Arjun Rampal: ನಟ ಅರ್ಜುನ್ ರಾಂಪಾಲ್ ಕೈಗೆ ಗಾಯ; ಬೆರಳುಗಳಿಂದ ರಕ್ತ ಸೋರುತ್ತಿರುವ ವಿಡಿಯೊ ವೈರಲ್
ಹಿಂದಿಯ ಆ್ಯಕ್ಷನ್ ಕ್ರೈಮ್ ಡ್ರಾಮಾ ಸೀರಿಸ್ ʼರಾಣಾ ನಾಯ್ಡುʼ 2ನೇ ಸೀಸನ್ ಆರಂಭವಾಗಿದೆ. ರಾಣಾ ದಗ್ಗುಬಾಟಿ ಮತ್ತು ವೆಂಕಟೇಶ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನಟ ಅರ್ಜುನ್ ರಾಂಪಾಲ್ ಖಳ ನಾಯಕನಾಗಿ ಅಬ್ಬರಿಸಿದ್ದಾರೆ. ಸೋಮವಾರ (ಫೆ. 3) ಮುಂಬೈನಲ್ಲಿ ನಡೆದ ನೆಕ್ಸ್ಟ್ ಆನ್ ನೆಟ್‌ಫ್ಲಿಕ್ಸ್ ಕಾರ್ಯಕ್ರಮದಲ್ಲಿ ಅರ್ಜುನ್ ಗಾಜನ್ನು ಕೈಯಿಂದ ಒಡೆದಿದ್ದಾರೆ. ಈ ವೇಳೆ ಅವರ ಕೈಗಳಿಗೆ ಗಂಭೀರ ಗಾಯವಾಗಿದ್ದು, ಬೆರಳುಗಳಿಂದ ರಕ್ತಸ್ರಾವವಾಗಿದೆ.
ಮುಂಬೈ: ಹಿಂದಿಯ ಆ್ಯಕ್ಷನ್ ಕ್ರೈಂ ಡ್ರಾಮಾ ಸೀರಿಸ್ ʼರಾಣಾ ನಾಯ್ಡುʼ (Rana Naidu) 2ನೇ ಸೀಸನ್ ಆರಂಭವಾಗಿದೆ. ರಾಣಾ ದಗ್ಗುಬಾಟಿ (Rana Daggubati) ಮತ್ತು ವೆಂಕಟೇಶ್ (Venkatesh) ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ನಟ ಅರ್ಜುನ್ ರಾಂಪಾಲ್ (Arjun Rampal) ಖಳನಾಯಕನಾಗಿ ಅಭಿನಯಿಸಿದ್ದಾರೆ. ಸೋಮವಾರ (ಫೆ. 3) ಮುಂಬೈನಲ್ಲಿ ನಡೆದ ನೆಕ್ಸ್ಟ್ ಆನ್ ನೆಟ್‌ಫ್ಲಿಕ್ಸ್ ಕಾರ್ಯಕ್ರಮದಲ್ಲಿ ಅರ್ಜುನ್ ಗಾಜನ್ನು ಕೈಯಿಂದ ಒಡೆದಿದ್ದಾರೆ. ಅವರ ಕೈಗಳಿಗೆ ಗಂಭೀರ ಗಾಯವಾಗಿದ್ದು, ಬೆರಳುಗಳಿಂದ ತೀವ್ರ ರಕ್ತಸ್ರಾವವಾಗಿದೆ.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅರ್ಜುನ್ ಗಾಜಿನ ಚೌಕಟ್ಟೊಂದನ್ನು ಒಡೆದು ವೇದಿಕೆಗೆ ಪ್ರವೇಶಿಸಿದ್ದಾರೆ. ಆದರೆ ಗಾಜು ಒಡೆದು ಅವರ ಮೇಲೆ ಬಿದ್ದಿದೆ. ಅವರ ಕೈ ಬೆರಳುಗಳಿಗೆ ಗಾಯಗಳಾಗಿ ರಕ್ತ ಸೋರಿದೆ. ಗಂಭೀರವಾಗಿ ಗಾಯವಾಗಿದ್ದರೂ ನಟ ನಗು ನಗುತ್ತಲೇ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ಕಾರ್ಯಕ್ರಮ ಮುಗಿಸಿ ಹೊರ ಬಂದಾಗಲೂ ಅವರು ಸುದ್ದಿಗಾರರೊಂದಿಗೆ ಆರಾಮವಾಗಿ ಮಾತನಾಡಿದ್ದಾರೆ.
Arjun Rampal gets multiple cuts as he walks into shattered glass; internet calls him ‘Keanu Reeves lite’ https://t.co/XzNGIDwCoi
— HT Entertainment (@htshowbiz) February 4, 2025
ಕೆಲವು ತಾಂತ್ರಿಕ ಕಾರಣಗಳಿಂದಾಗಿ ಕಾರ್ಯಕ್ರಮದ ಗಾಜು ಒಡೆದಿಲ್ಲ. ಹಾಗಾಗಿ ರಾಂಪಾಲ್ ತಮ್ಮ ಕೈಯಿಂದ ಅದನ್ನು ಒಡೆದು ಹಾಕಬೇಕಾಯಿತು. ಇದರಿಂದಾಗಿ ಅವರಿಗೆ ಗಾಯವಾಗಿದೆ ಎಂದು ತಿಳಿದು ಬಂದಿದೆ. ʼರಾಣಾ ನಾಯ್ಡು ಸೀಸನ್ 2ʼ ಬಿಡುಗಡೆ ದಿನಾಂಕ ಇನ್ನೂ ಘೋಷಣೆಯಾಗಿಲ್ಲ.
ಈ ಸುದ್ದಿಯನ್ನೂ ಓದಿ:ಗೋವಾದಲ್ಲಿ 'ಕಬಾಲಿ' ತೆಲುಗು ಸಿನಿಮಾ ನಿರ್ಮಾಪಕ ಕೆಪಿ ಚೌಧರಿ ಆತ್ಮಹತ್ಯೆ!
ʼರಾಣಾ ನಾಯ್ಡು 2ʼ ಸೀರಿಸ್‌ನಲ್ಲಿ ಸುಚಿತ್ರಾ ಪಿಳ್ಳೈ, ಅಭಿಷೇಕ್ ಬ್ಯಾನರ್ಜಿ, ಗೌರವ್ ಚೋಪ್ರಾ, ಸುರ್ವೀನ್ ಚಾವ್ಲಾ, ಇಶಿತ್ತಾ ಅರುಣ್ ಮತ್ತು ಕೃತಿ ಕರ್ಬಂದಾ ಕೂಡ ನಟಿಸಿದ್ದಾರೆ. ಮೊದಲ ಸೀಸನ್ 2023ರಲ್ಲಿ ಬಿಡುಗಡೆಯಾಗಿತ್ತು.