ಮಗ - ಮಗಳ ಸಾವನ್ನು ಕಂಡು ನೊಂದಿದ್ದ ಆಶಾ ಭೋಸ್ಲೆ; ಸ್ವರ ಸಾಮ್ರಾಜ್ಞಿಯ ಇಬ್ಬರು ಮಕ್ಕಳ ನಿಧನಕ್ಕೆ ಕಾರಣವೇನು?
Asha Bhonsle Children Tragedy: ಸ್ವರ ಸಾಮ್ರಾಜ್ಞಿ ಆಶಾ ಭೋಸ್ಲೆ ಅವರು ತಮ್ಮ ಇಬ್ಬರು ಮಕ್ಕಳ ಸಾವನ್ನು ಕಂಡಿದ್ದರು. 2012ರಲ್ಲಿ ಮಗಳು ವರ್ಷಾ ಆತ್ಮಹತ್ಯೆ ಮಾಡಿಕೊಂಡರೆ, 2015ರಲ್ಲಿ ಹಿರಿಯ ಮಗ ಹೇಮಂತ್ ಕ್ಯಾನ್ಸರ್‌ನಿಂದ ಸ್ಕಾಟ್ಲೆಂಡ್‌ನಲ್ಲಿ ನಿಧನರಾದರು. ಇಂತಹ ಎರಡು ದುರ್ಘಟನೆಗಳು ಆಶಾ ಭೋಸ್ಲೆ ಬದುಕಿನಲ್ಲಿ ಸಂಭವಿಸಿದ್ದವು.
-
ಭಾರತದ ಹೆಮ್ಮೆಯ ಗಾಯಕಿ ಆಶಾ ಭೋಸ್ಲೆ ಅವರು ಸಾವನ್ನಪ್ಪಿದ್ದಾರೆ. 92 ವರ್ಷದ ಅವರು ತಮ್ಮ ವಯೋಸಹಜ ಆರೋಗ್ಯ ಸಮಸ್ಯೆಗಳಿಂದ ಕೊನೆಯುಸಿರೆಳದಿದ್ದಾರೆ. ಅಂದಹಾಗೆ, ಬದುಕಿನಲ್ಲಿ ಸಾಕಷ್ಟು ಏರಿಳಿತಗಳನ್ನು ಆಶಾ ಭೋಸ್ಲೆ ಕಂಡಿದ್ದಾರೆ. ಮೊದಲ ಪತಿ ಮತ್ತು ಎರಡನೇ ಪತಿ ಹಲವು ವರ್ಷಗಳ ಹಿಂದೆಯೇ ಸಾವನ್ನಪ್ಪಿದ್ದರು. ಮತ್ತೊಂದು ನೋವಿನ ಸಂಗತಿ ಎಂದರೆ, ಅವರ ಇಬ್ಬರು ಮಕ್ಕಳ ಸಾವನ್ನು ಕೂಡ ಆಶಾ ಕಂಡಿದ್ದಾರೆ. ಅದರಲ್ಲೂ ಇದ್ದ ಒಬ್ಬಳೇ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದು ಆಶಾಗೆ ದೊಡ್ಡ ಸಂಕಟವನ್ನೇ ನೀಡಿತ್ತು.
ಆತ್ಮಹತ್ಯೆ ಮಾಡಿಕೊಂಡಿದ್ದ ಮಗಳು ವರ್ಷಾ
ಆಶಾ ಭೋಸ್ಲೆ ಅವವರಿಗೆ ಹೇಮಂತ್, ವರ್ಷಾ ಮತ್ತು ಆನಂದ್ ಎಂಬ ಮೂವರು ಮಕ್ಕಳಿದ್ದರು. ಆದರೆ ವರ್ಷಾ ತಮ್ಮ 56ನೇ ವಯಸ್ಸಿನಲ್ಲಿ ಗುಂಡಿಟ್ಟುಕೊಂಡು ಸಾವನ್ನಪ್ಪಿದ್ದರು. 2012ರಲ್ಲಿ ಈ ದುರ್ಘಟನೆ ನಡೆದಿತ್ತು. ಪತ್ರಕರ್ತೆಯಾಗಿದ್ದ ವರ್ಷಾ ರೆಡಿಫ್.ಕಾಮ್, 'ದಿ ಸಂಡೇ ಅಬ್ಸರ್ವರ್' ಮತ್ತು 'ಜೆಂಟಲ್‌ಮ್ಯಾನ್' ನಿಯತಕಾಲಿಕೆಗಳಿಗೆ ಲೇಖನಗಳನ್ನು ಬರೆಯುತ್ತಿದ್ದರು. ಕೆಲವು ಹಿಂದಿ ಮತ್ತು ಮರಾಠಿ ಚಿತ್ರಗಳಿಗೆ ಹಾಡಿದ್ದರು ಕೂಡ. ಅಲ್ಲದೆ, ತಮ್ಮ ತಾಯಿಯೊಂದಿಗೆ ಕನ್ಸರ್ಟ್‌ಗಳಲ್ಲಿಯೂ ಪ್ರದರ್ಶನ ನೀಡುತ್ತಿದ್ದರು.
20ಕ್ಕೂ ಹೆಚ್ಚು ಭಾಷೆಗಳಲ್ಲಿ ಹಾಡಿರುವ ಗಾಯಕಿ ಆಶಾ ಭೋಸ್ಲೆ; ಇತ್ತೀಚೆಗೆ ಹಾಡಿದ್ದ ಧುರಂಧರ್ ಹಾಡೂ ಸೂಪರ್‌ಹಿಟ್
ಕ್ರೀಡಾ ಬರಹಗಾರ ಹೇಮಂತ್ ಕೆಂಕ್ರೆ ಅವರನ್ನು ವರ್ಷಾ ವಿವಾಹವಾಗಿದ್ದರು, ಆದರೆ, ದಾಂಪತ್ಯದಲ್ಲಿ ಬಿರುಕು ಮೂಡಿ 1998ರಲ್ಲಿ ಪತಿಯಿಂದ ವರ್ಷಾ ವಿಚ್ಛೇದನ ಪಡೆದುಕೊಂಡಿದ್ದರು. ಆ ಬಳಿಕ ತಾಯಿ ಆಶಾ ಅವರೊಂದಿಗೆ ಮುಂಬೈನಲ್ಲಿ ವರ್ಷಾ ವಾಸಿಸುತ್ತಿದ್ದರು. ವರ್ಷಾ ಖಿನ್ನತೆಯ ಸಮಸ್ಯೆ ಇತ್ತು. ಅವರ ಆಪ್ತ ಸ್ನೇಹಿತರೊಬ್ಬರ ಸಾವು ಆ ಖಿನ್ನತೆಯು ಇನ್ನಷ್ಟು ಹೆಚ್ಚಾಗಲು ಕಾರಣವಾಗಿತ್ತು. ಅದಕ್ಕಾಗಿ ಚಿಕಿತ್ಸೆಯನ್ನು ಪಡೆಯುತ್ತಿದ್ದರು. 2008ರಲ್ಲಿ ಅತಿಯಾಗಿ ಮಾತ್ರೆಗಳನ್ನು ನುಂಗಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದರು ವರ್ಷಾ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದರಿಂದ ಬದುಕುಳಿದರು. ನಂತರ 2010ರಲ್ಲೂ ಇಂಥದ್ದೇ ಇನ್ನೊಂದು ಪ್ರಯತ್ನ ಮಾಡಿದ್ದರು. ಆಗಲೂ ಅವರನ್ನು ಕಾಪಾಡಲಾಗಿತ್ತು,
ಜೆನ್ ಝಿ ತಲೆಮಾರನ್ನೂ ಸೆಳೆಯುವ ಆಶಾ ಭೋಸ್ಲೆ ಹಾಡಿರುವ 10 ಐಕಾನಿಕ್ ಹಾಡುಗಳು
ಆದರೆ, ಮೂರನೇ ಬಾರಿ ಆತ್ಮಹತ್ಯೆಗೆ ಪ್ರಯತ್ನಿಸಿದಾಗ ವರ್ಷಾ ಬದುಕುಳಿಯಲಿಲ್ಲ. 2012ರ ಅಕ್ಟೋಬರ್ 8 ಮುಂಬೈನ ತಮ್ಮ ಪ್ರಭು ಕುಂಜ್ ನಿವಾಸದಲ್ಲಿ ವರ್ಷಾ ಆತ್ಮಹತ್ಯೆ ಮಾಡಿಕೊಂಡರು. ಗನ್‌ನಿಂದ ತಲೆ ಗುಂಡು ಹಾರಿಸಿಕೊಂಡು ವರ್ಷಾ ಮನೆಯಲ್ಲೇ ಪ್ರಾಣ ಬಿಟ್ಟಿದ್ದರು. ಮಗಳು ಇಂಥದ್ದೊಂದು ಕಠಿಣ ನಿರ್ಧಾರ ತೆಗೆದುಕೊಂಡು, ಜೀವ ಬಿಟ್ಟಿದ್ದು ಆಶಾ ಭೋಸ್ಲೆಗೆ ದೊಡ್ಡ ನೋವು ನೋಡಿತ್ತು. ಇದ್ದೊಬ್ಬ ಮಗಳು ಈ ರೀತಿ ಆತಹತ್ಯೆ ಶರಣಾಗಿದ್ದು ಆಶಾಗೆ ತುಂಬಾ ವರ್ಷಗಳವರೆಗೂ ಭಾದಿಸಿತ್ತು.
ʻ16ನೇ ವಯಸ್ಸಿಗೆ ಮೊದಲ ಮದುವೆ, 47ನೇ ವಯಸ್ಸಿಗೆ ಮತ್ತೊಮ್ಮೆ ಕಲ್ಯಾಣʼ; ಇದು ಆಶಾ ಭೋಸ್ಲೆ ಮ್ಯಾರೇಜ್ ಕಹಾನಿ
ಮಗಳ ಸಾವಿನ ನಂತರ ಪುತ್ರನ ನಿಧನ
2012ರಲ್ಲಿ ಮಗಳು ವರ್ಷಾ ಅವರ ಸಾವಿನಿಂದ ಆಶಾ ಚೇತರಿಸಿಕೊಳ್ಳುವ ಮುನ್ನವೇ ಹಿರಿಯ ಮಗ ಹೇಮಂತ್ ಭೋಸ್ಲೆ ಕೂಡ ಸಾನವನ್ನಪ್ಪಿದ್ದರು. ಆಗ ಅವರಿಗೆ 66 ವರ್ಷ. ಹೇಮಂತ್ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಅವರು ಸ್ಕಾಟ್ಲೆಂಡ್‌ನಲ್ಲಿ ನಿಧನರಾಗಿದ್ದರು. ಹೇಮಂತ್ ಭೋಂಸ್ಲೆ ಅವರು ಹಲವಾರು ಮರಾಠಿ ಚಿತ್ರಗಳಿಗೆ ಸಂಗೀತ ಸಂಯೋಜಿಸಿದ್ದು, ಅವರ ಸಂಯೋಜನೆಯ 'ಶಾರದ ಸುಂದರ್' ಮತ್ತು 'ಯೆಯೂ ಕಾಶಿ ಪ್ರಿಯಾ' ಹಾಡುಗಳು ಬಹಳ ಜನಪ್ರಿಯವಾಗಿದ್ದವು.
ಅಂದು ಹೇಮಂತ್ ನಿಧನರಾದ ಸಂದರ್ಭದಲ್ಲಿ ಆಶಾ ಭೋಂಸ್ಲೆ ಅವರು ಸಿಂಗಾಪುರದ ಸ್ಟಾರ್ ಪರ್ಫಾರ್ಮಿಂಗ್ ಆರ್ಟ್ಸ್ ಸೆಂಟರ್‌ನಲ್ಲಿ 5 ಸಾವಿರ ಪ್ರೇಕ್ಷಕರ ಸಮ್ಮುಖದಲ್ಲಿ ಕಾರ್ಯಕ್ರಮವೊಂದನ್ನು ನೀಡುತ್ತಿದ್ದರು. ಆ ಕಾರ್ಯಕ್ರಮ ಮುಗಿದ ಬಳಿಕವಷ್ಟೇ ಮಗನ ಸಾವಿನ ಸುದ್ದಿಯನ್ನು ಆಶಾಗೆ ತಿಳಿಸಲಾಗಿತ್ತಂತೆ.