ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ʻಸ್ವರ ಸಾಮ್ರಾಜ್ಞಿʼ ಆಶಾ ಭೋಸ್ಲೆ ಪಂಚಭೂತಗಳಲ್ಲಿ ಲೀನ; ಸಕಲ ಸರ್ಕಾರಿ ಗೌರವದೊಂದಿಗೆ ನಡೆದ ಅಂತ್ಯಕ್ರಿಯೆ

Asha Bhonsle Funeral: ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತ ಖ್ಯಾತ ಗಾಯಕಿ ಆಶಾ ಭೋಸ್ಲೆ ಅವರ ಅಂತ್ಯಕ್ರಿಯೆಯು ಮುಂಬೈನ ಶಿವಾಜಿ ಪಾರ್ಕ್‌ನಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಸೋಮವಾರ (ಏ.13) ನೆರವೇರಿತು. ಪುತ್ರ ಆನಂದ್ ಭೋಸ್ಲೆ ಚಿತೆಗೆ ಅಗ್ನಿಸ್ಪರ್ಶ ಮಾಡುವ ಮೂಲಕ ಅಂತಿಮ ವಿಧಿವಿಧಾನ ಪೂರೈಸಿದರು.

ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತ ಖ್ಯಾತ ಗಾಯಕಿ ಆಶಾ ಭೋಸ್ಲೆ ಅವರು ಭಾನುವಾರ (ಏ.12) ಅನಾರೋಗ್ಯದ ಹಿನ್ನೆಲೆಯಲ್ಲಿ ಸಾವನ್ನಪ್ಪಿದ್ದರು. ಮುಂಬೈನಲ್ಲಿ ಸೋಮವಾರ (ಏ.13) ಸಕಲ ಸರ್ಕಾರಿ ಗೌರವಗಳೊಂದಿಗೆ ಆಶಾ ಭೋಸ್ಲೆ ಅವರ ಅಂತ್ಯಕ್ರಿಯೆ ನೆರವೇರಿಸಲಾಗಿದೆ. ಚಿತ್ರರಂಗದ ಗಣ್ಯರು, ರಾಜಕೀಯ ಮುಖಂಡರು, ಕುಟುಂಬ ಸದಸ್ಯರು ಮತ್ತು ಸಾವಿರಾರು ಅಭಿಮಾನಿಗಳು ಆಶಾ ತಾಯಿಗೆ ಅಂತಿಮ ವಿದಾಯ ಸಲ್ಲಿಸಿದರು.

ಪುತ್ರನಿಂದ ಅಂತಿಮ ವಿಧಿವಿಧಾನ

ಬಹುಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ 92 ವರ್ಷದ ಭೋಸ್ಲೆ ಅವರು ಭಾನುವಾರ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ನಿಧನರಾದರು. ಇಂದು ಅವರ ಅಂತ್ಯಕ್ರಿಯೆಯನ್ನು ಮುಂಬೈನ ಶಿವಾಜಿ ಪಾರ್ಕ್ ಚಿತಾಗಾರದಲ್ಲಿ ನೆರವೇರಿಸಲಾಯಿತು. ಅವರ ಪುತ್ರ ಆನಂದ್ ಭೋಸ್ಲೆ ಅಂತಿಮ ವಿಧಿವಿಧಾನಗಳನ್ನು ನೆರವೇರಿಸಿ, ಚಿತೆಗೆ ಅಗ್ನಿಸ್ಪರ್ಶ ಮಾಡಿದರು. ಈ ವೇಳೆ ಕುಟುಂಬ ಸದಸ್ಯರ ದುಃಖ ಮುಗಿಲುಮುಟ್ಟಿತ್ತು.

ಮಗ - ಮಗಳ ಸಾವನ್ನು ಕಂಡು ನೊಂದಿದ್ದ ಆಶಾ ಭೋಸ್ಲೆ; ಸ್ವರ ಸಾಮ್ರಾಜ್ಞಿಯ ಇಬ್ಬರು ಮಕ್ಕಳ ನಿಧನಕ್ಕೆ ಕಾರಣವೇನು?

ಅದಕ್ಕೂ ಮುನ್ನ ಆಶಾ ಅವರ ಪಾರ್ಥಿವ ಶರೀರವನ್ನು ಲೋವರ್ ಪರೆಲ್‌ನಲ್ಲಿರುವ ಅವರ ನಿವಾಸದಿಂದ ಚಿತಾಗಾರದವರೆಗೆ ಮೆರವಣಿಗೆಯಲ್ಲಿ ತರಲಾಯಿತು. ಈ ವೇಳೆ ಸಾವಿರಾರು ಅಭಿಮಾನಿಗಳು ಭಾಗವಹಿಸಿದ್ದರು. ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್, ಆಶಾ ಭೋಸ್ಲೆ ಅವರ ಅಂತಿಮ ದರ್ಶನ ಪಡೆದು ಗೌರವ ಸಲ್ಲಿಸಿದರು. ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ, ಎಂಎನ್ಎಸ್ ಮುಖ್ಯಸ್ಥ ರಾಜ್ ಠಾಕ್ರೆ, ಶಿವಸೇನೆ ನಾಯಕಿ ಶೈನಾ ಎನ್‌ಸಿ ಮತ್ತು ಮಾಜಿ ಕೇಂದ್ರ ಸಚಿವ ಸುಶೀಲ್ ಕುಮಾರ್ ಶಿಂಧೆ ಉಪಸ್ಥಿತರಿದ್ದರು.

ʻ16ನೇ ವಯಸ್ಸಿಗೆ ಮೊದಲ ಮದುವೆ, 47ನೇ ವಯಸ್ಸಿಗೆ ಮತ್ತೊಮ್ಮೆ ಕಲ್ಯಾಣʼ; ಇದು ಆಶಾ ಭೋಸ್ಲೆ ಮ್ಯಾರೇಜ್‌ ಕಹಾನಿ

ಬಾಲಿವುಡ್ ತಾರೆಯರಾದ ಆಮಿರ್ ಖಾನ್, ವಿಕ್ಕಿ ಕೌಶಲ್, ರಮೇಶ್ ಸಿಪ್ಪಿ, ರಿತೇಶ್ ದೇಶ್‌ಮುಖ್, ವಿವೇಕ್ ಒಬೆರಾಯ್ ಮುಂತಾದವರು ಆಶಾ ಭೋಸ್ಲೆ ಅವರ ಅಂತಿಮ ದರ್ಶನ ಪಡೆದುಕೊಂಡರು. ಕ್ರಿಕೆಟಿಗರಾದ ಸಚಿನ್ ತೆಂಡೂಲ್ಕರ್, ಮೊಹಮ್ಮದ್ ಸಿರಾಜ್ ಕೂಡ ಆಶಾ ಭೋಸ್ಲೆ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದು, ನಮನ ಸಲ್ಲಿಸಿದರು.

ಸಕಲ ಸರ್ಕಾರಿ ಗೌರವದೊಂದಿಗೆ ಆಶಾ ಭೋಸ್ಲೆ ಅಂತ್ಯಕ್ರಿಯೆ



7 ದಶಕಗಳಿಗೂ ಹೆಚ್ಚು ಕಾಲ ಭಾರತೀಯ ಸಿನಿಮಾ ಸಂಗೀತ ಕ್ಷೇತ್ರದಲ್ಲಿ ಸ್ವರ ಸಾಮ್ರಾಜ್ಞಿಯಾಗಿ ಮೆರೆದ ಆಶಾ ಭೋಸ್ಲೆ ಅವರು ತಾವು ಹಾಡಿದ ಅದ್ಭುತ ಗೀತೆಗಳಿಂದ ಹೆಸರುವಾಸಿಯಾಗಿದ್ದರು. ಎಲ್ಲರೂ ಅವರನ್ನು ಪ್ರೀತಿಯಿಂದ 'ಆಶಾ ತಾಯಿ' ಎಂದೇ ಕರೆಯುತ್ತಿದ್ದರು. ಆಶಾ ಭೋಂಸ್ಲೆ ಅವರಿಗೆ ಭಾರತದ ಎರಡನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮವಿಭೂಷಣ ಮತ್ತು ಭಾರತೀಯ ಸಂಗೀತಕ್ಕೆ ಅವರು ನೀಡಿದ ಅಪಾರ ಕೊಡುಗೆಗಾಗಿ ಮಹಾರಾಷ್ಟ್ರ ಭೂಷಣ ಸೇರಿದಂತೆ ಹಲವಾರು ಪ್ರತಿಷ್ಠಿತ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗಿತ್ತು.