಧಿಗಳು ಹೊರಗಿನ ಮೆಸೇಜ್ ಪಡೆದುಕೊಳ್ಳುತ್ತಿದ್ರಾ? ಕೋಡ್ ಡಿಕೋಡ್ ಬಗ್ಗೆ ಕಿಚ್ಚ ಹೇಳಿದ್ದೇನು?

ಬಿಗ್‌ ಬಾಸ್‌ ಅಂದರೆ ಮೊದಲು ನಿಯಮಗಳಿಗೆ ಆದ್ಯತೆ. ಆ ನಿಯಮ ಉಲ್ಲಂಘನೆ ಮಾಡಿದರೆ ಪನಿಶ್‌ಮೆಂಟ್‌ ಗ್ಯಾರಂಟಿ. ಆದರೀಗ ಹೊಸೊಂದು ವಿಚಾರವನ್ನ ಸುದೀಪ್‌ ಅವರು ವೇದಿಕೆಯಲ್ಲಿ ರಿವೀಲ್‌ ಮಾಡಿದ್ದಾರೆ. ಹೌದು ಸ್ಪರ್ಧಿಗಳ ಕೋಡ್ ಡಿಕೋಡ್ ವಿಚಾರ. ರಹಸ್ಯವಾಗಿ ತಮ್ಮ ಆಟದ ಕುರಿತು ಮೆಸೇಜ್ (Message) ಪಡೆದುಕೊಳ್ಳುತ್ತಿದ್ದ ಸ್ಪರ್ಧಿಗಳಿಗೆ ಕಿಚ್ಚ ಹೇಗೆ ಕ್ಲಾಸ್‌ ತೆಗೆದುಕೊಂಡರು?

bigg boss kannada

ವೀಕೆಂಡ್‌ (Bigg Boss Kannada 12) ಬಂದರೆ ಸುದೀಪ್‌ (Sudeep) ಅವರ ಪಂಚಾಯ್ತಿಗೆಂದೆ ಕಾಯುತ್ತಿರುತ್ತಾರೆ ವೀಕ್ಷಕರು. ಆದರೆ ಈ ವಾರ ಕೋಡ್ ಡಿಕೋಡ್ (Code Decode) ವಿಚಾರ ಕೇಳಿ ನೋಡುಗರು ಶಾಕ್‌ ಆಗಿದ್ದಾರೆ. ಹೀಗೂ ಮನೆಯಲ್ಲಿ ಆಗ್ತಿದೆಯಾ ಎಂದು ಶಾಕ್‌ ಆಗಿದ್ದಾರೆ. ರಹಸ್ಯವಾಗಿ ತಮ್ಮ ಆಟದ ಕುರಿತು ಮೆಸೇಜ್ (Message) ಪಡೆದುಕೊಳ್ಳುತ್ತಿದ್ದ ಸ್ಪರ್ಧಿಗಳಿಗೆ ಕಿಚ್ಚ ಹೇಗೆ ಕ್ಲಾಸ್‌ ತೆಗೆದುಕೊಂಡರು?

ಬಿಗ್‌ ಬಾಸ್‌ ಅಂದರೆ ಮೊದಲು ನಿಯಮಗಳಿಗೆ ಆದ್ಯತೆ. ಆ ನಿಯಮ ಉಲ್ಲಂಘನೆ ಮಾಡಿದರೆ ಪನಿಶ್‌ಮೆಂಟ್‌ ಗ್ಯಾರಂಟಿ. ಆದರೀಗ ಹೊಸೊಂದು ವಿಚಾರವನ್ನ ಸುದೀಪ್‌ ಅವರು ವೇದಿಕೆಯಲ್ಲಿ ರಿವೀಲ್‌ ಮಾಡಿದ್ದಾರೆ. ಹೌದು ಸ್ಪರ್ಧಿಗಳ ಕೋಡ್ ಡಿಕೋಡ್ ವಿಚಾರ.

ಹೊರಗಿನ ಮೆಸೆಜ್‌ ಹೇಗೆ ಪಡೆದುಕೊಳ್ಳುತ್ತಿದ್ರು?

ಪ್ರತಿ ವಾರ ಸ್ಪರ್ಧಿಗಳಿಗೆ ಬಟ್ಟೆಗಳನ್ನು ಕಳುಹಿಸಿ ಕೊಟ್ಟೇ ಕೊಡ್ತಾರೆ. ಡಿಸೈನರ್‌ಗಳು ಬಟ್ಟೆಗಳನ್ನ ಕಳುಹಿಸಿ ಕೊಡುತ್ತಾರೆ. ಈ ಬಟ್ಟೆಗಳಿಂದಲೇ ಸ್ಪರ್ಧಿಗಳು ಮೆಸೇಜ್ ಪಡೆದುಕೊಳ್ಳುತ್ತಿದ್ರು ಎಂಬರ್ಥದಲ್ಲಿ ಸುದೀಪ್‌ ಹೇಳಿದ್ದರು. ಅಂದರೆ ಅದರ ಬಣ್ಣದ ಆಧಾರದಲ್ಲಿ ಸ್ಪರ್ಧಿಗಳು ಹೊರಗಿನ ಮೆಸೇಜ್‌ವನ್ನು ಪಡೆದುಕೊಳ್ಳುತ್ತಿದ್ದರು ಎನ್ನಲಾಗಿದೆ. ತಾನು ಸೇಫ್‌, ಅಥವಾ ಡೇಂಜರ್‌ ಇದ್ದೇನಾ ಎಂದು ಬಣ್ಣಗಳ ಮೂಲಕ ಅರ್ಥೈಸಿಕೊಳ್ಳುತ್ತಿದ್ದರು ಎನ್ನಲಾಗುತ್ತಿದೆ.



ಇದನ್ನೂ ಓದಿ: BBK 12: ಲಕ್ಕೇ ಇಲ್ಲ ಎನ್ನುತ್ತಿದ್ದ ಧನುಷ್‌ಗೆ ಕೊನೆಗೂ ಒಲಿದು ಬಂತು ಕ್ಯಾಪ್ಟನ್ ಪಟ್ಟ

ವೀಕೆಂಡ್‌ ಎಪಿಸೋಡ್‌ಗೆ ಸ್ಪರ್ಧಿಗಳಿಗೆ ಬಟ್ಟೆಗಳು ಬರುತ್ತವೆ. ಬಿಗ್‌ಬಾಸ್‌ ಮನೆಗೆ ಬರುವ ಮುನ್ನವೇ ಡಿಸೈನರ್‌ಗಳಿಗೆ ಪ್ರತಿ ವಾರ ತಮಗೆ ಬಟ್ಟೆ ಕಳುಹಿಸಬೇಕು ಎಂದು ಒಪ್ಪಂದ ಮಾಡಿಕೊಂಡು ಬಂದಿರುತ್ತಾರೆ. ಸ್ಪರ್ಧಿಗಳಿಗೆ ಅವರ ಡಿಸೈನರ್ ಅಥವಾ ಕುಟುಂಬದಿಂದ ಬಟ್ಟೆಗಳು ಬರಲಾರಂಭಿಸುತ್ತವೆ. ಈ ಬಟ್ಟೆಗಳಿಂದಲೇ ಸ್ಪರ್ಧಿಗಳು ಮೆಸೇಜ್ ಪಡೆದುಕೊಳ್ಳುತ್ತಿದ್ರು ಎಂಬ ರಹಸ್ಯವನ್ನು ಸುದೀಪ್ ರಿವೀಲ್ ಮಾಡಿದ್ದಾರೆ.

ಯಾರದು?

ಯಾರ ಹೆಸರನ್ನು ಕಿಚ್ಚ ಸುದೀಪ್‌ ಅವರು ಬಹಿರಂಗಪಡಿಸಲಿಲ್ಲ. ಆದರೆ ದ ರಹಸ್ಯವಾಗಿ ತಮ್ಮ ಆಟದ ಕುರಿತು ಮೆಸೇಜ್ ಪಡೆದುಕೊಳ್ಳುತ್ತಿದ್ದ ಸ್ಪರ್ಧಿಗಳಿಗೆ ಕಿಚ್ಚ ಸುದೀಪ್ ಕ್ಲಾಸ್ ತೆಗೆದುಕೊಂಡರು. ನಮಗೆ ನಿಮ್ಮಗಳ ಕೋಡ್ ಡಿಕೋಡ್ ಮಾಡೋದು ಗೊತ್ತಿದೆ ಎಂದು ಎಚ್ಚರಿಕೆ ಕೊಟ್ಟರು.

ಕಾಣೆಯಾಗಿದ್ದ ಈ ಮೂವರು ಸ್ಪರ್ಧಿಗಳಿಗೆ ಕಿಚ್ಚನ ಎಚ್ಚರಿಕೆ!

ಇಷ್ಟು ದಿನ ಬಿಗ್‌ ಬಾಸ್‌ ಮನೆಯಲ್ಲಿ ಇದ್ದು ಕಾಣದೇ ಇರೋ ರೀತಿ ಇದ್ದ ಸ್ಪರ್ಧಿಗಳಿಗೆ ಸುದೀಪ್‌ ಕಿವಿ ಮಾತನ್ನ ಹೇಳಿದ್ದಾರೆ. ಹಿಂದಿನ ವಾರದಿಂದ ಮೂವರು ಆಟ ಆರಂಭಿಸಿದ್ದು, ಎಲ್ಲರ ಕಣ್ಣಿಗೂ ಕಾಣಿಸುತ್ತಿದ್ದಾರೆ. ನೀವು ಕಾಣಿಸುತ್ತಿದ್ದೀರಿ ಎಂದು ಸುದೀಪ್ ಹೇಳಿದರು. ಅಷ್ಟೇ ಅಲ್ಲ ಮೂವರಿಗೂ ಎಚ್ಚರಿಕೆಯಿಂದ ಆಟ ಮುಂದುವರಿಸುವಂತೆ ಸಲಹೆ ನೀಡಿದರು.

ಇದನ್ನೂ ಓದಿ: BBK 12: ಇಷ್ಟು ದಿನ ಬಿಗ್‌ ಬಾಸ್‌ ಮನೆಯಲ್ಲಿ ಕಾಣೆಯಾಗಿದ್ದ ಈ ಮೂವರು ಸ್ಪರ್ಧಿಗಳಿಗೆ ಕಿಚ್ಚನ ಎಚ್ಚರಿಕೆ!

ಆ ಮೂವರು ಬೇರೆ ಯಾರೂ ಅಲ್ಲ, ಧನುಷ್, ಅಭಿಷೇಕ್ ಮತ್ತು ಸ್ಪಂದನಾ ಸೋಮಣ್ಣ . ತಡವಾಗಿ ಆಟವನ್ನು ಶುರು ಮಾಡಿದ್ದಾರೆ. ಇನ್ನೊಂದು ಕಡೆ ಅಶ್ವಿನಿ ಗೌಡ ಮೂವರ ಸ್ಪರ್ಧಿಗಳನ್ನು ಸ್ವಾಗತಿಸಿದರು. ಇದಕ್ಕೆ ತಕ್ಷಣವೇ ಉತ್ತರಿಸಿದ ಸುದೀಪ್, ನೋಡಿ ಈ ವಾರ ನಿಮಗೆ ಅಶ್ವಿನಿ ಗೌಡ ನಿಮಗೆ ಆಲ್ ದಿ ಬೆಸ್ಟ್ ಅಂತ ಹೇಳಿದ್ದಾರೆ. ಹಾಗಾಗಿ ಮುಂದಿನ ವಾರ ನೀವು ಹುಷಾರಾಗಿರಿ ಎಂದು ಎಚ್ಚರಿಕೆ ನೀಡಿದರು. ಇನ್ನು ಸ್ಪಂದನ ಅವರು ಇನ್ನೇನು ನಾಮಿನೇಟ್‌ ಆಗಬೇಕು ಅನ್ನೋ ಹಂತದಲ್ಲಿ ಇದ್ದರು. ಧನುಷ್‌ ಈ ವಾರ ಕ್ಯಾಪ್ಟನ್‌ ಆಗಿದ್ದಾರೆ. ಅಭಿಷೇಕ್‌ ಅವರು ಈಗ ಆಟ ಶುರು ಮಾಡಿದ್ದಾರೆ ಎಂದರು.

Yashaswi Devadiga

View all posts by this author